ದಿನಾಂಕ: 27-02-2016 ರಂದು ಮಧ್ಯಾಹ್ನ 3-15
ಪಿ.ಎಂ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಫಿರ್ಯಾದಿ ಶ್ರೀಮತಿ ಶಿಲ್ಪಾ ಸಂಗಮದವರ ಇವಳಿಗೆ ಹೇಳಿಕೆ
ಫಿರ್ಯಾದಿ ಪಡೆದುಕೊಂಡು ಬಂದಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿ: 27-02-2016 ರಂದು
ಮುಂಜಾನೆ 10-30 ಗಂಟೆಗೆ ಕೊಪ್ಪಳ ಶ್ರೀ ಶೈಲ ನಗರದ ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ನಮ್ಮ ಮಾವ
ಹುಚ್ಚಪ್ಪನು ನನಗೆ ಲೇ ಬೊಸುಡಿ ನೀನು ನನ್ನ ಮಗ ಬಾಲಚಂದ್ರನ ತಲೆ ಕೆಡಿಸಿ ಅವನಿಂದ ನನಗೆ ಹಣ ಕೊಡದ
ಹಾಗೆ ಮಾಡಿರುವ ನಿನಗೆ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಾ ತನ್ನ ಕೈಯಲ್ಲಿದ್ದ
ಮಚ್ಚನ್ನು ತೆಗೆದುಕೊಂಡು ನನಗೆ ಹೊಡೆಯಲು ಬಂಗಾಗ ನಾನು ತಪ್ಪಿಸಿಕೊಂಡು ಹೋಡಿ ಹೋಗಲು ನಮ್ಮ ಮನೆಯ
ಬಾಜು ರವಿ ಇವರ ಮನೆಯ ಮುಂದೆ ಕಲ್ಲು ಎಡವಿ ಕೆಳಗೆ ಬಿದ್ದಾಗ ನಮ್ಮ ಮಾವ ಮಚ್ಚಿನಿಂದ ನನ್ನ ಬಲ
ಕುತ್ತಿಗೆ ಮತ್ತು ಬಲ ಭುಜದ ಹತ್ತಿರ ಮೂರು ನಾಲ್ಕು ಸಾರಿ ಹೊಡೆದಿದ್ದು ನಾನು ನನ್ನ ಕೈಯನ್ನು
ಅಡ್ಡಹಿಡಿದು ನನ್ನ ಕೈ ಬೆರಳಿಗೆ ರಕ್ತ ಗಾಯವಾಗಿ ನನ್ನ ಕೊರಳು ಕುತ್ತಿಗೆ ಹತ್ತಿರ ತೀವ್ರ
ಒಳಪೆಟ್ಟಾಗಿರುತ್ತದೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಜನರ ಮುಂದೆ ಈ ರೀತಿ ಹಲ್ಲೆ ಮಾಡಿ
ಅವಮಾನಪಡಿಸಿದ್ದು ಇರುತ್ತದೆ. ನಂತರ ನನ್ನ ಮೈದುನ ನನಗೆ ಆಸ್ಪತ್ರೆಗೆ ಸೇರಿಸಿದ್ದು ಈಗ ನಾನು
ಚಿಕಿತ್ಸೆ ಪಡೆಯುತ್ತಿರುತ್ತೇನೆ ಕಾರಣ ನನ್ನ ಮೇಲೆ ಕಬ್ಬಿಣದ ಮಚ್ಚಿನಿಂದ ಹಲ್ಲೆ ಮಾಡಿ ರಕ್ತ ಗಾಯ
ಮಾಡಿದ ಹುಚ್ಚಪ್ಪ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಿನಂತಿ ಸಲ್ಲಿಸಿದ ದೂರಿನ ಮೇಲಿಂದ
ಪ್ರಕರಣ ದಾಖಲಿಸಿದ್ದು ಅದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 46/2016 ಕಲಂ: ಮನುಷ್ಯ ಕಾಣೆ :.
ದಿನಾಂಕ 27-02-2016 ರಂದು 17-00
ಗಂಟೆಗೆ. ಬಸವರಾಜ ತಂದೆ ಅಯ್ಯನಗೌಡ ಹಡ್ಲಿಗಿ, ವಯಸ್ಸು 22 ವರ್ಷ, ಜಾತಿ: ಲಿಂಗಾಯತ, ಉ: ವಿದ್ಯಾರ್ಥಿ , ಸಾ: ಕುಂಟೋಜಿ, ತಾ: ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,
ಫಿರ್ಯಾದಿದಾರರ ತಮ್ಮನಾದ ಕೀರ್ತಿ ಕುಮಾರ ತಂದೆ ಅಯ್ಯನಗೌಡ ಹಡ್ಲಿಗಿ, ವಯಸ್ಸು 19 ವರ್ಷ, ಜಾತಿ: ಲಿಂಗಾಯತ, ಉ: ವಿದ್ಯಾರ್ಥಿ, ಸಾ: ಕುಂಟೋಜಿ, ತಾ: ಗಂಗಾವತಿ ಇತನು ಗಂಗಾವತಿಯ ಶ್ರೀ
ಸಾಯಿಬಾಬಾ ಐಟಿಯ ಕಾಲೇಜಿನಲ್ಲಿ ಐ.ಟಿ.ಐ. ಮೊದಲನೆಯ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸದರಿಯವನು ದಿನಾಂಕ: 17-02-2016 ರಂದು ಮುಂಜಾನೆ ಕುಂಟೋಜಿಯಿಂದ
ಗಂಗಾವತಿಯಲ್ಲಿರುವ ಕಾಲೇಜಿಗೆ ಬಂದಿದ್ದು ನಂತರ ಮುಂಜಾನೆ
11-00 ಗಂಟೆಗೆ ಹೆಚ್.ಅರ್.ಜಿ.
ಇವರ ಮನೆಯ ಹತ್ತಿರ ಕ್ರಾಸಿನಲ್ಲಿ ಫಿರ್ಯಾದಿಯನ್ನು ಕಂಡಾಗ ವಾಪಸ್ಸು ಮನೆಗೆ ಹೋಗುವುದಾಗಿ ಹೇಳಿ ಮನೆಗೆ ಹೋಗದೆ ಕಾಣೆಯಾಗಿರುತ್ತಾನೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment