Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 15, 2016

1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 44/2016 ಕಲಂ: 279, 337, 304(ಎ) ಐ.ಪಿ.ಸಿ:
ದಿ:14-02-2016 ರಂದು ಮದ್ಯಾಹ್ನ 12-30 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಪ್ರತ್ಯಕ್ಷ ಸಾಕ್ಷಿದಾರರಾದ ಕಸ್ತೂರಪ್ಪ ಸಾ:ಹಿರೇಸೂಳಕೇರಿ ತಾಂಡಾ ಇವರ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೇ, ಇಂದು ದಿ:14-02-16 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಮ್ಮ ವೆಂಕಟೇಶ ಸಾ: ಜಾನೆಕುಂಟೆ ತಾಂಡಾ ಇಬ್ಬರೂ ಕೂಡಿ ನಮ್ಮೂರಲ್ಲಿ ಶ್ರೀ ಮಾರುತೇಶ್ವರ ಜಾತ್ರೆ ಇರುವುದರಿಂದ ನಮ್ಮ ತಾಂಡಾದಿಂದಾ ಜಿನ್ನಾಪೂರ ತಾಂಡಾಕ್ಕೆ ನಮ್ಮ ಸಂಬಂಧಿಕರಿಗೆ ಜಾತ್ರೆಗೆ ಬರಲು ಹೇಳಲು ಅಂತಾ ನಮ್ಮೂರ ಸಮೀಪದ ಕುಷ್ಟಗಿ ಹೊಸಪೇಟೆ ಎನ್.ಹೆಚ್-50 ರಸ್ತೆಯನ್ನು ದಾಟುತ್ತಿದ್ದಾಗ ಹೊಸಪೇಟೆ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ-37/ಯು-6003 ನೇದ್ದರ ಚಾಲಕ ಯಮನೂರಪ್ಪ ವಡ್ರಟ್ಟಿ ಸಾ:ಹೊಸೂರ. ಇತನು ತನ್ನ ಮೋಟಾರ ಸೈಕಲ್ ನ್ನು ಅತೀಜೋರಿನಿಂದ ಓಡಿಸಿಕೊಂಡು ಬಂದು ವೆಂಕಟೇಶನಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ವೆಂಕಟೇಶನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ಮೋಟಾರ ಸೈಕಲ್ ಚಾಲಕ ಮತ್ತು ಮೋಟಾರ ಸೈಕಲ್ ಹಿಂದೆ ಕುಳಿತು ಬಂದಿದ್ದ ನರೇಗಲ್ಲಪ್ಪ ಸಾ:ಹೊಸೂರ ಇವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ನಂತರ 108 ಅಂಬುಲೆನ್ಸ ಬಂದು ಗಾಯಗೊಂಡಿದ್ದವರಿಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಸೇರಿಕೆ ಮಾಡಿದ್ದು, ನಂತರ ವೆಂಕಟೇಶನಿಗೆ ಹೆಚ್ಚಿನ ಉಪಚಾರಕ್ಕೆ ವಿಮ್ಸ ಬಳ್ಳಾರಿಗೆ ಕರೆದುಕೊಂಡು ಹೋಗುವಾಗ ಮಧ್ಯಾಹ್ನ 12-15 ಗಂಟೆಗೆ ಕೊಪ್ಪಳ ಸಮೀಪದ ಅಭಯಸಾಲ್ವೆಂಟ್ ಹತ್ತಿರ ವೆಂಕಟೇಶನು ಮೃತಪಟ್ಟಿದ್ದು ಇರುತ್ತದೆ. ಕಾರಣ ಮೋಟಾರ ಸೈಕಲ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಮಧ್ಯಾಹ್ನ 1-30 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 44/2016. ಕಲಂ: 279,337,304[ಎ] ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 45/2016 ಕಲಂ: 279, 337, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿ-14-02-16 ರಂದು ರಾತ್ರಿ 08.30 ಗಂಟೆಗೆ ಫಿರ್ಯಾದಿದಾರರಾದ ಪ್ರೇಮಾನಂದರೆಡ್ಡಿ ಮುತ್ತಾಳ ಸಾ: ಅಳವಂಡಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿ-14.02.16 ರಂದು ಸಂಜೆ 6 ಗಂಟೆಯ ಸುಮಾರಿಗೆ ಕುಷ್ಟಗಿ-ಹೊಸಪೇಟಿ ಎನ್,.ಹೆಚ್-50 ರಸ್ತೆಯ ಚಿಲಕಮುಕ್ಕಿ - ಸೂಳಿಕೇರಿ ಕ್ರಾಸ್ ಹತ್ತಿರ ಕುಷ್ಟಗಿ ಕಡೆಗೆ ತನ್ನ ತಮ್ಮ ಗವಿಸಿದ್ದಪ್ಪ ಈತನು ತನ್ನ ಹೊಸ ಹೊಂಡಾ ಕಂಪನಿ ಗಾಡಿಯನ್ನು ನಡೆಸಿಕೊಂಡು ಹೋಗುತ್ತಿರುವಾಗ ಅದೇ ವೇಳೆಗೆ ಆತನ ಹಿಂದಿನಿಂದ ಅಂದರೆ  ಹೊಸಪೇಟಿ ಕಡೆಯಿಂದ ಕಾರ್ ನಂ-ಕೆಎ-29/ಎಂ7106 ನೇದ್ದರ ಚಾಲಕ ತನ್ನ ಕಾರನ್ನು ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ಲಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮೋ.ಸೈ ಸವಾರ ಗವಿಸಿದ್ದಪ್ಪನಿಗೆ ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಕಾರಣ ಮೋಟಾರ್ ಸೈಕಲ್ಲಿಗೆ ಅಪಘಾತ ಮಾಡಿದ ಕಾರನ್ನು ಸ್ಥಳದಲ್ಲಿ ಬಿಟ್ಟು  ಓಡಿ ಹೋದ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 46/2016 ಕಲಂ: 283, 338 ಐ.ಪಿ.ಸಿ:.
15-02-2016 ರಂದು 00-15 ಎ,ಎಮ್ ಕ್ಕೆ ಫಿರ್ಯಾದಿದಾರರಾದ ಅಂದಪ್ಪ ಸಿಹೆಚ್.ಸಿ-111 ಕೊಪ್ಪಳ ಗ್ರಾಮೀಣ ಠಾಣೆ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೇ,ನಿನ್ನೆ ದಿ:14.02.16 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಮಾನ್ಯ ಠಾಣಾಧಿಕಾರಿಯವರ ಆದೇಶದ ಪ್ರಕಾರ ನಾನು ಮತ್ತು ನಮ್ಮ ಠಾಣೆಯ ಬಸವರಾಜ ಹೋಂಗಾರ್ಡ ನಂ: 91 ಇಬ್ಬರೂ ಕೂಡಿ ಗಿಣಿಗೇರಿ ಗ್ರಾಮದಲ್ಲಿ ರಾತ್ರಿಗಸ್ತು ಕರ್ತವ್ಯ ಕುರಿತು ಠಾಣೆಯಿಂದ ನಿನ್ನೆ ದಿ:14.02.16 ರಂದು ರಾತ್ರಿ 10.30 ಗಂಟೆ ಸುಮಾರಿಗೆ ಮಾನ್ಯ ಠಾಣಾಧಿಕಾರಿಯವರ ಆದೇಶದ ಪ್ರಕಾರ ನಾನು ಮತ್ತು ನಮ್ಮ ಠಾಣೆಯ ಬಸವರಾಜ ಹೋಂಗಾರ್ಡ ನಂ: 91 ಇಬ್ಬರೂ ಕೂಡಿ ಗಿಣಿಗೇರಿ ಗ್ರಾಮದಲ್ಲಿ ರಾತ್ರಿಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಹೊರಟೆವು. ನಂತರ ನಿನ್ನೆ ರಾತ್ರಿ ನಾವು ನಮ್ಮ ಕರ್ತವ್ಯದ ಮೇಲೆ ಮೋಟಾರ್ ಸೈಕಲ್ದಲ್ಲಿ ಕೊಪ್ಪಳ-ಹೊಸಪೇಟೆ ಎನ್.ಹೆಚ್-63 ರಸ್ತೆಯಲ್ಲಿ ಹೊರಟಿರುವಾಗ, ಮಾರ್ಗದ ಹಾಲವರ್ತಿ ಕ್ರಾಸ್ ಇನ್ನು ಸುಮಾರು ಒಂದು ಫರ್ಲಾಂಗ ಅಂತರ ಇರುವಾಗ ನಮ್ಮ ಮುಂದೆ ಸ್ವಲ್ಪ ಅಂತರದಲ್ಲಿ ನಮ್ಮ ಠಾಣೆಯ ಶ್ರೀ ಕನಕಪ್ಪ. ವಗ್ಗಾ. ಎ.ಎಸ್.ಐ ರವರು ಎನ್.ಆರ್.ಸಿ ಕರ್ತವ್ಯದ ಮೇಲೆ ತಮ್ಮ ಮೋಟಾರ್ ಸೈಕಲ್ನ್ನು ನಿಧಾನವಾಗಿ ಓಡಿಸಿಕೊಂಡು ಗಿಣಿಗೇರಿ ಕಡೆ ಹೋಗುವಾಗ ರಾತ್ರಿ 11-00 ಗಂಟೆಯ ಸುಮಾರಿಗೆ ಎದುರುಗಡೆ ಹೊಸಪೇಟಿ ಕಡೆಯಿಂದ ಯಾವುದೋ ಒಂದು ಭಾರಿ ಲಾರಿ ವಾಹನ ಬಂದಿದ್ದು ಆಗ ಸೇತುವೆಯ ಹತ್ತಿರ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್ ಎ.ಎಸ್.ಐ ರವರ ಮೋಟಾರ್ ಸೈಕಲ್ಲಿಗೆ ಹಿಂಭಾಗದಲ್ಲಿ ತಗುಲಿ ಗಾಡಿ ಸಮೇತ ಬಿದ್ದರು. ಆಗ ನಾವು ನಮ್ಮ ಗಾಡಿಯನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲು ನಮ್ಮ ಎಎಸ್ಐ ರವರ ತಲೆಗೆ ಭಾರಿ ರಕ್ತಗಾಯವಾಗಿ ಕಿವಿ, ಮೂಗು, ಮತ್ತು ಬಾಯಿ ಯಿಂದ ರಕ್ತ ಬರುತ್ತಿತ್ತು, ಎಡ ಕಣ್ಣಿನ ಹತ್ತಿರ, ಎಡಗೈ ಮೊಣಕೈ ಹತ್ತಿರ ಭಾರಿ ರಕ್ತಗಾಯ ವಾಗಿರುತ್ತದೆ. ಅಲ್ಲದೇ ಬಲಗಾಲ ಪಾದದ ಮೇಲೆ ತೆರಚಿದ ರಕ್ತ ಗಾಯಗಳಾಗಿದ್ದವು. ಆಗ ಎ.ಎಸ್.ಐ ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನೋಡಲಾಗಿ ಸದರಿ ಎ.ಎಸ್.ಐ ರವರ ಮೋಟಾರ್ ಸೈಕಲ್ಲ ನಂ:ಕೆಎ-37/ಕ್ಯೂ-7337 ಅಂತಾ ಇದ್ದು, ಅಲ್ಲಲ್ಲಿ ಡ್ಯಾಮೇಜ್ ಆಗಿತ್ತು. ನಂತರ ಟ್ರೇಲರ್ ಕಡೆಗೆ ಬಂದು ನೋಡಲು ಯಾರು ಕಾಣಲಿಲ್ಲ. ಟ್ರೇಲರ್ ನಂಬರ್ ನೋಡಲು ಅದಕ್ಕೆ ನಂಬರ ಬರೆಸಿರುವದಿಲ್ಲಾ. ಅಲ್ಲದೇ ಅದಕ್ಕೆ ಚೆಸ್ಸಿ ನಂಬರ್ ಕೂಡಾ ಇರುವದಿಲ್ಲಾ, ಸದರಿ ಟ್ರೇಲರ್ ನೀಲಿ ಮತ್ತು ಹಳದಿ ಬಣ್ಣದ್ದು ಇದ್ದು, ಹಿಂದೆ ಕದ್ರಳ್ಳಿ ಬ್ರದರ್ಸ ಅಂತಾ ಬರೆದಿದ್ದು, ಅಲ್ಲದೇ ಟ್ರೇಲರ್ ಬಲಭಾಗದಲ್ಲಿ ಖಾದ್ರಿಯಾ ಟ್ರೇಲರ್ಸ್. ನಂ: 9900596071 ಅಂತಾ ಹಾಗೂ ಈರಣ್ಣ ದೊಡ್ಡಮನಿ ಅಂತಾ ಹೆಸರು ಮತ್ತು ಮೊಬೈಲ್ ನಂ: 7353834225 ಅಂತಾ ಹಾಗೂ ಅದರ ಕೆಳಗಡೆ ಇನ್ನೊಂದು ಮೊ ನಂ: 809597117 ಶರಣಪ್ಪ ಅಂತಾ ಬರೆಯಲಾಗಿದೆ. ವಾಹನದ ಮುಂಭಾಗದಲ್ಲಿ ಶುಭ-ಲಾಭ ಮತ್ತು ಶ್ರೀ ಮಾರುತೇಶ್ವರ ಪ್ರಸನ್ನ, ಶ್ರೀ ಹುಲಿಗೆಮ್ಮ ದೇವಿ ಕೃಪ, ಕೃಷ್ಣ, ಪ್ರವೀಣ, ಹನಮಂತ ಅಂತಾ ಬರೆಯಲಾಗಿದೆ. ಸದರ ಟ್ರೇಲರದಲ್ಲಿ ಮರಳಿನ ಲೋಡ್ ತುಂಬಿದ್ದು ಸದರಿ ಟ್ರೆಲರ್ ಚಾಲಕನು ರಸ್ತೆಯಲ್ಲಿ ಹೋಗಿ ಬರುವ ವಾಹನಗಳಿಗೆ ಯಾವುದೇ ಸಂಚಾರ ಸೂಚನೆಗಳನ್ನು ನೀಡದೇ, ರಿಫ್ಲೆಕ್ಟರ್ಗಳನ್ನು ಅಳವಡಿಸದೇ, ಪಾರ್ಕಿಂಗ್ ಲೈಟ್ ಹಾಕದೇ ಅಪಾಯಕರವಾಗುವ ರೀತಿಯಲ್ಲಿ ಟ್ರೇಲರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ರಸ್ತೆ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ ನಿರ್ಲಕ್ಷತನ ವಹಿಸಿದ್ದರಿಂದ ಎ.ಎಸ್.ಐ ರವರ ಮೋಟಾರ್ ಸೈಕಲ್ಗೆ ಟ್ರೇಲರ್ ತಗುಲಿ ಈ ಅನಾಹುತ ಸಂಭವಿಸಿರುತ್ತದೆ. ಸದರಿ ಅಪಘಾತದಲ್ಲಿ ತೀವ್ರ ಗಾಯಗೊಂಡ ಕನಕಪ್ಪ ಎ.ಎಸ್.ಐ ರವರಿಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ದಲ್ಲಿ ಕರೆದುಕೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಸಿರುತ್ತೇವೆ. ಕಾರಣ ಸದರಿ ಟ್ರೇಲರ್ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ  ತನಿಖೆ ಕೈಗೊಂಡಿದ್ದು ಅದೆ.
4)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 43/2016 ಕಲಂ: 279, 337 ಐ.ಪಿ.ಸಿ
ದಿನಾಂಕ. 14-02-2016 ರಂದು 5-30 ಪಿ.ಎಂ.ಕ್ಕೆ ಪಿರ್ಯಾದಿದಾರರು ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಪಕ್ಕದಲ್ಲಿ ಕರಡಿ ಸಂಗಣ್ಣ ಇವರ ಹೊಲದ ಹತ್ತಿರ ಮೋಟಾರ ಸೈಕಲ್ ನಂ. ಕೆ.ಎ.37/ಕೆ.1492 ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಕುಷ್ಟಗಿ ಕಡೆಯಿಂದ ಕ್ಯಾಂಟರ ಲಾರಿ ನಂ. ಎಂ.ಹೆಚ್.12/ಎಲ್.ಟಿ.9912 ನೇದ್ದರ ಚಾಲಕ ಲಾರಿಯನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋ.ಸೈ. ಡಿಕ್ಕಿ ಕೊಟ್ಟು ರಸ್ತೆ ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲು ಬಂಡೆಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಲಾರಿ ಚಾಲಕ ಬಾಪು ಜಾಕ್ತಾಬ ಇವರಿಗೆ ಬಲಗಾಲ ಪಾದಕ್ಕೆ ಗಾಯವಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 73/2016 ಕಲಂ: 279, 338 ಐಪಿಸಿ 
ದಿನಾಂಕ 13-02-2016 ರಂದು ಸಂಜೆ 6-45 ಗಂಟೆಗೆ ಸರಕಾರಿ ಆಸ್ಪತ್ರೆ ಗಂಗಾವತಿಯಿಂದ ಮಹಾಂತೇಶ ತಂದೆ ಚನ್ನಬಸಪ್ಪ ಗೌಡ್ರ ಸಾ : ಎಸ್.ಕೆ. ಲಿಂಗದಳ್ಳಿ ಈತನು ರಸ್ತೆ ಅಪಘಾತವಾಗಿ ಗಾಯಹೊಂದಿ ಇಲಾಜು ಕುರಿತು ಸರಕಾರಿ ಆಸ್ಪತ್ರೆ ಗಂಗಾವತಿಯಲ್ಲಿ ಸೇರಿಕೆಯಾಗಿರುತ್ತಾನೆ ಅಂತಾ ಎಂ.ಎಲ್.ಸಿ. ಬಂದ ಮೇರೆಗೆ ಎ.ಎಸ್.ಐ. ಶ್ರೀ ಯಲ್ಲಪ್ಪ ರವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಸದ್ರಿಯವರು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಇಲಾಜು ಪಡೆಯುತ್ತಿದ್ದ ಮಹಾಂತೇಶ ಈತನು ಪ್ರಜ್ಞಾಹೀನನಾಗಿದ್ದರಿಂದ ಪ್ರತ್ಯೇಕ್ಷ ಸಾಕ್ಷಿ ಯಮನೂರಪ್ಪ ತಂದೆ ಕಲ್ಲಪ್ಪ ಕಣಗಾರ ಸಾ : ಗೌರಿಪುರ ಇತನು ಕೊಟ್ಟ ಫಿರ್ಯಾಧಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಇಂದು ದಿನಾಂಕ 14-02-2016 ರಂದು ಮದ್ಯರಾತ್ರಿ 2-30 ಗಂಟೆಗೆ ಬಂದಿದ್ದು, ಸದ್ರಿ ಫಿರ್ಯಾಧಿಯ ಸಾರಾಂಸವೇನೆಂದರೆ, ತಮ್ಮ ಗ್ರಾಮದ (ಗೌರಿಪುರ) ಕನಕಪ್ಪ ಬೆಳಗೌಡ್ರ, ದ್ಯಾಮಣ್ಣ ಕೆರಿಕೋಡಿ ಇವರು ಈಗ್ಗೆ ಸುಮಾರು 2 ತಿಂಗಳದ ಹಿಂದೆ ಹಮಾಲಿ ಕೆಲಸ ಮಾಡಲು ಸುರಪುರ ತಾಲೂಕಿನ ಹುಣಸಗಿ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಹಮಾಲಿ ಕೆಲಸ ಮುಗಿಸಿಕೊಂಡು ದಿನಾಂಕ  13-02-2016 ರಂದು ಒಂದು ಅಪೇ ಅಟೋ ರೀಕ್ಷಾ ನಂ.ಕೆಎ-33/ಎ-4082 ನೇದ್ದರಲ್ಲಿ ಭತ್ತದ ಚೀಲವನ್ನು ಏರಿಕೊಂಡು ಗೌರಿಪುರ ಗ್ರಾಮದ ಕನಕಪ್ಪ, ದ್ಯಾಮಣ್ಣ ಇವರ ಮನೆಯಲ್ಲಿ ಇಳಿಸಿದ್ದು, ಚಾಲಕನಿಗೆ ಸುರಪುರ ಕಡೆ ಹೋಗಲು ದಾರಿ ಗೊತ್ತಾಗದಿದ್ದರಿಂದ ದಾರಿ ತೋರಿಸುವಂತೆ ಕನಕಪ್ಪ ಬೆಳಗೌಡ್ರ, ದ್ಯಾಮಣ್ಣ ಕೆರಿಕೋಡಿ ಇವರಿಗೆ ತಿಳಿಸಿದ್ದರಿಂದ ಸದರಿಯವರು ತಮ್ಮ ಮೋಟಾರ ಸೈಕಲ್ ತೆಗೆದುಕೊಂಡು ಗೌರಿಪುರ ದಿಂದ ಹುಲಿಹೈದರ ಕಡೆ ಮುಂದೆ ಮುಂದೆ ಹೋಗುತ್ತಿದ್ದರು. ಅವರ ಹಿಂದೆ ಚಾಲಕ ಮಹಾಂತೇಶ ಈತನು ತನ್ನ ಅಟೋ ರೀಕ್ಷಾ ನಂ.ಕೆಎ-33/ಎ-4082 ನೇದ್ದನ್ನು ಖಾಲಿ ಅಟೋ ವನ್ನು ತೆಗೆದುಕೊಂಡು ಗೌರಿಪುರ-ಹುಲಿಹೈದರ ರಸ್ತೆಯ ಮೇಲೆ ಹೋಗುತ್ತಾ ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಚಾಲಕ ಮಹಾಂತೇಶನು ತನ್ನ ಅಟೋ ರೀಕ್ಷಾವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸುತ್ತಾ ಲಾಯದುಣಸಿ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಪೈಪು ಲೈನ್ ಕಡಿದು ಮಣ್ಣನು ಮುಚ್ಚಿದ ತೆಗ್ಗು ಇರುವದನ್ನು ಗಮನಿಸದೇ ಮಹಾಂತೇಶನು ತನ್ನ ಅಟೋ ರೀಕ್ಷಾವನ್ನು ನಿಯಂತ್ರಣ ಮಾಡಲಾಗದೇ ಸದರಿ ತೆಗ್ಗಿಗೆ ಅಟೋವನ್ನು ಹಾಕಿ ಬಲಗಡೆ ಪಲ್ಟಿ ಮಾಡಿ ಕೆಡವಿದ್ದು, ಇದರಿಂದ ಚಾಲಕ ಮಹಾಂತೇಶನಿಗೆ ಬಲಗಡೆ ಪಕ್ಕಡಿಗೆ, ಬಲಗಡೆ ತಲೆಗೆ ಭಾರಿ ಪೆಟ್ಟಾಗಿದ್ದು, ಬಲಗೈ ಮೊಣಕೈ, ಬಲಗಾಲಗೆ ಒಳ ಪೆಟ್ಟಾಗಿದ್ದು, ಕೂಡಲೇ ಫಿರ್ಯಾಧಿ ಹಾಗೂ ಮುಂದೆ-ಮುಂದೆ ಹೋಗುತ್ತಿದ್ದ ಕನಕಪ್ಪ, ದ್ಯಾಮಣ್ಣ ಕೂಡಿಕೊಂಡು 108 ಅಂಬುಲೆನ್ಸ್ ವಾಹನದಲ್ಲಿ ನೇರವಾಗಿ ಗಂಗಾವತಿ ಸರಕಾರಿ ಅಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008