1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 282/2015
ಕಲಂ. 376, 506 ಹಾಗೂ 4 ಪೋಕ್ಸೋ ಕಾಯ್ದೆ:.
ದಿ:04-12-2015 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಫಿರ್ಯಾದಿ ವಯ: 16 ವರ್ಷ, ಜಾ: ಉಪ್ಪಾರ, ಉ: ಮನೆಕೆಲಸ, ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ಕಳೆದ ಒಂದು
ವರ್ಷದಿಂದ ನಮ್ಮ ಓಣಿಯ ನಿಂಗಪ್ಪ ಗಂಗಾವತಿ ಇತನು ನನಗೆ ಸಲುಗೆಯಿಂದ ಮಾತನಾಡಿಸುವದು ಮಾಡುತ್ತಾ, ನನ್ನನ್ನು ಪ್ರೀತಿಸುತ್ತಿದ್ದೇನೆ. ಮುಂದೆ
ನಿನಗೆ ಮದುವೆಯಾಗುತ್ತೇನೆಂದು ಹೇಳುತ್ತಿದ್ದನು. ಅಲ್ಲಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ಬಂದು
ಕದ್ದು ಮುಚ್ಚಿ ಮಾತನಾಡಿಸುತ್ತಿದ್ದನು. ನಂತರ ನನಗೆ ತನ್ನ ಮೋಟಾರ ಸೈಕಲ್ ಮೇಲೆ ಕೂಡ್ರಿಸಿಕೊಂಡು
ನಮ್ಮ ಹೊಲಕ್ಕೆ ಬಿಟ್ಟು ಬರುತ್ತಿದ್ದನು. ಮತ್ತೇ ಆಗಾಗ ನಮ್ಮ ತಂದೆ-ತಾಯಿ ಮನೆಯಲ್ಲಿ
ಇಲ್ಲದಿರುವದನ್ನು ನೋಡಿ ಬಂದು ಮಾತನಾಡಿಸಿ ಹೋಗುತ್ತಿದ್ದನು. ಕಳೆದ 15 ದಿನಗಳ ಹಿಂದೆ ಒಂದು ದಿನ ರಾತ್ರಿ 11-00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಯಾರು
ಇಲ್ಲದಿರುವದನ್ನು ನೋಡಿಕೊಂಡು ಬಂದು ನನಗೆ ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿ ಒತ್ತಾಯದಿಂದ
ನನಗೆ ಬಲತ್ಕಾರ ಮಾಡಿ ಹೋಗಿರುತ್ತಾನೆ. ನಂತರ ಆತನು ನನಗೆ ಮಾತನಾಡಿಸದೇ ನನ್ನಿಂದ ದೂರ ದೂರ
ಅಡ್ಡಾಡುತ್ತಿದ್ದನು. ನಾನು ಆತನಿಗೆ ಮಾತನಾಡಿಸಿದರೇ, ನಿನಗೆ ನನಗೂ ಯಾವುದೇ ಸಂಬಂಧ ಇಲ್ಲಾ ಈ
ಮೊದಲು ನಡೆದ ವಿಷಯ ಮನೆಯಲ್ಲಿ ಹೇಳಿದರೆ ನಿನಗೆ ಹೊಡೆದು ಸಾಯಿಸುತ್ತೇನೆ. ಅಂತಾ ಜೀವದ ಬೆದರಿಕೆ
ಹಾಕುತ್ತಿದ್ದನು. ಕಾರಣ ನಿಂಗಪ್ಪ ತಂದೆ ಮಾರುತೆಪ್ಪ ಗಂಗಾವತಿ. ವಯಸ್ಸು: 25 ವರ್ಷ, ಜಾ: ಉಪ್ಪಾರ, ಉ: ಟ್ರ್ಯಾಕ್ಟರ್ ಚಾಲಕ, ಸಾ: ಕಿನ್ನಾಳ ಇತನು ಅಪ್ರಾಪ್ತ ವಯಸ್ಸಿನ ನನಗೆ ಮದುವೆಯಾಗುವುದಾಗಿ
ನಂಬಿಸಿ ನನಗೆ ಅತ್ಯಾಚಾರ ಮಾಡಿ ಪ್ರಾಣದ ಬೆದರಿಕೆ ಹಾಕಿದ್ದರಿಂದ ಇತನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ
ಪ್ರಕರಣವನ್ನು
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 236/2015
ಕಲಂ. 457, 380 ಐ.ಪಿ.ಸಿ:.
ದಿನಾಂಕ: 04-12-2015 ರಂದು ರಾತ್ರಿ
7-30 ಗಂಟೆಗೆ ಫಿರ್ಯಾದಿದಾರರಾದ ಬಸವರಾಜ ತಂದೆ ಬಾಳಪ್ಪ ಗೋರೆ ವಯಾ: 28 ವರ್ಷ ಜಾ: ಕುರುಬರು ಉ: ಪತ್ರಕರ್ತರು
ಸಾ: ಕುವೆಂಪು ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ
ಏನೆಂದರೆ, ಫಿರ್ಯಾದಿದಾರರು ದಿನಾಂಕ:
03-12-2015 ರಂದು ತಮ್ಮ ಮನೆಯವರೆಲ್ಲರು ಕೊಪ್ಪಳದ ಸರದಾರಗಲ್ಲಿಯಲ್ಲಿರುವ ತಮ್ಮ ಚಿಕ್ಕಮ್ಮನ ಮನೆಗೆ
ಹೋಗಿದ್ದು, ತಾನು ರಾತ್ರಿ 9-30 ಗಂಟೆಗೆ ತಮ್ಮ ಚಿಕ್ಕಮ್ಮನ ಮನಗೆ ಹೋಗಿದ್ದು ಹೋಗುವಾಗ ತಮ್ಮ ಮನೆಯ
ಬಾಗಿಲು ಬೀಗ ಹಾಕಿಕೊಂಡು ಹೋಗಿರುತ್ತಾರೆ. ನಂತರ ದಿ: 04-12-2015 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ
ತಮ್ಮ ಪಕ್ಕದ ಮನೆಯವರಾದ ಸ್ವಾಮೀಯವರು ತನ್ನ ಮೋಬೈಲ್ಗೆ ಕರೆ ಮಾಡಿ ಹೇಳೀದ್ದೇನೆಂದರೆ ನಿಮ್ಮ ಮನೆಯ
ಬೀಗ ಮುರಿದಿರುತ್ತದೆ ಬಾ ಅಂತಾ ಹೇಳಿದರು. ಕೂಡಲೇ ತಾನು ತಮ್ಮ ತಮ್ಮನೊಂದಿಗೆ ಮನೆಗೆ ಬಂದು ನೊಡಿದಾಗ
ವಿಷಯ ನಿಜ ಇದ್ದು, ತಾನು ಒಳಗಡೆ ಹೋಗಿ ನೋಡಿದಾಗ ಬೆಡ್ ರೂಮ್ನಲ್ಲಿ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ
ಬಿದ್ದಿರುವುದು ಕಂಡು ಬಂದಿತು. ಮತ್ತು ಅಲಮಾರವನ್ನು ನೋಡಲಾಗಿ ಮೀಟಿ ತೆರೆದಿರುವುದು ಕಂಡು ಬಂದಿತು.
ನಂತರ ಕೂಡಲೇ ತಾನು ಅಲಮಾರವನ್ನು ಚೆಕ್ ಮಾಡಲಾಗಿ ಅಲಮಾರದ ಸೇಪ್ ಲಾಕರ್ನ್ನು ಮುರಿದಿದ್ದು ಅದರಲ್ಲಿದ್ದ
1] ಎರಡು ಬಂಗಾರದ ಬೋರಮಳ ಸರ ಅಂ.ತೂ: 10 ಗ್ರಾಂ ಅಂ.ಕಿ.ರೂ: 16,000=00 2] ಒಂದು ಬೆಳ್ಳಿಯ ಆರತಿ
ತಟ್ಟೆ ಅಂ ತೂ: 250 ಗ್ರಾಂ ಅಂ.ಕಿ.ರೂ: 7000=00 ಮತ್ತು ಅಡುಗೆ ಮನೆಯಲ್ಲಿದ್ದ ಒಂದು ಭಾರತ್ ಗ್ಯಾಸ್
ಕಂಪನಿಯ ಸಿಲೆಂಡರ್ ಅಂ.ಕಿ ರೂ 1500 ಬೆಲೆಬಾಳುವುಗಳು ಕಾಣಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುವುದು ತಿಳಿದು ಬಂದಿತು. ದಿ: 03-12-2015
ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ: 04-12-2015 ರಂದು ಬೆಳಿಗ್ಗೆ 6-00 ನಡುವಿನ ಅವಧಿಯಲ್ಲಿ
ಯಾರೋ ಕಳ್ಳರು ನನ್ನ ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರದ ಬೀಗ ಮುರಿದು
ಅಲಮಾರದಲ್ಲಿದ್ದ ಬಂಗಾರ ಅಂದಾಜು ತೂಕ 10 ಗ್ರಾಂ, ಬೆಳ್ಳಿ ಅಂದಾಜು ತೂಕ 250 ಗ್ರಾಂ, ಮತ್ತು ಒಂದು
ಅಡುಗೆ ಸಿಲೆಂಡರ್ ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 24,500=00 ಬೆಲೆ ಬಾಳುವುಗಳನ್ನು ಪತ್ತೇ ಮಾಡಿ
ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಮತ್ತು ನನ್ನ
ಮನೆಯನ್ನು ಪರಿಶೀಲಿಸಿ ಮತ್ತು ಮನೆಯವರೊಂದಿಗೆ ವಿಚಾರಿಸಿ ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆ.
ಅಂತಾ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment