Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, December 4, 2015

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 281/2015  ಕಲಂ. 78(3) Karnataka Police Act.
ದಿ:03-12-2015 ರಂದು ರಾತ್ರಿ 7-20 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಮಂಗಳೂರ ರಸ್ತೆಯ ಕೊರ್ರ ಓಣಿಯ ಮೈನು ಟೇಲರ್ ಶಾಪ್ ಮುಂದೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಹಣ ಪಡೆದು ನಂಬರ ಬರೆದು ಕೊಡುವ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಿತ್ತರಂಜನ್.ಡಿ. ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತರಿಂದ ನಗದು ಹಣ ರೂ 600=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದ ಮಟಕಾ ಚೀಟಿಯನ್ನು ಪುಂಡಲೀಕಪ್ಪ ತಂದೆ ವಿಠಪ್ಪ ಕೋಳಿ ಸಾ: ಕಿನ್ನಾಳ ಇವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ. ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 114/2015  ಕಲಂ. 78(3) Karnataka Police Act.
¢£ÁAPÀ: 03-12-2015 gÀAzÀÄ ªÀÄzÁåºÀß 03:00 UÀAmÉUÉ ¦.J¸ï.L. vÁªÀgÀUÉÃgÁ ¥Éǰøï oÁuÉgÀªÀgÀÄ oÁuÉUÉ ºÁdgÁV UÀtQÃPÀÈvÀ ªÀgÀ¢, zÁ½ ¥ÀAZÀ£ÁªÉÄ, ªÀÄÄzÉÝêÀiÁ®Ä ºÁUÀÆ DgÉÆæ dAiÀĹAUï FvÀ£À£ÀÄß vÀAzÀÄ ºÁdgÀÄ¥Àr¹zÀÄÝ ¸ÁgÁA±ÀªÉ£ÉAzÀgÉ vÁªÀÅ RavÀ ¨Áwäà ªÉÄÃgÉUÉ vÁªÀgÀUÉÃgÁ ¥ÀlÖtzÀ ¹AzsÀ£ÀÆgÀÄ ªÀÈvÀÛzÀ°è MAzÀÄ ¥Á£ï qÀ©â ªÀÄÄAzÉ £ÀªÀÄÆ¢vÀ DgÉÆæ ªÀÄmÁÌ JA§ dÆeÁlzÀ°è vÉÆrVzÁÝUÀ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ºÉÆÃV gÉqï ªÀiÁr »rzÀÄ ¸ÀzÀjAiÀĪÀ£À ªÀ±À¢AzÀ ªÀÄmÁÌ dÆeÁlzÀ £ÀUÀzÀÄ ºÀt: 760-00 ªÀÄvÀÄÛ CzÀgÀ ¸ÁªÀiÁVæUÀ¼À£ÀÄß vÀªÀÄä ªÀgÀ¢AiÉÆA¢UÉ ºÁdgÀÄ¥Àr¹zÀÝgÀ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊPÉÆArzÉ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 211/2015  ಕಲಂ. 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ.:. 
ದಿನಾಂಕ: 03-12-2015 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರನಾದ ಶಿವಕುಮಾರ ತಂದೆ ಚನ್ನಪ್ಪ ಛವ್ಹಾಣ ವಯಾ 28 ವರ್ಷ ಜಾ: ಲಂಬಾಣಿ  ಉ: ಒಕ್ಕಲುತನ ಸಾ: ನಡವಲಕೊಪ್ಪ  ತಾ: ಕುಷ್ಟಗಿ ಇತನು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಫಿರ್ಯಾದಿ ಸಾರಾಂಶವೆನೆಂದರೆ ಫಿರ್ಯಾದಿದಾರನ ಹೊಲವು ನಡವಲಕೊಪ್ಪ ಗ್ರಾಮ ಸೀಮಾದಲ್ಲಿ ಎನ್.ಹೆಚ್-50 ರಸ್ತೆ ಹತ್ತಿರವಿದ್ದು ಸಂಗಪ್ಪ ತಳವಾರ ಇವರ ಅಂಗಡಿಗೆ ಚಹಾ ಕುಡಿಯಲಿಕ್ಕೆ ಸಾಯಂಕಾಲ 7-00 ಗಂಟೆಗೆ ಬರುತ್ತಿದ್ದಾಗ ಅದೇ ವೇಳೆಗೆ ಮಾಣಿಕ್ಯ ಕೋಳಿ ಪಾರಂ ಗೇಟ್ ಕಡೆಯಿಂದ ಒಂದು ಟ್ರ್ಯಾಕ್ಟರ ಮತ್ತು ಇಂಜೀನ್ ನಡೆಯಿಸಿಕೊಂಡು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಗೆ ತನ್ನ ಗಾಡಿಯನ್ನು ಎನ್.ಹೆಚ್-50 ರಸ್ತೆ ಕಡೆಗೆ ಟ್ರ್ಯಾಕ್ಟರನ್ನು ಹತ್ತಿಸುತ್ತಿರುವಾಗ ಕುಷ್ಟಗಿ ಕಡೆಯಿಂದ ತನ್ನ ಸಿದಾ ರಸ್ತೆಯ ಮೇಲೆ ಯಮನಪ್ಪ @ ಯಮನೂರಪ್ಪ ತಂದೆ ಲಿಂಬಪ್ಪ ರಾಠೋಡ ವಯಾ: 45 ವರ್ಷ ಉ: ಒಕ್ಕಲುತನ ಮತ್ತು ಮೀನಿನ ವ್ಯಾಪಾರ ಸಾ: ಚಿಕ್ಕಕೊಡಗಲಿ ಕೆಳಗಿನ ತಾಂಡಾ ಇತನು ತನ್ನ ಮೋ.ಸೈ ನ್ನು ನಡೆಸಿಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಟ್ರ್ಯಾಕ್ಟರ ಚಾಲಕನು ಅತೀ ವೇಗ ಮತ್ತುಅಲಕ್ಷ್ಯತನದಿಂದ ರಾಂಗ್ ಸೈಡ್ ಬಂದು ಸೈ.ಮೋ. ಸವಾರನಿಗೆ ಟಕ್ಕರ ಕೊಟ್ಟಿದ್ದರಿಂದ ಸದರಿ ಯಮನಪ್ಪನ ತಲೆಗೆ ಮತ್ತು ಎದೆಗೆ ಭಾರಿ ಪೆಟ್ಟಾಗಿ ಅವನಿಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಆದ್ದರಿಂದ ಸದರಿ ಟ್ರ್ಯಾಕ್ಟರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಯು.ಡಿ.ಆರ್ ನಂ. 37/2015  ಕಲಂ. 174 (ಸಿ) ಸಿ.ಆರ್.ಪಿ.ಸಿ:
ದಿ-03.12.2015 ರಂದು ಮೃತನ ಮಗ ಶಿವಪ್ರಸಾದ ಈತನ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನಂದರೆ, ಪಿರ್ಯಾದಿ ತಂದೆ ಜಗದೀಶ ಈತನು ಕಲ್ಯಾಣಿ ಕಂಪನಿಯಲ್ಲಿ ವಾಚಮನ್ ಕೆಲಸ ಮಾಡುತ್ತಿದ್ದು ಇಂದು ದಿ-03.12.2015 ರಂದು ಬೆಳೆಗ್ಗೆ 08.30 ಗಂಟೆಯ ಸುಮಾರಿಗೆ ಜಗದೀಶ ಧನಗುಂಡಿಮಠ ವಯ:55 ವ, ಇವರು ಮನೆಯಲ್ಲಿ ಕ್ರಮಿನಾಶಕ  ಔಷದಿಯನ್ನು ಸೇವಿಸಿದ್ದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದು , ಜಗದಿಶ ಈತನು ತನಗಿದ್ದ ಗ್ಯಾಂಗ್ರೀನ್ ಬಾದೆಯನ್ನು ತಾಳಲಾರದೆ ಈ ರೀತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯ ಮಾಡಿ ಕೊಂಡಿದ್ದು ಆದರೂ ನಮ್ಮ ತಂದೆಯ ಸಾವಿನಲ್ಲಿ ಸಂಶಯ ಇರುತ್ತದೆ ಅಂತಾ  ವಗೈರಾ ಸಾರಾಂಶ ಇರುವ ಲಿಖಿತ ಫಿರ್ಯಾದಿ ಪಡೆದುಕೊಂಡು  ಮಧ್ಯಾನ್ನ 02.00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಲಿಖಿತ ಫಿರ್ಯದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಯು.ಡಿ.ಆರ್ ನಂ. 38/2015  ಕಲಂ. 174 ಸಿ.ಆರ್.ಪಿ.ಸಿ:

ದಿ:03-12-2015 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪಂಪಯ್ಯ ತಂದೆ ಸಿದ್ರಾಮಯ್ಯ ಹೊಸಮಠ. ಸಾ: ಇರಕಲ್ ಗಡಾ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕಕೃತ ದೂರಿನ ಸಾರಾಂಶವೇನೆಂದರೇ, ನಮ್ಮ ತಂದೆ ಪಂಪಸೆಟ್ ಬೇಸಾಯ ಮಾಡಿಕೊಂಡಿದ್ದಾರೆ. ನಮ್ಮೂರ ಸೀಮಾದಲ್ಲಿ ಸುಮಾರು 16-17 ಎಕರೆ ಜಮೀನು ಇರುತ್ತದೆ. ನಮ್ಮ ತಂದೆ ಸದರಿ ಜಮೀನು ಮೇಲೆ ನಮ್ಮೂರಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ದಲ್ಲಿ ಸುಮಾರು 2 ವರೆ ಲಕ್ಷ ರೂ. ಬೆಳೆಸಾಲ ಮಾಡಿಕೊಂಡಿದ್ದು ಅಲ್ಲದೇ, ವಿ.ಎಸ್.ಎಸ್.ಎನ್ ಸೊಸೈಟಿಯಲ್ಲಿ ಸುಮಾರು 30,000=00 ರೂ. ಸಾಲ ಮಾಡಿಕೊಂಡಿದ್ದರು. ಆದರೆ ಹೊಲದಲ್ಲಿ ಶೇಂಗಾ, ಮೆಕ್ಕೆಜೋಳ ಬೆಳೆ ಇದ್ದು, ಮಳೆ ಸರಿಯಾಗಿ ಬರದೇ ಸದರಿ ಬೆಳೆ ಸರಿಯಾಗಿ ಬೆಳೆಯದೇ ಒಣಗಿರುತ್ತವೆ. ನಮ್ಮ ತಂದೆ ತಾನು ಹೊಲದ ಬೆಳೆಗಳ ಸಲುವಾಗಿ ಮಾಡಿದ ಸಾಲ ಕಟ್ಟಲು ತುಂಬಾ ತೊಂದರೆ ಆಗುತ್ತಿದೆ ಅಂತಾ ಚಿಂತೆ ಮಾಡುತ್ತಿದ್ದರು. ನಂತರ ಇಂದು ದಿ:03-12-15 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲದಲ್ಲಿದ್ದಾಗ ನಮ್ಮ ತಾಯಿ ಜಯವ್ವ ಇವರು ಪೋನ ಮಾಡಿ ಹೇಳಿದ್ದೇನೆಂದರೇ, ಈಗ ಮಧ್ಯಾಹ್ನ 2-30 ರಿಂದ ನಿಮ್ಮ ಅಪ್ಪ ಹಳೇಯ ಮನೆಯಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಅಸ್ವಸ್ಥರಾಗಿದ್ದಾರೆ. ಅಂತಾ ಹೇಳಿ ಬರಲು ತಿಳಿಸಿದಳು. ಆಗ ನಾನು ಮನೆಗೆ ಬಂದು ನೋಡಿದಾಗ ವಿಷಯ ನಿಜವಿತ್ತು. ನಮ್ಮ ತಂದೆಗೆ ಕೇಳಿದಾಗ ತಾನು ಹೊಲದಲ್ಲಿ ಬೆಳೆದ ಬೆಳೆ ಸರಿಯಾಗಿ ಮಳೆ ಬರದೇ ಬರಗಾಲವಾಗಿದ್ದರಿಂದ ಬೆಳೆಯ ಮೇಲೆ ಮಾಡಿದ ಬ್ಯಾಂಕ್ ಸಾಲ ಕಟ್ಟಲು ಮುಂದೆ ಬಹಳ ತ್ರಾಸ್ ಆಗುತ್ತದೆ ಅಂತಾ ಮನಸ್ಸಿಗೆ ಕೆಟ್ಟ ಮಾಡಿಕೊಂಡು ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿದ್ದಾಗಿ ಹೇಳಿದನು. ಕೂಡಲೇ ನಾನು ನಮ್ಮ ತಂದೆಗೆ ನಮ್ಮ ಮಾವ ಗಿರೀಶ ಮತ್ತು ನಮ್ಮೂರಿನ ವಿರೇಶ ಕೂಡಿಕೊಂಡು ನಮ್ಮೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ತೋರಿಸಿದೆವು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿದ್ದರಿಂದ ನಾವು ಆತನಿಗೆ ಖಾಸಗಿ ವಾಹನದಲ್ಲಿ ಕೊಪ್ಪಳಕ್ಕೆ ಕರೆದುಕೊಂಡು ಬಂದು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ನಂತರ ಸಾಯಂಕಾಲ 7-15 ಗಂಟೆಗೆ ಚಿಕಿತ್ಸೆ ಫಲಿಸದೇ ನಮ್ಮ ತಂದೆ ಮೃತಪಟ್ಟಿರುತ್ತಾರೆ. ನಮ್ಮ ತಂದೆ ತಾನು ಮಾಡಿದ ಬೆಳೆಸಾಲದ ಬಾಧೆ ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ನಮ್ಮ ತಂದೆಯ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲ. ಕಾರಣ ಮಾನ್ಯರವರು ಮುಂದಿನ ಕ್ರಮ ಕೈಗೊಳ್ಳಬೇಕೆಂದು ವಿನಂತಿ. ಮೃತ ನಮ್ಮ ತಂದೆಯ ವಿಳಾಸ ಸಿದ್ರಾಮಯ್ಯ ತಂದೆ ಪಂಪಯ್ಯ ಹೊಸಮಠ. ವಯ: 63 ವರ್ಷ, ಜಾ: ಜಂಗಮ, ಉ: ಒಕ್ಕಲುತನ, ಸಾ: ಇರಕಲ್ಗಡಾ. ತಾ:ಜಿ: ಕೊಪ್ಪಳ. ಅಂತಾ ಇರುತ್ತದೆ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008