Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, February 3, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 57/2016 ಕಲಂ: 32, 34 Karnataka Excise Act

ಇಂದು ದಿನಾಂಕ:-03-02-2016 ರಂದು ಬೆಳಗಿನಜಾವ 05:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆರವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಮೂಲ ಪಂಚನಾಮೆ ಹಾಗೂ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 03-02-2016 ರಂದು ಬೆಳಗಿನಜಾವ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಲಾಪೂರು ಸೀಮಾದಲ್ಲಿ ಅಕ್ರಮವಾಗಿ ಟಾಟಾ ಏಸ್ ಮತ್ತು ಆಟೋ ರಿಕ್ಷಾದಲ್ಲಿ ಮಧ್ಯ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯವರಾದ ಪಿ.ಸಿ. 13, 429, ಹೆಚ್.ಸಿ. 88 ಹಾಗೂ ಜೀಪ್ ಚಾಲಕ ಎ.ಪಿ.ಸಿ. 77 ಕನಕಪ್ಪ ರವರನ್ನು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ರಲ್ಲಿ ಠಾಣೆಯಿಂದ ಬೆಳಗಿನಜಾವ 01:00 ಗಂಟೆಗೆ ಹೊರಟು ತಿರುಮಲಾಪೂರು ಸೀಮಾದಲ್ಲಿ ಕೇನಾಲ್ ರಸ್ತೆಯಲ್ಲಿ ಕಾಯುತ್ತಿರುವಾಗ ಬೆಳಗಿನಜಾವ 02:00 ಗಂಟೆಯ ಸುಮಾರಿಗೆ ಒಂದು ಟಾಟಾ ಏಸ್ ವಾಹನ ಮತ್ತು ಒಂದು ಆಟೋ ರಿಕ್ಷಾ ಬಂದಿದ್ದು, ಅವುಗಳನ್ನು ನಿಲ್ಲಿಸಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಆಟೋದಲ್ಲಿದ್ದ ಒಂದು ವ್ಯಕ್ತಿ ಇಳಿದು ಅಲ್ಲಿಂದ ಓಡಿ ಹೋದನು. ಟಾಟಾ ಏಸ್ ವಾಹನದಲ್ಲಿದ್ದ ಮೂವರು ಮತ್ತು ಆಟೋರಿಕ್ಷಾದಲ್ಲಿದ್ದ ಇಬ್ಬರನ್ನು ಹಿಡಿದು ನಿಲ್ಲಿಸಿದ್ದು, ಎರಡೂ ವಾಹನಗಳನ್ನು ಪರಿಶೀಲನೆ ಮಾಡಲಾಗಿ ಅವುಗಳಲ್ಲಿ ತಲಾ 3 ಬಾಕ್ಸಗಳಂತೆ (ಕೇಸ್ ಗಳು) ಒಟ್ಟು 6 ಬಾಕ್ಸ ಗಳಲ್ಲಿ ಮಧ್ಯದ ಬೀಯರ್ ಬಾಟಲಗಳು ಇದ್ದು, ಅವುಗಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಯಾವುದಾದರೂ ಪರವಾನಿಗೆ ಹೊಂದಿದ ಬಗ್ಗೆ ವಿಚಾರಿಸಲು ಅವರು ತಮ್ಮ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ದಾಖಲೆಗಳು ಇಲ್ಲವೆಂದು ತಿಳಿಸಿದರು. ಟಾಟಾ ಏಸ್ ವಾಹನವನ್ನು ಪರಿಶೀಲಿಸಲು ಅದರ ನಂಬರ್: ಕೆ.ಎ-37/ ಎ-5855 ಅಂತಾ ಇದ್ದು, ಅದರಲ್ಲಿದ್ದವರನ್ನು ವಿಚಾರಿಸಲು ಅವರು ತಮ್ಮ ಹೆಸರು (1) ಶ್ರೀನಿವಾಸ ತಂದೆ ಗಂಗಾಧರ ಪಪ್ತಿ, ವಯಸ್ಸು 25 ವರ್ಷ, ಜಾತಿ: ಪದ್ಮಸಾಲಿ ಉ: ಡೆಕೋರೇಟರ್ಸ್ ಸಾ: ಹಳೇ ಬಂಡಿ ಹರ್ಲಾಪೂರು ತಾ: ಕೊಪ್ಪಳ (2) ವಸೀಮ್ ತಂದೆ ಹನೀಫ್ ಸಾಬ ಕಂಪ್ಲಿ, ವಯಸ್ಸು 18 ವರ್ಷ, ಜಾತಿ: ಮುಸ್ಲೀಂ ಉ: ಡೆಕೋರೇಟರ್ ಸಾ: ಹಳೇ ಬಂಡಿ ಹರ್ಲಾಪೂರು (3) ರವಿ ತಂದೆ ಹನುಮಂತಪ್ಪ ಹಟ್ಟಿ, ವಯಸ್ಸು 25 ವರ್ಷ, ಜಾತಿ: ನಾಯಕ ಉ: ಟಾಟಾ ಏಸ್ ವಾಹನ ಚಾಲಕ ಸಾ: ಹಳೇ ಬಂಡಿಹರ್ಲಾಪೂರು ತಾ: ಕೊಪ್ಪಳ ಅಂತಾ ತಿಳಿಸಿದ್ದು, ಆಟೋರಿಕ್ಷಾವನ್ನು ಪರಿಶೀಲಿಸಲು ಅದರ ನಂಬರ್: ಕೆ.ಎ-37/ ಎ-1304 ಅಂತಾ ಇದ್ದು, ಅದರಲ್ಲಿದ್ದವರಿಗೆ ವಿಚಾರಿಸಲು ಅವರು ತಮ್ಮ ಹೆಸರು (4) ಮುರಳಿ ತಂದೆ ವೆಂಕಟಯ್ಯ, ವಯಸ್ಸು 25 ವರ್ಷ, ಜಾತಿ: ಶೆಟ್ಟಿ ಬಲಿಜ ಉ: ಆಟೋ ರಿಕ್ಷಾ ಚಾಲಕ ಸಾ: ಸಾಣಾಪೂರು ತಾ: ಗಂಗಾವತಿ (5) ರಾಮಾಂಜಿನಿ ತಂದೆ ಕೊಂಡಯ್ಯ, ವಯಸ್ಸು 29 ವರ್ಷ, ಜಾತಿ: ನಾಯಕ ಉ: ವಾಟರ್ ಫಾಲ್ಸ್ ರೆಸ್ಟೋರೆಂಟ್ ಮಾಲೀಕರು ಸಾ: ಸಾಣಾಪೂರು ಅಂತಾ ತಿಳಿಸಿದರು. ಆಟೋದಿಂದ ಓಡಿ ಹೋದವನ ಹೆಸರು ವಿಚಾರಿಸಲು (6) ಚನ್ನ ಸಾ: ಸಾಣಾಪೂರು ಅಂತಾ ತಿಳಿಸಿದರು. ಎರಡೂ ವಾಹನಗಳನ್ನು ಪರಿಶೀಲಿಸಲು ಅದರಲ್ಲಿದ್ದ ಮಧ್ಯದ ಬಾಟಲಗಳನ್ನು ಪರಿಶೀಲಿಸಲು ಪ್ರತಿಯೊಂದು ಬಾಕ್ಸಗಳಲ್ಲಿ ಕಿಂಗ್ ಫಿಶರ್ ಪ್ರೀಮಿಯಮ್ ಕಂಪನಿಯ ತಲಾ 12 ಬೀಯರ್ ಬಾಟಲಗಳಂತೆ ಒಟ್ಟು 72 ಬಾಟಲಗಳು ಇದ್ದು ಪ್ರತಿಯೊಂದು 650 ಎಂ.ಎಲ್. ಬಾಟಲಗಳು ಇರುತ್ತವೆ. ಪ್ರತಿಯೊಂದು ಬಾಕ್ಸ್ ನಿಂದ ತಲಾ ಒಂದೊಂದು ಬಾಟಲನಂತೆ ರಸಾಯನಿಕ ಪರೀಕ್ಷೆ ಕುರಿತು ಕಳುಹಿಸಲು ಒಟ್ಟು 6 ಬಾಟಲಗಳನ್ನು ಪ್ರತ್ಯೇಕವಾಗಿ ಜಪ್ತು ಮಾಡಿ ಅವುಗಳ ಬಾಯಿಗೆ ಬಿಳಿ ಬಟ್ಟೆಯನ್ನು ಕಟ್ಟಿ VB ಎಂಬ ಅಕ್ಷರಿಂದ ಸೀಲ್ ಮಾಡಲಾಯಿತು ಉಳಿದ ಬಾಟಲಗಳನ್ನು ರಟ್ಟಿನ ಬಾಕ್ಸನಲ್ಲಿಯೇ ಇಟ್ಟು ಪಂಚರ ಸಹಿ ಚೀಟಿ ಅಂಟಿಸಿ ಜಪ್ತು ಮಾಡಲಾಯಿತು. ಈ ಬಗ್ಗೆ ಬೆಳಗಿನಜಾವ 02:00 ರಿಂದ 3:30 ಗಂಟೆಯವರೆಗೆ ಪಂಚನಾಮೆಯನ್ನು ಜೀಪಿನ ಹಾಗೂ ಸರ್ಚಲೈಟನ್ನು ಬೆಳಕಿನಲ್ಲಿ ನಿರ್ವಹಿಸಲಾಯಿತು. ನಂತರ ಎರಡೂ ವಾಹನಗಳನ್ನು, 5 ಜನರನ್ನು ಮತ್ತು ಮಧ್ಯದ ಬಾಟಲ್ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದೆ.

0 comments:

 
Will Smith Visitors
Since 01/02/2008