Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 3, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 51/2016 ಕಲಂ: 341, 323, 504 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಎಸಿ/ಎಸ್.ಟಿ. ಪಿ.ಎ. ಕಾಯ್ದೆ 1989

02-02-2016 ರಂದು ಮಧ್ಯಾಹ್ನ 1:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಂಜಿನಿಗೌಡ ತಂದೆ ಬಸನಗೌಡ, ವಯಸ್ಸು 42  ವರ್ಷ, ಜಾತಿ: ನಾಯಕ ಸಾ: ಮಲ್ಲಾಪೂರು ತಾ: ಗಂಗಾವತಿ. ಇವರು  ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ದಿನಾಂಕ:- 01-02-2016 ರಂದು ಮಾನ್ಯ ತಹಶೀಲ್ದಾರರಿಗೆ ಶ್ರೀ ಹನುಮನಗೌಡ ತಂದೆ ಮುದುಕನಗೌಡ ನಾಯಕ ಸಾ: ಮಲ್ಲಾಪೂರು ಇವರು ದಿನಾಂಕ:- 12-04-2015 ರಂದು ಗಂಗಾವತಿ ತಾಲೂಕಿನಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರದ ಹಂಚಿಕೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಧ ದೊಡ್ಡಬಸಪ್ಪನವರು ಅಕ್ರಮವೆಸಗಿದ್ದಾರೆ ಎಂದು ದೂರು ನೀಡಿರುತ್ತಾರೆ.  ಈ ಸುದ್ದಿ ತಿಳಿದ ಸದರಿ ಗ್ರಾಮ ಲೆಕ್ಕಾಧಿಕಾರಿಗಳು ಆನೇಗುಂದಿ ಗ್ರಾಮದ ಕಡೆ ತೆರಳುತ್ತಿದ್ದರು. ಗಂಗಾವತಿಗೆ ಆಗಮಿಸುತ್ತಿದ್ದ ನನ್ನನ್ನು ಸಂಗಾಪೂರು ಗ್ರಾಮದ ಹತ್ತಿರವಿರುವ ಮಲ್ಲಾಪೂರು ಕ್ರಾಸ್ ಬಳಿ ಅಡ್ಡಗಟ್ಟಿ "ಲೇ ಮಗನೇ ಅಂಜಿನಿಗೌಡ ನಿಮ್ಮವ್ವನ ನಾಯಕರ ಸೂಳೇ ಮಗನೇ ಲೇ ನನ್ನ ಮೇಲೆ ನಿಮ್ಮ ಜಾತಿಯವರಾದ ಹನುಮನಗೌಡ  ಮತ್ತು ಅಮರೇಶ ನಾಯಕ ಹಾಗೂ ಆರ್.ಕೆ. ಗಂಗಾಧರ ಅವರ ಕೈಲಿ ಕೇಸು ಮಾಡಿಸಿದೆಯಲ್ಲಾ ಇವತ್ತು ಸಾಯಂಕಾಲದ ಒಳಗಡೆ ನಿಮ್ಮ ಮೇಲೆ ಕೇಸ್ ಮಾಡಿಸುತ್ತೀನಿ ಏನು ಕಿತ್ತುಕೊಳ್ಳುತ್ತೀರಿ ನೊಡುತ್ತೀನಿ ಬೋಸುಡಿ ಮಕ್ಕಳ" ಎಂದು ಬೈದು ಅಲ್ಲಿಗೆ ಬಂದ ಪ್ರಭಾರ ಕಂದಾಯ ನಿರೀಕ್ಷಕರಾದ ಮಂಜುನಾಥ ರವರ ಒಡಗೂಡಿ ನನ್ನನ್ನು ಎಳೆದಾಡಿದರೂ ಅಲ್ಲದೇ ಆ ಸೂಳೇ ಮಗ ಅಮರೇಶ ನಾಯಕ ನಮ್ಮ ತಪ್ಪುಗಳನ್ನು ಹೊರಗೆ ಹಾಕಿದ್ದೇ ಆದಲ್ಲಿ ಅವನ ಮೇಲೆ ಕೂಡ ಕೇಸು ಮಾಡಿ ಅವನ ರಾಜಕೀಯ ಜೀವನ ಮತ್ತು ಭವಿಷ್ಯವನ್ನು ಹಾಳು ಮಾಡುತ್ತೇವೆ ಇಲ್ಲವಾದಲ್ಲಿ ನಮ್ಮ ಮೇಲೆ ತಹಶೀಲ್ದಾರರಿಗೆ ನೀಡಿದ ದೂರನ್ನು ವಾಪಸ್ ಪಡೆಯಬೇಕು ಎಂದು ಕಾಲ್ಕಿತ್ತು. ಅಲ್ಲದೇ ಇದ್ದ ಮಹೇಶಕುಮಾರ. ಬಿ.ಎನ್ ಮತ್ತು ಶ್ರೀಧರ , ಪಂಪಾಪತಿ ಇವರು ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ.  ಘಟನೆಯು ಸಂಜೆ 4:00 ಗಂಟೆಯ ಸುಮಾರಿಗೆ ಜರುಗಿದೆ. ಕಾರಣ ನನ್ನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರ ಮೇಲೆ ಅಟ್ರಾಸಿಟಿ ಕೇಸನ್ನು ದಾಖಲು ವಿನಂತಿ" ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.                                                  

2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 35/2016 ಕಲಂ: 379 ಐ.ಪಿ.ಸಿ:.  

ದಿನಾಂಕ 19-01-2016 ರಂದು ಪಿರ್ಯಾದಿದಾರರು ಲಾರಿ ನಂ ಟಿ.ಎನ್.28/ಎ.ಇ.5873 ನೇದ್ದರಲ್ಲಿ ಗುಜಾರತಿನ ಅಂಗ್ಲೇಶ್ವರದಿಂದ 559 ಮೆಡಿಸಿನ್ ಬಾಕ್ಷ್ ಗಳನ್ನು ಲೋಡ ಮಾಡೊಕೊಂಡು ತಮಿಳುನಾಡಿಗೆ ಹೋಗುತ್ತಿರುವಾಗ ದಿನಾಂಕ 21-01-2016 ರಂದು ಬೆಳಗಿನ ಜಾವ 04-00 ಗಂಟೆಯಿಂದ 05-00 ಗಂಟೆ ಅವದಿಯೊಳಗೆ ಕುಷ್ಟಗಿ-ಹೊಸಪೇಟೆ ಎನ್ ಹೆಚ್ 13 ರಸ್ತೆಯ ಮೇಲೆ ಹೊಸಪೇಟೆ ಕಡೆಗೆ ಬುತ್ತಿರುವಾಗ ಯಾರೋ ಕಳ್ಳರು ಲಾರಿಯ ಮೇಲ್ಚಾವಣೆಯ ತಾಡಪಲ್ ಹರಿದು ಲಾರಿಯಲ್ಲದ್ದ 2,64,600-00 ರೂ ಕಿಮ್ಮತ್ತಿನ 49 ಮೆಡಿಸಿನ್ ಬಾಕ್ಷ್ ಗಳನ್ನು ಕಳ್ಳತನ ಮಾಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ: 379  ಐ.ಪಿ.ಸಿ ಮತ್ತು 104 ಕೆ.ಎಫ್. ಕಾಯ್ದೆ:
09 ಜನ ಆರೋಪಿತರು ಕೂಡಿಕೊಂಡು ದಿನಾಂಕ: 02-02-2016 ರಂದು ಮುಂಜಾನೆ 07-00 ಗಂಟೆ ಸುಮಾರಿಗೆ ಕಲ್ಲೂರು ಸೀಮಾದಲ್ಲಿ ಬರುವ ಅಶೋಕಪ್ಪ ಹಂಚಿನಾರ ಇವರ ಹೊಲದ ಹತ್ತಿರ ಇರುವ ಶ್ರೀಗಂಧದ ಗಿಡವನ್ನು ಕಡಿದು ಅದರಲ್ಲಿ 07 ಕೆ.ಜಿ ಅಂ.ಕಿ 14,000/- ಬೆಲೆ ಬಾಳುವ ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಒಂದು ಹಳದಿ ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ಕುರಿತು ಗದಗ ಕಡೆಗೆ ಹೋಗುವ ಸಲುವಾಗಿ ಕೊಪ್ಪಳ ಕಡೆಯಿಂದ ಯಲಬುರ್ಗಾಕ್ಕೆ ಬರುವ ರಸ್ತೆ ಮೇಲೆ ಸದರಿ ಆರೋಪಿತರೆಲ್ಲರೂ ನಡೆದುಕೊಂಡು ಬರುತ್ತಿರುವಾಗ ಸಾಯಾಂಕಾಲ 5-45 ಗಂಟೆ ಸುಮಾರಿಗೆ ಯಲಬುರ್ಗಾ ತಹಶೀಲ್ ಕಾರ್ಯಾಲಯದ ಮುಂದೆ ಆರೋಪಿ ನಂ 01 ಮತ್ತು 02 ಸಿಕ್ಕಿಬಿದ್ದಿದ್ದು ಆರೋಪಿ ನಂ 03 ರಿಂದ 09 ನೇದ್ದವರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿಬಿದ್ದ  ಆರೋಪಿತರಿಂದ 07 ಕೆ.ಜಿ ಅಂ.ಕಿ 14,000/- ಬೆಲೆ ಬಾಳುವ ಶ್ರೀಗಂಧದ ಸಣ್ಣ ಸಣ್ಣ ತುಂಡುಗಳನ್ನು ಮತ್ತು ಗುನ್ನೆಗೆ ಉಪಯೋಗಿಸಿದ ಒಂದು ಕೊಡಲಿಯನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ  ವಿವರವಾದ ಜಪ್ತಿ ಪಂಚನಾಮೆಯನ್ನು ತಯಾರಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
 4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 34/2016 ಕಲಂ: 78(3) Karnataka Police Act.
ದಿನಾಂಕ: 02-02-2016 ರಂದು 2300 ಗಂಟೆಗೆ ಶ್ರೀ ಇ. ಕಾಳಿಕೃಷ್ಣ,  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಹಾಗೂ ಮುದ್ದೇಮಾಲನ್ನು ಮೂಲ ಪಂಚನಾಮೆಯೊಂದಿಗೆ ಹಾಜರುಪಡಿಸಿ ಅವರ ಮೇಲೆ ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 02-02-2016 ರಂದು 1930 ಗಂಟೆಗೆ ಠಾಣೆಯಲ್ಲಿದ್ದಾಗ ಮಟ್ಕಾ ಜೂಜಾಟದ ಬಗ್ಗೆ ಬಾತ್ಮಿ ಬಂದಿದ್ದು, ಎನ್.ಸಿ. ಸ್ವರೂಪದ ಪ್ರಕರಣವನ್ನು ದಾಖಲು ಮಾಡಬೇಕಾಗುವುದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ರಾತ್ರಿ 10-00 ಗಂಟೆಗೆ ಆರೋಪಿತರಾದ (1) ಗಣೇಶ ತಂದೆ ನಾಗಪ್ಪ, ವಯಸ್ಸು 45 ವರ್ಷ, ಜಾ: ನೇಕಾರ, ಸಾ: ಹೊಸಳ್ಳಿ ರೋಡ್, ಲಿಟಲ್ ಹಾರ್ಟ ಸ್ಕೂಲ್ ಹತ್ತಿರ, ಗಂಗಾವತಿ (2) ಶಿವರಾಜ ತಂದೆ ಈರಣ್ಣ, ವಯಸ್ಸು 35 ವರ್ಷ, ಜಾ: ನೇಕಾರ,  ಸಾ: ಆಂಜನೇಯ ಗುಡಿ ಹತ್ತಿರ, ಜುಲೈನಗರ, ಗಂಗಾವತಿ ಇವರು ಗಂಗಾವತಿ ನಗರದ ಎ.ಪಿ.ಎಂ.ಸಿ. ಮೂರನೇ ಗೇಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಅವರನ್ನು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಪಂಚನಾಮೆಯನ್ನು ಬರೆದುಕೊಂಡಿದ್ದು, ಅವರಿಂದ 01] ಮಟಕಾ ಜೂಜಾಟದ ಹಣ ನಗದು ಹಣ 1,500-00,  02] 02 ಮಟಕಾ ನಂಬರ ಬರೆದ ಚೀಟಿ ಅಂ.ಕಿ 00-00, 03] 02 ಬಾಲ್ ಪೆನ್  ಅಂ.ಕಿ 00-00, 04] ಒಂದು ಸ್ಯಾಮಸಂಗ್ ಮೊಬೈಲ್ ಅಂ.ಕಿ. ರೂ. 500-00 ಇವುಗಳನ್ನು ವಶಪಡಿಸಿಕೊಂಡಿದೆ ಅಂತಾ ಮುಂತಾಗಿ ವರದಿ ನೀಡಿದ್ದು, ಆರೋಪಿತಮೇಲೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 26/2016 ಕಲಂ: 279, 337, 338 ಐ.ಪಿ.ಸಿ:.
ಇಂದು ದಿ:02.02.16 ರಂದು 8.45 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಕರಿಯಪ್ಪ ಆದೋನಿ, ಸಾ: ಕುಟಗನಹಳ್ಳಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೇ, ದಿ:02.02.2016 ರಂದು ಸಂಜೆ 06.00 ಗಂಟೆ ಸುಮಾರಿಗೆ ಗಿಣಗೇರಿ-ಕೊಪ್ಪಳ ರಸ್ತೆಯಲ್ಲಿ ಫಿರ್ಯಾದಿ ತಮ್ಮ ರವಿಕುಮಾರ ಈತನು ತನ್ನ ಬಜಾಜ ಡಿಸ್ಕವರಿ ಮೋ.ಸೈ ನಂ-ಕೆ.ಎ-37-ಎಕ್ಸ್-5020 ನೇದ್ದರಲ್ಲಿ ಗಿಣಗೇರಿಯಿಂದ ತಮ್ಮ ಊರಿಗೆ ಹೊರಟಾಗ ಗಿಣಗೇರಿ-ಕೊಪ್ಪಳ ರಸ್ತೆಯ ಕರಿಯಪ್ಪ ಮೇಟಿ ರವರ ಹೊಲದ ಹತ್ತಿರ ಎದುರುಗಡೆಯಿಂದ ಹೊಂಡಾ ಮೊ.ಸೈ ಚೆಸ್ಸಿ ನಂ- MBLHA11ATF9J46007 ನೇದ್ದರ ಚಾಲಕ ಅಮರೇಶ ಚಿಲಕಮುಕ್ಕಿ ಈತ ತನ್ನ ಮೋಟಾರ ಸೈಕಲ್ ನ್ನು ಮಾನವ ಜೀವಕ್ಕೆ ಅಪಾಯ ವಾಗುವ ರೀತಿಯಲ್ಲಿ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಫಿರ್ಯಾದಿ ತಮ್ಮನ ಮೊ.ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ರವಿಕುಮಾರ ಈತನಿಗೆ ಭಾರಿ ಮತ್ತು ಅಪಘಾತ ಮಾಡಿದ ಮೋಟಾರ ಸೈಕಲ್ ಸವಾರ ಮತ್ತು ಈತನ ಹಾಡಿ ಹಿಂದೆ ಕುಳಿತಿದ್ದ ಶರಣಪ್ಪ ಉಡಮಕಲ್ಲ ಈತನಿಗೆ ಸಾದಾ ಸ್ವರೂಪದ ಗಾಯ ಹಾಗೂ ಪೆಟ್ಟುಗಳಾಗಿದ್ದು, ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ಸವಾರ ಅಮರೇಶ ಚಿಲಕಮುಕ್ಕಿ ಸಾ: ಕೆರೆಹಳ್ಳಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
6) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 08/2016 ಕಲಂ: 279, 338, 304(ಎ) ಐ.ಪಿ.ಸಿ:.

ದಿನಾಂಕ. 02-02-2016 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮನಗೌಡ ತಂದೆ ಈಶ್ವರಗೌಡ ನಂದಿಗೌಡರ ವಯ. 51 ಜಾತಿ. ಹಿಂದೂ ರೆಡ್ಡಿ ಸಾ. ಡಂಬ್ರಹಳ್ಳಿ ತಾ.ಜಿ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 02-02-2016 ರಂದು ರಾತ್ರಿ 10-15 ಗಂಟೆಗೆ ಫಿರ್ಯಾದಿ ತಮ್ಮ ಮೋಟಾರ್ ಸೈಕಲ್ ಹಿಂದೆ ವಸಂತಗೌಡ ಇವರನ್ನು ಕೂಡಿಸಿಕೊಂಡು ಮತ್ತು ಸುರೇಂದ್ರಗೌಡ ಇವರು ತಮ್ಮ ಮೋಟಾರ್ ಸೈಕಲ್ ನಂ. KA-37/Q-8313 ನೇದ್ದರ ಹಿಂದೆ ಮೃತ ಸಿದ್ದನಗೌಡ ಇತನನ್ನು ಕೂಡಿಸಿಕೊಂಡು ಹಿಟ್ನಾಳ ಗ್ರಾಮದಿಂದ ಕೊಪ್ಪಳಕ್ಕೆ ಬಂದು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಮಾರುತಿ ಸುಜಕಿ ಶೋರೂಂ ಸಮೀಪ ಸುರೇಂದ್ರಗೌಡ ಇತನು ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಫಿರ್ಯಾದಿಯ ಮುಂದೆ ಕೊಪ್ಪಳದ ಕಡೆಗೆ ಬರುತ್ತಿರುವಾಗ ಕೊಪ್ಪಳದ ಕಡೆಯಿಂದ ಲಾರಿ ನಂಬರ. KA-34A-8468 ನೇದ್ದರ ಚಾಲಕನು ಲಾರಿ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುರೇಂದ್ರಗೌಡ ಇತನ ಮೋಟಾರ್ ಸೈಕಲ್ ಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಸುರೇಂದ್ರಗೌಡ ಇತನ ಬಲಕಾಲ ಮೋಣಕಾಲ ಕೆಳಗೆ ಬಾರಿ ಒಳಪೆಟ್ಟು ಮತ್ತು ತಲೆಯ ಹಿಂದೆ ರಕ್ತಗಾಯವಾಗಿತ್ತು. ಮೋಟಾರ್ ಸೈಕಲ್ ಹಿಂದೆ ಕುಳಿತ ಸಿದ್ದನಗೌಡ ಇತನಿಗೆ ತಲೆಯ ಮೇಲೆ, ಕಾಲಿನ ಮೇಲೆ ಲಾರಿಯ ಗಾಲಿ ಹಾಯ್ದು ತಲೆ ಒಡೆದು ಮಾಂಸಖಂಡ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆಯ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008