1)
ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ.
323, 504, 506, 143, 147 ಸಹಿತ 149 ಐ.ಪಿ.ಸಿ. & 3 (1) (10) ಎಸ್.ಸಿ/ಎಸ್.ಟಿ.
ಪಿ.ಎ. ಕಾಯ್ದೆ 1989.
ದಿನಾಂಕ 19-01-2016 ರಂದು 19-00 ಶ್ರೀಮತಿ ಗುಣ ಗಂಡ
ವಿಜಯ ಪ್ರಕಾಶ ಜಾ: ವಡ್ಡರ ವಯ 47 ವರ್ಷ ಉ: ಕೂಲಿ ಕೆಲಸ ಸಾ: ಲಕ್ಷ್ಮೀಕ್ಯಾಂಪ್, ಗಂಗಾವತಿ ರವರು
ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 18-01-2016
ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದರರು ಲಕ್ಷ್ಮೀಕ್ಯಾಂಪಿನಲ್ಲಿ ತಮ್ಮ ಮನೆಯ ಮುಂದೆ
ಕಸ ಗೂಡಿಸುತ್ತಿರುವಾಗ ಆರೋಪಿತರಾದ ಸಿಕಂದರ, ಮಸೂದ ಹಾಗೂ ಇತರೆ 10 ಜನರು ಅಕ್ರಮಕೂಟ ರಚಿಸಿಕೊಂಡು
ಬಂದು ಫಿರ್ಯಾದಿದಾರಳಿಗೆ ಲೇ ಭೋವಿ ಸೂಳೆಯರೆ ನಿನ್ನ ಮಗನಾದ ಜೈರಾಮ ಎಲ್ಲಿ ಇದ್ದಾನೆ ಹೇಳು ಅವನದು
ಬಹಳ ಆಗಿದೆ ಎಂದು ಹೇಳುತ್ತಾ ಆರೋಪಿ ಮಸೂದ ಇತನು ಫಿರ್ಯಾದಿದಾರರ ಮಕ್ಕಳನ್ನು ನೆಲಕ್ಕೆ ನೂಕಿದ್ದು
ಅಲ್ಲದೇ ಆರೋಪಿತರೆಲ್ಲರೂ ಕೂಡಿಕೊಂಡು ನಿಮ್ಮ ಮಗ ಸಿಕ್ಕ ಮೇಲೆ ನಿಮ್ಮೆಲ್ಲರನ್ನು ಜೀವಂತ ಸುಟ್ಟು
ಹಾಕುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 10/2016 ಕಲಂ. 143, 147, 341, 323, 324, 504, 506
ಸಹಿತ 149 ಐ.ಪಿ.ಸಿ:
ದಿನಾಂಕ- 19-01-2016 ರಂದು ಸಾಯಂಕಾಲ
5-15 ಗಂಟೆಗೆ ಪಿರ್ಯಾದಿದಾರರಾದ
ಬಸವಣ್ಣಯ್ಯ ತಂದಿ
ಮಲ್ಲಯ್ಯ ಹಿರೇಮಠ ವಯಾ-51 ವರ್ಷ, ಜಾ. ಜಂಗಮ ಉ- ಒಕ್ಕಲುತನ / ಎಲ್.ಐ.ಸಿ ಏಜೆಂಟ್ ಸಾ. ತಿಮ್ಮಾಪೂರ
ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೆನಂದರೆ
ಆರೋಪಿತರಾದ ಶ್ರೀಶೈಲ್ ತಂದಿ ಶಿವಯ್ಯ ಮಠಪತಿ ಇವರು ಪಿರ್ಯಾದಿದಾರರ ಮಗಳಾದ ಶ್ರೀಮತಿ ಜಂಬಮ್ಮ ಇವರ
ಜಾಗೆಯನ್ನು ಒತ್ತುವರಿ ಮಾಡಿ ಮನೆ ಕಟ್ಟಡ ಕಟ್ಟುತ್ತಿರುವ ವಿಷಯಕ್ಕೆ ಸಂಬಂದಿಸಿದಂತೆ ಇಂದು ದಿನಾಂಕ:-19-01-2016
ರಂದು ಬೆಳಿಗ್ಗೆ 11-30 ರಿಂದ 11-45 ಗಂಟೆಯ ಅವಧಿಯಲ್ಲಿ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ
ಮಗ ಗಣೇಶ ಇಬ್ಬರು ಆರೋಪಿತರಿಗೆ ಕೇಳಲು ಹೋದಾಗ್ಗೆ ಆರೋಪಿತರೆಲ್ಲರೂ ಬಂದು ಪಿರ್ಯಾದಿದಾರರಿಗೆ ಮತ್ತು
ಪಿರ್ಯಾದಿದಾರರ ಮಗನಿಗೆ ತಡೆದು ನಿಲ್ಲಸಿ ಅವಛ್ಯವಾಗಿ ಬೈದಾಡಿ ಕೈಯಿಂದ ಬಡಿದು ಕಲ್ಲಿನಿಂದ ಹೊಗೆದು
ಪಿರ್ಯಾದಿದಾರರ ಕೈಹಿಡಿದು ತಿರುವಿದ್ದು ಅಲ್ಲದೇ ಬಿಡಿಸಲು ಬಂದ ಪಿರ್ಯಾದಿದಾರರ ಹೆಂಡತಿ ಶ್ರೀಮತಿ
ಗಂಗಮ್ಮ ಇವರಿಗೂ ಕೈಯಿಂದ ಹೊಡೆ ಬಡಿ ಮಾಡಿ ಎಲ್ಲರಿಗೂ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ
ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 11/2016 ಕಲಂ. 341, 323, 324, 504, 506 ಸಹಿತ 34
ಐ.ಪಿ.ಸಿ:
ದಿನಾಂಕ-
19-01-2016 ರಂದು ಸಾಯಂಕಾಲ 19-45 ಗಂಟೆಗೆ ಪಿರ್ಯಾದಿದಾರರಾದ ಶ್ರೀಶೈಲ್
ಸ್ವಾಮಿ ತಂದಿ ಶಿವಯ್ಯ ಸ್ವಾಮಿ ಮಠಪತಿ ವಯಾ-60 ವರ್ಷ, ಜಾ. ಜಂಗಮ ಉ- ಒಕ್ಕಲುತನ ಸಾ. ತಿಮ್ಮಾಪೂರ ತಾ.
ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೆನಂದರೆ ಪಿರ್ಯಾದಿದಾರರು
ತಮ್ಮ ಮನೆಯ ಹಿಂದೆ ಇರುವ ಜಾಗೆಯಲ್ಲಿ ಪಂಚಾಯಿತಿ ಬಂದಿರುವ ಶೌಚಾಲಯದ ಕಟ್ಟಡ ಮತ್ತು ಕಂಪೌಂಡ್ ಕಟ್ಟುತ್ತಿದ್ದಾಗ್ಗೆ
ಇಂದು ದಿನಾಂಕ:-19-01-2016 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಆರೋಪಿತರಾದ ಬಸವಣ್ಣಯ್ಯ ತಂದಿ ಮಲ್ಲಯ್ಯ ಹಿರೇಮಠ, ಗಣೇಶ ತಂದಿ ಬಸವಣ್ಣಯ್ಯ ಸ್ವಾಮಿ ಸಾ. ತಿಮ್ಮಾಪೂರ ಇವರು ಬಂದು ನಮ್ಮ
ಕಟ್ಟಡಕ್ಕೆ ತಕರಾರು ಮಾಡಿ ಅವಚ್ಯವಾಗಿ ಬೈದಾಡಿ ಕಲ್ಲು ತೆಗೆದುಕೊಂಡು ಹೊಗೆದು ಕಲ್ಲನ್ನು ತೆಗೆದುಕೊಂಡು
ಗುದ್ದಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ. 353 ಐ.ಪಿ.ಸಿ:
ದಿನಾಂಕ 19-01-2016 ರಂದು 22-30 ಶ್ರೀ ಆನಂದಕುಮಾರ,
ಎಂ. ಸಹಾಯಕ ಅಭಿಯಂತರರು ಕಾರ್ಯ & ಪಾಲನ ಘಟಕ ಜೆಸ್ಕಾಂ ಗಂಗಾವತಿ ರವರು ಠಾಣೆಗೆ ಬಂದು
ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 19-01-2016 ರಂದು ಸಂಜೆ
6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಶ್ರೀ ಸಂದೀಪರಾಜ.ಟಿ.ಎನ್. ಮಾರ್ಗದಾಳು
(ಲೈನಮ್ಯಾನ್) ಇವರನ್ನು ಕಚೇರಿಯ ಗ್ರಾಹಕರಿಂದ ಬಂದಿರುವಂತಹ ದೂರುಗಳನ್ನು ಸರಿ ಪಡಿಸುವ ಕುರಿತು
ಕರ್ತವ್ಯಕ್ಕೆ ನೇಮಕ ಮಾಡಿದ್ದು, ಶ್ರೀ ಸಂದೀಪರಾಜ,ಟಿ.ಎನ್. ರವರು ರಾತ್ರಿ 9-35 ಗಂಟೆಯ
ಸುಮಾರಿಗೆ ಜೆಸ್ಕಾಂ ಕಚೇರಿಯ ಆವರಣದಲ್ಲಿರುವ ಗಂಗಾವತಿಯ ಗ್ರಾಹಕರ ಸೇವಾ ಕೇಂದ್ರದ ಹತ್ತಿರ
ಇರುವಾಗ ಅಲ್ಲಿಗೆ ಆರೋಪಿತನಾದ ಶಿವುಕುಮಾರ ಮಾರ್ಗದಾಳು (ಲೈನ್ ಮ್ಯಾನ್) ಇತನು ಬಂದು
ಕರ್ತವ್ಯದಲ್ಲಿದ್ದ ಸಂದೀಪರಾಜ.ಟಿ.ಎನ್. ಮಾರ್ಗದಾಳು (ಲೈನಮ್ಯಾನ್) ಇವರ ಮೇಲೆ ಹಲ್ಲೆ
ಮಾಡಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 07/2016
ಕಲಂ. 447, 341, 324, 504 ಸಹಿತ 34 ಐ.ಪಿ.ಸಿ:.
19-01-2016 ರಂದು ಮಧ್ಯಾನ್ಹ
1 ಗಂಟೆಯ ಸುಮಾರಿಗೆ ಪಿರ್ಯಾದಿದಾರಳು ಯಲಬುರ್ಗಾ ಸೀಮಾದಲ್ಲಿರುವ ತನ್ನ ಜಮೀನದಲ್ಲಿ ತಿರುಗಾಡಲು
ಬಿಟ್ಟ ಜಾಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತರಿಬ್ಬರೂ ಸದ್ರಿಯವಳ ಹೊಲದಲ್ಲಿ ಅತೀಕ್ರಮ
ಪ್ರವೇಶ ಮಾಡಿ ಅವಳಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆವಾಚ್ಛ ಶಬ್ದಗಳಿಂದ ಬೈಯ್ದು ``ನಾವು ನಿನಗೆ ಇಲ್ಲಿ ಅಡ್ಡಾಡಬೇಡ ಅಂತಾ ಸಾಕಷ್ಟು
ಸಾರಿ ಹೇಳಿದರೂ ಕೂಡಾ ನೀನು ನಮ್ಮ ಮಾತು ಕೇಳುವದಿಲ್ಲ'' ಅಂತಾ ಅಂದವರೇ ಆರೋಪಿ ನಂ: 1 ಈತನು ಕುಡುಗೋಲಿನಿಂದ
ಪಿರ್ಯಾದಿದಾರಳ ಬಲ ಹಣೆಗೆ ಹೊಡೆದು ಗಾಯಗೊಳಿಸಿದ್ದು ಇರುತ್ತದೆ. ಆರೋಪಿ ನಂ: 2 ಈಕೆಯು
ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿದಾರಳ ಬೆನ್ನಿಗೆ ಹೊಡೆದು ದು:ಖಾಪತಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ
ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment