Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 10, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 78/2016 ಕಲಂ:  78(3) Karnataka Police Act.
ದಿನಾಂಕ:- 09-02-2016 ರಂದು ರಾತ್ರಿ 7:30 ಗಂಟೆಗೆ ಶ್ರೀ ಟಿ.ಜಿ. ನಾಗರಾಜ, ಎ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ  ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 09-02-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ   ದಾಸನಾಳ ಗ್ರಾಮದಲ್ಲಿ ಜಿಲಾನಿ ಎಂಬುವವನು ತನ್ನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾನೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹೆಚ್.ಸಿ. 29, ಪಿ.ಸಿ. 361 ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ನಮ್ಮ ನಮ್ಮ ಮೋಟಾರ ಸೈಕಲಗಳಲ್ಲಿ ಠಾಣೆಯಿಂದ ಸಂಜೆ 5:30 ಗಂಟೆಗೆ ಹೊರಟು ದಾಸನಾಳ ಗ್ರಾಮದಲ್ಲಿ ಹೋಗಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ದಾಸನಾಳ ಗ್ರಾಮದಲ್ಲಿ ಒಂದು ಮನೆಯ ಮುಂಭಾಗದಲ್ಲಿ ರಸೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಮೋಸದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 6:00 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಜಿಲಾನಿ ತಂದೆ ಮಹ್ಮದ್ ಖಾನ್, ವಯಸ್ಸು 55 ವರ್ಷ, ಜಾತಿ: ಮುಸ್ಲೀಂ ಉ: ಕೂಲಿ ಕೆಲಸ ಸಾ: ದಾಸನಾಳ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 540/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆತಿದ್ದು ಇದೆ. ನಂತರ ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದನು. ಈ ಬಗ್ಗೆ ಸಂಜೆ 6:00 ರಿಂದ 7:00 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಮತ್ತು 420 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 78/2016 ಕಲಂ  78(iii) ಕೆ.ಪಿ. ಆ್ಯಕ್ಟ್ ಮತ್ತು 420 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
 2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 41/2016 ಕಲಂ:  ಮನುಷ್ಯ ಕಾಣೆ.
ದಿನಾಂಕ: 09.02.2016 ರಂದು 1630 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಪ್ರಕಾಶ ತಂದೆ ನಾಗಪ್ಪ ಅಬ್ಬಿಗೇರಿ ಸಾ: ಹಲಗೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ: 21.01.2016 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತನ್ನ ತಂದೆ ನಾಗಪ್ಪ ತಂದೆ ಶಂಕ್ರಪ್ಪ ಅಬ್ಬಿಗೇರಿ. ವಯ: 57 ವರ್ಷ, : ಒಕ್ಕಲುತನ, ಇವರು ತಿರುಪತಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ. ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಕಾರಣ ತನ್ನ ತಂದೆಯನ್ನು ಹುಡುಕಿ ಕೊಡುವಂತೆ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 41/2016 ಕಲಂ: ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 20/2016 ಕಲಂ: 151, 110(ಇ) ಮತ್ತು (ಜಿ) ಸಿ.ಆರ್.ಪಿ.ಸಿ:.
ದಿನಾಂಕ: 09-02-2016 ರಂದು ಸಾಯಂಕಾಲ 05-00 ಗಂಟೆಗೆ ಠಾಣಾ ಹದ್ದಿಯಲ್ಲಿ ಪೆಟ್ರೊಲಿಂಗ್ ಕುರಿತು ಪಿಸಿ-313 ನೀಲಪ್ಪ ರವರನ್ನು ಸಂಗಡ ಕರೆದುಕೊಂಡು ನಗರದಲ್ಲಿ ಪ್ಯಾಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ನಗರದ ಸಾಲಾರಜಂಗ ರಸ್ತೆಯ ಮೂಲಕ ಕೆ.ಸಿ.ಸರ್ಕಲ್, ಶಾರದಾ ಟಾಕೀಜ, ಗಡಿಯಾರ ಕಂಬದ ಮುಖಾಂತರ ಪುನ: ಸಾಲಾರಜಂಗ ರಸ್ತೆಯ ಕೆ.ಸಿ. ಸರ್ಕಲ್ ಹತ್ತಿರ ಬಂದಾಗ ಅಲ್ಲಿ ದೇವರಾಜ ಅರಸ ಕಾಲೋನಿಯಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈದಾಡುತ್ತಾ ಗದ್ದಲ ಮಾಡುತ್ತಾ ನಿಂತಿರುತ್ತಾನೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲು ರಸ್ತೆಯ ಮೇಲೆ ನಿಂತುಕೊಂಡು ಅನುಚಿತವಾಗಿ ವರ್ತನೆ ಮಾಡುತ್ತಾ ಬೈದಾಡುತ್ತಿದ್ದನು ಆಗ ಸದರಿಯವನಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲು ತನ್ನ ಹೆಸರು ನೂರಪಾಷಾ ತಂದೆ ಖಾದರಬಾಷಾ ಮಣ್ಣೂರ ವಯಾ: 19 ವರ್ಷ, ಜಾ: ಮುಸ್ಲಿಂ, ಉ: ಕೂಲಿ, ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ ಅಂತಾ ತಿಳಿಸಿದನು. ಸದರಿಯವನ ವರ್ತನೆಯಿಂದ ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ತೊಂದರೆಯಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗೃತ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು, ಸದ್ಯ ಜಿಲ್ಲಾ ಹಾಗೂ ತಾಲೂಕ ಪಂಚಾಯತ್ ಚುನಾವಣೆಗಳು ನಡೆಯುತ್ತಿರುವುದರಿಂದ ಸದರಿಯವನಿಗೆ ಹೀಗೆಯೇ ಬಿಟ್ಟಲ್ಲಿ ಯಾವುದಾದರು ಕೆಟ್ಟ ಪರಿಣಾಮ ಬೀರಬಹುದೆಂದು ಮುಂಜಾಗೃತ ಕ್ರಮವಾಗಿ ಸದರಿಯವನ ವಿರುದ್ದ ಪ್ರಕರಣ ಜರುಗಿಸಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ: 174 ಸಿ.ಆರ್.ಪಿ.ಸಿ:.
ದಿನಾಂಕ : 09-02-2016 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರರರಾದ ಈರಣ್ಣ ತಂದೆ ಅಯ್ಯಪ್ಪ ಅಂಗಡಿ ವಯಾ : 62 ವರ್ಷ ಜಾತಿ : ಗಾಣಿಗೇರ ಉ :ಕಟ್ಟಿಗೆವ್ಯಾಪಾರ ಸಾ : ನಾಗರಾಳ  ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸದರಿ ಸಾರಾಂಶವೆನೆಂದರೆ ಇಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ನಾನು ಕಂದಕೂರು ಸೀಮಾದಲ್ಲಿ ಕಟ್ಟಿಗೆ ವ್ಯಾಪಾರ ಮಾಡುವ ಕುರಿತು ಗಿಡಗಳನ್ನು ನೋಡಲು ಹೊಲಕ್ಕೆ ಹೋಗುತ್ತಿರುವಾಗ ಕಂದಕೂರಿನ ಯರಿ ಹಳ್ಳದಲ್ಲಿ ಒಂದು ಅಪರಿಚಿತ ಗಂಡಸಿನ ಶವ ಅಂದಾಜು ವಯಸ್ಸು 45 ರಿಂದ 50 ವರ್ಷದವನಿದ್ದು ಸದರಿಯವನು ದಕ್ಷಿಣಕ್ಕೆ ತಲೆಯಾಗಿ ಉತ್ತರಕ್ಕೆ ಕಾಲಾಗಿ ಬಲ ಹೊಳು ಮಗ್ಗಲಾಗಿದ್ದು ಇರುತ್ತದೆ. ಇವನ ತಲೆಯಲ್ಲಿ ಸುಮಾರು 2 ಇಂಚಿನಷ್ಟು ಕಪ್ಪು ಬಿಳಿ ಮಿಶ್ರಿತವಾದ ಕೂದಲುಗಳಿದ್ದು ಕೋಲು ಮುಖ ಸಣ್ಣನೆಯ ಮೂಗು ಕರಿ ಬಿಳಿ ಬಣ್ಣದ ಗಡ್ಡ ಮತ್ತು ಮೀಸೆ ಇರುತ್ತವೆ. ಕಪ್ಪನೆಯ ಮೈಬಣ್ಣ  ತೆಳ್ಳನೆಯ ಮೈ ಕಟ್ಟು ಒಂದು ಕಂದು ಬಣ್ಣದ ಉಣ್ಣಿ ಟೋಪಿ, ಹಸಿರು ಬಣ್ಣದ ಸ್ವೀಟರ್, ಒಂದು ಕಂಪು ಬಣ್ಣದ ಟೀ ಶರ್ಟ, ಮತ್ತು ಕರಿ ಬಣ್ಣದ ಬರಮೋಡಾ ಚಡ್ಡಿ ಮತ್ತು ಸೊಂಟದಲ್ಲಿ ಕರಿ ಮತ್ತು ಕಂದು ಬಣ್ಣದ ಉಡದಾರ ಅಂದಾಜು ಎತ್ತರ 5 ಪೀಟ್ 2 ಇಂಚು ಎತ್ತರ ಇದ್ದು ಮೈ ಮೇಲೆ ಯಾವುದೇ ಗಾಯ ಗುರುತುಗಳು ಕಂಡು ಬಂದಿರುವದಿಲ್ಲ. ದೇಹವು ಪೂರ್ತಿ ಕ್ಷಿಣವಾಗಿದ್ದು ಸದರಿಯವನು ಯಾವುದೋ ರೋಗದಿಂದ ಬಳಲಿ ಸತ್ತಂತೆ ಕಂಡು ಬರುತ್ತದೆ. ಹಾಗೂ ಸದರಿಯವನು ಭಿಕ್ಷುಕನಂತೆ ಕಂಡು ಬರುತ್ತದೆ. ಸದರಿಯವನು ಸತ್ತು ಒಂದು ಎರಡು ದಿನಗಳಾಗಿರಬಹುದು. ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ  ವಗೈರೆ ಇರುವದಿಲ್ಲ .  ಕಾರಣ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರಾ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008