Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 14, 2016

1)  ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 67/2016 ಕಲಂ: 87 Karnataka Police Act.
ದಿನಾಂಕ 13-02-2016 ರಂದು ಸಂಜೆ 6-30 ಗಂಟೆಗೆ ಶ್ರೀ. ರಾಮಪ್ಪ ಜಲಗೇರಿ ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಶಾಕಾಪೂರ ಗ್ರಾಮದ ಸ.ಹಿ.ಪ್ರಾ.ಶಾಲೆಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಎ.ಸ್.. ಪುಂಡಪ್ಪ, ಹೆಚ್.ಸಿ- 108, 63 ಪಿ.ಸಿ-117,109, 24, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶಿವಕುಮಾರ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 81,000-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 41/2016 ಕಲಂ: 279, 304(ಎ) ಐ.ಪಿ.ಸಿ
ದಿನಾಂಕ 13-02-2016 ರಂದುರಾತ್ರಿ 08-15 ಗಂಟೆ ಸುಮಾರಿಗೆ ಗೊಂಡಬಾಳ - ಗಿಣಿಗೇರಾ ರಸ್ತೆಯ ಮೇಲೆ ಅಖಿಲಾ ಸಾಯಿಜೋತಿ ಪ್ಯಾಕ್ಟರಿ ಹತ್ತಿರ ಟಿಪ್ಪರ ಲಾರಿ ನಂ.ಎ.ಪಿ.37/ ಟಿಬಿ.2772 ನೇದ್ದರ ಚಾಲಕ ಬಸವರಾಜನು ಟಿಪ್ಪರ್  ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿದ್ದ ಲೈಟಿನ ಕಂಬಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಟಿಪ್ಪರ್ ಲಾರಿ ರಸ್ತೆಯ ಮೇಲೆ ಪಲ್ಟಿಯಾಗಿ ಬಿದ್ದು ಟಿಪ್ಪರ ಲಾರಿಯಲ್ಲಿದ್ದ ಕ್ಲೀನರ ಸೊಮಪ್ಪ ತಂ/ ಹನುಮಪ್ಪ ವಿರುಪಾಪೂರ ಇತನ ತಲೆಗೆ ರಕ್ತಗಾಯವಾಗಿದ್ದು ಕಿವಿಯಿಂದ ,ಮೂಗಿನಿಂದ ರಕ್ತಬಂದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 80/2016 ಕಲಂ: 448, 323, 324, 354,  504, 506 ಸಹಿತ 34 ಐಪಿಸಿ 
ನಿನ್ನೆ ದಿ- 12-02-2016 ರಂದು ಸಂಜೆ 6: 15 ಗಂಟೆಗೆ ಗಾಯಾಳು ಶ್ರೀಮತಿ ಸಿದ್ದಮ್ಮ ಗಂಡ ಯಮನೂರ, ವಯಸ್ಸು 20 ವರ್ಷ, ಸಾ: ಹೊಸಕೇರಾ ಡಗ್ಗಿ.  ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಳುಹಿಸಿದ್ದು, ಅವರು ತಮ್ಮ ಮನೆಯವರೊಂದಿಗೆ ಚರ್ಚಿಸಿ ನಂತರ ದೂರು ಕೊಡುವುದಾಗಿ ತಿಳಿಸಿ ಇಂದು ದಿ- 13-02-2016 ರಂದು ಮಧ್ಯಾಹ್ನ 1:00 ಗಂಟೆಗೆ  ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಹೆರಿಗೆಯ ನಿಮಿತ್ಯ ನನ್ನ ತವರು ಮನೆ ಹೊಸಕೇರಾ ಡಗ್ಗಿಗೆ ಬಂದಿರುತ್ತೇನೆ. ನನ್ನ ತವರು ಮನೆಯ ಪಕ್ಕದಲ್ಲಿ ಸಣ್ಣೆಪ್ಪ ಮಾದಿಗ ಇವರ ಮನೆ ಇರುತ್ತದೆ. ಈಗ್ಗೆ ಸುಮಾರು 3-4 ತಿಂಗಳಿನಿಂದ ಸಣ್ಣೆಪ್ಪನವರಿಗೂ ಮತ್ತು ನನ್ನ ತವರು ಮನೆಯವರಿಗೂ ಸಣ್ಣ ಪುಟ್ಟ ವಿಷಯಗಳಿಗಾಗಿ ಮನಸ್ಥಾಪ ಉಂಟಾಗಿ ಆಗಾಗ್ಗೆ ಜಗಳವಾಗುತ್ತಿತ್ತು.  ಅವರು ನಮ್ಮ ಮೇಲೆ ತೀವ್ರ ದ್ವೇಷ ಇಟ್ಟುಕೊಂಡು ಪ್ರತಿನಿತ್ಯ ಕುಡಿದು ಬಾಯಿಗೆ ಬಂದಂತೆ ಬೈದಾಡುತ್ತಿದ್ದರು. ಹೇಗಾದರೂ ಮಾಡಿ ನನ್ನ ತವರು ಮನೆಯವರನ್ನು ಅಲ್ಲಿಂದ ಬಿಟ್ಟು ಓಡಿಸಬೇಕೆಂದುಕೊಂಡಿದ್ದರು.   ನಿನ್ನೆ ದಿನಾಂಕ:-12-02-2016 ರಂದು ಸಂಜೆ 5:00 ಗಂಟೆಯ ಸುಮಾರಿಗೆ ನಾನು ಒಬ್ಬಳೇ ಮನೆಯಲ್ಲಿದ್ದಾಗ (1) ಪುರುಷೋತ್ತಮ ತಂದೆ ಸಣ್ಣೆಪ್ಪ, ವಯಸ್ಸು 30 ವರ್ಷ ಇವನು ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಬಂದು ನನ್ನ ಕೂದಲು ಹಿಡಿದು ಎಳೆದುಕೊಂಡು ಹೊರಗಡೆ ಬಂದು ಲೇ ಬೋಸುಡಿ ಸೂಳೇರ ನಿಮ್ಮನ್ನು ಒದ್ದರೆ ಯಾರೂ ಕೇಳುವವರು ಇಲ್ಲಾಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ತನ್ನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕಟ್ಟಿಗೆಯಿಂದ ನನ್ನ ತಲೆಯ ಹಿಂಭಾಗದಲ್ಲಿ ಕುತ್ತಿಗೆ ಹತ್ತಿರ ಹೊಡೆದನು.  ಹಾಗೂ ಹೊಟ್ಟೆಗೆ ಕಾಲಿನಿಂದ ಒದ್ದನು. ಆಗ ಆತನೊಂದಿಗೆ ಆತನ ಮನೆಯವರಾದ ಸಣ್ಣೆಪ್ಪ ತಂದೆ ಕಂಠೆಪ್ಪ 50 ವರ್ಷ, ಲೋಕೇಶ ತಂದೆ ಸಣ್ಣೆಪ್ಪ, ವಯಸ್ಸು 28 ವರ್ಷ, ಮತ್ತು ಹಂಪಮ್ಮ ಗಂಡ ಸಣ್ಣೆಪ್ಪ 46 ವರ್ಷ ಇವರುಗಳು ಸಹ ಕೂಡಿಕೊಂಡು ನನಗೆ ಈ ಸೂಳೇ ಮಕ್ಕಳದು ಬಹಳ ಆಗಿದೆ, ಇವರ ತಿಂಡಿ ತೀರಿಸೋಣಾ ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ನನ್ನ ಕೂದಲು ಹಿಡಿದು, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ನೆಲಕ್ಕೆ ಹಾಕಿ ಒದ್ದರು.  ಹಂಪಮ್ಮಳು ಬಾಯಿಂದ ನನ್ನ ಎಡಗೈಗೆ ಕಚ್ಚಿ ಗಾಯಗೊಳಿಸಿದಳು.  ಅದೇ ವೇಳೆಗೆ ಅಲ್ಲಿಗೆ ಬಂದ ನನ್ನ ತಾಯಿ ನಾಗಮ್ಮ ಗಂಡ ಬಾಲಪ್ಪ ಹಾಗೂ ನಮ್ಮೂರ ಪಾಮಪ್ಪ ತಂದೆ ಗಂಗಾವತಿ ಹುಲಗಪ್ಪ, ದುರಗಪ್ಪ ತಂದೆ ಸೋಮಪ್ಪ ಇವರುಗಳು  ಬಂದು ಬಡಿಯುವುದನ್ನು ಬಿಡಿಸಿಕೊಂಡರು. ನಂತರ ಅವರು ನನಗೆ ಲೇ ಇವತ್ತು ನಿನ್ನನ್ನು ಸುಮ್ಮನೇ ಬಿಟ್ಟಿದ್ದೇವೆ, ಇನ್ನೊಂದು ಸಾರಿ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಮುಗಿಸಿಬಿಡುತ್ತೇವೆಅಂತಾ ಜೀವದ ಬೆದರಿಕೆ ಹಾಕಿದರು. ನಂತರ ನನ್ನ ತಾಯಿ ನನಗೆ ಗಂಗಾವತಿಗೆ ಕರೆದುಕೊಂಡು ಠಾಣೆಗೆ ಬಂದಿದ್ದು, ನನಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಹಿಸಿದ್ದು, ನಾನು ಚಿಕಿತ್ಸೆ ಪಡೆದು ಇಂದು ಈ ಬಗ್ಗೆ ನನ್ನ ತಂದೆ ಬಾಲಪ್ಪ ಬಂದ ನಂತರ ನಾವು ಚರ್ಚಿಸಿ  ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 81/2016 ಕಲಂ: 323, 324, 354,  504, 506 ಸಹಿತ 34 ಐಪಿಸಿ.

ದಿನಾಂಕ:- 13-02-2016 ರಂದು ಸಂಜೆ 5:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಹಂಪಮ್ಮ ಗಂಡ ಸಣ್ಣ ಹುಸೇನಪ್ಪ, ವಯಸ್ಸು 45 ವರ್ಷ, ಜಾತಿ: ಮಾದಿಗ ಉ: ಕೂಲಿ ಕೆಲಸ ಸಾ: ಹೊಸಕೇರಾ ಡಗ್ಗಿ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಗಂಗಾವತಿ ತಾಲೂಕಿನ ಹೊಸಕೇರಾ ಡಗ್ಗಿ ಗ್ರಾಮದ ನಿವಾಸಿ ಇದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಮನೆಯ ಹಿಂಭಾಗದಲ್ಲಿ ಬಾಲಪ್ಪ ಇವರ ಮನೆ ಇರುತ್ತದೆ. ಈಗ್ಗೆ ಸುಮಾರು ದಿವಸಗಳಿಂದ ಬಾಲಪ್ಪನವರಿಗೂ ಮತ್ತು ಸಣ್ಣ ಪುಟ್ಟ ವಿಷಯಗಳಿಗಾಗಿ ಮನಸ್ಥಾಪ ಉಂಟಾಗಿ ಆಗಾಗ್ಗೆ ಜಗಳವಾಗುತ್ತಿತ್ತು. ಅವರು ನಮ್ಮ ಮೇಲೆ ತೀವ್ರ ದ್ವೇಷ ಇಟ್ಟುಕೊಂಡು ಪ್ರತಿನಿತ್ಯ ಕುಡಿದು ಬಾಯಿಗೆ ಬಂದಂತೆ ಬೈದಾಡುತ್ತಿದ್ದರು.  ನಿನ್ನೆ ದಿನಾಂಕ:-12-02-2016 ರಂದು ಸಂಜೆ 5:30 ಗಂಟೆಯ ಸುಮಾರಿಗೆ ಬಾಲಪ್ಪ ಹಾಗೂ ಆತನ ಹೆಂಡತಿ ನಾಗಮ್ಮ ಇವರು ವಿನಾ: ಕಾರಣ ಹಳೆಯ ವಿಚಾರಗಳನ್ನು ತೆಗೆದು ನಮಗೆ ಬಾಯಿಗೆ ಬಂದಂತೆ ಬೈದಾಡುತ್ತಿದ್ದರು. ಆಗ ನನ್ನ ಮಗನಾದ ಪುರುಷೋತ್ತಮ ಇವನು ಯಾಕೆ ಈ ರೀತಿ ಪ್ರತಿನಿತ್ಯ ಬೈದಾಡುತ್ತಿರಾ ಅಂತಾ ಕೇಳಲು ಹೋಗಿದ್ದಕ್ಕೆ (1) ಬಾಲಪ್ಪ-55 ವರ್ಷ (2) ನಾಗಮ್ಮ ಗಂಡ ಬಾಲಪ್ಪ 48 ವರ್ಷ ಅವರ ಮಕ್ಕಳಾದ (3) ಬಾರೆಪ್ಪ ವಯಸ್ಸು 25 ವರ್ಷ  (4) ಶ್ರೀಮತಿ ಸಿದ್ದಮ್ಮ ಗಂಡ ಯಮನೂರು-20 ವರ್ಷ  ಇವರುಗಳು ಕೂಡಿಕೊಂಡು ನನ್ನ ಮಗ ಪುರುಷೋತ್ತಮನಿಗೆ ಲೇ ಲಂಗಾ ಸೂಳೇ ಮಗನೇ ಊರಲ್ಲಿ ನಿನ್ನ ತಿಂಡಿ ಜಾಸ್ತಿಯಾಗಿದೆ ಮಗನೇ, ನಾವು ಹೇಗಾದರೂ ಮಾತಾಡುತ್ತೇವೆ ಅದನ್ನೇಲ್ಲಾ ನೀನೇನು ಶಂಠಾ ಕೇಳಲು ಬಂದಿಯಾ ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡಿ-ಬಡಿ ಮಾಡಿದರು. ಆಗ ನಾನು ಬಿಡಿಸಲು ಹೋಗಿದ್ದಕ್ಕೆ ನನಗೂ ಸಹ ಬಾಲಪ್ಪ ಮತ್ತು ಬಾರೆಪ್ಪ ಇವರಿಬ್ಬರೂ ಕೂಡಿಕೊಂಡು ನನ್ನ ಮೈ ಕೈ ಮುಟ್ಟಿ ಸೀರೆ ಹಾಗೂ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಿ ಕಾಲಿನಿಂದ ಒದ್ದರು.  ಆಗ ಅಲ್ಲಿಯೇ ಇದ್ದ ತಾಳಕೇರಿ ಮರಿಸ್ವಾಮಿ ತಂದೆ ದುರುಗಪ್ಪ-20 ವರ್ಷ, ಕನಕಗಿರಿ ಲಿಂಗಪ್ಪ ತಂದೆ ಹುಲುಗಪ್ಪ-35 ವರ್ಷ ಇವರುಗಳು ಬಂದು ಬಡಿಯುವುದನ್ನು ಬಿಡಿಸಿಕೊಂಡರು. ನಂತರ ಬಾಲಪ್ಪನವರು ನಮಗೆ ಲೇ ಇವತ್ತು ಉಳಿದುಕೊಂಡಿದ್ದೀರಾ ಇಂದಲ್ಲಾ ನಾಳೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದರು. ನಂತರ ನನಗೆ ಆರಾಮ ಇಲ್ಲದಂತಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆದಿದ್ದು, ಈ ವಿಷಯವಾಗಿ ನಾವು ಮನೆಯವರು ಚರ್ಚಿಸಿ  ಇಂದು ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.  ಕಾರಣ ಮಾನ್ಯರು ಮೇಲ್ಕಂಡ ಬಾಲಪ್ಪ ಹಾಗೂ ಇತರೆ 3 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008