Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 1, 2016

1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ: 279, 337, 304(ಎ) ಐ.ಪಿ.ಸಿ
ದಿನಾಂಕ: 28.02.2016 ರಂದು ಬೆಳೆಗ್ಗೆ 10:30 ಗಂಟೆ ಸುಮಾರಿಗೆ ಕೊಪ್ಪಳ-ಬೇವೂರ ರಸ್ತೆಯ ಮೇಲೆ ನೆಲಜೇರಿ ಗ್ರಾಮದ ಪಕ್ಕದಲ್ಲಿ ಬೈರನಾಯಕನಹಳ್ಳಿ ಕ್ರ್ರಾಸ್ ಹತ್ತಿರ ಆರೋಪಿತನು ತಾನು ನೆಡೆಸುತ್ತಿದ್ದ ಮೋಟಾರ್ ಸೈಕಲ್ ನಂಬರ್ ನಂಬರ್ ಕೆ.ಎ-37 ಇ.ಎ- 0465 ನೇದ್ದರಲ್ಲಿ ಇನ್ನೊಬ್ಬ ಸೋಮಪ್ಪ ಲಮಾಣಿ ಇತನನ್ನು ಕೂಡ್ರಿಸಿಕೊಂಡು ಕೊಪ್ಪಳ ಕಡೆಯಿಂದ ಬೇವೂರ ಕಡೆಗೆ ಅತೀವೇಗವಾಗಿ ಹಾಗೂ ಆಲಕ್ಷತನದಿಂದ ಮಾನವ ಜಿವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದರಿಂದ ಮೋಟಾರ್ ಸೈಕಲ್ ಮೇಲೆ ನಿಯಂತ್ರಣ ಸಾದಿಸದೆ ಮೋಟಾರ್ ಸೈಕಲ್ ಸಮೇತ ಕೆಡವಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆರೋಪಿತನಿಗೆ ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು ಮತ್ತು ಇವನ ಮೋಟಾರ್ ಸೈಕಲ್ ಮೆಲೆ ಹಿಂದೆ ಕುಳಿತಿದ್ದ ಸೋಮಪ್ಪ ಎಂಬುವನಿಗೆ ಭಾರಿ ಸ್ವರೂಪದ ರಕ್ತಗಾಯ ಮತ್ತು ಭಾರಿ ಒಳಪೆಟ್ಟುಗಳಾಗಿದ್ದು ಇರತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಬೇವೂರ ಪೊಲೀಸ್ ಠಾಣೆ ಗುನ್ನೆ:  13/2016 ಕಲಂ: 279. 337. 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ, ನಂತರ ಇಂದು ದಿನಾಂಕ: 29.02.2016 ರಂದು ಬೆಳೆಗ್ಗೆ 11:30 ಗಂಟೆಗೆ ಠಾಣಾಧಿಕಾರಿಗಳು ಗೊಕುಲ್ ರೋಡ್ ಪೊಲೀಸ್ ಠಾಣೆ ಹುಬ್ಬಳ್ಳಿ ರವರ ನಿಸ್ತಂತು ಸಂದೇಶ ದಿನಾಂಕ: 29.02.2016 ನೇದ್ದರಲ್ಲಿ ಎಂಎಲ್ಸಿಯು ಠಾಣೆಗೆ  ವಸೂಲಾಗಿದ್ದು ಅದರಲ್ಲಿ ಸದರಿ ಪ್ರಕರಣದಲ್ಲಿನ ಗಾಯಾಳು ಸೋಮಪ್ಪ ದನದಮನಿ   ಸಾ: ಹಿರೇ ಸೂಳಿಕೇರಿ ತಾಂಡಾ ಇವನು ಚಿಕಿತ್ಸೆ ಫಲಿಸದೆ ದಿನಾಂಕ: 29.02.2016 ರಂದು ಬೆಳೆಗ್ಗೆ 08:05 ಗಂಟೆಗೆ ಹುಬ್ಬಳ್ಳಿಯ ತತ್ವದಶರ್ನಿ ಆಸ್ಪತ್ರೆಯಲ್ಲಿ ಮರಣಹೊಂದಿದ್ದು ಇರುತ್ತದೆ ಅಂತಾ ಎಂ.ಎಲ್.ಸಿ ವಸೂಲಾಗಿದ್ದು ಇರುತ್ತದೆ. ಕಾರಣ ಸದರ ಪ್ರಕರಣದಲ್ಲಿ ಕಲಂ: 338. ಐ.ಪಿ.ಸಿ. ಬದಲಾಗಿ ಕಲಂ: 304 [ಎ] ಐ.ಪಿ.ಸಿ.ಯನ್ನು ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ  
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 80/2016 ಕಲಂ: 379 ಐ.ಪಿ.ಸಿ:
ದಿನಾಂಕ 29-02-2016 ರಂದು ಸಂಜೆ 5-00 ಗಂಟೆಗೆ  ಫಿರ್ಯಾದಿದಾರರಾದ ಬಾಲಜ್ಜ ತಂದೆ ಶರಣಪ್ಪ ಬಳಿಗಾರ ವಯಾ 45 ವರ್ಷ ಜಾ: ಲಿಂಗಾಯತ ಉ: ಜೂನಿಯರ್ ಲ್ಯಾಬ್ ಟೆಕ್ನಿಷೇನ್ ಸರಕಾರಿ ಆಸ್ಪತ್ರೆ ಕುಷ್ಟಗಿ ಸಾ: ಬಿ.ಬಿ. ನಗರ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನನ್ನ ವಯಕ್ತಿಕ ಕೆಲಸದ ನಿಮಿತ್ಯ 2006 ನೇ ಮೊಡೇಲ್ ಹಳೇ ಕಾರನ್ನು 2011 ನೇ ಸಾಲಿನಲ್ಲಿ ನಾನು ಸೆಕೆಂಡ್ ಹ್ಯಾಂಡ ಇಂಡಿಕಾ ಕಾರ ಡಿ.ಎಲ್.ಜಿ ಕಾರನ್ನು ಖರೀದಿ ಮಾಡಿಕೊಂಡಿದ್ದು ಇರುತ್ತದೆ. ನಿನ್ನೆ ದಿನಾಂಕ:28-02-2016 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಇರುವ ಗೇಟ ಹತ್ತಿರ ಕಾರನ್ನು ನಿಲ್ಲಿಸಿ ಡೋರ್ ಗಳನ್ನು ಲಾಕ ಮಾಡಿ ಕೊಂಡಿದ್ದೇನು. ನಂತರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದೇನು. ಮುಂಜಾನೆ 6-00 ಗಂಟೆಯ ಸುಮಾರಿಗೆ ನನ್ನ ಕಾರನ್ನು ನೋಡಲು ಸದರಿ ನನ್ನ ಕಾರು ನಮ್ಮ ಮನೆಯ ಮುಂದೆ ಇರಲಿಲ್ಲಾ. ಆಗ ನಾನು ಗಾಭರಿಯಾಗಿ ನಮ್ಮ ಕಾರನ್ನು ಬಗ್ಗೆ ನಮ್ಮ ಸಂಬಂದಿಕರಿಗೆ ವಿಚಾರಿಸಿದೇನು. ಯಾರೂ ತೆಗೆದುಕೊಂಡು ಹೋಗಿಲ್ಲಾ ಅಂತಾ ತಿಳಿಸಿದರು. ನಮ್ಮ ಕಾರ ನಂ: ಕೆ.ಎ-37 ಎಂ-1723 ಅಂತಾ ಇದ್ದು ಇದರ ಚೆಸ್ಸಿ ನಂ: 605121ATZPO7159 ಇಂಜನ್ ನಂ: 4751DT15MUZPHO236 ಅಂತಾ ಇರುತ್ತದೆ. ಸದರಿ ಕಾರಿನ ಬಣ್ಣ ಸಿಲ್ವರ್ ಕಲರದು ಇರುತ್ತದೆ. ಸದರಿ ಕಾರಿನಲ್ಲಿ ಕಾರಿನ ಮೂಲ ದಾಖಲಾತಿಗಳಾದ ಆರ್.ಸಿ. ಕಾರ್ಡ, ಇನ್ಸುರೆನ್ಸ ಹಾಗೂ ನನ್ನ ಡ್ರೈವಿಂಗ ಲೈಸನ್ಸ ಇರುತ್ತದೆ.   ಕಾರಣ ಸದರಿ ಕಾರನ್ನು ನಿನ್ನೆ ದಿನಾಂಕ:28-02-2016 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ:29-02-2016 ರಂದು ಮುಂಜಾನೆ 08-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಕಾರ ನಂ: ಕೆ.ಎ-37 ಎಂ-1723 ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಾರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ  ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 36/2016 ಕಲಂ: 379 ಐ.ಪಿ.ಸಿ:
ದಿನಾಂಕ 29-02-2016 ರಂದು ಮುಂಜಾನೆ 11-30 ಗಂಟೆಗೆ ಫಿರ್ಯಾಧಿದಾರರಾದ ಆನಂದ ತಂದೆ ಲಿಂಗಪ್ಪ ಕನ್ನಾರಿ ಸಾಛ ಶಾರದಾ ಟಾಕೀಜ್ ಹತ್ತಿರ ಕೊಪ್ಪಳ, ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 30-12-2015 ರಂದು ಮುಂಜಾನೆ 9-0 ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ ಸಿಡಿ ಡಿಲೇಕ್ಸ್ ಮೋಟಾರ ಸೈಕಲ್  ನಂ KA 37/L 175  ಅಂ.ಕಿ.ರೂ 20,000-00 ಬೆಲೆಬಾಳುವುದನ್ನು ನಗರದ ರೈಲ್ವೆ ಸ್ಟೇಷನ್ ಮುಂದುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಾನು ಗದಗಿಗೆ ಹೋಗಿ ತಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸು ರಾತ್ರಿ 9-00 ಕೊಪ್ಪಳಕ್ಕೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ಅಲ್ಲಿನ ಪಾರ್ಕಿಂಗ್ ಸ್ಥಳ ಮತ್ತು ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 49/2016 ಕಲಂ: 279, 337 ಐ.ಪಿ.ಸಿ:
ದಿನಾಂಕ. 29-02-2016 ರಂದು 11-15 ಎ.ಎಂ.ಕ್ಕೆ ಫಿರ್ಯಾದಿದಾರ ಹಾಗೂ ಪರಶುರಾಮ ಮತ್ತು ರಾಮ ಇವರು ಆರೋಪಿತನಾದ ಮುತ್ತಣ್ಣ ಇವರ ಟ್ರ್ಯಾಕ್ಟರ ನಂ. ಕೆ.ಎ.36/ಟಿ.ಎ,148 ಮತ್ತು ಟ್ರೇಲರ ನಂ. ಕೆ.ಎ.37/ಟಿ.3808 ರಲ್ಲಿ ಕೂಲಿ ಕೆಲಸಕ್ಕೆ ಮಾಟುತ್ತಿದ್ದು ಟ್ರ್ಯಾಕ್ಟರ ಚಾಲಕ ಮುತ್ತಣ್ಣ ಈತನು ಫಿರ್ಯಾದಿ ಹಾಗೂ ಪರಶುರಾಮ ಮತ್ತು ರಾಮ ಇವರನ್ನು ಟ್ರೇಲರ್ ದಲ್ಲಿ ಕೂಡಿಸಿಕೊಂಡು ಟಿ. ಬಿ . ಡ್ಯಾಂ ಸರ್ಕಲ್ ದಿಂದ ಮುನಿರಾಬಾದಕ್ಕೆ ಟ್ರಾಕ್ಟರಕ್ಕನು ಚಲಾಯಿಸಿಕೊಂಡು ಬರುತ್ತಿರುವಾಗ ಎನ್.ಹೆಚ್.ಅ 13 ರಸ್ತೆಯ ಮೇಲೆ ತುಂಗಭದ್ರಾ ಬ್ರಿಡ್ಜ ಮೇಲೆ ಟ್ರ್ಯಾಕ್ಟರನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಟ್ರ್ಯಾಕ್ಟರ ಸ್ಟೇರಿಂಗ್ ರಾಡ ಕಟ್ಟಾಗಿದ್ದು ಟ್ರ್ಯಾಕ್ಟರ ಅತಿವೇಗ ಇರುವುದರಿಂದ ನಿಯಂತ್ರಣ ಮಾಡಲು ಆಗದೆ ಬ್ರಿಡ್ಜ ಕಟ್ಟೆಗೆ ಡಿಕ್ಕಿ ಕೊಟು ಅಪಘಾತ ಪಡಿಸಿದ್ದರಿಂದ ಟ್ರ್ಯಾಕ್ಟರ ಟ್ರೇಲರ ಸಮೇತ ಪಲ್ಟಿಯಾಗಿ ಬಿದ್ದು ಫಿರ್ಯಾದಿ ಹಾಗೂ ಪರಶುರಾಮ ಮತ್ತು ರಾಮ ಹಾಗೂ ಟ್ರ್ಯಾಕ್ಟರ ಚಾಲಕ ಮುತ್ತಣ್ಣ ಇವರಿಗೆ ಗಾಯ ಪೆಟ್ಟರುಗಳಾಗಿರುತ್ತವೆ ಅಂತ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 82/2016 ಕಲಂ: 78(3) Karnataka Police Act.


ದಿನಾಂಕ 29-02-2016 ರಂದು ಸಂಜೆ 6-45 ಗಂಟೆಗೆ ಶ್ರೀ ಉದಯ ರವಿ, ಪಿ.ಎಸ್.ಐ. ಕನಕಗಿರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿ ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ 29-02-2016 ರಂದು ಸಂಜೆ 5-30 ಗಂಟೆಗೆ ಕನಕಗಿರಿ ಗ್ರಾಮದ ಗಜಲಕ್ಷ್ಮಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಲಂ ನಂ.9 ರಲ್ಲಿ ನಮೂದಿಸಿದ ಆರೋಪಿ ನಂ.1 ಈತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ.455=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿ, ಸಂಜೆ 5-30 ಗಂಟೆಯಿಂದ 6-30 ಗಂಟೆಯವರೆಗೆ ಪಂಚನಾಮೆಯನ್ನು ಮಾಡಿ ವಾಪಸ್ ಠಾಣೆಗೆ ಸಂಜೆ 6-45 ಗಂಟೆಗೆ ಬಂದು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 7-30 ಗಂಟೆಗೆ ಸದರ ವರದಿ ಮತ್ತು ಪಂಚನಾಮೆಯ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008