1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 287/2015
ಕಲಂ. 87 Karnataka Police Act.
ದಿ : 07-12-15 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ
ಚಿಕ್ಕಸೂಳಿಕೇರಿ ಗ್ರಾಮದ ಮಸೀದಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಪಂಪಣ್ಣ ತಂದೆ ಬಸಪ್ಪ ಕುಕನೂರು ವಯಾ: 55 ವರ್ಷ ಜಾ: ಕುರುಬರು ಉ: ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 2] ಲಕ್ಷ್ಮಣ ತಂದೆ ಬಸಪ್ಪ ಬಡಿಗೇರ ವಯಾ: 51 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಆರಾಳ ತಾ: ಗಂಗಾವತಿ. 3] ಅಜ್ಜಪ್ಪ ತಂದೆ ನಿಂಗಪ್ಪ
ದೇಸಾಯಿ ವಯಾ: 25 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 4] ಶರಣಪ್ಪ ತಂದೆ ಶಿವಪುತ್ರಪ್ಪ ಮಾಲಿಪಾಟೀಲ್ ವಯಾ: 20 ವರ್ಷ ಜಾ: ಲಿಂಗಾಯತ : ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 5] ಸಂಗಪ್ಪ ತಂದೆ ಭೀಮಪ್ಪ ದೇಸಾಯಿ ವಯಾ: 40 ವರ್ಷ ಜಾ: ಲಿಂಗಾಯತ : ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 6] ರಾಮಣ್ಣ ತಂದೆ ಮರಿಯಪ್ಪ ಈಳಗೇರಿ ವಯಾ: 40 ವರ್ಷ ಜಾ: ಈಳಗೇರ ಉ: ಒಕ್ಕಲುತನ ಸಾ; ಚಿಕ್ಕಸೂಳಿಕೇರಿ. 7] ಕನಕಪ್ಪ ತಂದೆ ಕುಂಟೆಪ್ಪ ಹಟ್ಟಿ ವಯಾ: 30 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 8] ಬಸವರಾಜ ತಂದೆ ಫಕೀರಪ್ಪ ಭಜಂತ್ರಿ ವಯಾ; 30 ವರ್ಷ ಜಾ: ಭಜಂತ್ರಿ ಉ: ಒಕ್ಕಲುತನ ಸಾ: ಚಿಕ್ಕಸೂಳಿಕೇರಿ. 9] ಕರಿಹನುಮಪ್ಪ ತಂದೆ ಹನುಮಟೆಪ್ಪ ದೇಸಾಯಿ ವಯಾ: 45 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಚಿಕ್ಕಸೂಳಿಕೇರಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ
ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ
ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 450=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಸಂಚಾರಿ
ಪೊಲೀಸ್ ಠಾಣೆ ಗಂಗಾವತಿ ಗುನ್ನೆ. ನಂ. 39/2015 ಕಲಂ. 279, 304(ಎ) ಐ.ಪಿ.ಸಿ ಸಹಿತ 187
ಐ.ಎಂ.ವಿ. ಕಾಯ್ದೆ:
ದಿನಾಂಕ
07-12-2015 ರಂದು ಮದ್ಯಾನ್ನ 3-45 ರಿಂದ 4-00 ಗಂಟೆ ಸುಮಾರಿಗೆ ಫಿರ್ಯಾದಿದಾರನ ಅಣ್ಣನಾದ ಹನುಮೇಶ
ಈತನು ತನ್ನ ಮೋಟಾರು ಸೈಕಲ್ಲ ನಂ ಕೆ.ಎ. 36-ಕೆ 7088 ನೇದ್ದನ್ನು ಚಾಲನೆ ಮಾಡಿಕೊಂಡು ಗಂಗಾವತಿಯಿಂದ
ಊರಿಗೆ ಬರುತ್ತಿರುವಾಗ ಕೊಪ್ಪಳ ರಸ್ತೆಯ ವಡ್ಡಹಟ್ಟಿ ಗ್ರಾಮ ಪಂಚಾಯತ ಹತ್ತಿರ ಬರುತ್ತಿರುವಾಗ ಹಿಂದಿನಿಂದ
ಲಾರಿ ನಂ ಎಪಿ 22-ವೈ 9189 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ
ಮಾಡಿಕೊಂಡು ಬಂದು ಫಿರ್ಯಾದಿದಾರನ ಅಣ್ಣನಾದ ಹನುಮೇಶ ತಂದೆ ಸಣ್ಣ ಗ್ಯಾನಪ್ಪ ವಾಲಿಕಾರ ವಯಸ್ಸು 26
ಜಾ: ಕುರುಬರು ಉ: ಒಕ್ಕಲುತನ ಇತನ ಮೋಟಾರು ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಫಿರ್ಯಾದಿದಾರನ
ಅಣ್ಣನ ಸಾವಿಗೆ ಕಾರಣನಾಗಿರುತ್ತಾನೆ. ಹಾಗೂ ಲಾರಿ ಚಾಲಕ ಸ್ಥಳದಿಂದ ಪಾರಾರಿಯಾಗಿರುತ್ತಾನೆ ಈ ಘಟನೆಗೆ
ಕಾರಣನಾದ ಲಾರಿ ನಂ ಎಪಿ 22-ವೈ 9189 ನೇದ್ದರ ಚಾಲಕನ
ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ
ಕೊಟ್ಟ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ. 161/2015
ಕಲಂ. 143, 147, 447, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:07-12-2015 ರಂದು 8-00 ಪಿಎಂಕ್ಕೆ ಪಿರ್ಯಾದಿದಾರನು
ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ
ಸಾರಾಂಶವೇನೆಂದರೆ, ತನ್ನ ತಾಯಿಯ ಹೆಸರಿನಲ್ಲಿ ಹಾಗೂ ಸಾಗುವಳಿಯಲ್ಲಿರುವ ಹೊಲ ಸರ್ವೇ ನಂ:562/18ನೇದ್ದರ
20 ಎಕರೆ ಪೈಕಿ 5 ಎಕರೆ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಬಿತ್ತಿದ್ದು, ಅದು ಕಟಾವಿಗೆ ಬಂದಿದ್ದು
ದಿನಾಂಕ:7-12-15 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಆರೋಪಿತರು ಮೇಲ್ಕಾಣಿಸಿದ ಹೊಲದಲ್ಲಿ ಅತೀಕ್ರಮ
ಪ್ರವೇಶ ಮಾಡಿ, ತನ್ನ ಸೂರ್ಯಕಾಂತಿ ಬೆಳೆ ಕಟಾವಿಗೆ ತಡೆ ಒಡ್ಡಿ, ತನಗೆ ಆವಾಚ್ಯವಾಗಿ ಬೈಯ್ದಾಡಿದ್ದು,
ಅಲ್ಲದೇ, ಜೀವದ ಬೆದರಿಕೆ ಹಾಕಿದ್ದು, ಅಲ್ಲದೇ, ಆರೋಪಿತ ಯಲ್ಲಪ್ಪ್ನು ತನಗೆ ಕೈಯಿಂದ ಬಡಿದಿದ್ದು,
ಅಲ್ಲದೇ, ಸೂರ್ಯಕಾಂತಿ ಬೆಳೆಯನ್ನು ಕಟಾವು ಮಾಡಿಕೊಂಡು ಟ್ರ್ಯಾಕ್ಟರಿಯಲ್ಲಿ ಹೇರಿಕೊಂಡು ಹೋಗಿದ್ದು,
ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment