Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow on FACEBOOK
Koppal District Police
As per SO 1017 New beat system is introduced in Koppal District. Click on Links to know your area in charge officers ASI/HC/PC

Monday, February 8, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 76/2016 ಕಲಂ:  498(ಎ), 323, 504, 506 ಸಹಿತ 34 ಐ.ಪಿ.ಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ 1961:

ದಿನಾಂಕ:- 30-01-2016 ರಂದು ಸಂಜೆ 7:00 ಗಂಟೆಗೆ ಫಿಯರ್ಾದಿದಾರರಾದ ಶ್ರೀಮತಿ ಭುವನ ಗಂಡ ಸಂದೀಪಕುಮಾರ ರೇಗುಲ ವಯಸ್ಸು 23 ವರ್ಷ, ಜಾತಿ: ಕಮ್ಮಾ ಉ: ಸಾಫ್ಟವೇರ್ ಇಂಜಿನಿಯರ್ ಸಾ: ಶ್ರೀರಾಮನಗರ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಖಿತ ಮಾಡಿಸಿದ ಫಿಯರ್ಾದಿಯನ್ನು ಹಾಜರ್ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.  ತನ್ನ ಮದುವೆಯು ದಿನಾಂಕ:- 22-04-2015 ರಂದು ಶ್ರೀ ಸಂದೀಪಕುಮಾರ ತಂದೆ ಶ್ರೀನಿವಾಸ ರೇಗುಲ ಸಾ: ಬಳ್ಳಾರಿ ಇವರೊಂದಿಗೆ ಆಗಿದ್ದು, ಮದುವೆಯ ಸಮಯದಲ್ಲಿ ಹಿರಿಯರ ಸಮಕ್ಷಮ ವರೋಪಚಾರಕ್ಕಾಗಿ 10 ಲಕ್ಷ ರೂಪಾಯಿ ನಗರು, 50 ತೊಲೆ ಬಂಗಾರದ ಒಡವೆಗಳು, 5 ಕೇಜಿ ಬೆಳ್ಳಿ ತಟ್ಟಿ ಮತ್ತು ಲೋಟಗಳು, 10 ತೊಲೆ ತೂಕದ ಬಂಗಾರದ ಬ್ರಾಸಲೇಟ್, ಒಂದು ಚೈನ, ಎರಡು ಉಂಗುರುಗಳು, ಹಾಗೂ ಬಟ್ಟೆಗಳಿಗಾಗಿ 50 ಸಾವಿರ ನಗದು ಮತ್ತು ಗೃಹ ಉಪಯೋಗಿ ವಸ್ತುಗಳನ್ನು ಕೊಟ್ಟು ನಂತರ ವರನಿಗೆ ಒಂದು ಖಾಲಿ ನಿವೇಶನ ಹಾಗೂ 4 ಎಕರೆ ಜಮೀನು ಕೊಡುವದಾಗಿ ಮಾತುಕತೆಯಾಗಿತ್ತು. ನಂತರ ಸುಮಾರು ಒಂದು ತಿಂಗಳ ಕಾಲ ತನ್ನ ತವರು ಮನೆಯಾದ ಶ್ರೀರಾಮನಗರದಲ್ಲಿಯೇ ವಾಸವಾಗಿದ್ದಾಗ ತನ್ನ ಗಂಡನು ತನ್ನೊಂದಿಗೆ ದಾಂಪತ್ಯದ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸದೇ ನಿರಾಶಕ್ತಿ ಹೊಂದಿ ನನ್ನಿಂದ ದೂರು ಮಲಗುವದು ಮಾಡತೊಡಗಿದನು.  ಹೆಚ್ಚಿನ ವರದಕ್ಷಿಣಿಗಾಗಿ ಪೀಡಿಸುತ್ತಾ ಜಗಳ ತಗೆದು ಹೊಡೆಬಡೆ ಮಾಡುತ್ತಿದ್ದನು. ನಂತರ ನಮ್ಮ ತಂದೆ ತಾಯಿಯವರು ಹಿರಿಯರ ಸಮಕ್ಷಮದಲ್ಲಿ ರಾಜಿ ಪಂಚಾಯತಿ ಮಾಡಿದರೂ ಸಹ ಅವರು ಮಾತು ಕೇಳದೇ ಪುನ: ಅದೇ ರೀತಿ ಕಿರುಕಳ ನೀಡಿದ್ದು ಈತನೊಂದಿಗೆ ಆತನ ತಂದೆ ಶ್ರೀನಿವಾಸ ರೇಗುಲ ತಾಯಿ ಸತ್ಯವತಿ, ಇವರುಗಳ ಸಹ ಗಂಡನ ಮನೆಯಾದ ಬಳ್ಳಾರಿಗೆ ಹೋದಾಗ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಾ ಹೊಡಿ-ಬಡಿ ಮಾಡುತ್ತಾ ಕಿರುಕುಳ ನೀಡಿದ್ದು, ಇವರೊಂದಿಗೆ ಸಂಧೀಪನ ತಮ್ಮನಾದ ದೇಹಲಿಯಲ್ಲಿರುವ ರಾಜಕುಮಾರ ಈತನು ಸಹ ಪೋನ್ ಮಾಡಿ ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ಕಾರ್ ತರದಿದ್ದರೆ ಅವಳಿಗೆ ಸುಮ್ಮನೇ ಬಿಡಬೇಡಿ ಅಂತಾ ಕುಮ್ಮಕ್ಕು ಕೊಡುತ್ತಿದ್ದನು. ಅದಕ್ಕಾಗಿ ತನಗೆ ಹೊಡೆಬಡೆ ಮಾಡಿ ತವರು ಮನೆಗೆ ಕಳುಹಿಸಿರುತ್ತಾರೆ. ಕಾರಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ ದೂರು ಸಲ್ಲಿಸಿದ್ದು ನಂತರ ಶ್ರೀಮತಿ ಭುವನ ಮತ್ತು ಶ್ರೀ ಸಂದೀಪಕುಮಾರ ರೇಗುಲ ದಂಪತಿಗಳ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಪಟ್ಟಿದ್ದು, ಕಾರಣ ಅವರ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಿ, ಕೌನ್ಸಲಿಂಗ್ ಮಾಡುವ ಅವಶ್ಯಕತೆ ಇದ್ದುದರಿಂದ ಮಾನ್ಯ ಶಿಶು ಅಭಿವೃದ್ದಿ ಅಧಿಕಾರಿಗಳು ಗಂಗಾವತಿ ಇವರಲ್ಲಿ ಪತ್ರದ ಮೂಲಕ ಕಳುಹಿಸಿಕೊಟ್ಟಿದ್ದು, ಆದರೆ ಕೌನ್ಸಲಿಂಗ್ ನಲ್ಲಿ ಸಮಸ್ಯೆ ಇತ್ಯರ್ಥವಾಗದೇ ಇದ್ದುದರಿಂದ ಮುಂದಿನ ಕ್ರಮಕ್ಕಾಗಿ ಇಂದು ದಿನಾಂಕ: 08-02-2016 ರಂದು ಸಂಜೆ 5:00 ಗಂಟೆಗೆ ಪತ್ರವನ್ನು ಕಳುಹಿಸಿದ್ದು ಅದರ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ: 76/2016 ಕಲಂ: 498(ಎ), 323, 504, 506, 109 ರೆಡ್ ವಿತ್ 34 ಐ.ಪಿ.ಸಿ. ಮತ್ತು 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008