Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 5, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ: 457, 380 ಐ.ಪಿ.ಸಿ:.
ದಿನಾಂಕ:04-02-2016 ರಂದು 6-30 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರರು ನಿನ್ನೆ ದಿನಾಂಕ;03-02-2016 ರಂದು ಸಂಜೆ 5.00 ಗಂಟೆಗೆ ಶಾಲಾ ಅವಧಿ ಮುಗಿಸಿಕೊಂಡು ಕಾರ್ಯಾಲಯದ ಕೋಣೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಇಂದು ದಿನಾಂಕ:04-02-2016 ರಂದು ಮುಂಜಾನೆ 09-30 ಗಂಟೆಗೆ  ಶಾಲೆಗೆ ಕರ್ತವ್ಯಕ್ಕೆ ಹಾಜರಾದಾಗ ತಮ್ಮ ಶಾಲೆಯ ಕಾರ್ಯಾಲಯದ ಮುಖ್ಯ ಬಾಗಿಲಿನ ಕೀಲಿ ಪತ್ತಾವನ್ನು ಯಾರೋ ಮುರಿದಿದ್ದು ಆಗ ತಾನು ಗಾಬರಿಯಾಗಿ ತಮ್ಮ ಸಹಶಿಕ್ಷಕರೊಂದಿಗೆ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರೊಂದಿಗೆ ತಮ್ಮ ಶಾಲೆಯ ಕಾರ್ಯಾಲಯದ ಒಳಗೆ ಹೋಗಿ ಪರಿಶೀಲನೆ ಮಾಡಿದಾಗ ಅಕ್ಷರದಾಸೋಹದ ತೊಗರಿಬೇಳೆಯ 50 ಕೆ.ಜಿ. ತೂಕದ ಎರಡು ಚೀಲಗಳು ಮಾತ್ರ ಕಳ್ಳತನವಾಗಿದ್ದು ಬೇರೆ ಏನೂ ಕಳ್ಳತನವಾಗಿರಲಿಲ್ಲಾ. ನಂತರ ತಾನು ತಮ್ಮ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತಿಳಿಸಿ ಅವರ ಆದೇಶದ ಮೇರೆಗೆ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.  ಕಾರಣ, 50 ಕೆ.ಜಿ. ತೂಕದ ಎರಡು ತೊಗರಿ ಬೇಳೆ ಚೀಲಗಳು ಅಂ.ಕಿ.ರೂ. 15000=00 ಬೆಲೆ ಬಾಳುವದನ್ನು ಯಾರೂ ಕಳ್ಳರು ದಿನಾಂಕ:03-02-2016 ರ ಸಂಜೆ 5.00 ಗಂಟೆಯಿಂದ ಇಂದು ದಿನಾಂಕ:04-02-2016 ರ ಬೆಳಿಗ್ಗೆ 9.00 ಗಂಟೆಯ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿದ್ದು ಅವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ವಿಷಯವಿದ್ದ ದೂರಿನ ಸಾರಾಂಶದ ಮೇಲಿಂದ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 27/2016 ಕಲಂ: 504, 506 ಐ.ಪಿ.ಸಿ:.
ದಿ:04-02-16 ರಂದು ಬೆಳಿಗ್ಗೆ 11-10 ಗಂಟೆಗೆ ಮಾನ್ಯ ಘನ ನ್ಯಾಯಾಲಯದ ಪತ್ರ ಸಂ:ಎಲ್.ಟಿ./117/2016. ದಿ:01-02-16. ನೇದ್ದರಲ್ಲಿ ಖಾಸಗಿ ಫಿರ್ಯಾದಿ ಸ್ವೀಕೃತವಾಗಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ದಿ:14-12-2015 ರಂದು ಬೆಳಿಗ್ಗೆ 12-00 ಗಂಟೆಗೆ ಆರೋಪಿತರು 2 ಬೊಲೆರೊ ವಾಹನಗಳಲ್ಲಿ ಪಾಪಿನಾಯಕನಹಳ್ಳಿಯಿಂದ ಗಿಣಿಗೇರಿ ಗ್ರಾಮದ ಫಿರ್ಯಾದಿದಾರರ ಕಿರಾಣಿ ಅಂಗಡಿಯ ಹತ್ತಿರ ಬಂದು ನಿಮ್ಮ ಅಳಿಯ ರಾಘವೇಂದ್ರ ಇತನು ನಮ್ಮ ಕಡೆಯಿಂದ ಬಡ್ಡಿ ಪ್ರಕಾರ ಹಣ ಪಡೆದು ಅಂದಾಜು 1 ರಿಂದ 1 ವರೆ ಕೋಟಿ ರೂಪಾಯಿ ಕೊಡಬೇಕಾಗಿದೆ ಎಂದು ಹೇಳುತ್ತಾ ಒದರಾಡಿದ್ದು ನಂತರ ರಾಘವೇಂದ್ರನಿಗೆ ಒದ್ದು ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತೇವೆ ಅಂತಾ ಹೆದರಿಸಿದಾಗ ಫಿರ್ಯಾದಿದಾರನು ವಸ್ತುಸ್ಥಿತಿ ಏನೆಂದು ತಿಳಿದುಕೊಳ್ಳೋಣ ಊರಿನಲ್ಲಿ ಗಲಾಟೆ ಬೇಡ ಎಂದು ಹೇಳಿದಾಗ, ಆರೋಪಿತರು ಕೊಪ್ಫಳ ಕೋರ್ಟಿನ ಹತ್ತಿರ ಫಿರ್ಯಾದಿಗೆ ಬರಲು ಹೇಳಿ ನಂತರ ಕೊಪ್ಪಳ ಕೋರ್ಟ ಹತ್ತಿರ ಆರೋಪಿತರು ಫಿರ್ಯಾದಿಗೆ ನಿಮ್ಮ ಅಳಿಯ ರಾಘವೇಂದ್ರನ ಪರವಾಗಿ ನೀನು ನಾವು ಹೇಳಿದ ಬಾಂಡಿನಲ್ಲಿ ಸಹಿ ಮಾಡಬೇಕು ಮತ್ತು ನಾಲ್ಕು ಖಾಲಿ ಚೆಕ್ ಗಳನ್ನು ಕೊಡಬೇಕೆಂದು ಒತ್ತಾಯಿಸಿದ್ದರಿಂದ ಫಿರ್ಯಾದಿದಾರರು ಇದರಿಂದ ತನ್ನ ಅಳಿಯನ ಪ್ರಾಣಕ್ಕೆ ಯಾವುದೇ ತೊಂದರೆ ಆಗಬಾರದೆಂದು ಆರೋಪಿತರು ತಂದಿದ್ದ ಬಾಂಡ್ ಮೇಲೆ ಸಹಿ ಮಾಡಿದ್ದು,  4 ಖಾಲಿ ಚೆಕ್ ಗಳನ್ನು ಪಡೆದುಕೊಂಡು ರಾಘವೇಂದ್ರನಿಗೆ ಬಿಟ್ಟು ಹೋಗಿರುತ್ತಾರೆ. ಆರೋಪಿತರು ಮೀಟರ್ ಬಡ್ಡಿ ದಂದೆ ಮಾಡುತ್ತಿದ್ದು ಖಾಲಿ  ಚೆಕ್ ಗಳನ್ನು ಇಟ್ಟುಕೊಂಡು ಆಗಾಗ ಹೆದರಿಸುತ್ತಾರೆಂದು ಫಿರ್ಯಾದಿಗೆ ಅಳಿಯ ರಾಘವೇಂದ್ರ ತಿಳಿಸಿದ್ದು ಇರುತ್ತದೆ. ನಂತರ ದಿ:16-12-2015 ರಂದು ಸಾಯಂಕಾಲ 6-00 ಗಂಟೆಗೆ ಸದರಿ ಆರೋಪಿತರು ಫಿರ್ಯಾದಿದಾರನ ಅಂಗಡಿ ಮುಂದೆ ಬಂದು ನೀವು ನಮಗೆ ಬಾಂಡಿನಲ್ಲಿ ಕೈಗಡ ಹಣ ಎಂದು ಬರೆದುಕೊಟ್ಟ 74,00,000=00 ರೂ ಗಳನ್ನು ಕೊಡಬೇಕು ಮತ್ತು ನಿಮ್ಮ ಅಳಿಯನನ್ನು ನಮಗೆ ಒಪ್ಪಿಸಬೇಕು ಇಲ್ಲವಾದಲ್ಲಿ ನಿಮ್ಮಗಳನ್ನು ಜೀವ ಸಹಿತ ಬಿಡುವದಿಲ್ಲವೆಂದು ಬೆದರಿಕೆ ಹಾಕಿ ಮೋಸದಿಂದ ದೌರ್ಜನ್ಯ ಮಾಡಿ ಬಾಂಡ್ ಮೇಲೆ ಸಹಿ ತೆಗೆದುಕೊಂಡು ಮತ್ತು ಖಾಲಿ ಚೆಕ್ ಗಳನ್ನು ಆರೋಪಿತರು ಪಡೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಖಾಸಗಿ ಫಿರ್ಯಾದಿ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008