ದಿನಾಂಕ 28-02-2016 ರಂದು ಸಂಜೆ 6-45 ಗಂಟೆಗೆ
ಶ್ರೀ ಉದಯರವಿ ಪಿ.ಎಸ್.ಐ ಕನಕಗಿರಿ ಪೊಲೀಸ್ ಠಾಣೆ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ
ವಾಪಸ್ ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ,
ಇಂದು ದಿನಾಂಕ 28-02-2016 ರಂದು ಸಂಜೆ 5-00 ಗಂಟೆಯಿಂದ 6-15 ಗಂಟೆಯವರೆಗೆ ಮಲಕನಮರಡಿ ಸೀಮಾದ ರುದ್ರಪ್ಪ
ಗಂಗಾವತಿ ಇವರ ಹೊಲದ ಪಕ್ಕದಲ್ಲಿರುವ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಾಣಿಸಿದ ಆರೋಪಿತರು
ದುಂಡಾಗಿ ಕುಳಿತುಕೊಂಡು ದೈವಲಿಲೇ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು, ಅದರಲ್ಲಿ 4-5 ಜನರು ಓಡಿ ಹೋಗಿದ್ದು, ಉಳಿದವರು ಸಿಕ್ಕಿದ್ದು,
ಅವರಿಂದ ಒಟ್ಟು ನಗದು ಹಣ ರೂ. 70,410/ ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ
ಜಪ್ತ ಮಾಡಿ, ಈ ಬಗ್ಗೆ ವಿವರವಾದ ಜಪ್ತಿ ಪಂಚನಾಮೆ ಮಾಡಿಕೊಂಡು ವಾಪಸ್ ಠಾಣೆಗೆ ಬಂದು ಪಂಚನಾಮೆ, ವರದಿಯನ್ನು
ಕೊಟ್ಟಿದ್ದು, ಸದರ ವರದಿ & ಪಂಚನಾಮೆ ಆಧಾರದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 43/2016 ಕಲಂ: 279, 337, 338, 304(ಎ) ಐ.ಪಿ.ಸಿ:
ದಿನಾಂಕ: 28-02-2016 ರಂದು ಬೆಳಗ್ಗೆ 10-30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ
ಕನ್ನಡದಲ್ಲಿ ಬರೆದ ಒಂದು ಪಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 28-02-2016 ರಂದು ಬೆಳಗ್ಗೆ 09-30 ಗಂಟೆಗೆ
ಪಿರ್ಯಾದಿ ಹಾಗೂ ಗಾಯಾಳು ಲಕ್ಷ್ಮಣ್ಣ ಇಬ್ಬರೂ ನಿಲೋಗಿಪುರ ಗ್ರಾಮದ ಪಿರ್ಯಾದಿದಾರರ ದೊಡ್ಡಪ್ಪನ
ಹೊಲಕ್ಕೆ ಕಬ್ಬನ್ನು ಹೇರಿಕೊಂಡು ಬರುವ ಸಲುವಾಗಿ ತಮ್ಮೂರ ಪಾಂಡು ಬೋರಿನ್ ಇವರ
ಟ್ರಾಕ್ಟರನಲ್ಲಿ ಹೋರಟ್ಟಿದ್ದ, ಸದರಿ ಟ್ರಾಕ್ಟರರನ್ನು ಮೃತ ಆರೋಪಿತನು ನಡೆಸುತ್ತಿದ್ದನು. ಕೇಸಲಾಪುರ ದಾಟಿ ಹಲವಾಗಲಿ ಕಡೆಗೆ
ಹೋಗುತ್ತಿದ್ದಾಗ, ಆರೋಪಿತನು ತಾನು
ನಡೆಸುತ್ತಿದ್ದ ಕೆಂಪು ಬಣ್ಣದ 1035 DI Massey Ferguson ಕಂಪನಿಯ ಇಂಜನ್ ನಂ: S337A67038 ಹಾಗೂ ಚಸ್ಸಿ ನಂ: MEA629A1KF2069853 ಹಾಗೂ ನಂಬರ್ ಇಲ್ಲದ ಟ್ರಾಲಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು
ವೇಗದ ಮೇಲೆ ನಿಯಂತ್ರಣ ತಪ್ಪಿ, ರಸ್ತೆ ಬಲಗಡೆಯ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದ ಟ್ರಾಲಿಯಲ್ಲಿದ್ದ ಪಿರ್ಯಾದಿಗೆ
ಯಾವುದೇ ಗಾಯಗಳಾಗಿರುವುದಿಲ್ಲ. ಲಕ್ಷ್ಮಣ್ಣ ಈತನಿಗೆ ಹಣೆಗೆ ರಕ್ತಗಾಯವಾಗಿದ್ದು, ಅಲ್ಲದೇ ಚಾಲಕನಾದ ನಾಗರಾಜ ಈತನು ಟ್ರಾಕ್ಟರನ ಇಂಜನಿನ ಕೆಳಗೆ ಸಿಕ್ಕಿ
ಹಾಕಿಕೊಂಡು ಕಣ್ಣಿನ ಮೇಲೆ, ಬಾಯಿಯ ಹತ್ತಿರ ಗದ್ದಕ್ಕೆ, ಬಲಗಡೆಯ ಕಿವಿಯ ಹಿಂದೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಬಂದಿದ್ದು ಇರುತ್ತದೆ. ಅಲ್ಲದೇ
ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಈ ಅಫಘಾ ತಕ್ಕೆ
ಕಾರಣನಾದ ಟ್ರಾಕ್ಟರ್ ಚಾಲಕನಾದ ನಾಗರಾಜ ತಂದೆ ಹಾಲಪ್ಪ ಪೂಜಾರ ಸಾ: ಹಟ್ಟಿ ಇವರ ಮೇಲೆ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 143,
504, 506 ಸಹಿತ 149 ಐ.ಪಿ.ಸಿ:
ದಿನಾಂಕ 28-02-2016 ರಂದು ಮದ್ಯಾಹ್ನ 01-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ವಿದ್ಯಾ ಗಂಡ ದುರ್ಗಪ್ರಸಾದ ವಯ : 38 ವರ್ಷ, ಜಾತಿ : ಲಿಂಗಾಯತ, ಉ : ವಕೀಲ ವೃತ್ತಿ. ಸಾ : ಕುಷ್ಟಗಿ. ಜಿ : ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ ಫಿಯರ್ಾದಿದಾರರು ಮೂರು ವರ್ಷದ ಹಿಂದೆ ಮ್ಯಾಗಳಡೊಕ್ಕಿ ಗ್ರಾಮದ ಬಸವರಾಜ ತಂದೆ ಬಸಪ್ಪ ಚೌಡಿ ಇವರ ಬಳಿ 3 ಎಕರೆ 3 ಗುಂಟೆ ಹೊಲವನ್ನು ತೆಗೆದುಕೊಂಡಿದ್ದು ಆದರೆ ಬಸವರಾಜನು ಆ ಹೊಲವನ್ನು ಮಾರಿದ್ದಾನೆ ಎಂದು ತಿಳಿದು ಇಂದು ದಿನಾಂಕ: 28-02-2016 ರಂದು ಬೆಳಿಗ್ಗೆ 10-00 ಗಂಟೆಯಿಂದ 12-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಜೋತೆಯಲ್ಲಿ ತಮ್ಮ ಮಗಳು ಅಖಿಲಾ. ಮತ್ತು ಸಂತೋಷ್ ರವರನ್ನು ಕರೆದುಕೊಂಡು ಮ್ಯಾಗಳಡೊಕ್ಕಿ ಗ್ರಾಮಕ್ಕೆ ಹೋಗಿ ಹಣವನ್ನು ಕೇಳಿದಾಗ ಆರೋಪಿತರಾದ 1) ಬಸವರಾಜ ತಂದೆ ಬಸಪ್ಪ ಚೌಡಿ 2) ಶರಣಮ್ಮ ಗಂಡ ಬಸವರಾಜ 3) ಸೋಮನಗೌಡ ತಂದೆ ದೊಡ್ಡನಗೌಡ 4) ಗಂಗಮ್ಮ ಗಂಡ ಸೋಮನಗೌಡ 5) ದೊಡ್ಡನಗೌಡ ತಂದೆ ಸೋಮನಗೌಡ ಸಾ : ಎಲ್ಲರೂ ಮ್ಯಾಗಳಡೊಕ್ಕಿ ತಾ:ಕುಷ್ಟಗಿ ರವರು ಫಿಯರ್ಾದಿದಾರರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತಿವಿ ನಾನು ಹಣವನ್ನು ಕೊಡುವುದಿಲ್ಲಾ. ಏನು ಮಾಡಿಕೊಳ್ಮ್ಳತ್ತಿಯಾ ಮಾಡಿಕೊಳ್ಳಿ ನಿನ್ನನ್ನು ಕೊಂದು ಬಿಡುವೆನು. ಅಂತಾ ಜೀವ ಬೆದರಿಗೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment