Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, January 21, 2016

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ. 78(3) Karnataka Police Act.
ದಿನಾಂಕ: 20-01-2016 ಸಾಯಂಕಾಲ 20-00 ಗಂಟೆಗೆ ಶ್ರೀ ಇ. ಕಾಳಿಕೃಷ್ಣ,  ಪೊಲೀಸ್ ಇನ್ಸಪೆಕ್ಟರ್ ನಗರ  ಪೊಲೀಸ್ ಠಾಣೆ ಗಂಗಾವತಿ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ ಒಬ್ಬ ವ್ಯಕ್ತಿ ಹಾಗೂ ಮುದ್ದೇಮಾಲನ್ನು ಹಾಜರುಪಡಿಸಿ ಅವರ ಮೇಲೆ ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 20-01-2016 ರಂದು ಸಾಯಂಕಾಲ 18-30 ಗಂಟೆಗೆ ಆರೋಪಿತನಾದ ಟಿ. ನಾಗಲಿಂಗಪ್ಪ ತಂದೆ ಮಲ್ಲಿಕಾರ್ಜುನ ವಯಾ: 42 ವರ್ಷ, ಜಾ: ನೇಕಾರ, : ಮಟಕಾ ಬರೆಯುವುದು, ಸಾ: 19 ನೇ ವಾರ್ಡ ಜೋಗೇರ ಓಣಿ, ಗಂಗಾವತಿ ಈತನು ಗಂಗಾವತಿ ನಗರದ ಆನಂದ ಸರ್ಸಿಂಗ್ ಹೋಂ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವನ ಮೇಲೆ ಪಂಚರ ಸಮಕ್ಷಮ ಸಾಯಂಕಾಲ 18-30 ಗಂಟೆಯ ಸುಮಾರಿಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 1] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 450-00- 2]  01 ಮಟಕ ನಂಬರ ಬರೆದ ಚೀಟಿ. 3] ಒಂದು ಬಾಲ್ ಪೆನ್ನು  ಇವುಗಳನ್ನು ಪಂಚರ ಸಮಕ್ಷಮ ರಾತ್ರಿ 18-30 ಗಂಟೆಯಿಂದ 19-30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಹಾಗೂ ಸದರಿ ವ್ಯಕ್ತಿಯು ಮಟಕಾ ಪಟ್ಟಿಗಳನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 11/2016 ಕಲಂ. 78(3) Karnataka Police Act.
ದಿನಾಂಕ 20-01-2016 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಮುನಿರಾಬಾದ ಗ್ರಾಮದಲ್ಲಿ ಜಾಮಿಯಾ ಮಸಿದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಎಂದು ಮಾಹಿತಿ ಬಂದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದು ಅವನ ಹತ್ತಿರ ಒಂದು ಮಟಕಾ ನಂಬರ ಬರೆದಿ ಚೀಟಿ, ಒಂದು ಬಾಲ ಪೆನ್ನು, ಜೂಜಾಟದ ನಗದು ಹಣ. 950=00 ರೂ. ಗಳು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ. 279, 338, ಐ.ಪಿ.ಸಿ ಸಹಿತ 187 ಐ.ಎಂ.ವಿ ಕಾಯ್ದೆ:
ದಿನಾಂಕ:- 20-01-2016 ರಂದು ರಾತ್ರಿ 7:30 ಗಂಟೆಗೆ ಕ. ರಾ. ಪೋ. ವತೀಯಿಂದ ಶ್ರೀ ರೇವಪ್ಪ ಪಿಸಿ 277 ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. “ಇಂದು ದಿನಾಂಕ 20-01-2016 ರಂದು ಮಧ್ಯಾಹ್ನ 2 ಗಂಟೆಯಿಂದ ಮರಳಿ ಗ್ರಾಮದ ಹತ್ತಿರ ಇರುವ ಟೋಲ್ ಗೇಟ್ ಕರ್ತವ್ಯದಲ್ಲಿ ನಿರತನಾಗಿರುವಾಗ ಸಾಯಂಕಾಲ 4-45 ಗಂಟೆಯ ಸುಮಾರಿಗೆ ಟೋಲಗೇಟದಿಂದ ಸುಮಾರು 100 ಮೀಟರ್ ಅಂತರದಲ್ಲಿ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಗಂಗಾವತಿ ಕಡೆಯಿಂದ ಒಬ್ಬ ಲಾರಿ ಚಾಲಕನು ಲಾರಿಯನ್ನು ಅತೀವೇಗ ಹಾಗೂ ತೀವ್ರನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೊರಟಿದ್ದ ಹಿಂಭಾಗದಿಂದ ಒಬ್ಬ ವ್ಯಕ್ತಿಗೆ ಟಕ್ಕರು ಕೊಟ್ಟು ಅಪಘಾತ ಮಾಡಿ ಸ್ವಲ್ಪ ಮುಂದೆ ಹೋಗಿ ನಿಂತಿದ್ದು ಕೂಡಲೇ ನಾನು ಮತ್ತು ಟೋಲಗೇಟ್ ಅಂಬ್ಯುಲೆನ್ಸ್ ಸಿಬ್ಬಂದಿ ರಾಮಣ್ಣ ತಂದೆ ಕಂಠೆಪ್ಪ 23 ವರ್ಷ ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ತಲೆಗೆ ಒಳಪೆಟ್ಟಾಗಿ ಬಲಕಿವಿಯಲ್ಲಿ ರಕ್ತ ಬಂದು ಬಲಗೈ ಮೊಣಕೈಗೆ ರಕ್ತ ಗಾಯವಾಗಿ ಅಲ್ಲಲ್ಲಿ ತೆರಚಿದ ಗಾಯಗಳಾಗಿ ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಸದರಿ ವ್ಯಕ್ತಿಯು ಅಪರಿಚಿತನಾಗಿದ್ದು ಇರುತ್ತದೆ. ನಂತರ ಸ್ಥಳದಲ್ಲಿದ್ದ ಲಾರಿ ನಂಬರ್ ನೋಡಲು ಎ.ಪಿ.-16/ಟಿ.ಎಕ್ಸ್-8981 ಅಂತಾ ಇದ್ದು ನಾವು ಗಾಯಾಳುವಿಗೆ ಚಿಕಿತ್ಸೆ ಕೊಡಿಸುವ ಕಾಲಕ್ಕೆ ಸದರಿ ಲಾರಿ ಚಾಲಕನು ತನ್ನ ಲಾರಿ ಸಮೇತ ಅಲ್ಲಿಂದ ಹೊರಟು ಹೋಗಿದ್ದನು. ನಂತರ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ನೋಡಲಾಗಿ ಆತನು ಪರಸ್ಥಳೀಯವನಾಗಿದ್ದು ಹೆಸರು ವಿಳಾಸ ತಿಳಿಯದ ಕಾರಣ ಅವನನ್ನು ಟೋಲಗೇಟ್ ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ನಂತರ ಈಗ ತಡವಾಗ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ. 
4) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ. 323, 341, 504, 506 ಸಹಿತ 34 ಐ.ಪಿ.ಸಿ:

ದಿನಾಂಕ: 20-01-2016 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುರತುಜಾಸಾಬ ತಂದೆ ಸುಭಾನಸಾಬ ಮೈನಳ್ಳಿ ಸಾ: ಹನಕುಂಟಿ ಇವರು ಠಾಣೆಗೆ ಹಾಜರಾಗಿ, ಒಂದು ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶವೆನಂದರೆ, ಆರೋಪಿತರು ತಮಗೆ ಸಂಭಂದಿಸಿದ ಹೊಲವು ಪಿರ್ಯಾದಿದಾರ ಹೊಲದಲ್ಲಿ ಬರುತ್ತದೆ, ಬಿಟ್ಟು ಕೊಡು ಅಂತಾ ಪಿರ್ಯಾದಿದಾರರೊಂದಿಗೆ ಜಗಳ ಮಾಡುತ್ತಾ ಬಂದಿದ್ದು, ಪಿರ್ಯಾದಿದಾರರು ಆರೋಪಿತರಿಗೆ ನಿಮ್ಮ ಹೊಲವನ್ನು ಅಳತೆ ಮಾಡಿಸಿ, ನಮ್ಮ ಹೊಲದಲ್ಲಿ ಬಂದರೆ ಬಿಟ್ಟು ಕೊವುದಾಗಗಿ ಹೇಳಿದರೂ ಕೇಳದೆ, ಆಗಾಗ್ಗೆ ಈ ಬಗ್ಗೆ ಜಗಳ ಮಾಡುತ್ತಿದ್ದು ಇರುತ್ತದೆ. ಇದೇ ವಿಷಯವಾಗಿ ದಿನಾಂಕ: 19-01-2016 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿದಾರರ ಮನೆಯ ಮುಂದೆ ಹೋಗಿ, ಪಿರ್ಯಾದಿದಾರನಿಗೆ ಎಲೇ ಸೊಳೇ ಮಗನೆ ಮುರತುಜಾ, ನಮ್ಮ ಹೊಲ ನಿಮ್ಮ ಹೊಲದಲ್ಲಿ ಬರುತ್ತದೆ ಬಿಟ್ಟು ಕೊಡು ಅಂದರೆ, ಬಿಟ್ಟು ಕೊಡುತ್ತಿಲ್ಲ, ನಿನ್ನದು ಸೂಕ್ಕು ಜಾಸ್ತಿಯಾಗಿದೆ ಅಂತಾ ಅಂದವರೆ, ಫಿಯರ್ಾದಿದಾರನೊಂದಿಗೆ ತೆಕ್ಕೆ ಮಿಕ್ಕೆ ಬಿದ್ದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತನಗೆ ಹೊಡೆ ಬಡೆ ಮಾಡಿದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ಫಿರ್ಯಾಧಿಯನ್ನು ನೀಡಿದ್ದು, ಸದರಿ ಪಿರ್ಯಾದಿಯನ್ನು ಪಡೆದುಕೊಂಡು ಪಿರ್ಯಾದಿಯ ಸಾರಾಂಶದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008