Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 9, 2016

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 40/2016 ಕಲಂ:  78(3) Karnataka Police Act.
ದಿನಾಂಕ: 08-02-2016 ರಂದು ರಾತ್ರಿ 20-15 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಮಟಕ ಜೂಜಾಟದಲ್ಲಿ ತೊಡಗಿದ ಹಂಪಯ್ಯಸ್ವಾಮಿ ಎಂಬ ವ್ಯಕ್ತಿಯನ್ನು ಮಟಕ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ತಮ್ಮದೊಂದು ವರದಿಯೊಂದಿಗೆ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ,  ಇಂದು ದಿನಾಂಕ 08-02-2016 ರಂದು ಸಂಜೆ 7-15 ಗಂಟೆಯ ಸುಮಾರಿಗೆ ಆರೋಪಿತನಾದ ಹಂಪಯ್ಯ ಸ್ವಾಮಿ ತಂದೆ ವೀರಯ್ಯಸ್ವಾಮಿ ಇನಮದಾರ ವಯಸ್ಸು 55 ವರ್ಷ ಜಾ: ಜಂಗಮ ಸಾ: ವೀರಭದ್ರೇಶ್ವರ ದೇವಸ್ಥಾನ ಗಂಗಾವತಿ ಈತನು ನಗರದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ ಮಾನ್ಯ ಪೊಲೀಸ್ ಇನ್ಸಪೆಕ್ಟರ್ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 290-00 [02] ಒಂದು ಬಾಲ್ ಪೆನ್ ಮತ್ತು [03] ಒಂದು ಮಟ್ಕಾ ನಂಬರ ಬರೆದ ಚೀಟಿ ಜಪ್ತಿ ಪಡಿಸಿದ್ದು ಇರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 41/2016 ಕಲಂ:  427, 447 ಐ.ಪಿ.ಸಿ ಮತ್ತು ಕಲಂ 2 (ಎ) ಕರ್ನಾಟಕ ಪ್ರಿವೆನ್ ಶನ್ ಆಫ್ ಡಿಸ್ಟ್ರಿಕ್ಷನ್ & ಲಾಸ್ ಆಫ್ ಪ್ರಾಪರ್ಟಿ:
ದಿನಾಂಕ 08-02-2016 ರಂದು 20-30 ಗಂಟೆಗೆ ಸಿ.ಆರ್, ರಂಗಸ್ವಾಮಿ, ಪೌರಾಯುಕ್ತರು, ನಗರ ಸಭೆ ಕಾರ್ಯಾಲಯ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಲಿಖೀತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಗಂಗಾವತಿ ನಗರ ದ ವಾರ್ಡ್ ನಂ 12 ರಲ್ಲಿ ಬರುವ ರಾಣಾ ಪ್ರತಾಪ್ ಸಿಂಗ್ ಸರ್ಕಲ್ ಹತ್ತಿರ ಇರುವ ನಗರ ಸಭೆಯ ಹಳೆಯ ಸುಸ್ಥಿತಿಯಲ್ಲಿರುವ ಜಕಾತಿ ಅಥಾವ ಅಕ್ಟ್ರಾಯ್ ಮುನ್ಸಿಪಲ್ ನಂ. 3-2-175/3-2-114 ನೇದ್ದರ ಸರಕಾರಿ ಜಾಗೆಯಲ್ಲಿ ದಿನಾಂಕ: 02-02-2016 ರಂದು ಯಾರೋ ದುಷ್ಕರ್ಮಿಗಳು ಅತಿಕ್ರಮ  ಪ್ರವೇಶ ಮಾಡಿ  ಜಕಾತಿ ಅಥಾವ ಅಕ್ಟ್ರಾಯ್ ಸರಕಾರಿ ಕಟ್ಟಡವನ್ನು ದ್ವಂಸಗೊಳಿಸಿರುತ್ತಾರೆ ಕಾರಣ ಸಂಬಂದಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 41/2016 ಕಲಂ 427, 447, ಐ.ಪಿ.ಸಿ. ಮತ್ತು ಕಲಂ 2 (ಎ) ಕರ್ನಾಟಕ  ಪ್ರಿವೆನ್ ಶನ್ ಆಫ್ ಡಿಸ್ಟ್ರಿಕ್ಷನ್ & ಲಾಸ್ ಆಫ್ ಪ್ರಾಪರ್ಟಿ ಆಕ್ಟ್ 1981. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 77/2016 ಕಲಂ: 279, 338 ಐ.ಪಿ.ಸಿ:

ದಿನಾಂಕ:- 07-02-2016 ರಂದು ಸಂಜೆ ಎಸ್.ಹೆಚ್.ಓ. ಗೋಕುಲ ರೋಡ ಪೊಲೀಸ್ ಠಾಣೆ ಹುಬ್ಬಳ್ಳಿಯಿಂದ ಇ-ಮೇಲ್ ಮೂಲಕ ಅಪಘಾತದ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಚಾರಣೆ ಕುರಿತು ಹೆಚ್.ಸಿ. 29 ಗುರಪ್ಪ ಕೆ. ಗದ್ದಿ ಇವರನ್ನು ಹುಬ್ಬಳ್ಳಿಗೆ ಕಳುಹಿಸಿದ್ದು, ಅವರು ಇಂದು ದಿನಾಂಕ:- 08-02-2016 ರಂದು ರಾತ್ರಿ 7:30 ಗಂಟೆಗೆ ವಾಪಸ್ ಬಂದು ಗಾಯಾಳು  ಪ್ರಶಾಂತ ತಂದೆ ವೆಂಕಟರಾವ್ ಚಿಲಕೂರಿ, ವಯಸ್ಸು 22 ವರ್ಷ, ಜಾತಿ: ಕಮ್ಮಾ ಉ: ವಿದ್ಯಾಭ್ಯಾಸ ಸಾ: ಮಾರುತಿನಗರ (ಡಾಣಾಪೂರು ಕ್ರಾಸ್) ತಾ: ಗಂಗಾವತಿ. ಇವರ ನುಡಿ ಹೇಳಿಕೆಯನ್ನು ಹಾಜರಪಡಿಸಿದ್ದಸು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು  ಮೊನ್ನೆ ದಿನಾಂಕ:- 06-02-2016 ರಂದು  ನನ್ನ ಸ್ವಂತ ಕೆಲಸದ ನಿಮಿತ್ಯ ಹೋಂಡಾ ಯೂನಿಕಾರ್ನ ಮೋಟಾರ ಸೈಕಲ್ ನಂಬರ್: ಕೆ.ಎ-04/ ಹೆಚ್.ಎ-6289 ನೇದ್ದನ್ನು ತೆಗೆದುಕೊಂಡು ಗಂಗಾವತಿಗೆ ಬಂದಿದ್ದೆನು.  ಕೆಲಸ ಮುಗಿಸಿಕೊಂಡು ವಾಪಸ್  ಮೋಟಾರ ಸೈಕಲ್ ನಡೆಯಿಸಿಕೊಂಡು ಮಾರುತಿನಗರಕ್ಕೆ ಹೋಗುತ್ತಿದ್ದೆನು. ರಾತ್ರಿ 7:30 ಗಂಟೆಯ ಸುಮಾರಿಗೆ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯ ವಿದ್ಯಾನಗರದ ಪ್ರಶಾಂತ ಹೋಟಲ್ ಮುಂಭಾಗದಲ್ಲಿ ರಸ್ತೆಯ ಕ್ರಾಸ್ ಹತ್ತಿರ ರಸ್ತೆಯ ಎಡಗಡೆ ಹೋಗುತ್ತಿರುವಾಗ ನನ್ನ ಎದುರುಗಡೆ ಅಂದರೆ ಸಿಂಧನೂರು ಕಡೆಯಿಂದ ಒಬ್ಬ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ವಿದ್ಯಾನಗರದ ಊರೊಳಗೆ ಹೋಗಲು ಒಮ್ಮೆಲೇ ನನ್ನ ಎಡಗಡೆ ಬಂದು ನನಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ನಾನು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದೆನು.  ಇದರಿಂದ ನನ್ನ ಎಡಗಾಲು ಮೊಣಕಾಲಿನಿಂದ ಪಾದದವರೆಗೆ ಎಲುಬು ಮುರಿದಿದ್ದು, ಎಡಗೈಗೆ, ಎಡ ಹಣೆಗೆ, ಬಲಗಾಲಿಗೆ ಅಲ್ಲಲ್ಲಿ ತೆರೆಚಿದ ಗಾಯಗಳಾದವು.  ಅಪಘಾತ ಮಾಡಿದ ಮೋಟಾರ ಸೈಕಲ್ ನೋಡಲು ರಾಯಲ್ ಎನ್ ಫೀಲ್ಡ ನಂಬರ್: ಕೆ.ಎ-37/ ಇ.ಎ-9669 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ಶ್ರೀನಿವಾಸ ತಂದೆ ಡಿ. ವೆಂಕಟರಾವ್ ಸಾ: ವಿದ್ಯಾನಗರ. ಅಂತಾ ತಿಳಿಯಿತು.  ನಂತರ  ಈ ಅಪಘಾತ ನೋಡಿದ ನಾಗರಾಜ ತಂದೆ ರಾಮಬಾಬು ಈತನು ನನಗೆ ಯಾವುದೋ ಒಂದು ಕಾರಿನಲ್ಲಿ ಗಂಗಾವತಿಯ ಚಿನಿವಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನಂತರ ಅಲ್ಲಿಂದ ನನ್ನ ತಂದೆಯವರು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಕ್ಷೇಮಾ ಆರ್ಥೋಪೆಡಿಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಕಾರಣ ಮೋಟಾರ ಸೈಕಲ್ ಚಾಲಕ ಶ್ರೀನಿವಾಸನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ಇದ್ದ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008