1) ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 364/2015 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ: 23-12-2015 ರಂದು ಬೆಳಿಗ್ಗೆ 11:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ
ಎಸ್. ರಹೀಮ್ ತಂದೆ ಅಬ್ದುಲ್ ರಹೆಮಾನ್, ವಯಸ್ಸು 28 ವರ್ಷ, ಜಾತಿ: ಮುಸ್ಲೀಂ ಉ: ಡ್ರೈವರ್ ಸಾ: ಚಿಕ್ಕಜಂತಕಲ್,
ತಾ: ಗಂಗಾವತಿ ಇವರು
ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ದೂರು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.” ಚಿಕ್ಕಜಂತಕಲ್ ನ ಹಜರತ್ ಸೈಯ್ಯದ
ಷಾಹ ಕರೀಮುಲ್ಲಾ ಖಾದ್ರಿ (ಮುಸ್ತಫಾ ಖಾದ್ರಿ) ದರ್ಗಾದಲ್ಲಿ ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಮಹ್ಮದ್
ಅಲಿ, ವಯಸ್ಸು 48 ವರ್ಷ, ಎಂಬುವವರು ಎಲ್ಲಿಂದಲೋ ಚಿಕ್ಕಜಂತಕಲ್ ಗ್ರಾಮಕ್ಕೆ ಬಂದು ದರ್ಗಾದಲ್ಲಿ ಸೇವೆಯನ್ನು
ಮಾಡಿಕೊಂಡಿದ್ದರು. ಅಲ್ಲದೇ ಅವರು ಹಮಾಲಿ ಕೆಲಸ ಮಾಡಿಕೊಂಡು ಬಂದು ದರ್ಗಾದಲ್ಲಿಯೇ ಇರುತ್ತಿದ್ದರು. ನಿನ್ನೆ
ದಿನಾಂಕ:- 22-12-2015 ರಂದು ರಾತ್ರಿ 7:45 ರಿಂದ 8:00 ಗಂಟೆಯ ಸುಮಾರಿಗೆ ನಾನು ದರ್ಗಾ ಹತ್ತಿರ
ಇರುವ ಚೆಕ್ ಪೋಸ್ಟ್ ಹತ್ತಿರ ನಿಂತುಕೊಂಡಿದ್ದೆನು. ಆಗ ಮಹ್ಮದ್ ಅಲಿ ಇವರು ಗಂಗಾವತಿ-ಕಂಪ್ಲಿ
ಮುಖ್ಯ ರಸ್ತೆಯಲ್ಲಿ ಚಿಕ್ಕಜಂತಕಲ್ ಬ್ರಿಡ್ಜ್ ಮೇಲೆ ರಸ್ತೆಯ ಎಡಗಡೆ ನಡೆದುಕೊಂಡು ಬರುತ್ತಿದ್ದರು.
ಆಗ ಅವರ ಹಿಂಭಾಗದಿಂದ ಅಂದರೆ ಕಂಪ್ಲಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನ ಚಾಲಕ ಬಸ್ ನ್ನು
ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು
ಆಗದೇ ಮಹ್ಮದ್ ಅಲಿ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದನ್ನು ನೋಡಿ ನಾನು ಹತ್ತಿರ
ಓಡಿ ಹೋಗಿ ನೋಡಲಾಗಿ ಮಹ್ಮದ್ ಅಲಿ ಇವರ ಎಡಗಾಲಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಹಾಗೂ
ತಲೆಗೆ ಪೆಟ್ಟಾಗಿ ರಕ್ತಗಾಯವಾಗಿತ್ತು, ಅಲ್ಲಲ್ಲಿ ತೆರೆಚಿದ ಗಾಯಗಳಾಗಿದ್ದವು. ಅವರು ಮಾತನಾಡುವ ಸ್ಥಿತಿಯಲ್ಲಿ
ಇರಲಿಲ್ಲಾ. ಅಪಘಾತ ಮಾಡಿದ ಬಸ್ ನ್ನು ನೋಡಲಾಗಿ ಅದರ ನಂಬರ್: ಕೆ.ಎ-37/ ಎಫ್-271 ಅಂತಾ
ಇದ್ದು, ಅದರ ಚಾಲಕನ ಹೆಸರು ಬಸವರಾಜ ತಂದೆ ವಿರುಪಾಕ್ಷಪ್ಪ ತಳಕಲ್, ಗಂಗಾವತಿ ಡಿಪೋ ಸಾ: ಅರಕೇರಿ ತಾ:
ಯಲಬುರ್ಗಾ ಅಂತಾ ತಿಳಿಸಿದನು. ನಂತರ 108 ಗೆ ಫೋನ್ ಮಾಡಲಾಗಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ
ಮಹ್ಮದ್ ಅಲಿಯವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದಿದ್ದು, ವೈದ್ಯರು
ಸಹ ಪರೀಕ್ಷಿಸಿ ಮಹ್ಮದ್ ಅಲಿಯವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು. ಕಾರಣ ಈ
ಅಪಘಾತ ಮಾಡಿದ ಬಸ್ ಚಾಲಕ ಬಸವರಾಜನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.” ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 269/2015 ಕಲಂ: 279, 337,
338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ_-23-12-2015 ರಂದು ಬೆಳಿಗ್ಗೆ 11-30
ಗಂಟೆಗೆ ಪಿರ್ಯಾದಿದಾರರಾದ ಶ್ರೀ ಭಾರತೇಶ ಜೆಸ್ಕಾಂ ಶಾಖಾಧಿಕಾರಿಗಳು ಕಾರಟಗಿ ರವರು ಠಾಣೆಗೆ
ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಈ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ:-23-12-2015
ರಂದು ಬೆಳಿಗ್ಗೆ 8-45 ಗಂಟೆಯಿಂದ 9-00 ಗಂಟೆಯ ಅವಧಿಯಲ್ಲಿ ಲಾರಿ ನಂ ಕೆ.ಎ-52/3321 ನೆದ್ದರ
ಚಾಲಕ ದುರಗೇಶ ಈತನು ತನ್ನ ಲಾರಿಯನ್ನು ನವಲಿ ಕಡೆಯಿಂದ ಅತೀ ವೇಗ ಅಲಕ್ಷತನದಿಂದ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಾರಟಗಿ ನವಲಿ ರಸ್ತೆಯ ಕೆರೆಬಸವೇಶ್ವರ ಗುಡಿಯ
ಹತ್ತಿರ ರಸ್ತೆಯ ಪಕ್ಕದಲ್ಲಿ ಇದ್ದ ಜೆಸ್ಕಾಂ ವಿದ್ಯುತ್ ಕಂಬಗಳಿಗೆ , ಮತ್ತು ರಸ್ತೆಯ ಪಕ್ಕದಲ್ಲಿ ಇದ್ದ ಶ್ರೀ
ಅಮರೇಶ ಕಲಕೇರಿ ಇವರಿಗೆ ಸಂಬಂದಿಸಿದ ಚಹದ ಹೊಟೇಲ್ ಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿ
ಜಕ್ಕಂಗೊಳಿಸಿದ್ದು ಅಲ್ಲದೇ ಇದಕ್ಕೂ ಮುಂಚೆ ಸದರಿ ಲಾರಿ ಚಾಲಕನು ತನ್ನ ಲಾರಿಯಿಂದ ಅಗ್ನಿ ಶಾಮಕ ಠಾಣೆ
ಹತ್ತಿರ ಇದ್ದ ದ್ರಾಕ್ಷಿ ಕಂಬಕ್ಕೆ ಟಕ್ಕರ ಕೊಟ್ಟು ಜಕ್ಕಂಗೊಳಿಸಿ ಬಂದಿರುತ್ತಾನೆ ಮತ್ತು
ಅಮರೇಶಪ್ಪನ ಹೊಟೇಲ್ ದಲ್ಲಿ ಕುಳಿತಿದ್ದ ಬುಡ್ನೆಸಾಬ ಎಂಬುವವರಿಗೆ ಗಂಭೀರ ಗಾಯಗಳಾಗಿರುತ್ತವೆ ಈ
ಬಗ್ಗೆ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment