Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 7, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 392 ಐ.ಪಿ.ಸಿ:
ದಿನಾಂಕ: 06-02-2016 ರಂದು ಬೆಳಗಿನ ಜಾವ 4-00 ಗಂಟೆಗೆ ಫಿರ್ಯಾದಿದಾರರಾದ ಈರಣ್ಣ ತಂದೆ ಫಕೀರಪ್ಪ ಹಾದಿಮನಿ ಸಾ: ಬಿ.ಎನ್.ಆರ್.ಕೆ ಕಾಲೇಜ್ ಎದುರುಗಡೆ ಬಿ.ಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 05-02-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಹೆಂಡತಿ ಲಲಿತಾ ಮತ್ತು ಮಗಳು ವಿಜಯಾ ಇವರನ್ನು ಕೊಪ್ಪಳ ನಗರದ ಗವಿಸಿದ್ದೇಶ್ವರ ಜಾತ್ರೆಗೆ ಹೋಗಿ ಬಿಟ್ಟು ಬಂದಿರುತ್ತಾರೆ.  ನಂತರ ರಾತ್ರಿ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಹೆಂಡತಿ ಹಾಗೂ ಅವರ ಮಗಳು ತಮ್ಮ ಮನೆಗೆ ಬಿ.ಟಿ ಪಾಟೀಲ್ ನಗರದ ಅರಿಹಂತ ಕಂಪ್ಯೂಟರ್ಸ್ ಮುಂದಗಡೆಯ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಯಾವನೋಬ್ಬ ದುಷ್ಕರ್ಮಿಯು ದ್ವಿ-ಚಕ್ರ ವಾಹನದಲ್ಲಿ ಹಿಂದುಗಡೆಯಿಂದ ಬಂದು ಫಿರ್ಯಾದಿದಾರರ ಹೆಂಡತಿಯ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೋಳ್ಳು ಯತ್ನಿಸಿದ್ದಾಗ ಫಿರ್ಯಾದಿದಾರರ ಹೆಂಡತಿಯು ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದು ಆಗ ಆ ದುಷ್ಮರ್ಮಿಯು ಬಲವಂತವಾಗಿ ಕಿತ್ತುಕೊಂಡಾಗ ಮಾಂಗಲ್ಯ ಸರದಲ್ಲಿ ಅರ್ಧ ಸರ ಅಂ ತೂ 20 ಗ್ರಾಂ ನಷ್ಟು ಕಿತ್ತುಕೊಂಡು ಮುಂದುಗಡೆಯಿಂದ ಕುಡಿಯುವ ನೀರಿನ ಘಟಕದ ಕಡೆಯಿಂದ ಕುಷ್ಠಗಿ ರಸ್ತೆಯ ಕಡೆ ಹೋಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರರ ಹೆಂಡಿತಿಯು ಸದರಿ ಸ್ಥಳದಲ್ಲಿ ಕತ್ತಲ್ಲಿದ್ದ ಕಾರಣ ಆ ದುಷ್ಮರ್ಮಿಯ ಚಹರೆ ಪಟ್ಟಿಯನ್ನು ಗುರುತಿಸಿರುವುದಿಲ್ಲಾ, ಅವನು ಹಸಿರು ಬಣ್ಣದ ಶರ್ಟ ಹಾಕಿಕೊಂಡಿದ್ದನು ಮತ್ತು ಆ ಮೋಟಾರ ಸೈಕಲ್ ಕಪ್ಪು ಬಣ್ನದ ಇರುತ್ತದೆ. ಕಾರಣ ಮಾನ್ಯರವರು ತನ್ನ ಹೆಂಡತಿಯ ಕೋರಳಲ್ಲಿದ್ದ ಮಾಂಗಲ್ಯ ಸರದಲ್ಲಿ ಅಂ ತೂ 20 ಗ್ರಾಂ ಬಂಗಾರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ದುಷ್ಮರ್ಮಿಯನ್ನುಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೇನು.
2) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 11/2016 ಕಲಂ: 143, 147, 148, 323, 324, 504, 506 ಸಹಿತ 149 ಐ.ಪಿ.ಸಿ:.
ಫಿರ್ಯಾದಿದಾರರು ಮತ್ತು ಆರೋಪಿತರು ಅಣ್ಣ ತಮ್ಮಂದಿರಿದ್ದು ಫಿರ್ಯಾದಿದಾರನ ತಂದೆ ಬಸವರಾಜ ಇವರು ತಾಲೂಕ ಪಂಚಾಯತ ಚುನಾವಣೆಯಲ್ಲಿ ಸದಸ್ಯ ಸ್ಥಾನಕ್ಕೆ ಆಕಾಂಕ್ಷಿಯಾಗಿ ನಾಮ ಪತ್ರ ಸಲ್ಲಿಸಿದ್ದು ಇದೆ ವಿಷಯಕ್ಕೆ ಆರೋಪಿತರು  ಫಿರ್ಯಾದಿದಾರರೊಂದಿಗೆ ವೈಮಸ್ಸು ಮಾಡಿಕೊಂಡು ಸಿಟ್ಟಾಗಿದ್ದು ಇರುತ್ತದೆ. ನಾಂಕ: 05.02.2016 ರಂದು ಬೆಳಿಗ್ಗೆ ಫಿರ್ಯಾದಿಮತ್ತು ಇವನ ತಂದೆ ಬಸವರಾಜ ಹಾಗೂ ಇತರೆ ಜನರು ಕೂಡಿಕೊಡು ಮಾಟಲದಿನ್ನಿ ಸೀಮಾದಲ್ಲಿ ಇರುವ ಮಹೇಶ ಹಳ್ಳಿ ಎಂಬುವರ ತೋಟದಲ್ಲಿ ಒಬ್ಬರಿಗೊಬ್ಬರು ಮತನಾಡುತ್ತಾ ಕುಳಿತುಕೊಂಡಿದ್ದಾಗ ನಂತರ ಮದ್ಯಹ್ನ 12:30 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಫಿರ್ಯಾದಿದಾರರೊಂದಿಗೆ  ವಿನಾ ಕಾರಣ ಜಗಳ ತೆಗೆಯುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಅಲ್ಲಿಗೆ ಬಂದವರೇ ಫಿರ್ಯಾದಿದಾರ ತಂದೆ ಬಸವರಾಜನಿಗೆ ಏನ್ ಲೇ ಬೋಸಡಿ ಮಗನೇ ನೀನು ಯಾರಿಗೂ ಹೇಳದೆ ಕೆಳದೆ  ತಾಲೂಕ ಪಂಚಾಯತಿ ಚುನಾವಣೆಗೆ ಯಾಕೆ ನಾಮ ಪತ್ರ ಸಲ್ಲಿಸಿದಿ ನೀನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅಂದವರೆ ಆರೋಪಿತರ ಪೈಕಿ ಆರೋಪಿ ನಂ 1 ಸೋಮಣ್ಣ ಮೂಲಿ ಇವನು ಫಿರ್ಯಾದಿದಾರನ ತಂದೆ ಬಸವರಾಜನಿಗೆ ಕೈಯಿಂದ ಹೊಡೆದಿದ್ದು ಆಗ ಜಗಳು ಬಿಡಿಸಲು ಬಂದು ಫಿರ್ಯಾದಿದಾರನಿಗೆ ಆರೋಪಿ ನಂ 2 ವೀರುಪಾಕ್ಷಪ್ಪ ಮೂಲಿ ಇವನು ಕಟ್ಟಿಗೆಯಿಂದ ಹೊಡೆದಿದ್ದು ಇನ್ನೂಳಿದ ಆರೋಪಿ ನಂ 3  ಉಮೇಶಪ್ಪ ಮೂಲಿ, 4 ಹನಮಂತಪ್ಪ ಮೂಲಿ, 5 ಪ್ರಭುರಾಜ ಮೂಲಿ ಇವರೆಲ್ಲರೂ ಪಿಯರ್ಾದಿದಾರನಿಗೆ ಕೈಯಿಂದ ಮೈಕೈಗೆ ಹೊಡೆ ಬಡಿ ಮಾಡಿದ್ದು ಅಲ್ಲದೇ ಆರೋಪಿತರೆಲ್ಲರೂ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಫಿರ್ಯಾದಿದಾರರು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ನಂತರ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 96(ಬಿ) & (ಸಿ) ಕೆ.ಪಿ. ಕಾಯ್ದೆ:.
ದಿನಾಂಕ 06-02-2016 ರಂದು ಬೆಳಿಗ್ಗೆ 6-00 ಗಂಟೆಗೆ ಯಲ್ಲಪ್ಪ ಸಿಪಿಸಿ 98 ಕೊಪ್ಪಳ ನಗರ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯೊಂದಿಗೆ ಒಬ್ಬ ಆರೋಪಿತನೊಂದಿಗೆ ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಂಶವೇನೆಂದರೆ, ಇಂದು ದಿನಾಂಕ 06-02-2016 ರಂದು ಬೆಳಿಗ್ಗೆ 4-00 ಗಂಟೆಯಿಂದ ನಗರದಲ್ಲಿ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿ ಪಿಸಿ 172 ರವರೊಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಗರದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸಂಶಯಾಸ್ಪದವಾಗಿ ಸಿಕ್ಕ ಆರೋಪಿತನಾದ ಗುಲಾಬಷಾವಲಿ @ ಗುಲಾಬ ತಂದೆ ಮೈನುದ್ದಿನಸಾಭ ಚುಮ್ಣಾ ವಯಾ: 30 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: ಕಪಾಲಿ ಓಣಿ ಕೊಪ್ಪಳ ಈತನನ್ನು ಹಿಡಿದುಕೊಂಡು ರಾತ್ರಿ ವೇಳೆಯಲ್ಲಿ ಸದರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲಾಗಿ ಸಮರ್ಪಕವಾದ ಉತ್ತರ ಕೊಡದೆ ಇರುವುದರಿಂದ ಅವನ ಮೇಲೆ ಸಂಶಯ ಬಂದು ಬೆಳಿಗ್ಗೆ ಠಾಣೆಗೆ ಕರೆತಂದು ಠಾಣೆಯ ದಾಖಲೆಗಳನ್ನ ಪರಿಶೀಲಿಸಿ ನೋಡಲಾಗಿ ಸದರಿಯವನು ನಮ್ಮ ಠಾಣೆಯ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಇರುತ್ತದೆ. ನಂತರ ಬೆಳಗಿನ ಜಾವ 6-00 ಗಂಟೆಗೆ ಫಿರ್ಯಾದಿಯನ್ನ ತಯಾರಿಸಿ ಮುಂದಿನ ಕ್ರಮ ಜರುಗಿಸುವಂತೆ ಫಿರ್ಯಾದಿಯೊಂದಿಗೆ ಆರೋಪಿತನನ್ನು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿ ಮೆಲಿಂದ  ಪ್ರಕರನದಾಖಲು ಮಾಡಿಕೊಂಡು ತನಿಖೆ .ಕೈಗೊಂಡೇನು.


0 comments:

 
Will Smith Visitors
Since 01/02/2008