ದಿನಾಂಕ: 6-12-2015 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ
ಜ್ಯೋತಿ ಗಂಡ ಶರಣಪ್ಪ ಗುಂಡೇಗೌಡರ ವಯಾ- 30 ವರ್ಷ ಜಾ- ಲಿಂಗಯತ ಉ- ಮನೆಗೆಲಸ ಸಾ- ಸಿದ್ದಾಪೂರ
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, , ನನ್ನ ತವರು
ಮನೆ ಸಿಂಧನೂರ ತಾಲೂಕಿನ ರೌಡಕುಂದ ಗ್ರಾಮವಿದ್ದು ನನ್ನ ತಂದೆ ತಾಯಿಗಳು ನನ್ನನ್ನು
ಸಿದ್ದಾಪೂರ ಗ್ರಾಮದ ಶರಣಪ್ಪ ತಂದಿ ಬಸನಗೌಡ
ಗುಂಡೇಗೌಡರ ಇತನೊಂದಿಗೆ ದಿನಾಂಕ : 24-07-1999 ನೇದ್ದರಂದು ಗುರು ಹಿರಿಯರ ಸಮಕ್ಷಮದಲ್ಲಿ ನನ್ನ ಗಂಡನ ಮನೆಯ ಮುಂದೆ ಮದುವೆ ಮಾಡಿಕೊಟಿದ್ದರು. ಮದುವೆಯ
ಕಾಲಕ್ಕೆ ನಾನು ಮತ್ತು ನನ್ನ ಗಂಡ ಚೆನ್ನಾಗಿರಲೆಂದು 41,000=00 ಹಾಗೂ ಒಂದು ತೊಲೆ ಬಂಗಾರ ಮತ್ತು ವರೋಪಚಾರ ಮತ್ತು ಬಟ್ಟೆ ಬರೀ ಹಾಗೂ ದಿನನಿತ್ಯದ ಬಳಕೆಯ
ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ನಂತರ ನಾನು ನನ್ನ ಗಂಡ ಹಾಗೂ ಅತ್ತೆಯಾದ ಗಂಗಮ್ಮ ಚೆನ್ನಾಗಿಯೇ ಬಾಳವೆ ಮಾಡಿಕೊಂಡು ಹೊರಟಿದ್ದೇವು. ನನಗೆ
1) ಅಕೀಲಾ 2) ಅಂಕಿತಾ 3) ಪೂಜಾ ಅಂತಾ 3 ಜನ ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡ ಹಾಗೂ ಅತ್ತೆ
ನನಗೆ ಮೂರು ಜನರ ಹೆಣ್ಣು ಮಕ್ಕಳಾದಾಗಿನಿಂದ ನೀನು
ಬರೀ ಹೆಣ್ಣುಮಕ್ಕಳನ್ನು ಎತ್ತಿದ್ದಿಯಾ ನೀನಗೆ ಗಂಡು ಸಂತಾನ ಇರುವದಿಲ್ಲ. ಈ ಮೂರು ಹೆಣ್ಣು ಮಕ್ಕಳ
ಸಲುವಾಗಿ ನಿನ್ನ ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಬೈದಾಡುವದಲ್ಲದೆ ನೀನು ನಮ್ಮ ಮನೆ ಬೆಳಗಿಸುವ ಗಂಡು ಮಗುವಿಗೆ ಜನ್ಮ ನೀಡಿರುವದಿಲ್ಲ
ಅಂತಾ ಈಗ್ಗೆ ಮೂರು ವರ್ಷಗಳಿಂದ ನನಗೆ ಹಾಗೂ ನನ್ನ
ಮೂರು ಜನ ಹೆಣ್ಣು ಮಕ್ಕಳಿಗೆ ಸರಿಯಾಗಿ ಊಟ ಕೊಡದೆ ಹಾಗೂ ಸರಿಯಾಗಿ ನೊಡಿಕೊಳ್ಳದೆ ಉಪವಾಸ ಕೆಡವುತ್ತಿದ್ದರು.
ಅಲ್ಲದೆ ನನ್ನ ಅತ್ತೆಯ ತಮ್ಮಂದಿರಾದ ನಾಗಪ್ಪ ತಂದಿ
ಪಂಪನಗೌಡ ಹನಮಂತಗೌಡರ ಸಾ-ಬೂದಗುಂಪಾ 2) ರಾಮನಗೌಡ
ತಂದಿ ಪಂಪನಗೌಡ ಚಿಕ್ಕಡಂಕನಕಲ್ಲ ಇವರು ನಮ್ಮ ಮನೆಗೆ
ಬಂದು ನನ್ನ ಬಗ್ಗೆ ನನ್ನ ಗಂಡನ ಮುಂದೆ ಮತ್ತು ನನ್ನ ಅತ್ತೆಯ ಮುಂದೆ ಇಲ್ಲಸಲ್ಲದ ಮಾತುಗಳನ್ನು ಹೇಳಿ
ಅವರಿಂದ ನನಗೆ ಇನ್ನೂ ಹೆಚ್ಚಿನ ತೊಂದರೆಯನ್ನು ಕೊಡಿಸುತ್ತಿದ್ದರು. ಅಲ್ಲದೆ ಸದರಿಯವರು ಸಹ ನನಗೆ ಈ ಬಜಾರಿ ಹೆಂಗಸನ ಮನಿಯಾಗ
ಯಾಕ ಇಟ್ಟುಕೊಂಡಿರಿ ಇಕೆಯನ್ನು ಮನೆಯಿಂದ ಹೊರಗೆ ಹಾಕಿರಿ
ಬೈದಾಡಿ ಹೊಗುತ್ತಿದ್ದರು. ಅವರು ಬಂದು ಹೊದ ದಿನದಂದು ನನ್ನ ಅತ್ತೆ ಮತ್ತು ನನ್ನ ಗಂಡ ನನಗೆ
ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚಿನ ತ್ರಾಸ್ ಕೊಡುತ್ತಿದ್ದರು. ಅಲ್ಲದೆ ನನ್ನ ಹೆಣ್ಣು ಮಕ್ಕಳ
ಶಾಲೆಗೆ ಪೀಜ್ ಕಟ್ಟಿರಿ ಅಂತಾ ನನ್ನ ಗಂಡ ಮತ್ತು ಅತ್ತೆಗೆ ಹೇಳಿದರೆ ನೀನು ಎಲ್ಲಿಯಾದರು ದುಡಿದು ಹಣ ಕಟ್ಟು ನಾವೆಲ್ಲಿಂದ ಕಟ್ಟೋಣ
ಅಂತಾ ಅನ್ನುತ್ತಿದ್ದರು. ಈ ಬಗ್ಗೆ ನನ್ನ ತಂದೆಯಾದ ಮಲ್ಲಿಕಾಜರ್ುನಗೌಡ ತಂದಿ ನಾಗನಗೌಡ ಹಿರೇಗೌಡರ, ಹಾಗೂ ನನ್ನ
ತಮ್ಮ ವಿನೋಧಕುಮಾರ, ನಮ್ಮ ಚಿಕ್ಕಪ್ಪಂದಿರಾದ ಸಣ್ಣಕಲ್ಯಾಣಪ್ಪ,
ನಾಗಪ್ಪ, ಹಾಗೂ ನಮ್ಮ ಸಂಭಂದಿಕರಾದ ಅಮರೇಶ ಹೊಸಮನಿ
ಸಾ- ಸಿಂಧನೂರ ರವರು ನಮ್ಮ ಮನೆಗೆ ಬಂದು 2-3 ಸಾರಿ
ರಾಜಿ ಪಂಚಾಯತಿ ಮಾಡಿ ಹೊಗಿದ್ದು ಆದರೂ ಸಹ ಪಂಚಾಯತಿ ಮಾಡಿದ 2 -3 ದಿನ ಸುಮ್ಮನಿದ್ದು ನಂತರ ಅದೇ ಪ್ರವೃತ್ತಿಯನ್ನು
ಮುಂದುವರೆಸುತ್ತಿದ್ದರು. ನಾನು ಇಂದಿಲ್ಲಾ ನಾಳೆ ಸುಧಾರಿಸಿಯಾರು ಅಂತಾ ನೊಂದುಕೊಂಡು ಸುಮ್ಮನೆ ಮಕ್ಕಳ
ಮುಖನೋಡಿಕೊಂಡು ಬಾಳುವೆ ಮಾಡಿಕೊಂಡು ಹೊರಟಿದ್ದೇನು. ಇಂದು ದಿನಾಂಕ : 06-12-2015 ರಂದು ಬೆಳಗ್ಗೆ
10-00 ಗಂಟೆಯ ಸುಮಾರಿಗೆ ನನ್ನ ಗಂಡ ಹಾಗೂ ಅತ್ತೆ
ಕೂಡಿ ನಾಗಪ್ಪ ತಮದಿ ಪಂಪನಗೌಡ ಹನಮಂತಗೌಡರ
ಸಾ- ಬೂದಗುಂಪಾ, ರಾಮನಗೌಡ ತಂದಿ ಪಂಪನಗೌಡ ಸಾ- ಚಿಕ್ಕಜಂತಗಲ್ಲ
ಇವರು 4 ಜನರು ಸೇರಿ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ
ಕಿರುಕಳ ಕೊಟ್ಟು ನೀನು ಹಾಗೂ ನಿನ್ನ ಮಕ್ಕಳು ಸೇರಿ
ಎಲ್ಲಿಯಾದರು ಕೆನಾಲಿಗೆ ಬಿದ್ದು ಸತ್ತುಹೊಗು ಅಂತಾ ಬೈದಾಡುತ್ತಿರುವಾಗ್ಗೆ ನಾನು ಯಾಕೆ ಮನೆಬಿಟ್ಟು
ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೊಗಲಿ ಅಂತಾ ಅಂದಿದ್ದಕ್ಕೆ ಎಲ್ಲರೂ ಸೇರಿ ನನಗೆ ಕೈಯಿಂದ ಹೊಡೆ
ಬಡಿ ಮಾಡಿ ನನ್ನ ಕೊರಳಲ್ಲಿಯ ಮಾಂಗಲ್ಯಸರ ಕಿತ್ತಿಕೊಂಡು ಎಲ್ಲಿಯಾದರು ಬಿದ್ದು ಸತ್ತುಹೊಗಿರಿ ಅಂತಾ ನನಗೆ ಹೊಡೆ ಬಡಿ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ನೀನು ಮನೆಬಿಟ್ಟು ಹೊಗದಿದ್ದರೆ ನಿನಗೆ ಮತ್ತು ನಿನ್ನ ಮೂರು ಹೆಣ್ಣು
ಮಕ್ಕಳಿಗೆ ಬೆಂಕಿ ಹಚ್ಚಿ ಸುಟ್ಟುಬಿಡುತ್ತೇವೆ ಅಂತಾ
ಜೀವ ಭಯ ಹಾಕಿ ಮನೆಯಿಂದ ಹೊರಗೆ ಹಾಕಿದ್ದರಿಂದ ನಾನು ಏನು ತೊಚದಂತಾಗಿ ನನ್ನ ಮೂರು ಮಕ್ಕಳನ್ನು ಕರೆದುಕೊಂಡು
ಬಂದಿದ್ದು ಕಾರಣ ಮಾನ್ಯರವರು ನನ್ನ ಗಂಡ ಶರಣಪ್ಪ ಹಾಗೂ ನನ್ನ ಅತ್ತೆ ಗಂಗಮ್ಮ ಮತ್ತು ನಮ್ಮ ಅತ್ತೆಯ ಸಹೋದರರಾದ
ನಾಗಪ್ಪ ಹಾಗೂ ರಾಮನಗೌಡ ಇವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಫಿರ್ಯಾದಿ ಇರುತ್ತದೆ. ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 28/2015
ಕಲಂ. 174 ಸಿ.ಆರ್.ಪಿ.ಸಿ:.
ದಿನಾಂಕ: 06-12-2015 ರಂದು 5-00 ಪಿಎಂಕ್ಕೆ ಪಿರ್ಯಾದಿದಾರರಾದ
ವೀರಣ್ಣ ತಂ.ಮರಿಯಪ್ಪ ಹೊಸಮನಿ ವಯಾ
61, ಜಾ: ಕೂಡುಒಕ್ಕಲಿಗ ಉ: ವ್ಯವಸಾಯ, ಸಾ: ತಳಕಲ್ ತಾ:ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿ ನೀಡಿದ್ದು
ಅದರ ಸಾರಾಂಶವೇನೆಂದರೆ, ತನ್ನ ಮಗಳಾದ ಶಾರದಾ ಈಕೆಗೆ ಆಕಸ್ಮಿಕ ಬೆಂಕಿ ತಗುಲಿದ ಬಗ್ಗೆ ದಿನಾಂಕ:
04-11-2015 ರಂದು 1-00 ಪಿಎಂ.ಕ್ಕೆ ಸೂಮಾರಿಗೆ ಘಟನೆ ಜರುಗಿದ ಬಗ್ಗೆ ಯಲ್ಲಪ್ಪನು
ಪೋನ್ ಮಾಡಿ ತಿಳಿಸಿದ್ದು, ಇಂದು ಮುಂಜಾನೆ 8-00 ಗಂಟೆಗೆ ಶಾರದಾ ಹಾಗೂ ಗೀತಾ ಇಬ್ಬರೂ ಸೇರಿ ನಮ್ಮ
ಮೆಕ್ಕೆಜೋಳ ಬೆಳೆ ತೆಗೆದುಕೊಂಡು ಹೊಲದಲ್ಲಿ ಕಸಕಡ್ಡಿಯನ್ನು ಗುಂಪಾಗಿ ಹಾಕಿ ಅದನ್ನು ಸೀಮೆಯೆಣ್ಣೆ
ಸುರಿದು ಬೆಂಕಿ ಹಚ್ಚುತ್ತಾ ಬಂದಾಗ ಸದರಿ ಬೆಂಕಿ ಒಮ್ಮಿಂದಮ್ಮೇಲೆ ಉರಿ ಎದ್ದು ಶಾರಾದಾಳ ಕೈಗುಂಟಾ
ಬಂದು ಅವಳು ಧರಿಸಿದ್ದ ಪಾಲಿಷ್ಟರ್ ಸೀರೆಗೆ ಬೆಂಕಿ ಹತ್ತಿಕೊಂಡಿದ್ದರಿಂದ ಶಾರದಾ ಚಿರಾಡ ಹತ್ತಿದಳು.
ನಾನು ಬಾಜು ಇದ್ದ ನನ್ನ ಹೊಲಕ್ಕೆ ನೀರು ಹಾಯಿಸುತ್ತಿದ್ದಾಗ ಚೀರಾಟವನ್ನು ಕೇಳಿ ಓಡಿಬಂದೆನು. ನಂತರ
ಗೀತಾಳೊಂದಿಗೆ ಶಾರದಾಳನ್ನು ಖಾಸಗಿ ವಾಹನದಲ್ಲಿ ಇಲಾಜು ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕೊಪ್ಪಳಕ್ಕೆ
ಕರೆದುಕೊಂಡು ಹೋಗಿ ಸೇರಿಕೆಮಾಡಿದೆನು ಅಂತಾ ತಿಳಿಸಿದನು. ನಾನು ಗಾಬರಿಯಾಗಿ ನನ್ನ ಹೆಂಡತಿಯೊಂದಿಗೆ
ಆಸ್ಪತ್ರೆ ಹೋಗಿ ವಿಚಾರಿಸಿದೆನು ಅವಳಿಗೆ ಕೈಕಾಲು ಎದೆಗೆ ಸುಟ್ಟ ಗಾಯಗಳಾಗಿದ್ದವು. ನಂತರ ಹೆಚ್ಚಿನ
ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆಮಾಡಿ ನನ್ನ ಹೆಂಡತಿ
ಹಾಗೂ ಗೀತಾಳನ್ನು ಮತ್ತು ನನ್ನ ಅಳಿಯ ರಾಮಪ್ಪನನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದಿದ್ದು, ಇಂದು ದಿನಾಂಕ:
06-12-2015 ರಂದು ಬೆಳಗ್ಗೆ 7-45 ಗಂಟೆಗೆ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ಆಕಸ್ಮಿಕ
ಬೆಂಕಿಯಿಂದ ಉಂಟಾದ ಸುಟ್ಟ ಗಾಯಗಳ ಬಾಧೆಯಿಂದ ಮೃತಪಟ್ಟಿದ್ದು, ಆಕೆಯ ಮರಣದಲ್ಲಿ ಯಾರ ಮೇಲೂ ಯಾವುದೇ
ರೀತಿಯ ಸಂಶಯ ವಗೈರೆ ಇರುವುದಿಲ್ಲಾ. ಕಾರಣ, ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಯುಡಿಅರ್ ನಂ:28/15 ಕಲಂ:174
ಸಿ.ಅರ್.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment