Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 22, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 09/2016 ಕಲಂ. 87 Karnataka Police Act.
ದಿ:21.01-16 ರಂದು ರಾತ್ರಿ 8-25ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದ ಉಮಾಮಹೇಶ್ವರ ಕಾಂಪ್ಲೆಕ್ಸ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 04 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 450=00 ರೂ, ನಗದು ಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿ ಉಮೇಶ ಲಮಾಣಿ ಓಡಿ ಹೋಗಿರುತ್ತಾನೆ. ಉಳಿದ 03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 12/2016 ಕಲಂ. 78(3) Karnataka Police Act.
ದಿನಾಂಕ 20-01-2016 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹೊಸಲಿಂಗಾಪೂರ ಗ್ರಾಮದಲ್ಲಿ ಸಮದ ಕಿರಾಣಿ ಅಂಗಡಿಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಎಂದು ಮಾಹಿತಿ ಬಂದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರಿಗೆ ಹಿಡಿದು ಅವರ ಹತ್ತಿರ ಒಂದು ಮಟಕಾ ನಂಬರ ಬರೆದಿ ಚೀಟಿ, ಒಂದು ಬಾಲ ಪೆನ್ನು, ಜೂಜಾಟದ ನಗದು ಹಣ. 13650=00 ರೂ. ಗಳು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ಮತ್ತು ಮೂಲ ಪಂಚನಾಮೆ ಹಾಗೂ ಮುದ್ದೆಮಾಲನ್ನು ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 07/2016 ಕಲಂ. 279, 337, 338, 304(ಎ) ಐ.ಪಿ.ಸಿ:.  
ದಿನಾಂಕ. 21-01-2016 ರಂದು ಬೆಳಿಗ್ಗೆ 06-20 ಗಂಟೆಗೆ ಸುಮಾರಿಗೆ ಕುಷ್ಟಗಿ-ಹೊಸಪೇಟೆ ಎನ್.ಹೆಚ್-50 ರಸ್ತೆಯ ಮೇಲೆ ಗುನ್ನಾಳ ಹತ್ತಿರ ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದ್ದ ಮಹೇಂದ್ರ ಬುಲೇರೋ ವಾಹನ ನಂ. ಕೆ.ಎ-28 ಬಿ-6334 ನೇದ್ದನ್ನು ಮಾಹಿತಿ ತಿಳಿದು ಅಪಘಾತ ಸ್ಥಳಕ್ಕೆ ಬಂದಿದ್ದ ಬೇವೂರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಜಿ.ಎಮ್.ಆರ್. ಕಂಪನಿಯ ಹೈವೆ ಪೆಟ್ರೋಲಿಂಗ್ ಸಿಬ್ಬಂದಿಯವರೂ ಹಾಗೂ ಮಹೇಂದ್ರ ಪಿಕಪ್ ವಾಹನದ ಜನರು ಕೂಡಿಕೊಂಡು ರಸ್ತೆಯ ಸುಗಮ ಸಂಚಾರಕ್ಕಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಅಪಘಾತ ಸ್ಥಳದ ಸುತ್ತಲೂ ಕೋನ್ಗಳನ್ನು ಇಟ್ಟುಕೊಂಡು ಪಲ್ಟಿಯಾಗಿ ಬಿದ್ದಿದ್ದ ವಾಹನವನ್ನು ಕ್ರೇನ್ ಮುಖಾಂತರ ರಸ್ತೆಯಿಂದ ತೆಗೆಯುತ್ತಿರುವಾಗ, ಆ ವೇಳಿಗೆ ಆರೋಪಿತನು ತಾನು ನಡೆಸುತ್ತಿದ್ದ ಲಾರಿ ನಂ. ಟಿ.ಎನ್-52 ಎ-8884 ನೇದ್ದನ್ನು ಕುಷ್ಟಗಿ ಕಡೆಯಿಂದ ಹೊಸಪೇಟೆ ಕಡೆಗೆ ಒನ್ ವೇ ರಸ್ತೆಯ ಮೇಲೆ ಅತಿವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ಸದರಿ ರಸ್ತೆಯ ಮೇಲೆ ಅಪಘಾತವಾಗಿ ಬಿದ್ದಿದ್ದ ಮಹೇಂದ್ರ ಪಿಕಪ್ ವಾಹನ ನಂ. ಕೆ.ಎ-28 ಬಿ-6334 ನೇದ್ದನ್ನು ಗಮನಿಸದೆ ಸದರಿ ವಾಹನಕ್ಕೆ ಬಲವಾಗಿ ಠಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ಸದರಿ ಅಪಘತದಲ್ಲಿ ಪಲ್ಟಿಯಾಗಿ ಬಿದ್ದಿದ್ದ  ಮಹೇಂದ್ರ ಬುಲೇರೋ ವಾಹನವನ್ನು ರಸ್ತೆಯ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ ರಸ್ತೆಯ ಮೇಲೆ ಕರ್ತವ್ಯದ ಮೇಲೆ ನಿರತರಾಗಿ ನಿಂತಿದ್ದ ಬೇವೂರ ಪೊಲೀಸ್ ಠಾಣೆಯ ಎ.ಎಸ್.ಐ ಅಮೀನಸಾಬ ಹಾಗೂ ಮಹೇಂದ್ರ ಬುಲೇರೋ ವಾಹನದಲ್ಲಿದ್ದ ಮಹಿಬೂಬ ಕೊರಬೋ ಸಾ :ಮನಗೂಳಿ ಇವರಿಗೆ ಭಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಾಗೂ ಬೇವೂರ ಠಾಣೆಯ ಹೆಚ್.ಸಿ-139, ಪಿ.ಸಿ-308, ಹೆಚ್.ಜಿ-1314, 1315 ಹಾಗೂ ಜಿ.ಎಮ್.ಆರ್ ಕಂಪನಿಯ ಹೈವೆ ಪೆಟ್ರೋಲಿಂಗ್ ಸಿಬ್ಬಂದಿಯವರಾದ ಗವಿಸಿದ್ದಪ್ಪ ಮತ್ತು ಶರಣಗೌಡ ಹಾಗೂ ಕ್ರೇನ್ ಚಾಲಕ ರಾಮಪ್ರಸಾದ ಚವ್ಹಾಣ. ಅಂಬುಲೆನ್ಸ್ ಇ.ಎಂ.ಟಿ ರಾಜೇಶ ಇವರೂಗಳಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
4) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 03/2016 ಕಲಂ. . 279, 337, 338, 304(ಎ) ಐ.ಪಿ.ಸಿ:.  
 ದಿನಾಂಕ 21-01-2016 ರಂದು ರಾತ್ರಿ 7-30 ಗಂಟೆಗೆ ಸುಮಾರಿಗೆ ಫಿರ್ಯಾಧೀದಾರನು ತನ್ನ ಹಿರೊ ಪ್ಯಾಶಿಯನ್ ಎಕ್ಸ ಪ್ರೋ ನಂ ಕೆ.ಎ. 37 ಡಬ್ಲೂ 3121 ನೇದ್ದರ ಹಿಂದೆ ತನ್ನ ಹೆಂಡತಿಯಾದ ಲಕ್ಷ್ಮಿ ವ:38 ಇವಳನ್ನು ಕೊಡಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಹೋಗುವ ಕುರಿತು ಸಿಬಿ ಸರ್ಕಲ್ ಕಡೆಗೆ ಹೋರಟಿರುವಾಗ ಹಿಂದಿನಿಂದ ಆರೋಪಿತನು ತನ್ನ ಲಾರಿ ನಂಬರ ಕೆ.ಎ.40-3207 ನೇದ್ದನ್ನು ವಡ್ಡರಹಟ್ಟಿ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದವನೇ ವೇಗದಲ್ಲಿದ್ದ ಲಾರಿಯು ನಿಯಂತ್ರಣಕ್ಕೆ ಬಾರದೇ ಫಿರ್ಯಾದಿಯ ಮೋಟಾರು ಸೈಕಲ್ಲನ ಹಿಂಭಾಗದಲ್ಲಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಲಾರಿಯ ಮುಂದಿನ ಗಾಲಿಯು ಲಕ್ಷ್ಮೀ ಇವಳ ಹೊಟ್ಟೆಯ ಮೇಲೆ ಹಾಯ್ದಿದ್ದರಿಂದ ಸ್ಥಳದಲ್ಲಿಯೇ ಲಕ್ಷ್ಮೀ ಇವಳು ಮೃತಪಟ್ಟಿದ್ದು ಪಿರ್ಯಾಧಿದಾರನಿಗೆ ಭಾರಿ ಮತ್ತು ಸಾದ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಕಾರಣ ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 21/2016 ಕಲಂ. 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 21-01-2016 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದ್ಯಾಮಣ್ಣ ತಂದೆ ತಂದೆ ತಿಮ್ಮಪ್ಪ ವಯಸ್ಸು 49 ವರ್ಷ, ಜಾತಿ: ಬೋವಿ ಉ: ಕೂಲಿ ಕೆಲಸ ಸಾ: ವೆಂಕಟಗಿರಿ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ." ಇಂದು ದಿನಾಂಕ:- 21-01-2016 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಅವಳು ಗಂಗಾವತಿಗೆ ತನ್ನ ಮೈಯಲ್ಲಿ ಆರಾಮ ಇಲ್ಲವೆಂದು ಆಸ್ಪತ್ರೆಗೆ ತೋರಿಸಿಕೊಳ್ಳಲು ಬಂದಿದ್ದಳು.  ನಂತರ ಸಂಜೆ 7:30 ಗಂಟೆಯ ಸುಮಾರಿಗೆ ನಾನು ಊರಲ್ಲಿ ಇರುವಾಗ ಯಾರೋ ದಾರಿಯಲ್ಲಿ ಹೋಗುವವರು ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಗುಡ್ಡದ ಕ್ಯಾಂಪ್ ಹತ್ತಿರ ವೆಂಕಟಗಿರಿ ಗ್ರಾಮದ ಒಬ್ಬ ಮುದುಕಿಗೆ ಅಪಘಾತವಾಗಿದೆ ಅಂತಾ ಸುದ್ದಿ ತಿಳಿಸಿದ್ದು, ನನ್ನ ಅಕ್ಕಳೂ ಸಹ ಮುಂಜಾನೆ ಗಂಗಾವತಿಗೆ ಹೋದವಳು ವಾಪಸ್ ಬರದೇ ಇದ್ದುದರಿಂದ ನಾನು ನೋಡಿಕೊಂಡು ಬರುವ ಕುರಿತು ಗುಡ್ಡದ ಕ್ಯಾಂಪಿಗೆ ಬಂದಾಗ ಅಲ್ಲಿ ಸೇರಿದ್ದವರು ಅವಳಿಗೆ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ನಂತರ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ಗಾಯಗೊಂಡವಳು ನನ್ನ ಅಕ್ಕ ಚಿನ್ನಮ್ಮಳೇ ಇದ್ದು ಅವಳಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಮತ್ತು ಬಲ ತೊಡೆಗೆ ಗಾಯವಾಗಿದ್ದು, ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನಂತರ ನನಗೆ ತಿಳಿದುಬಂದಿದ್ದೇನೆಂದರೆ, ನನ್ನ ಅಕ್ಕ ಚಿನ್ನಮ್ಮಳು ಇಂದು ಸಂಜೆ 7:00 ಗಂಟೆಯ ಸುಮಾರಿಗೆ ಗಂಗಾವತಿಯಿಂದ ನಡೆದುಕೊಂಡು ವಾಪಸ್ ವೆಂಕಟಗಿರಿಗೆ ಬರುತ್ತಿರುವಾಗ ಗುಡ್ಡದಕ್ಯಾಂಪ್ ಹತ್ತಿರ ಯಾವುದೋ ಒಂದು ಮೋಟಾರ ಸೈಕಲ್ ಚಾಲಕನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನ್ನ ಅಕ್ಕಳಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಅವಳಿಗೆ ತೀವ್ರ ಗಾಯಗಳಾಗಿರುತ್ತವೆ ಅಂತಾ ತಿಳಿಯಿತು. ನಂತರ ಅಪಘಾತ ಮಾಡಿದ ಮೋ.ಸೈ. ಚಾಲಕ ನಿಂಗಪ್ಪ ಸಾ: ಮರಳಿ ಎಂಬಾತನೇ ನನ್ನ ಅಕ್ಕಳನ್ನು ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಮೋ.ಸೈ. ಸಮೇತ ಹೊರಟು ಹೋಗಿರುತ್ತಾನೆ ಅಂತಾ ತಿಳಿಯಿತು. ಕಾರಣ ಈ ಅಪಘಾತ ಮಾಡಿದ ನಿಂಗಪ್ಪ ಸಾ: ಮರಳಿ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ. . 279 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.

ದಿನಾಂಕ:-21-01-2016 ರಂದು ರಾತ್ರಿ 22-35 ಗಂಟೆಗೆ ಪಿರ್ಯಾದಿದಾರಾದ ಶಂಕರಪ್ಪ ತಂದಿ ಹನುಮಂತಪ್ಪ ಮಂಟಗೇರಿ ವಯ-21 ವರ್ಷ ಜಾ. ಕುರಬರು ಸಾ. ಉದ್ಯೋಗ:- ಪಿಟ್ಟರ ಕೆಲಸ ಸಾ. ಗುಂಟಮೆಡಗು  ಹಾಲಿ ವಸ್ತಿ ಕಾರಟಗಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನಂದರೆ ತನ್ನ ಮಾವನಾದ ಬಸವರಾಜ ತಂದಿ ದುರಗಪ್ಪ ಸಾ. ಮೇಗೂರು ಈತನು ಕಾರಟಗಿಯ ಸಿ,ಎಮ್.ಜೆ ರೈಸ್ ಮೀಲ್ ದಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದು ಇಂದು ದಿನಾಂಕ:-21-01-2016 ರಂದು ಸಾಯಂಕಾಲ 7-45 ಗಂಟೆಗೆ ಬಸವರಾಜ ಈತನು ಕೆಲಸ ಮುಗಿಸಿಕೊಂಡು ಚಹ ಕುಡಿದು ಕಾರಟಗಿ0 ಸಿಂಧನೂರು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋರಟಿದ್ದಾಗ್ಗೆ ಸಿಂಧನೂರು ಕಡೆಯಿಂದ ಟಿ.ವಿ.ಎಸ್. ಸೆಂಟ್ರೋ ಮೋ.ಸೈ ನಂ ಕೆ.ಎ-35 ಆರ್-2902 ನೆದ್ದರ ಚಾಲಕ ತನ್ನ ಮೋ.ಸೈ ಯನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಗೆ ಹೋರಟಿದ್ದ ಬಸವರಾಜ ಈತನಿಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿ ಮೋಟಾರ್ ಸೈಕಲ್ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಬಸವರಾಜ ಈತನಿಗೆ ಹೊಟ್ಟೆಗೆ ತಲೆಗೆದ ಗಂಬೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋರಟಿದ್ದಾಗ್ಗೆ ಗಂಭೀರ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ.

0 comments:

 
Will Smith Visitors
Since 01/02/2008