Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, February 13, 2016

1)  ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 66/2016 ಕಲಂ: 78(3) Karnataka Police Act.
ದಿನಾಂಕ: 12-02-2016 ರಂದು 09-30 ಪಿ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ರಾತ್ರಿ 7-15 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಹಿರೇಮನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಶಿವಪ್ಪ ತಂದೆ ಮುದುಕಪ್ಪ ತೋಟದ  2] ದೇವಣ್ಣ ತಂದೆ ಹುಡಚಪ್ಪ ಸುಬೇದಾರ  ಇಬ್ಬರೂ ಸಾ: ಹಿರೇಮನ್ನಾಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108, 63, ಪಿ.ಸಿ-116,117,109,161 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 07-15 ಪಿ.ಎಂ ಗೆ ಹೊರಟು ಹಿರೇಮನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಗಂಗಪ್ಪ ತಂದೆ ಮಹಾಂತಪ್ಪ ಹಾದಿಮನಿ ವಯಾ: 22 ವರ್ಷ ಜಾತಿ: ವಾಲ್ಮೀಕಿ ಉ: ಕೂಲಿಕೆಲಸ ಸಾ: ಹಿರೇಮನ್ನಾಪೂರ   ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಬರೆದ ಮಟಕಾ ಚೀಟಿಗಳನ್ನು ಹನಮಂತಪ್ಪ ತಂದೆ ಅಮರಪ್ಪ ಲಗಾಟಿ ಸಾ: ಹಿರೇಮನ್ನಾಪೂರ ಇವರಿಗೆ ಕೊಡುವದಾಗಿ ತಿಳಿಸಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2050-00 ರೂಪಾಯಿ ನಗದು ಹಣ, ಒಂದು ಜಿ.ಪೈವ್ ಮೊಬೈಲ್ ಅಂ ಕಿ. 600-00 ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು. ಈ ಪಂಚನಾಮೆಯನ್ನು ಇಂದು ದಿನಾಂಕ: 12-02-2016  ರಂದು ರಾತ್ರಿ 7-50 ರಿಂದ 8-50 ರವರೆಗೆ ಬರೆದು ಮುಗಿಸಲಾಯಿತು. ನಂತರ ಆರೋಪಿತನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 41/2016 ಕಲಂ: 279, 337 ಐ.ಪಿ.ಸಿ
ದಿನಾಂಕ 12-02-2016 ರಂದು ಸಂಜೆ 07-45 ಗಂಟೆ ಸುಮಾರಿಗೆ ಪಿರ್ಯಾದು FgÀªÀÄä UÀA/ ¤AUÀ¥Àà §½UÉÃgÀ ªÀAiÀiÁ 50 ¸Á. EgÀPÀ¯ï UÀqÁî. ಇವರು ಮತ್ತು ಅವರ ತಂಗಿ ಗುರುಬಸವ್ವಇಬ್ಬರು ಕೂಡಿಕೊಂಡು ಗುಡದಳ್ಳಿ ಗ್ರಾಮದಲ್ಲಿರುವ ಭಿಮಮ್ಮನ ದೇವಸ್ಥಾನಕ್ಕೆ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ವೆಂಕಟೇಶನು ತನ್ನ ನಂಬರ ಇರದ ಬಜಾಜ ಪ್ಲಾಟೀನಾ ಮೋ.ಸೈ.ನಲ್ಲಿ ಹಿಂದೆ ಇಬ್ಬರಿಗೆ ಕೂಡಿಸಿಕೊಂಡು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಗೆ ಹಾಗೂ ಅವರ ತಂಗಿ ಗುರುಬಸವ್ವಳಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದಿ ಮತ್ತು ಗುರುಬಸವ್ವಳಿಗೆ ಹಾಗೂ ಆರೋಪಿ ವೆಂಕಟೇಶನಿಗೆ ಮತ್ತು ಮೋಸೈ.ನಲ್ಲಿ ಕುಳಿತಿದ್ದ ಲಲಿತಮ್ಮಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ: 279, 337, 338, 304(ಎ) ಐಪಿಸಿ 
ದಿನಾಂಕ:12-02-2016 ರಂದು 5-00 ಪಿಎಂಕ್ಕೆ ತಳಬಾಳ ಕ್ರಾಸ್ ಹತ್ತಿರ ರಸ್ತೆ ಅಪಘಾತವಾದ ಬಗ್ಗೆ ದೂರವಾಣಿ ಮುಖಾಂತರ ಮಾಹಿತಿ ಬಂದ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ, ಕುಕನೂರ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ಪರಿಶೀಲಿಸಿ, ಚಿಕಿತ್ಸೆ ಪಡಿಸಿ, ಹೆಚ್ಚಿನಚಿಕಿತ್ಸೆ ಕುರಿತು ರೇಫರ್ ಮಾಡಿದವರನ್ನು ಕೊಪ್ಪಳಕ್ಕೆ ಕಳುಹಿಸಿಕೊಟ್ಟು, ಪ್ರಕರಣದಲ್ಲಿ ಅಲ್ಪ ಸ್ವಲ್ಪ ಗಾಯಗೊಂಡಿದ್ದ ಪಿರ್ಯಾದಿದಾರನಿಗೆ ಠಾಣೆಗೆ ಕರೆದುಕೊಂಡು ಬಂದು  ಸದರಿಯವನು ಠಾಣೆಯಲ್ಲಿ ನೀಡಿದ ಹೇಳಿಕೆ ಪಿರ್ಯಾದಿಯನ್ನು 6-00 ಪಿಎಂದಿಂದ 7-00 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ತಾನು ಮತ್ತು ತಮ್ಮೂರ ಉದಯಕುಮಾರ ತಂದೆ ರಾಮಣ್ಣಾ ತಳವಾರ, 3) ಮರಿಯಪ್ಪ ತಂದೆ ವೀರಪ್ಪ ತಳವಾರ, 4) ಶರಣಪ್ಪ ತಂದೆ ಭರಮರಡ್ಡೆಪ್ಪ ಮಾದಿನೂರ 5) ಭೀಮಪ್ಪ ತಂದೆ ಹನುಮಪ್ಪ ತಳವಾರ, 6) ಸಿದ್ದಪ್ಪ ತಂದೆ ವೀರಬಸಪ್ಪ ಭೀಷ್ಟರೆಡ್ಡಿ 7) ಹೇಮರಡ್ಡಿ ತಂದೆ ಬಸಪ್ಪ ಭೀಷ್ಟರೆಡ್ಡಿ, 8) ಹಂಚ್ಯಾಳಪ್ಪ ತಂದೆ ಪುಂಡಪ್ಪ ಸಂಗಟಿ, 9) ಹನುಮಪ್ಪ ತಂದೆ ಕನಕಪ್ಪ ತಳವಾರ 10) ಕೃಷ್ಣಾ ತಂದೆ ಹುಚ್ಚೀರಪ್ಪ ತಳವಾರ, 11) ಮಲ್ಲಯ್ಯತಂದೆ ವೀರಯ್ಯ ಗದಗಿನ 12) ಹನುಮಪ್ಪತಂದೆ ನಿಂಗಪ್ಪ ಕೋನಾರಿ 13) ಮಂಜುನಾಥ ತಂದೆ ಹುಚ್ಚೀರಪ್ಪತಳವಾರ, ಎಲ್ಲರೂ ಕೂಡಿ ಭಾಗ್ಯನಗರದಲ್ಲಿದ್ದ ತನ್ನ ಗೆಳೆಯನ ಮನೆ ಓಪನಿಂಗ್ ಗೆ ಆರೋಪಿತ ಪತ್ರಯ್ಯ ಇವನು ಚಲಾಯಿಸುತ್ತಿದ್ದ ಪಿಯಾಗೊ ಅಪೆ ವಾಹನ ಸಂ:ಕೆಎ-37 ಎ-3893 ನೇದ್ದರಲ್ಲಿ ಹೋಗಿ, ಓಪನಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ ಆರೋಪಿತನು ಬಾನಾಪುರ ಕಡೆಯಿಂದ ಕುಕನೂರ ಕಡೆಗೆ ಬರುವಾಗ ತಳಬಾಳ ಸೀಮಾದ ಈಶಣ್ಣ ಗುಳಗಣ್ಣನವರ್ ಇವರ ಹೊಲದ ತಾನು ಚಲಾಯಿಸುತ್ತಿದ್ದ ಅಪೆ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಎಡಬದಿಯ ತಗ್ಗಿನಲ್ಲಿ ಪಲ್ಟಿ ಮಾಡಿ, ಅಪಘಾತಪಡಿಸಿದ್ದರಿಂದ ಅದರಲ್ಲಿದ್ದ ಉದಯಕುಮಾರ, ಮರಿಯಪ್ಪ, ಶರಣಪ್ಪ ಮಾದಿನೂರ, ಹನುಮಪ್ಪ ತಳವಾರ ಇವರಿಗೆ ಭಾರೀ ಸ್ವರೂಪದ ಗಾಯಗಳು,  ಉಳಿದವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ ಕುರಿತು 108 ವಾಹನದಲ್ಲಿ ಬರುವಾಗ ಭಾರೀ ಗಾಯಗೊಂಡಿದ್ದ ಹನುಮಪ್ಪ ತಳವಾರ ಈತನು ದಾರಿಯಲ್ಲಿ 5-15 ಪಿಎಂಕ್ಕೆ ಮೃತಪಟ್ಟಿರುತ್ತಾನೆ. ಈ ಘಟನೆಗೆ ಚಾಲಕ ಪತ್ರಯ್ಯ ಈತನ ಅತೀವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 72/2016 ಕಲಂ: 341, 324, 504, 506 (02) ಐ.ಪಿ.ಸಿ.
ದಿನಾಂಕ 12-02-2016 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರ ಶ್ರೀ ಮಂಜುನಾಥ ತಂದೆ ಮಂಗಳೇಶಪ್ಪ ಚಿನ್ನೂರ ವಯ.35 ವರ್ಷ ಜಾ.ಲಿಂಗಾಯತ ಉ.ಹೋಟಲ್ ಕೆಲಸ ಸಾ.ವಾರ್ಡ ಸಂ. 12 ಕನಕಗಿರಿ ತಾ.ಗಂಗಾವತಿ ಜಿ.ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ   ನಮ್ಮ ತಂದೆ ತಾಯಿಯವರಿಗೆ ನಾವು ಒಟ್ಟು 07 ಮಕ್ಕಳಿದ್ದು ಇವರಲ್ಲಿ ಸಧ್ಯ 06 ಜನರು ಜೀವಂತವಿರುವುದಾಗಿ ನಮ್ಮ ತಂದೆಯವರು ಈಗ್ಗೇ ಅಂ.20 ವರ್ಷಗಳ ಹಿಂದೆ ಮೃತಪಟ್ಟಿದ್ದು ಸಧ್ಯ ತಾಯಿಯವರಿದ್ದು ಫಿಯರ್ಾದಿದಾರನಿಗಿಂತಲೂ ಕಿರಿಯಯವನಾದ ರಾಜೇಶ ಈತನಿಗೆ ಈಗ್ಗೇ ಅಂ. 05 ವರ್ಷಗಳ ಹಿಂದೆ ಮದುವೆಯಾಗಿದ್ದು ಆಗಿನಿಂದಲೂ ಕೂಡ ಆತನು ತನ್ನ ಪಾಡಿಗೆ ಬೇರೆ ಮನೆಯಲ್ಲಿ ವಾಸಮಾಡಿಕೊಂಡಿದ್ದು ರಾಜೇಶನಿಗೂ ಮತ್ತು ನಮಗೂ (ಅಂದರೇ ಫಿಯರ್ಾದಿ ಮತ್ತು ಆತನ ಅಣ್ಣ ನಾಗರಾಜ) ಮಧ್ಯದಲ್ಲಿ ಈಗ್ಗೇ ಅಂ. ಎರಡು ವರ್ಷಗಳಿಂದ ಆಸ್ತಿ ಹಂಚಿಕೆಗೆ ಸಂಭಂಧಪಟ್ಟಂತೆ ಜಗಳವು ನಡೆಯುತ್ತಿದ್ದು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷವನ್ನು ಸಾಧಿಸುತ್ತಿದ್ದ ರಾಜೇಶನು ಇಂದು ದಿ.12-02-2016 ರಂದು ತಾವರಗೇರಾ ರಸ್ತೆಯಲ್ಲಿ ವಾಲ್ಮೀಕಿ ವೃತ್ತದ ಹತ್ತಿರದಲ್ಲಿರುವ ಶ್ರೀ ಮಂಜುನಾಥ ಹೋಟಲ್ದಲ್ಲಿ ಕೆಲಸವನ್ನು ಮಾಡಿಕೊಂಡಿದ್ದಾಗ ಬೆಳಿಗ್ಗೆ ಅಂ. 8-00 ಗಂಟೆಯ ಸುಮಾರಿಗೆ ಧಿಡೀರನೆ ಅಂಗಡಿಯ ಮುಂದೆ ಬಂದ ನನ್ನ ಸ್ವಂತ ತಮ್ಮನಾದ ರಾಜೇಶ ತಂದೆ ಮಂಗಳೇಶಪ್ಪ ಚಿನ್ನೂರ ವಯ.30 ವರ್ಷ ಈತನು ತನ್ನ ಕೈಯಲ್ಲಿ ಒಂದು ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ಅಂಗಡಿಯನ್ನು ಯಾಕೆ ತೆಗೆದಿಯಲೇ ಸೂಳೆ ಮಕ್ಕಳೆ ನಿಮ್ಮನ್ನು ಕೊಂದು ಬಿಡುತ್ತೆನೆ ಅಂತಾ ಅವಾಚ್ಯವಾಗಿ ಬೈಯುತ್ತಾ ನಾಗರಾಜನಿಗೆ ತಡೆದು ತಲೆಗೆ ಜೋರಾಗಿ ಹೊಡೆದಿದ್ದು ನಂತರ ಆತನು ತಪ್ಪಿಸಿಕೊಳ್ಳುವಷ್ಟರಲ್ಲಿಯೇ ಆತನ ಎಡಗಾಲಿನ ಮೊಳಕಾಲಿನ ಕೆಳಗೆ ಕೂಡ ಜೋರಾಗಿ ಹೊಡೆದಿದ್ದು ಇದರಿಂದಾಗಿ ತಲೆಗೆ ಭಾರಿ ರಕ್ತಗಾಯವಾಗಿ ಎಡಗಾಲಿಗೆ ಕೂಡ ಭಾರಿ ರಕ್ತಗಾಯವಾಗಿರುತ್ತದೆ. ಇದನ್ನು ತಡೆಯಲು ಬಂದ ನನಗೆ ಎಡಸೊಂಟಕ್ಕೆ ಮತ್ತು ಬಲಗಾಲಿನ ಮೊಣಕಾಲಿನ ಮೇಲೆ ಕೂಡ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿದ್ದು ಇದನ್ನು ಕಂಡ ಅಲ್ಲಿಯೇ ಇದ್ದ ಕನಕಗಿರಿಯ ರುದ್ರಪ್ಪ ದೇವರಾಳ ಮತ್ತು ತೆಕ್ಕಲಕೋಟೆಯ ವಿರೇಶಪ್ಪ ತಂದೆ ಹಂಪಣ್ಣ ಇವರುಗಳು ಮತ್ತು ಇನ್ನೂ ಮುಂತಾದವರು ನಮ್ಮನ್ನು ಬಿಡಿಸಿಕೊಂಡಿದ್ದು ಆಗ ರಾಜೇಶನು ಇವತ್ತು ಉಳಿದೀಯರಲೇ ಇನ್ನಮ್ಮೆ ಸಿಕ್ಕಲ್ಲಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವಬೆದರಿಕೆಯನ್ನು ಹಾಕಿ ಕಟ್ಟಿಗೆಯನ್ನು ಅಲ್ಲಿಯೇ ಬೀಸಾಕಿ ಓಡಿ ಹೋಗಿದ್ದು ಇರುತ್ತದೆ. ನಂತರ ನನ್ನ ಅಣ್ಣನಿಗೆ ಕನಕಗಿರಿ ಸರಕಾರಿ ಆಸ್ಪತ್ರೆಗೆ ಸೇರಿಸಿ ನಾನು ಕೂಡ ಚಿಕಿತ್ಸೆ ಪಡೆದು ನಂತರ ಈಗ ಠಾಣೆಗೆ ಬಂದು ಈ ಫಿಯರ್ಾದಿಯನ್ನು ನೀಡಿದ್ದು ಕಾರಣ ಮಾನ್ಯರವರು ನನ್ನ ಅಣ್ಣನಾದ ನಾಗರಾಜನಿಗೆ ಮತ್ತು ನನಗೆ ಹೊಡಿಬಡಿ ಮಾಡಿ ನನ್ನ ಅಣ್ಣನಿಗೆ ತೀವ್ರ ಗಾಯಗೊಳಿಸಿದ ನನ್ನ ಸ್ವಂತ ತಮ್ಮನಾದ ರಾಜೇಶ ಈತನ ವಿರುದ್ಧ ಸೂಕ್ತ  ಕಾನೂನು ಕ್ರಮವನ್ನು ಕೈಕೊಳ್ಳಲು ವಿನಂತಿಯಿರುತ್ತದೆ ಅಂತಾ ಮುಂತಾಗಿ ನೀಡಿದ ಅಂತಾ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.72/2016 ಕಲಂ 341 324 504 506 (02) ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 65/2016 ಕಲಂ:  379 ಐ.ಪಿ.ಸಿ.
ದಿನಾಂಕ:12-02-2016 ರಂದು ಸಂಜೆ 05-45 ಗಂಟೆಗೆ ಪಿರ್ಯಾದಿದಾರರಾದ ಕೃಷ್ಣ ತಂದೆ ರಾಮಣ್ಣ ಚಿತ್ರಗಾರ  ವಯಾ 47 ವರ್ಷ ಜಾ: ಚಿತ್ರಗಾರ ಉ: ಟೈರ್ ಅಂಗಡಿ ಸಾ: ಕೃಷ್ಣಗಿರಿ ಕಾಲೋನಿ ಕುಷ್ಟಗಿ ದಿನಾಂಕ 05-02-2016 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿದ ಮೇಲೆ ನನ್ನ ಬಜಾಜ ಕಂಪನಿಯ ಡಿಸ್ಕವರಿ  ಮೋಟರ್ ಸೈಕಲ್ ನಂ-KA-26 Q-6073 ನೇದ್ದನ್ನು ನನ್ನ ಮನೆಯ ಆವರಣದಲ್ಲಿ ನಿಲ್ಲಿಸಿ ಕೀಲಿ ಹಾಕಿ ಮುಂದಿನ ಗೇಟ್ ಮುಚ್ಚಲಾಗಿದ್ದು ರಾತ್ರಿ 02-00 ಗಂಟೆಗೆ ಎದ್ದು ನೋಡಲಾಗಿ ನನ್ನ ಸದರಿ ಬೈಕ್ ಇತ್ತು ಮರುದಿನ ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇದ್ದಿಲ್ಲಾ ಅಲ್ಲಿ ಇಲ್ಲಿ ಹುಡುಕಾಡಲಾಗಿ ಎಲ್ಲಿಯೂ ಕಾಣಲಿಲ್ಲಾ ಯಾರೂ ಕಳ್ಳರೂ ಕಳವು ಮಾಡಿಕೋಂಡು ಹೋಗಿರುತ್ತಾರೆ ಅದರ ಬಣ್ಣವು FRD ಕೆಂಪು ಬಣ್ಣದ್ದು ಇದ್ದು ಇದರ ಚೇಸ್ಸಿ ನಂ MD2BSPAZZTWA25542 ಇಂಜಿನ್ ನಂ-JBMBTA46535 ಅಂತಾ ಇದ್ದು ಇದರ ಅಂದಾಜು ಕಿಮ್ಮತ್ತು 30,000 ರೂ ಗಳಷ್ಟು ಆಗಬಹುದು ಕಾರಣ  ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008