1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 07/2016
ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕಃ-10-01-2016 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ
ಬಿ. ವೆಂಕಟೇಶ ತಂದಿ ಮಲ್ಲಪ್ಪ ಬೊಂಬೈ ವಯಾ-35 ವರ್ಷ, ಜಾ- ಉಪ್ಪಾರ ಉ ಒಕ್ಕಲುತನ ಸಾ. ಉಪ್ಪಾರ ವಾಡಿ,
ವೆಂಕಟೇಶ್ವರ ಗುಡಿ ಹತ್ತಿರ ಸಿಂಧನೂರು ಜಿ. ರಾಯಚೂರು ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ
ಪಿರ್ಯಾದಿಯನ್ನು ಕೊಟ್ಟಿದ್ದು ಸದರ ಫಿರ್ಯಾದಿಯ ಸಾರಾಂಶವೆನಂದರೆ ಫಿರ್ಯಾದಿದಾರರ ಚಿಕ್ಕಪ್ಪನ
ಮಗನಾದ ತಿಮ್ಮಪ್ಪ ತಂದಿ ಯಮನಪ್ಪ ಬೊಂಬೈ ವಯಾ-23
ವರ್ಷ ಈತನು ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡಿದ್ದು ಈ ದಿನ ದಿನಾಂಕ 10-01-2016 ರಂದು ಕಾಯಿಪಲ್ಲೆ
ಮಾರಾಟ ಮಾಡಿದ ಬಾಕಿ ಹಣದ ವಸೂಲಿ ಕುರಿತು ಫಿರ್ಯಾದಿ ಮತ್ತು ಫಿರ್ಯಾದಿದಾರರ ಸಂಬಂಧಿ ಉಮೇಶ
ತಂಧೆ ಅಯ್ಯಪ್ಪ ಗೋಮರ್ಸಿ ಹಾಗೂ ಫಿರ್ಯಾದಿದಾರರ ಚಿಕ್ಕಪ್ಪನ ಮಗನಾದ ತಿಮ್ಮಪ್ಪ ತಂಧೆ ಯಮನಪ್ಪ
ಬೊಂಬೈ ವಯ 23 ವರ್ಷ ಮೂವರ ಕೂಡಿಕೊಂಡು ಕಾರಟಗಿಗೆ ಬರುವುದಕ್ಕಾಗಿ ತಿಮ್ಮಪ್ಪ ಈತನು ತನ್ನ ಮೋಟಾರ್
ಸೈಕಲ್ ನಂ. ಕೆಎ-36/ಇಬಿ-5678 ನೇದ್ದರ ಮೇಲೆ ಹಾಗೂ ಫಿರ್ಯಾದಿ ಮತ್ತು ಉಮೇಶ ಇವರು ಇನ್ನೊಂದು ಮೋಟಾರ್
ಸೈಕಲ್ ಮೇಲೆ ಸಿಂದನೂರದಿಂದ ಸಿಂಧನೂರು-ಕಾರಟಗಿ
ರಸ್ತೆಯ ಮೇಲೆ ಕಾರಟಗಿಯ ಧನಲಕ್ಷ್ಮೀ ರೈಸ್ ಮಿಲ್ ಹತ್ತಿರ ಈ ದಿನ ದಿನಾಂಕ 10-01-2016 ರಂದು
ಮದ್ಯಾಹ್ನ 1-30 ಗಂಟೆಗೆ ಬರುತ್ತಿದ್ದಾಗ ನಮೂದು ಮಾಡಿದ ಆರೋಪಿ ಕಾರ್ ಚಾಲಕ ತಾನು ನಡೆಸುತ್ತಿದ್ದ
ಟಾಟಾ ಇಂಡಿಕಾ ಕಾರ್ ನಂ ಕೆಎ-36/ಎನ್ -1687 ನೇದ್ದನ್ನು ಅತಿ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಗಡೆ ತನ್ನ
ಮೋಟಾರ್ ಸೈಕಲ್ ನಂ. ಕೆಎ-36/ಇಬಿ-5678 ನೇದ್ದರ ಮೇಲೆ ಹೋರಟಿದ್ದ ತಿಮ್ಮಪ್ಪ ಈತನ ಮೋಟಾರ್ ಗೆ ಹಿಂದಿನಿಂದ
ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ತಿಮ್ಮಪ್ಪ ೀತನು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು
ಆತನ ತಲೆಗೆ ಗಂಭಿರ ಗಾಯವಾಗಿದ್ದು ಅಲ್ಲದೆ ಅಪಘಾತಪಡಿಸಿದ ಕಾರ್ ಚಾಲಕ ವಾಹನ ನಿಲ್ಲಿಸದೇ
ಹಾಗೆಯೇ ವಾಹನ ಸಮೇತ ಹೋರಟು ಹೋಗಿದ್ದು ಸದರಿ ಗಾಯಗೊಂಡ ತಿಮ್ಮಪ್ಪನಿಗೆ ಆತನಿಗೆ 108 ಅಂಬುಲೆನ್ಸ್
ದಲ್ಲಿ ಇಲಾಜಕ್ಕಾಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಂತರ ಆತನಿಗೆ ವೈದ್ಯರ ಸಲಹೆ
ಮೇರೆಗೆ ಅಲ್ಲಿಂದ ಹೆಚ್ಚಿನ ಇಲಾಜಕ್ಕಾಗಿ ಸಿಂಧನೂರಿಗೆ ಕರೆದುಕೊಂಡು ಹೋರಟಿದ್ದಾಗ್ಗೆ ಮಾರ್ಗಮದ್ಯದಲ್ಲಿ
ಮೃತಪಟ್ಟಿದ್ದು ಇರುತ್ತದೆ. ಸದ್ಯ ಮೃತ ದೇಹವು ಸಿಂಧನೂರು ಸರಕಾರಿ
ಆಸ್ಪತ್ರೆಯಲ್ಲಿ ಇದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ
ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 09/2016
ಕಲಂ 279, 337, 338 ಐ.ಪಿ.ಸಿ:.
ದಿನಾಂಕ:- 10-01-2016 ರಂದು ಸಂಜೆ
6:00
ಗಂಟೆಗೆ ಗಂಗಾವತಿ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ನಿಂದ ಅಪಘಾತದ ಬಗ್ಗೆ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕುಮಾರಿ ಗಾಯತ್ರಿ ತಂದೆ ವೀರೇಶಪ್ಪ ಪಟ್ಟೇದ, ವಯಸ್ಸು 19 ವರ್ಷ, ಜಾತಿ:
ಲಿಂಗಾಯತ ಉ: ವಿದ್ಯಾಭ್ಯಾಸ ಸಾ: ಗುತ್ತಿಗನೂರು ತಾ: ಬಳ್ಳಾರಿ ಇವರು ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು
ದಿನಾಂಕ:- 10-01-2016 ರಂದು ನಾನು ಮತ್ತು ನನ್ನ ದೊಡ್ಡಮ್ಮನ ಮಗನಾದ ಬೆಟದಪ್ಪ ತಂದೆ
ಬುಡ್ಡಪ್ಪ ಅಂಗಡಿ 35 ವರ್ಷ, ಲಿಂಗಾಯತ ಉ: ಜಿಂದಾಲ ಫ್ಯಾಕ್ಟರಿಯಲ್ಲಿ ಕೆಲಸ ಸಾ; ಹಿರೇಬೆಣಕಲ್
ಇಬ್ಬರೂ ಕೂಡಿಕೊಂಡು ಆತನ ಹಿರೋ ಪ್ಯಾಶೆನ್ ಪ್ರೋ ಮೋ.ಸೈ. ನಂ: ಕೆ.ಎ-35/ಎಕ್ಸ್-0561 ನೇದ್ದರಲ್ಲಿ
ಗಂಗಾವತಿಯಿಂದ ಆಂಜನೇಯ ಬೆಟ್ಟಕ್ಕೆ ಹೋಗುತ್ತಿರುವಾಗ ಗಂಗಾವತಿ-ಆನೇಗುಂದಿ ಮುಖ್ಯ ರಸ್ತೆಯ ಸಾಯಿ
ನಗರ ಸೀಮಾದ ತಿರುವಿನಲ್ಲಿ ಸಂಜೆ 5:00 ಗಂಟೆಗೆ ನಮ್ಮ ಎದುರುಗಡೆ ಬಂದ ಹಿರೋ ಹೋಂಡಾ ಸ್ಪ್ಲೆಂಡರ ಮೋಟಾರ ಸೈಕಲ್
ನಂ: ಕೆ.ಎ-37/ ಜೆ-2206 ನೇದ್ದರ ಚಾಲಕ ಕೃಷ್ಣ ತಂದೆ ವೀರೇಶಪ್ಪ, 27 ವರ್ಷ, ಮೆಕಾನಿಕ್
ಸಾ: ಕೆಸಕ್ಕಿ ಹಂಚನಾಳ ಕ್ಯಾಂಪ್ ಹಾಲಿವಸ್ತಿ: ಶ್ರೀರಾಮನಗರ ಈತನು ತನ್ನ ಮೋ.ಸೈ.ನ್ನು ಅತೀ
ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮಗೆ ಟಕ್ಕರ್ ಕೊಟ್ಟು ಅಪಘಾತ
ಮಾಡಿದನು. ಇದರಿಂದ ನನಗೆ ಬಲಗಾಲ ಪಾದದ ಹತ್ತಿರ ತೀವ್ರ ಗಾಯವಾಯಿತು.ಹಾಗೂ
ಅಲ್ಲಲ್ಲಿ ತೆರೆಚಿದ ಗಾಯಗಳಾಗಿದ್ದು, ಬೆಟದಪ್ಪನಿಗೆ ಗದ್ದಕ್ಕೆ, ಬಲಗಾಲ ಪಾದದ ಹತ್ತಿರ
ಎರಡೂ ಮುಂಗೈಗಳಿಗೆ ಗಾಯಗಳಾಗಿ ಅಲ್ಲಲ್ಲಿ ತೆರೆಚಿದ ಗಾಯಗಳಾದವು. ಕೃಷ್ಣನಿಗೆ ಸಣ್ಣ ಪುಟ್ಟ
ಗಾಯಗಳಾದವು. ನಂತರ ನಾವುಗಳು ಅಲ್ಲಿಂದ 108 ವಾಹನದಲ್ಲಿ ಗಂಗಾವತಿಗೆ ಬಂದು
ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ. ಕಾರಣ ಈ ಅಪಘಾತ ಮಾಡಿದ ಮೋ.ಸೈ. ಚಾಲಕ ಕೃಷ್ಣ ಈತನ
ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ನೀಡಿದ ಹೇಳಿಕೆ ಪಡೆದು ಸಂಜೆ
7:00
ಗಂಟೆಗೆ ಠಾಣೆಗೆ ವಾಪಸ್ ಬಂದು ಹೇಳಿಕೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಳ್ಳಲಾಯಿತು.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 06/2016
ಕಲಂ 143, 147, 341, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ: 10.01.2016 ರಂದು ಸಾಯಂಕಾಲ 6:30 ಗಂಟೆಗೆ
ಪಿರ್ಯಾದಿದಾರರಾದ ಶ್ರೀ ರಡ್ಡೆಪ್ಪ ಸಾ:
ಮಾಲಗಿತ್ತಿ ಹಾ:ವ: ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ಒಂದು
ಲಿಖಿತ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಇಂದು
ದಿನಾಂಕ:10.01.2015 ರಂದು ಮದ್ಯಾನ 2:30 ಗಂಟೆಯ
ಸುಮಾರಿಗೆ ಆರೋಪಿತರು ಸಮಾನ ಉದ್ದೇಶದಿಂದ ಗುಂಪು
ಕಟ್ಟಿಕೊಂಡು ಬಂದು ಶ್ರೀ ಗವಿಶಿದ್ದೇಶ್ವರ
ಬಾಲಕರ ಹಾಸ್ಟೇಲ್ ಮುಂದೆ ಇರುವ ಆಟದ
ಮೈದಾನದಲ್ಲಿ ಕ್ರೀಕೇಟ್ ಆಟ ಆಡುತ್ತಿದ್ದ ಹಾಸ್ಟೇಲ್
ವಿದ್ಯಾರ್ಥಿ ಪ್ರಭುಗೌಡ ಇತನಿಗೆ ತಡೆದು ನಿಲ್ಲಿಸಿ
ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆಬಡಿ
ಮಾಡಿ ಜೀವದ ಬೆದರಿಕೆ ಹಾಕಿದ್ದು
ಇರುತ್ತದೆ. ಕಾರಣ ಆರೋಪಿತರ ಮೇಲೆ
ಕಾನೂನು ಕ್ರಮ ಜರುಗಿಸುವಂತೆ ನೀಡಿದ
ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment