ದಿನಾಂಕ:24-01-2016 ರಂದು
ರಾತ್ರಿ 2330 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಇಲಕಲ್ ಕಠಾರೆ ಆಸ್ಪತ್ರೆಗೆ ಬೇಟಿ ನೀಡಿ
ಗಾಯಾಳು ತಿಮ್ಮಣ್ಣ ತಂದೆ ಯಂಕಪ್ಪ ಹಿರೇಮನಿ ವಯಾ: 30 ವರ್ಷ ಜಾತಿ:ಭೋವಿ ಉ: ಗೌಂಡಿಕೆಲಸ ಸಾ:
ವಡ್ಡರ ಓಣಿ ಕುಷ್ಟಗಿ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ ಇಂದು ದಿನಾಂಕ:25-01-2016
ರಂದು ಬೆಳಗಿನ ಜಾವ 06-15 ಗಂಟೆಗೆ ಸದರ ಪಿರ್ಯಾದಿಯ ಸಾರಾಂಶದ ವೆನೆಂದರೆ ನಿನ್ನೆ ದಿನಾಂಕ:
24-01-2016 ರಂದು ತಮ್ಮ ಮಾವನಾದ ಯಮನೂರಪ್ಪ ಗಡಾದ ಈತನು ಸಾಯಂಕಾಲ ಮನೆಯ ಹತ್ತಿರ ಬಂದು ಇಲಕಲ್ ಮಹೇಶ್ವರಿ
ಆಸ್ಪತ್ರೆಗೆ ಹೋಗಿ ಅಲ್ಲಿ ನನ್ನ ಮಗನನ್ನು ಐ.ಸಿ.ಯು ದಲ್ಲಿ ಇಟ್ಟಿರುತ್ತಾರೆ. ನನ್ನ ಮಗನನ್ನು ನೋಡಿಕೊಂಡು
ಖರ್ಚಿಗಾಗಿ ಹಣ ಕೊಟ್ಟು ಬರೋಣ ಬಾ ಅಂತಾ ನನ್ನನ್ನು ಕರೆದು ತನ್ನ ಮೋಟಾರ ಸೈಕಲ್ ನ: ಕೆ.ಎ-37 ಡಬ್ಲ್ಯೂ
-5487 ನೇದ್ದರ ಮೋಟಾರ ಸೈಕಲ್ ಮೇಲೆ ನಾನು ಹಿಂದುಗಡೆ ಕುಳಿತುಕೊಂಡಿದ್ದು ನಮ್ಮ ಮಾವ ಯಮನೂರಪ್ಪ ಗಡಾದ
ನಡೆಸುತ್ತಿದ್ದು. ಸಾಯಂಕಾಲ 06-45 ಗಂಟೆಯ ಸುಮಾರಿಗೆ ಇಲಕಲ್ ಕಡೆಗೆ ಹೊರಟೇವು. ಸಾಯಂಕಾಲ 07-15 ಗಂಟೆಯ
ಸುಮಾರಿಗೆ ಕುಷ್ಟಗಿ-ಇಲಕಲ್ ಎನ್.ಹೆಚ್.50 ರಸ್ತೆಯ ಮೇಲೆ ಕಡೇಕೊಪ್ಪ ಕ್ರಾಸ ದಾಟಿ ಎಡಗಡೆಯ ರಸ್ತೆಯ
ಮೇಲೆ ಹೋಗುತ್ತಿರುವಾಗ ಹಿಂದಿನಿಂದ ಯಾವುದೋ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ನ್ನು
ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಓವರಟೇಕ ಮಾಡಲು ಬಂದು ನಮ್ಮ ವಾಹನಕ್ಕೆ ಟಕ್ಕರಕೊಟ್ಟು
ನಮ್ಮ ಸೈಕಲ್ ಮೋಟಾರ ಕೆಡವಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ನನಗೆ ಎರಡು ಮುಂಗೈಗೆ ತೆರಚಿದಗಾಯ ಹಾಗೂ
ಬಲಗಾಲು ಮೊಣಕಾಲಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮ್ಮ ಮಾವನಾದ ಯಮನೂರಪ್ಪನನ್ನು ನೋಡಲು
ಬಲಗಡೆ ಕಪಾಳಕ್ಕೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯ, ಎಡಗಡೆ ಹಿಂದೆಲೆಗೆ ರಕ್ತಗಾಯ, ಬಲಗದ್ದಕ್ಕೆ ತೆರಚಿದ
ಗಾಯ, ಬಲಗೈ ಮುಂಗೈ ಹತ್ತಿರ ತೆರಚಿದ ಗಾಯ, ಬಲಗಾಲು ಮೊಣಕಾಲು ಕೆಳಗೆ, ಹೆಬ್ಬೆಟ್ಟಿನ ಹತ್ತಿರ,
ಡಗೈ ಮುಂಗೈಗೆ ತೆರಚಿದ ಗಾಯಗಳಾಗಿದ್ದು ಸದರಿ ನಮಗೆ ಅಪಘಾತ ಪಡಿಸಿದ ಮೋಟಾರ ಸೈಕಲ್ ನಂ ನೋಡಲು ಕೆ.ಎ-28-ಎ.ಇ-4459
ಅಂತಾ ಇದ್ದು ಸದರಿ ವಾಹನ ಸವಾರನು ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ನಂತರ 108 ಅಂಬ್ಯುಲೆನ್ಸಗೆ
ಪೋನ್ ಮಾಡಿ ಚಿಕಿತ್ಸೆ ಕುರಿತು ಇಲಕಲ್ ಕಠಾರೆ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಮಡು ತನಿಖೆ
ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ
ಪೊಲೀಸ್ ಠಾಣೆ ಗುನ್ನೆ ನಂ. 14/2016 ಕಲಂ: 279, 338 ಐ.ಪಿ.ಸಿ:.
ದಿನಾಂಕಃ-25-01-2016 ರಂದು ಮದ್ಯಾಹ್ನ 13-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರರಾದ ಶ್ರೀ ಶಿವಣ್ಣ ತಂದಿ ಭೀಮಪ್ಪ ಬೋದೂರ್ ವಯಾ- 36 ವರ್ಷ
ಜಾ- ಕುರಬರ ಸಾ- ಬಸವೇಶ್ವರ ನಗರ ಕಾರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು
ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ- 24-01-2016 ರಂದು ರಾತ್ರಿ 7-45 ರಿಂದಾ 8-00 ಗಂಟೆಯ ಸುಮಾರಿಗೆ
ಫಿರ್ಯಾದಿದಾರರು ಹಾಗೂ ತನ್ನ ಅಳಿಯನಾದ ಬಸವರಾಜ ತಂದಿ ನಾಗಪ್ಪ ಕುಂಬಾರ ಸಾ-
ಬಸವೇಶ್ವರ ನಗರ ಕಾರಟಗಿ ಇವರು ಕೂಡಿಕೊಂಡು ಸಿ.ಎಮ್. ಜೆ. ರೈಸ್ ಮಿಲ್ಲಿನಿಂದ ಎ.ಪಿ.ಎಮ್.ಸಿ.
ಕಡೆಯಿಂದ ಬಸವೇಶ್ವರ ನಗರ ಕಡೆಗೆ ನಡೆದುಕೊಂಡು ಹೊರಟಿದ್ದಾಗ್ಗೆ ಹಿಂದುಗಡೆಯಿಂದ ಲಾರಿ
ನಂಬರ್ – ಕೆ.ಎ- 28 / ವಿ-0369 ನೇದ್ದರ ಚಾಲಕ ಅತೀ ವೇಗ ಹಾಗು ಅಲಕ್ಷತನದಿಂದ
ಓಡಿಸಿಕೊಂಡು ಬಂದು ರಸ್ತೆಯ ಬದಿಗೆ ಹೊರಟಿದ್ದ ಬಸವರಾಜ ಇತನಿಗೆ ಟಕ್ಕರ್ ಕೊಟ್ಟು
ಅಪಘಾತಪಡಿಸಿದ್ದರಿಂದ ಬಸವರಾಜ ಇತನಿಗೆ ತಲೆಗೆ ಹಾಗು ಕೈ ಕಾಲುಗಲಿಗೆ ಹೊಟ್ಟೆಗೆ ಭಾರೀ
ಒಳಪೆಟ್ಟಾಗಿ ಮಾತನಾಡದ ಸ್ಥಿತಿಯಲ್ಲಿ ಇದ್ದರಿಂದ ಆತನಿಗೆ ಚಿಕಿತ್ಸೆಗಾಗಿ ಫಿರ್ಯಾದಿದಾರರು ಹಾಗು
ಸದರ್ ಲಾರಿಯ ಚಾಲಕ ರಾಮಣ್ಣ ಕೂಡಿ ಕಾರಟಗಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ನಂತರ ಆತನಿಗೆ
ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಈಗ ತಮ್ಮಲ್ಲಿಗೆ ಬಂದು
ಫಿರ್ಯಾದಿ ಕೊಟ್ಟಿರುತ್ತೇನೆ. ಈ ಘಟನೆಗೆ ಕಾರಣನಾದ ಲಾರಿ ಚಾಲಕ ರಾಮಣ್ಣ ತಂದಿ ನಾಗಪ್ಪ ಕುಮಬಾರ
ಸಾ- ಕನಸಾವಿ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ನಮ್ಮ ಬಸವರಾಜ ಇತನ
ಚಿಕಿತ್ಸೆಗೆ ಆದ್ಯತೆ ಕೊಟ್ಟು ಈಗ ತಮ್ಮಲ್ಲಿಗೆ ಬಂದು ಫಿರ್ಯಾದಿ ಕೊಡಲು ವಿಳಂಬವಾಗಿರುತ್ತದೆ.
ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3) ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ: 498(ಎ), 504, 506 ಸಹಿತ 34 ಐ.ಪಿ.ಸಿ:.
ಫಿರ್ಯಾದಿದಾರಳಾದ ನಾಜಿಯಾ ಬಾನು ಗಂಡ ರಿಯಾಜ, ಗಂಡನ ಮನೆಯಲ್ಲಿ ಫಿರ್ಯಾದಿ ಗಂಡ ರಿಯಾಜ ಮತ್ತು ಅತ್ತೆ ಬೇಗಂಬಿ ಹಾಗೂ ಮಾವ ಇಂತಿಯಾಜ ಇವರು
ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡಿ ಹೊಡೆಬಡೆ ಮಾಡಿದ್ದರಿಂದ ಫೀರ್ಯಾದಿದಾರರು ತವರು ಮನೆಗೆ
ಬಂದು ಹೊಸಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದು ದಿನಾಂಕ. 24-01-2016 ರಂದು 04-30
ಗಂಟೆ ಸುಮಾರಿಗೆ ಆರೋಪಿತರು ಹೊಸಳ್ಳಿ ಗ್ರಾಮಕ್ಕೆ ಬಂದು ಫಿರ್ಯಾದಿಗೆ
ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿ
ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತಪಾಸಣೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment