Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, February 6, 2016

1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 36/2016 ಕಲಂ: 78(3) Karnataka Police Act:.
ದಿನಾಂಕ. 05-02-2016 ರಂದು 8-30 ಪಿ.ಎಂ.ಕ್ಕೆ ಆರೋಪಿತನು ಮುನಿರಾಬಾದ ಡೈರಿ ಫಾರಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಫೀರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತರಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 630-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 37/2016 ಕಲಂ: 78(3) Karnataka Police Act:.
ದಿನಾಂಕ. 05-02-2016 ರಂದು 8-45 ಪಿ.ಎಂ.ಕ್ಕೆ ಆರೋಪಿತನು ಹಿಟ್ನಾಳ ಗ್ರಾಮದ ಶ್ರೀ ಮಾರುತೇಶ್ವರ ಗುಡಿಯಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಫೀರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 2300-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 37/2016 ಕಲಂ 78(3) ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 70/2016 ಕಲಂ: 143, 147, 148, 447, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 05-02-2016 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮರಿಯಮ್ಮ ಗಂಡ ಇಂದ್ರೆಪ್ಪ ಇಂದ್ರಗಿ ವಯಸ್ಸು: 56  ವರ್ಷ, ಜಾತಿ: ಕುರುಬರ, ಉ: ಹೊಲ ಮನೆಕೆಲಸ ಸಾ: ಚಿಕ್ಕಬೆಣಕಲ್ ತಾ: ಗಂಗಾವತಿ.ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "  ನಿನ್ನೆ ದಿನಾಂಕ:- 04-02-2016 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ನಮ್ಮ ಜಮೀನಿನಲ್ಲಿ ನೀರು ಹರಿಸಲು ಬೋರನ್ನು ಚಾಲು ಮಾಡಿ ನೀರು ಹರಿಸುತ್ತಿರುವಾಗ (1)  ನಾಗಪ್ಪ ತಂದೆ ಕರಿಯಪ್ಪ, 32 ವರ್ಷ, ಜಾತಿ: ಕುರುಬರು ಸಾ: ವೆಂಕಟಗಿರಿ (2) ಮಲಿಯಪ್ಪ ತಂದೆ ಕರಿಯಪ್ಪ, ವಯಸ್ಸು 30 ವರ್ಷ, ಜಾತಿ: ಕುರುಬರು ಸಾ: ವೆಂಕಟಗಿರಿ ಇವರಿಬ್ಬರೂ ಕೂಡಿಕೊಂಡು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ಬೋರಗೆ ಸಂಪರ್ಕಿಸಿದ ವೈರನ್ನು ಕತ್ತರಿಸಲು ಬಂದಿದ್ದು, ಆಗ ನಾನು ಮತ್ತು ನನ್ನ ಮಕ್ಕಳಾದ ಶ್ರೀಮತಿ ಮಹಾದೇವಮ್ಮ ಗಂಡ ದಿ: ಪಾಮನಗೌಡ  38 ವರ್ಷ, ಶ್ರೀ ದ್ಯಾಮಮ್ಮ ಗಂಡ ಯಂಕಪ್ಪ, ವಯಸ್ಸು 30 ವರ್ಷ, ಮತ್ತು ಮೊಮ್ಮಗನಾದ ಹನುಮೇಶ ತಂದೆ ಪಾಮನಗೌಡ 15 ವರ್ಷ, ಇವರುಗಳು ಕೂಡಿ ವೈರನ್ನು ಕತ್ತರಿಸಬೇಡಿರಿ ಅಂತಾ ಹೇಳಿದ್ದಕ್ಕೆ ಅವರಿಬ್ಬರೂ ನನ್ನ ಹಾಗೂ ನನ್ನ ಹೆಣ್ಣು ಮಕ್ಕಳಿಗೆ ಮೈಕೈ ಮುಟ್ಟಿ ಎಳೆದಾಡಿ ಕೈಗಳಿಂದ ಹೊಡಿ-ಬಡಿ ಮಾಡಿ ಮಾನಭಂಗ ಮಾಡಿದರು. ಮಲಿಯಪ್ಪನು ತನ್ನ ಹತ್ತಿರ ಇದ್ದ ಕಟಿಂಗ್ ಪ್ಲೇಯರನಿಂದ ದ್ಯಾಮಮ್ಮಳ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಹನುಮೇಶನಿಗೆ ಎರಡೂ ರಟ್ಟೆಗಳಿಗೆ ಹೊಡೆದು ಹೊಟ್ಟೆಗೆ ಕಟಿಂಗ್ ಪ್ಲೇಯರ್ ನಿಂದ ಎಳೆದು ಗಾಯಗೊಳಿಸಿದನು. ಮಹಾದೇವಮ್ಮಳಿಗೆ ನಾಗಪ್ಪನು ಕೂದಲು ಹಿಡಿದು ಎಳೆದಾಡಿ ಬಡಿದನು. ಇದರಿಂದ ಅವಳಿಗೆ ಮೂಕಪೆಟ್ಟಾದವು.  ನನಗೆ ಸಹ ಸಹ ಬಲ ಮುಂಗೈ ಹತ್ತಿರ ತೆರೆಚಿದ ಗಾಯಗಳಾದವು.  ಆಗ ಅಲ್ಲಿಯೇ ಇದ್ದ ಮಹಿಬೂಬ ಸಾಬ ತಂದೆ ಶೇಖಸಾಬ, 35 ವರ್ಷ, ಸಾ: ಚಿಕ್ಕಬೆಣಕಲ್, ಮಹೇಂದ್ರಕುಮಾರ ತಂದೆ ದುರಗನಗೌಡ, 38 ವರ್ಷ, ನಾಯಕ ಸಾ: ಚಿಕ್ಕಬೆಣಕಲ್ ಇವರುಗಳು ಬಂದು ಬಿಡಿಸಿಕೊಂಡರು.  ನಂತರ ನಾಗಪ್ಪ ಮತ್ತು ಮಲಿಯಪ್ಪ ಇಬ್ಬರೂ ಕೂಡಿ ನಮಗೆ ಲೇ ಬೋಸುಡಿ ಸೂಳೇರ ಇವತ್ತು ನೀವು ಉಳಿದುಕೊಂಡಿದ್ದೀಯಾ, ನೀವು ಈ ಜಮೀನು ಬಿಟ್ಟು ಹೋಗದಿದ್ದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲಾ.  ಈ ಜಮೀನಿನಲ್ಲಿಯೇ ಹೂತು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಈ ಬಗ್ಗೆ ನಾವು ಮನೆಯವರು ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಮಾನ್ಯರು ಮೇಲ್ಕಂಡ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 71/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ: 04-02-2016 ರಂದು  ಮಧ್ಯಾಹ್ನ 12:00 ಗಂಟೆಗೆ ಧಾರವಾಡ ಸತ್ತೂರ ಎಸ್.ಡಿ.ಎಂ. ಆಸ್ಪತ್ರೆಯಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಹೆಚ್.ಸಿ. 110 ಶ್ರೀ ರವೀಂದ್ರನಾಥ ಇವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರೀ ನೀಲಕಂಠಯ್ಯ ತಂದೆ ಮಲ್ಲಯ್ಯ ಹಳೆಕೋಟೆ ವಯಸ್ಸು: 35 ವರ್ಷ ಜಾತಿ: ಜಂಗಮ, ಉ: ಚಾಲಕ ಸಾ: ಅಮರಭಗತಸಿಂಗ ನಗರ ಗಂಗಾವತಿ ಇವರು ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಇಂದು ದಿನಾಂಕ:- 05-02-2016 ರಂದು ಮಧ್ಯಾಹ್ನ 2:15 ಗಂಟೆಗೆ ಹಾಜರಪಡಿಸಿದ್ದು ಅದರ ಸಾರಾಂಶ ಏನಂದರೆ, “ ದಿನಾಂಕ: 01-02-2016 ರಂದು ಸಂಜೆ 7:30 ಗಂಟೆಗೆ ಬಾಡಿಗೆ ಹಣ ತಗೆದುಕೊಂಡು ಬರಲು ಮರಳಿ ಗ್ರಾಮಕ್ಕೆ ಹೋಗಿದ್ದು ಬಾಡಿಗೆ ಹಣ ತಗೆದುಕೊಂಡು ಯಾವುದೋ ಒಂದು ಮೋಟಾರ ಸೈಕಲ ಮೇಲೆ ಡಣಾಪೂರ ಕ್ರಾಸಗೆ ಬಂದು ಕಾಲು ಮಡಿಯಲು ರಸ್ತೆಯನ್ನು ದಾಟುತ್ತಿರುವಾಗ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಸಿಂಧನೂರ ಕಡೆಯಿಂದ ಮಾರುತಿ 800 ಕಾರ್ ನಂ: ಕೆ.ಎ-35/ಎನ್-0668 ನೇದ್ದರ ಚಾಲಕ ಟಿ.ಹರಿಕೃಷ್ಣ ತಂದೆ ವೆಂಕಟಸುಬ್ಬಯ್ಯ ಸಾ: ಗಂಗಾವತಿ ಎಂಬುವನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಎಡಗಾಲು ಮೊಣಕಾಲು ಚಿಪ್ಪಿಗೆ ತೀವ್ರ ಪೆಟ್ಟಾಗಿ ಮುರಿದಿದ್ದು ಮತ್ತು ಎಡಗಡೆ ಬುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ರಸ್ತೆಯಲ್ಲಿ ಹೊರಟಿದ್ದ ನಾಗೇಶ್ವರರಾವ್ ಸಾ: ಮರಳಿ ಎಂಬುವರು ನನ್ನನ್ನು ಎಬ್ಬಿಸಿ ಅಪಘಾತ ಮಾಡಿದ ಕಾರಿನಲ್ಲಿಯೇ ಚಿಕಿತ್ಸೆ ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಬಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಮಾಡಿದ ವೈಧ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಹೆಂಡತಿ ಪ್ರೇಮಾ ಇವಳು ಎಸ್.ಡಿ.ಎಂ. ಆಸ್ಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ನನಗೆ ತೀವ್ರವಾಗಿ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತಸೆ ಪಡೆದು ದೂರು ನೀಡಲು ತಡವಾಗಿದೆ. ಕಾರಣ ಮಾನ್ಯರು ಈ ಅಪಘಾತಕ್ಕೆ ಕಾರಣನಾದ ಮಾರುತಿ 800 ಕಾರ್ ನಂ: ಕೆ.ಎ-35/ಎನ್-0668 ನೇದ್ದರ ಚಾಲಕ ಟಿ. ಹರಿಕೃಷ್ಣ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 72/2016 ಕಲಂ: 143, 147, 148, 447, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 05-02-2016 ರಂದು ಸಂಜೆ 5:00 ಗಂಟೆಗೆ ಶ್ರೀಮತಿ ದ್ಯಾಮಮ್ಮ ಗಂಡ ದಿ: ಕರಿಯಪ್ಪ, ವಯಸ್ಸು 62 ವರ್ಷ, ಉ: ಒಕ್ಕಲುತನ ಹಾಗೂ ಮನೆಗೆಲಸ ಸಾ: ವೆಂಕಟಗಿರಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಚಿಕ್ಕಬೆಣಕಲ್ ಗ್ರಾಮದ ಭೂಮಿ ಸರ್ವೆ ನಂ: 12/2/1 ವಿಸ್ತೀರ್ಣ 04 ಎಕರೆ ಮತ್ತು 12/2/ಬ ವಿಸ್ತೀರ್ಣ 4 ಎಕರೆ 03 ಗುಂಟೆ ಜಮೀನುಗಳು ನನ್ನ ಹಾಗೂ ನನ್ನ ಮಕ್ಕಳ ಹೆಸರಿನಲ್ಲಿ ಜಂಟಿಯಾಗಿರುತ್ತವೆ. ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. ನನ್ನ ಗಂಡನ ತಂಗಿಯಾದ ಶ್ರೀಮತಿ ಮರಿಯಮ್ಮ ಗಂಡ ದಿ: ಇಂದ್ರಪ್ಪ ಸಾ: ಚಿಕ್ಕಬೆಣಕಲ್ ಇವರು ನನ್ನ ಮೇಲಿನ ಆಸ್ಥಿಗಳ ಸಂಬಂಧ ಪಾಲು ಕೋರಿ ಮಾನ್ಯ ಸಿವಿಲ್ ನ್ಯಾಯಾಲದಲ್ಲಿ ದಾವೆ ಹೂಡಿದ್ದು, ಅದು ವಜಾಗೊಂಡಿರುತ್ತದೆ. ಇದರಿಂದ ದಿನಾಂಕ:- 04-02-2016 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಮಕ್ಕಳು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಸದರಿ ಮರಿಯಮ್ಮ ಮತ್ತು ಅವರ ಮಕ್ಕಳಾದ (1) ಮರಿಯಮ್ಮ ಗಂಡ ಇಂದ್ರೆಪ್ಪ (2) ಮಹಾದೇವಮ್ಮ ಗಂಡ ಪಾಮನಗೌಡ (3) ದ್ಯಾಮಮ್ಮ ಗಂಡ ಯಂಕಪ್ಪ (4) ಗೋವಿಂದಪ್ಪ ತಂದೆ ನರಸಪ್ಪ ಗೊಲ್ಲರು (5) ಮಹೆಬೂಬಸಾಬ ತಂದೆ ಶೇಖಸಾಬ ಎಲ್ಲರೂ ಸಾ: ಚಿಕ್ಕಬೆಣಕಲ್ ಎಲ್ಲರೂ ಸೇರಿಕೊಂಡು ನಮ್ಮ ಭೂಮಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಿ ಸದರಿ ಜಮೀನು ನಮ್ಮದು ಇರುತ್ತದೆ ನೀವು ಏಕೆ ಕೆಲಸ ಮಾಡುತ್ತೀರಿ ಎಂದು ಅವಾಚ್ಯವಾಗಿ ಬೈದು ಮಹಾದೇವಮ್ಮ ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಮಗನಾದ ನಾಗಪ್ಪನಿಗೆ ತಲೆಗೆ ಹೊಡೆದಳು. ನನ್ನ ಕಿರಿಯ ಮಗನಾದ ಮಲಿಯಪ್ಪನಿಗೆ ದ್ಯಾಮಮ್ಮ, ಮರಿಯಮ್ಮ ಇವರು ಕಟ್ಟಿಗೆ ಮತ್ತು ಕಲ್ಲನ್ನು ತೆಗೆದುಕೊಂಡು ತಲೆಗೆ, ಕಪಾಳಕ್ಕೆ ಮತ್ತು ಹೊಟ್ಟೆಗೆ ಹೊಡೆಯತೊಡಗಿದರು. ಇದರಿಂದ ರಕ್ತಗಾಯಗಳಾದವು. ಮತ್ತು ಮಹೆಬೂಬಸಾಬ ಮತ್ತು ಗೋವಿಂದಪ್ಪ ಇವರು ನಮಗೆಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೈಕೈ ಮುಟ್ಟಿ ನನ್ನ ಸೀರೆಯನ್ನು ಎಳೆದಾಡಿ, ನೆಲಕ್ಕೆ ಹಾಕಿ ನನ್ನ ಹೊಟ್ಟೆಗೆ ಒದ್ದರು. ನಂತರ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲಾ ಕಡಿದು ತುಂಡು ಮಾಡಿ ಹಾಕುತ್ತೇವೆ ಎಂದು ಜೀವದ ಬೆದರಿಕೆ ಹಾಕಿದರು. ನಂತರ ನನ್ನ ಮಕ್ಕಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಸಿಕೊಂಡರು. ನಂತರ ಊರ ಹಿರಿಯರು ರಾಜಿ ಮಾಡಿಸಲು ಪ್ರಯತ್ನಿಸಿದರು. ಆದರೆ ಅವರು ಒಪ್ಪದೇ ಇದ್ದಾಗ ಈಗ ನಾನು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ ಅವರು ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ನೀಡಿದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 38/2016 ಕಲಂ: 279, 337, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.

ದಿ:05-02-16 ರಂದು ರಾತ್ರಿ 9-10 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕತ್ಸೆಗಾಗಿ ದಾಖಲಾದ ಬಗ್ಗೆ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನುಮಂತ ಹೂಗಾರ. ಸಾ: ಬೆಂಕಿನಗರ ಕೊಪ್ಪಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ದಿ:05-12-16 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ ಸೈಕಲ್ ನಂ: ಕೆಎ-36/ಕ್ಯೂ-2380 ನೇದ್ದನ್ನು ಓಡಿಸಿಕೊಂಡು ಕನಕಗಿರಿಯಿಂದ ಕೊಪ್ಪಳಕ್ಕೆ ಅಂತಾ ಮಾರ್ಗದ ವೆಂಕಟಾಪೂರ ಕ್ರಾಸ್ ದಾಟಿ ಕೊಪ್ಪಳ ಕಡೆಗೆ ಬರುತ್ತಿದ್ದಾಗ ಅದೇವೇಳೆಗೆ ನನ್ನ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಟಾಟಾ ಎಸಿ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಂದವನೇ ನನ್ನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ವಾಹನವನ್ನು ನಿಲ್ಲಿಸದೇ ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ನನಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಕಾರಣ ಅಪಘಾತ ಮಾಡಿ ನಿಲ್ಲಿಸದೇ ಹೋದ ಟಾಟಾ ಎಸಿ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಸೂಕ್ತ ಕಾನೂನ ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008