1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 04/2016 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ: 09-01-2016 ರಂದು ಸಾಯಾಂಕಾಲ 4-30 ಗಂಟೆಯ ಸುಮಾರಿಗೆ ಆರೋಪಿತನು ಮತ್ತು ಮರೇಗೌಡ
ವರು ಕಲಾಲಬಂಡಿಯಲ್ಲಿ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಆರೋಪಿತನು ಮೋಟಾರ್ ಸೈಕಲ್ ನಂ. KA-04/EW-8768 ನೇದ್ದರ ಹಿಂದುಗಡೆ ಮರೇಗೌಡನನ್ನು ಕೂಡಿಸಿಕೊಂಡು ಹಗೇದಾಳ ಮುಖಾಂತರ ದಮ್ಮೂರಿಗೆ ಅತೀವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಗೇದಾಳದ ಯಮನೂರಪ್ಪನ ದರ್ಗಾದ ಹತ್ತಿರ ರಸ್ತೆಯ
ಎಡಬದಿ ನಡೆದುಕೊಂಡು ಹೋರಟಿದ್ದ ಯಮನೂರಪ್ಪ ಭಾವಿಕಟ್ಟಿ ವ- 04 ವರ್ಷ ಇವನಿಗೆ ಹಿಂದುಗಡೆಯಿಂದ
ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಇರುತ್ತದೆ.
ಇದರಿಂದಾಗಿ ಯಮನೂರಪ್ಪನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು, ಮೋಟಾರ್ ಸೈಕಲ ಸವಾರನಾದ
ಆರೋಪಿತನಿಗೆ ಮತ್ತು ಮರೇಗೌಡನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಸದರಿ ಮೋಟಾರ
ಸೈಕಲ್ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ
ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 04/2016 ಕಲಂ: 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 07/2016
ಕಲಂ 41(ಡಿ), 102 ಸಿ.ಆರ್.ಪಿ.ಸಿ. ಮತ್ತು 92 ಕೆ.ಪಿ. ಕಾಯ್ದೆ:.
ದಿನಾಂಕ 09-01-2016 ರಂದು 13-00 ಗಂಟೆಗೆ ಶ್ರೀ ರಾಮಣ್ಣ ನಾಯ್ಕ ,ಪಿ ಎಸ್ ಐ (ಅ.ವಿ) ಗಂಗಾವತಿ ನಗರ
ಪೊಲೀಸ್ ಠಾಣೆ ರವರು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ಒಬ್ಬ ಹುಡುಗನನ್ನು ಹಾಜರ ಪಡಿಸಿ
ಅವರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಸಾರಂಶವೇನೆಂದರೆ, ಇಂದು ದಿನಾಂಕ 09-01-2016 ರಂದು ಮದ್ಯಾಹ್ನ 11-30 ಗಂಟೆಯ ಸುಮಾರಿಗೆ ಶ್ರೀ ರಾಮಣ್ಣ ನಾಯ್ಕ ಪಿ ಎಸ್ ಐ (ಅ.ವಿ), ರವರು
ಗಂಗಾವತಿ ನಗರ ಪೊಲೀಸ್ ಠಾಣೆ ರವರು ಗಂಗಾವತಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಜಯ ನಗರದ ಶಭರಿ ಹೋಟಲ್ ಹತ್ತಿರ ಇರುವಾಗ ಒಬ್ಬ ಹುಡುಗ ನಮ್ಮ ಜೀಪನ್ನು ನೋಡಿ ಓಡಿ ಹೋಗಿದ್ದು ಸದರಿಯವನ ಮೇಲೇ
ಸಂಶಯ ಬಂದು ಆತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಸದರಿಯವನು ತನ್ನ
ಹೆಸರು ಫಜಲ್ ಖಾನ ತಂದೆ ಫಿರೋಜಖಾನ್ ವಯಾ: 16 ವರ್ಷ ಜಾ: ಮುಸ್ಲಿಂ ಉ: ವಿದ್ಯಾರ್ಥಿ ಸಾ: ಪಂಪಾನಗರ
ಗಂಗಾವತಿ ಅಂತಾ ಹೇಳಿದ್ದು ಸದರಿಯವನು ಈಗಾಗಲೆ ಠಾಣಾ ಗುನ್ನೆ ನಂ 80/2015 ಕಲಂ: 380 ಐ,ಪಿ,ಸಿ
ಪ್ರಕರಣದಲ್ಲಿ ಬಾಲಾಪರಾದಿಯಾಗಿದ್ದು, ಸದರಿಯವನ ಹತ್ತಿರ ಇದ್ದು ಒಂದು ಲಿನೋವಾ ಮೊಬೈಲ ಬಗ್ಗೆ ವಿಚಾರಿಸಲಾಗಿ
ಸದರಿಯವನು ಯಾವುದೇ ಸಮರ್ಪಕ ಉತ್ತರ ಕೊಡದೇ ಇದ್ದುದ್ದರಿಂದ , ಸದರಿಯವನು ಕಳ್ಳತನ ಪ್ರವೃತ್ತಿಯನ್ನು
ಮುಂದುವರೆಸಿರುವದರ ಬಗ್ಗೆ ಬಲವಾದ ಸಂಶಯ ಬಂದು ಸದರಿ ಬಾಲಕನ್ನು ವಶಕ್ಕೆ ತೆಗೆದುಕೊಂಡು ಆತನ ಹತ್ತಿರ
ದೊರೆತ ಲಿನೋವಾ ಮೊಬೈಲ್ ಒಇ ಓಠ 867124024342594 / 867124024342602 ನೇದ್ದನ್ನು
ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ದ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿ
ಸಾರಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 7/2016 ಕಲಂ 41 (1) (ಡಿ) ಸಹಿತ 102 ಸಿಆರ್ ಪಿಸಿ ಮತ್ತು 98 ಕೆ.ಪಿ.
ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment