Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 12, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 79/2016 ಕಲಂ: 78(3) Karnataka Police Act.
ದಿನಾಂಕ:- 11-02-2016 ರಂದು ಸಂಜೆ 6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ  ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 11-02-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದಲ್ಲಿ ಬಸವಣ್ಣನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 160, 358, 323, ಎ.ಪಿ.ಸಿ. 77 ಇವರು ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿ.ಪಿ.ಐ. ಗಂಗಾವತಿ (ಗ್ರಾ) ವೃತ್ತ ರವರ ಮಾರ್ಗದರ್ಶನದಲ್ಲಿ   ಠಾಣೆಯಿಂದ ಸಂಜೆ 4:00 ಗಂಟೆಗೆ ಹೊರಟು ಬಸಾಪಟ್ಟಣ ಗ್ರಾಮದಲ್ಲಿ ಹೋಗಿ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಬಸವಣ್ಣನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕಟ್ಟೆಯ ಮೇಲೆ ಕುಳಿತುಕೊಂಡು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ  ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 4:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನು ಅಂಗವಿಕಲನಿದ್ದು, ಒಂದು ಕಾಲು ಇರುವುದಿಲ್ಲಾ. ಅವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರು ಗಣೇಶ ತಂದೆ ಮೌಲಪ್ಪ, ವಯಸ್ಸು 40 ವರ್ಷ, ಜಾತಿ: ನೇಕಾರ ಸಾ: 3ನೇ ವಾರ್ಡ, ಶರಣಬಸಪ್ಪನ ಗುಡಿಯ ಹತ್ತಿರ, ಬಸಾಪಟ್ಟಣ  ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 530/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆತಿದ್ದು ಇದೆ. ನಂತರ ಅವನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ? ಅಂತಾ ವಿಚಾರಿಸಲು ಹಸನ್ ಸಾಬ ತಂದ ಸತ್ತಾರ ಸಾಬ ಸಾ: ಲಕ್ಷ್ಮೀ ಕ್ಯಾಂಪ್-ಗಂಗಾವತಿ ಈತನಿಗೆ ಕೊಡುವುದಾಗಿ ತಿಳಿಸಿದನು. ಈ ಬಗ್ಗೆ ಸಂಜೆ 4:30 ರಿಂದ 5:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ನಂತರ ಸದರಿ ಆರೋಪಿತರ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ." ಅಂತಾ  ಸಾರಾಂಶ ಇದ್ದು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು   ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 10/2016 ಕಲಂ:  279, 304(ಎ) ಐ.ಪಿ.ಸಿ.
ದಿನಾಂಕ. 11-02-2016 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸಪ್ಪ ತಂದೆ ನಿಂಗಪ್ಪ ಹಳ್ಳಿ ವಯ. 50 ಜಾತಿ. ಕುರುಬರ     ಉ: ಒಕ್ಕಲುತನ ಸಾ. ಹಾಲವರ್ತಿ ತಾ.ಜಿ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ 11-02-2016 ರಂದು ಫಿರ್ಯಾದಿಯ ಸಂಬಂಧಿಕರ ಶ್ರಮವು ನೆಲೋಗಿಪುರ ಗ್ರಾಮದಲ್ಲಿದ್ದು, ಹಾಲವರ್ತಿ ಗ್ರಾಮದಿಂದ ಅಲ್ಲಿಗೆ ಹೋಗಲು ಇಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿಯ ಗ್ರಾಮದ ರಾಜಾಭಕ್ಷಿ ಪಟವಾರಿ ಇವರ ಆಟೋ ನಂಬರ್ ಕೆ.ಎ 37 / 8957 ನೇದ್ದರಲ್ಲಿ ಫಿರ್ಯಾದಿಯ ಅಣ್ಣ ಹನುಮಪ್ಪ ಹಳ್ಳಿ ಹಾಗೂ ಹಾಲವರ್ತಿ ಗ್ರಾಮದ ಯಮನಪ್ಪ ಗೊರವರ, ಹನುಮವ್ವ ಗೊರವರ, ಶಿವಮ್ಮ ಹಳ್ಳಿ, ಶಾರಮ್ಮ ಹಳ್ಳಿ, ಶಂಕ್ರಮ್ಮ ಮಾಲಿಗೌಡರ ಎಲ್ಲರೂ ಕುಳಿತುಕೊಂಡು ನೆಲೋಗಿಪುರ ಗ್ರಾಮಕ್ಕೆ ಹೋಗುವಾಗ ಆಟೋ ಚಾಲಕನು ವಾಹನವನ್ನು     ಕೊಪ್ಪಳ – ಹಾಲವರ್ತಿ ರಸ್ತೆಯ ಮೇಲೆ ಗವಿಮಠದ ಗುಡ್ಡದ ಸಮೀಪ ವಾಹನವನ್ನು ನಿಲ್ಲಿಸಿದ್ದು, ಆಗ ಆಟೋದಲ್ಲಿದ್ದ ಯಮನಪ್ಪ ಗೊರವರ ಈತನು ಮೂತ್ರ ವಿಸರ್ಜನೆ ಮಾಡಿ ಆಟೋದ ಹತ್ತಿರ ಬರುತ್ತಿರುವಾಗ ಆಟೋದಲ್ಲಿದ್ದ ಫಿರ್ಯಾದಿಯ ಅಣ್ಣ ಹನುಮಪ್ಪ ಹಳ್ಳಿ ಆಟೋದಿಂದ ಕೆಳಗೆ ಇಳಿದು ಆಟೋ ಚಾಲಕನ ಜೊತೆಗೆ ಮಾತನಾಡುತ್ತಾ ಆಟೋದ ಪಕ್ಕದಲ್ಲಿ ನಿಂತುಕೊಂಡಿರುವಾಗ ಕೊಪ್ಪಳದ ಕಡೆಯಿಂದ ಬಂದ ಪೊಲೀಸ್ ಇಲಾಖೆಯ ವಾಹನ ನಂಬರ್ ಕೆ.ಎ 37 / ಜಿ 293 ನೇದ್ದನ್ನು ಅದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದ ಹನುಮಪ್ಪ ಹಳ್ಳಿ ಇತನಿಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದರಿಂದ ಹನುಮಪ್ಪ ಇತನು ಡಾಂಬರ್ ರಸ್ತೆಯ ಮೇಲೆ ರಭಸವಾಗಿ ಬಿದ್ದಿದ್ದರಿಂದ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 42/2016 ಕಲಂ:  279, 337, 338 ಐ.ಪಿ.ಸಿ.
ದಿ:11-02-2016 ರಂದು ರಾತ್ರಿ 8-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಲ್ಲಪ್ಪ ಕವಳಕೇರಿ. ಸಾ: ಕುಕನೂರ ಹಾವ: ಕುವೆಂಪುನಗರ ಕೊಪ್ಪಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ದೂರಿನ ಸಾರಾಂಶವೇನೆಂದರೇ, ಇಂದು ನಮ್ಮ ಮಾವ ಭೀಮಪ್ಪ ಬಿಚಗಲ್ ಇವರಿಗೆ ಕೊಪ್ಪಳದಲ್ಲಿ ಹೃದಯಾಘಾತವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ಅವರ ಶವವನ್ನು ನೋಡಲು ಅಂತಾ  ನಾನು ಗಿಣಿಗೇರಿ ಸಮೀಪದ ಕಲ್ಯಾಣಿ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 7-10 ಗಂಟೆಗೆ ಬೈಪಾಸ್ ಗೆ ಹೋಗಲು ಅಂತಾ ರಸ್ತೆಯ ಎಡಬಾಜು ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಅಂದರೆ ಹೊಸಪೇಟೆ ಕಡೆಯಿಂದ ಮೋಟಾರ ಸೈಕಲ್ ನಂ: ಕೆಎ-36/ಇಡಿ-3135 ನೇದ್ದರ ಚಾಲಕ ಗವಿಸಿದ್ದಪ್ಪ ಮುದ್ದಾಬಳ್ಳಿ ಸಾ: ಹಿಟ್ನಾಳ ಇತನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದು ನನಗೆ ಟಕ್ಕರ ಕೊಟ್ಟು ಅಪಘಾತ ಮಾಢಿದ್ದರಿಂದ ನನ್ನ ಬಲಕಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿದೆ. ಮತ್ತು ಮೈ ಕೈಗೆ ಒಳಪೆಟ್ಟಾಗಿರುತ್ತವೆ. ಸದರಿ ಮೋಟಾರ ಸೈಕಲ್ ಹಿಂದೆ ಕುಳಿತು ಬಂದ ಮೈಲಾರಿ ಸಾ: ಹಿಟ್ನಾಳ ಇತನಿಗೆ ಭಾರಿಗಾಯಗಳಾಗಿರುತ್ತವೆ. ಕಾರಣ ಅಪಘಾತ ಮಾಡಿದ ಮೊಟಾರ ಸೈಕಲ್ ಸವಾರ ಗವಿಸಿದ್ದಪ್ಪ ಮುದ್ದಾಬಳ್ಳಿ ಸಾ: ಹಿಟ್ನಾಳ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ   ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 64/2016 ಕಲಂ:  379 ಐ.ಪಿ.ಸಿ.
ದಿನಾಂಕ:11-02-2016 ರಂದು ಸಂಜೆ 03-45 ಗಂಟೆಗೆ ಪಿರ್ಯಾದಿದಾರರಾದ ರಮೇಶ ಜಿ. ತಂದೆ ಗೋಪಾಲಸಾಮಿ ಸಾ: ಪೈತಾಮಪಾರೆ ರಾ:ತಮಿಳುನಾಡು ಇದ್ದು ಸದರಿ ಪಿರ್ಯಾದಿದಾರನು ದಿನಾಂಕ:05-02-20.16 ರಂದು ಜೆ.ಬಿ. ಕೆಮಿಕಲ್ಸ್ & ಪಾರ್ಮ ಕೆವಿಟಿಕಲ್ಸ್ ಲಿಮಿಟೇಡ್. ಜಿ.ಐ.ಡಿ.ಸಿ ಪನೋಳಿ ಗುಜರಾತ ರಾಜ್ಯ ದಿಂದ ಒಟ್ಟು 832 ಮೆಡಿಸೆನ್ ಬಾಕ್ಷಗಳನ್ನು ಲೋಡಮಾಡಿದ್ದು ನಾನು ಮತ್ತು ನಮ್ಮ ತಂದೆ ಗೋಪಾಲಸಾಮಿ ಇಬ್ಬರೂ ದಿನಾಂಕ:06-02-2016 ರಮದು ಬೆಳಿಗ್ಗೆ 08-00 ಗಂಟೆಗೆ ತಮಿಳುನಾಡು ರಾಜ್ಯದ ಚೆನ್ನೈದಲ್ಲಿರುವ ಕೊಂಡಿತೋಪೆ ಕ್ಕೆ ಹೋಗಲು ಹೊರಟಿದ್ದು ಇರುತ್ತದೆ. ನಾವು ಸದರಿ ಲಾರಿಯಲ್ಲಿ ಅಲ್ಲಲ್ಲಿ ಊಟ, ತಿಂಡಿ ಮಾಡುತ್ತಾ ರಾತ್ರಿ ವಿಶ್ರಾಂತಿ ಪಡೆಯುತ್ತಾ ಮತ್ತು ದಿನಾಂಕ:07-02-2016 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ವಣಗೇರಿ ಟೋಲನಾಕ ದಾಟಿ ರಸ್ತೆಯ ಪಕ್ಕದಲ್ಲಿರುವ ಪಾರ್ಕಿಂಗ ಸ್ಥಳದಲ್ಲಿ ನಮ್ಮ ಲಾರಿಯನ್ನು ನಿಲ್ಲಿಸಿ ಲಾರಿಯನ್ನು ಚೆಕ್ ಮಾಡಲಾಗಿ ಸದರಿ ನಮ್ಮ ಲಾರಿಯಲ್ಲಿದ್ದ ಲೋಡ ಸರಿ ಇದ್ದು ಮುಂದೆ ಹೊಸಪೇಟೆ ಕಡೆಗೆ ಹೊರಟು. ದಿನಾಂಕ:07-02-2016 ರಂದು ಕುಷ್ಟಗಿ ದಾಟಿ ಎನ್.ಹೆಚ್.-50 ರಸ್ತೆಯ ಮೇಲೆ ಕುಷ್ಟಗಿಯಿಂದ ಹೊಸಪೇಟೆ ಕಡೆಗೆ ವಣಬಳ್ಳಾರಿ ಹತ್ತಿರ ಇರುವ ಒಂದು ಮದೇರಿ ಮೆಸ್ ಡಾಬಾದಲ್ಲಿ ರಾತ್ರಿ 11-00 ಗಂಟೆಯ ಸುಮಾರಿಗೆ ಊಟಮಾಡಿಕೊಂಡು ಅಲ್ಲಿಯೇ ಡಾಬಾದಲ್ಲಿ ಮಲಗಿಕೊಂಡೇವು. ನಂತರ ದಿನಾಂಕ:08-02-2016 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ನಾನು ನಮ್ಮ ಲಾರಿಯನ್ನು ಒಂದು ರೌಂಡ ಸುತ್ತುವರೆದು ನೋಡಲಾಗಿ ಸದರಿ ನಮ್ಮ ಲಾರಿಗೆ ಕಟ್ಟಿದ್ದ ಹಗ್ಗವು ಸಡೀಲವಾಗಿದ್ದು. ಆಗ ನನಗೆ ಅನುಮಾನ  ಬಂದು ನಮ್ಮ ಲಾರಿಯ ಮೇಲೆ ಹತ್ತಿ ನೋಡಲು ಸದರಿ ಲಾರಿಯಲ್ಲಿದ್ದು RANTAC SYRUP 100 ML. ಬಾಕ್ಷಗಳ ಪೈಕಿ ಒಟ್ಟು 32 ಬಾಕ್ಷಗಳು ಒಂದು ಬಾಕ್ಸನಲ್ಲಿ 60 ಬಾಟ್ಲಿಗಳು ಇದ್ದು ಒಂದು ಬಾಟ್ಲಿಗೆ 69=00 ರೂ:ಗಳಂತೆ ಒಟ್ಟು 60 ಬಾಟ್ಲಿಗಳು ಒಂದು ಬಾಕ್ಸನಲ್ಲಿದ್ದು ಅದರ ಅಂ:ಕಿ:4140=00 ರೂ:ಗಳಷ್ಟು ಆಗುತ್ತಿದ್ದು, ಹೀಗೆ ಒಟ್ಟು 32 ಬಾಕ್ಷಗಳ ಅಂ:ಕಿ:1,32,480=00 ರೂ:ಗಳಷ್ಟು ಆಗುತ್ತಿದ್ದು. ಹಾಗೂ METROGYL 400 mg. ಗಳ ಪೈಕಿ 7 ಬಾಕ್ಷಗಳು ಒಂದು ಬಾಕ್ಷನಲ್ಲಿ 18 ಸಣ್ಣ ಬಾಕ್ಸಗಳು ಇದ್ದು ಒಂದು ಸಣ್ಣ ಬಾಕ್ಷನಲ್ಲಿ 30 ಸ್ಟ್ರೀಪ್ ಗಳು ಇದ್ದು ಒಂದು ಸ್ಟ್ರೀಪ್ ಗೆ 39=00 ರೂ:ಗಳಂತೆ ಒಂದು ಸಣ್ಣ ಬಾಕ್ಷಗೆ 1170=00 ರೂ:ಗಳಂತೆ  18 ಸಣ್ಣಬಾಕ್ಷಗಳು ಒಂದು ದೊಡ್ಡ ಬಾಕ್ಷನಲ್ಲಿ ಇಟ್ಟಿದ್ದು ಅದರ ಅಂ:ಕಿ:21060=00 ಒಟ್ಟು 7 ದೊಡ್ಡ ಬಾಕ್ಷಗಳ ಅಂ:ಕಿ:1,47,420=00 ಹೀಗೆ ಒಟ್ಟು 39 ಮೆಡಿಸೆನ್ ಬಾಕ್ಷಗಳ ಒಟ್ಟು ಅಂ:ಕಿ:2,79,900=00 ರೂಪಾಯಿಗಳಷ್ಟು ಆಗುತ್ತವೆ. ಸದರಿ ಮೆಡಿಸೆನ್ ಬಾಕ್ಷಗಳನ್ನು ಕುಷ್ಟಗಿ ದಾಟಿ 10-11 ಕಿ.ಮೀ ಹೊಸಪೇಟೆ ಕಡೆಗೆ ಒಂದು ದೊಡ್ಡದಾದ ಬ್ರೀಜ ಹತ್ತಿರ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಸದರಿ ಮೆಡಿಸೆನ್ ಬಾಕ್ಷಗಳ ಪೈಕಿ ಒಂದು ಬಾಕ್ಷ ಅರಿದಿದ್ದು ಇರುತ್ತದೆ. ಸದರಿ ಬಾಕ್ಷಗಳನ್ನು ನೋಡಲು ದಿನಾಂಕ:08-02-2016 ರಂದು ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ವಾಪಸ ದೊಡ್ಡದಾದ ಬ್ರೀಜ ಹತ್ತಿರ ಬಂದು ನೋಡಲು ಬ್ರೀಜದ ಕೆಳಗಡೆ ಒಂದು ರಟ್ಟಿನ ಬಾಕ್ಷ ಇದ್ದು ಮೆಡಸೆನ್ ಸ್ಟ್ರೀಪ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅದನ್ನು ನೋಡಿ ಖಾತರಿಪಡಿಸಿಕೊಂಡು ಸದರಿ ಕಳ್ಳತನವು ದಿನಾಂಕ:07-02-2016 ರಂದು ರಾತ್ರಿ 10-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮೆಡಿಸೆನ್ ಬಾಕ್ಷಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮೆಡಿಸೆನ್ ಮಾಲಕರಿಗೆ ಪೋನ್ ಮಾಡಿ ವಿಷಯ ತಿಳಿಸಿ ಟ್ರಾನ್ಸಪೋರ್ಟ ಮ್ಯಾನೇಜರ ರವರು ಬಂದು ಲಾರಿಯನ್ನು ಪರಿಶೀಲಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು. ಕಾರಣ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿದ್ದ ಫಿರ್ಯಾದಿಯಿಂದ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.


0 comments:

 
Will Smith Visitors
Since 01/02/2008