1) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 05/2016
ಕಲಂ. 279, 304(ಎ) ಐ.ಪಿ.ಸಿ :.
ದಿನಾಂಕ 11-01-2016 ರಂದು
ಮದ್ಯಾಹ್ನ 1-20 ಗಂಟೆಗೆ ಫಿರ್ಯಾದಿದಾರರಾದ ಸೈಯದ್ ಅಲೀಮ್ ತಂದೆ ಸೈಯದ್ ಮೆಹಬೂಬ ಅಲಿ
ವಯಸ್ಸು 42 ವರ್ಷ ಜಾತಿ: ಮುಸ್ಲಿಂ, ಉ: ಒಕ್ಕಲುತನ ಸಾ: ಬಸಾಪುರ ತಾ.ಜಿ: ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ, ಇಂದು
ದಿನಾಂಕ 11-01-2016 ರಂದು ಕೊಪ್ಪಳದಲ್ಲಿ ನಮ್ಮ ಸಂಬಂಧಿಕರ ಮದುವೆ
ಇದ್ದು, ಸದರಿ ಮದುವೆ ಕಾರ್ಯಕ್ರಮಕ್ಕೆ ನಾನು ನಮ್ಮ ಸಂಬಂಧಿ ಸೈಯದ್ ರಹೆಮತ್
ಇಬ್ಬರೂ ಒಂದು ಮೋಟಾರ್ ಸೈಕಲ್ ಮೇಲೆ ಹಾಗೂ ಸಿಂಧನೂರಿನಿಂದ ಬಂದಿರುವ ನಮ್ಮ ತಮ್ಮ ಸೈಯದ್ ಜಹೀರ್
ಮತ್ತು ನಮ್ಮ ಚಿಕ್ಕಮ್ಮ ಅಮೀನಾ ಬೇಗಂ ಇಬ್ಬರೂ ಅವರ ಮೋಟಾರ್ ಸೈಕಲ್ ನಂಬರ್ KA
36 / W 229 ನೇದ್ದರಲ್ಲಿ ಬಸಾಪುರ ದಿಂದ ಬೆಳಿಗ್ಗೆ 10-00 ಗಂಟೆಗೆ
ಕೊಪ್ಪಳಕ್ಕೆ ಹೊರಟೆವು. ಸೈಯದ್ ಜಹೀರ ಇವನು ನಮ್ಮ ಮುಂದೆ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಗದಗ – ಹೊಸಪೇಟೆ
ಎನ್.ಹೆಚ್ 63 ರಸ್ತೆಯ ಮೇಲೆ ಜಿಲ್ಲಾಧಿಕಾರಿ ಕಛೇರಿಯ ಸಮೀಪ ಕೊಪ್ಪಳದ ಕಡೆಗೆ
ಹೋಗುತ್ತಿರುವಾಗ ಕೊಪ್ಪಳದ ಕಡೆಯಿಂದ ಬಂದ ಬಸ್ ನಂಬರ್ KA 37 / F 559 ನೇದ್ದರ
ಚಾಲಕನು ಬಸ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ
ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೊರಟಿದ್ದ ಸೈಯದ್ ಜಹೀರ್ ಇವರ ಮೋಟಾರ್ ಸೈಕಲ್ ಗೆ ಟಕ್ಕರ್
ಮಾಡಿದ್ದು, ಇದರಿಂದ ನಮ್ಮ ತಮ್ಮನ ಮೋಟಾರ್ ಸೈಕಲ್ ಬಸ್ಸಿನ ಮುಂಭಾಗದಲ್ಲಿ ಸಿಲುಕಿ
ಸುಮಾರು 10 ಫೀಟ್ ರಸ್ತೆಯ ಮೇಲೆ ತಳ್ಳಿಕೊಂಡು ಹೋಗಿದ್ದು ಇರುತ್ತದೆ. ಇದರಿಂದ
ಸೈಯದ್ ಜಹೀರ್ ಇವರಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮುಖ ಚಪ್ಪಟೆಯಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದನು. ನಮ್ಮ ಚಿಕ್ಕಮ್ಮ ಅಮೀನಾ ಬೇಗಂ ಈಕೆಗೆ ತಲೆಗೆ ಮತ್ತು ಮುಖಕ್ಕೆ ಭಾರಿ
ರಕ್ತಗಾಯವಾಗಿ ಅವರೂ ಕೂಡಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಘಟನೆ
ಸಂಭವಿಸಿದಾಗ ಮಧ್ಯಾಹ್ನ ಸುಮಾರು 12-40 ಗಂಟೆಯಾಗಿತ್ತು ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 02/2016
ಕಲಂ. 279, 337, 338 ಐ.ಪಿ.ಸಿ :.
ದಿನಾಂಕ :.11.01.2016 ರಂದು ಬೆಳಗಿನ ಜಾವ 01:00 ಗಂಟೆ ಸುಮಾರಿಗೆ ಕುಷ್ಟಗಿ - ಹೊಸಪೇಟ್ ಎನ್ ಹೆಚ್ 50 ಒಮ್ಮುಖ ರಸ್ತೆಯ ಮೇಲೆ ಗುನ್ನಾಳ ಸೀಮಾದಲ್ಲಿ ಆರೋಪಿತನು ತಾನು ನಡೆಸುತ್ತಿದ್ದ ಲಾರಿ ನಂ TN- 88-8676 ನೆದ್ದನ್ನು ಕುಷ್ಟಗಿ ಕಡೆಯಿಂದ ಹೊಸಪೇಟ್ ಕಡೆಗೆ ರಸ್ತೆಯ ಮೇಲೆ ಅಡ್ಡಾ ದಿಡ್ಡಿಯಾಗಿ ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯನ್ನುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ರಸ್ತೆಯ ಎಡ ಬಡಿಗೆ ನಿಲ್ಲಿಸಿದ್ದ ಪಿರ್ಯಾದಿದಾರರ ಲಾರಿ ನಂ KA 29 A 5905 ನೇದ್ದಕ್ಕೆ ಹಿಂದಿನಿಂದ ಬಲವಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆರೋಪಿತ ಲಾರಿಯ ಕ್ಯಾಬಿನ ಜಖಂಗೊಂಡು ಲಾರಿಯಲ್ಲಿದ್ದ ಆರೋಪಿತನಿಗೆ ಮತ್ತು ಇನ್ನೊಬ್ಬ ಜಯಮುರಘನ್ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಇತ್ಯಾದಿ ಪಿರ್ಯಾದಿ ಸಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 18/2016
ಕಲಂ 379 ಐ.ಪಿ.ಸಿ:.
ದಿನಾಂಕ 11-01-2016 ರಂದು ಸಂಜೆ 05-15 ಗಂಟೆಗೆ ಮಾನ್ಯ ಜಿಲ್ಲಾ
ಪೊಲೀಸ್ ಅಧೀಕ್ಷಕರು ಕೊಪ್ಪಳ ಇವರಿಂದ ಹುನಗುಂದ ಪೊಲೀಸ್ ಠಾಣೆ ಗುನ್ನೆ ನಂ: 155/2015 ಕಲಂ 379 ಐ.ಪಿ.ಸಿ ಪ್ರಕರಣದ ಕಡತವನ್ನು ಹದ್ದಿ
ಪ್ರಯುಕ್ತ ಮುಂದಿನ ತನಿಖೆ ಕುರಿತು ವರ್ಗಾವಣೆ ಮಾಡಿದ ದಾಖಲಾತಿಗಳು ವಸೂಲಾಗಿದ್ದು ಇರುತ್ತದೆ. ಪ್ರಕರಣದ
ಸಂಕ್ಷಿಪ್ತ ಸಾರಾಂಶವೆನೆಂದರೆ, ದಿನಾಂಕ:10-09-2015 ರಂದು 04-50 ಗಂಟೆಯ ಸುಮಾರಿಗೆ ಪಿರ್ಯಾದಿದಾರ
ಮತ್ತು ಅದರ ಮಾಲಿಕ ಕೆ. ಸತ್ತವೇಲ್ ಇವರು ಲಾರಿ ನಂ: ಟಿ.ಎನ್.-28-ಎ.ಇ-9492 ನೇದ್ದನ್ನು ಕುಷ್ಟಗಿ
ಟೋಲಪ್ಲಾಜ್ ಹತ್ತಿರ ನಿಲ್ಲಿಸಿ ಮಲಗಿಕೊಂಡಾಗ ಯಾರೋ ಕಳ್ಳರು ಲಾರಿಯ ತಾಡಪತ್ರಿಯನ್ನು ಕತ್ತರಿಸಿ ಅದರಲ್ಲಿ
ಲೋಡ ಮಾಡಿದ್ದ 02,27,500=00 ರೂಪಾಯಿ ಕಿಮ್ಮತ್ತಿನ 35 ನಟರಾಜ ಸೀಸು ಪೆನ್ಸಲ್ ಬಾಕ್ಷಗಳನ್ನು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ
ತನಿಖೆಯನ್ನು ಕೈಕೊಂಡಿದೆ.
0 comments:
Post a Comment