1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ. 78(3)
Karnataka Police Act.
ದಿನಾಂಕ: 29-03-2016 ರಂದು ರಾತ್ರಿ
9-15 ಗಂಟೆಗೆ ಮಾನ್ಯ
ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ,
ಪಂಚನಾಮೆ
ಸಾರಾಂಶವೆನೆಂದರೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ರಾತ್ರಿ
7-15 ಗಂಟೆಗೆ ಕುಷ್ಟಗಿ
ಠಾಣಾ ವ್ಯಾಪ್ತಿಯ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ
ಹತ್ತಿರ ಗನೇಶ
ಹೊಟೇಲ್ ಮುಂದೆ ಮಟ್ಕಾ ಜೂಜಾಟ
ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1)
ಅನಿಲ ತಂದೆ ಮೋತಿಲಾಲಸಾ ರಂಗ್ರೇಜಿ ವಯ:
26 ವರ್ಷ,
ಜಾ:
ಸಾವಜಿ ಉ:
ಕೂಲಿಕೆಲಸ ಸಾ:
ಸಂದೀಪ ನಗರ ಕುಷ್ಟಗಿ
2] ಪರಶುರಾಮ ತಂದೆ ಕುಳುಕುಸಾ
ಕಠಾರಿ ವಯ:
37 ವರ್ಷ,
ಜಾ:
ಸಾವಜಿ ಉ:
ವ್ಯಾಪಾರ ಸಾ: ಗಜೇಂದ್ರಗಡ ಹಾಲಿ ವಸ್ತಿ: ವಿಷ್ಣುತೀರ್ಥ ನಗರ ಕುಷ್ಟಗಿ ರವರನ್ನು
ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63, ಪಿ.ಸಿ-117,24 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 7-15
ಪಿ.ಎಂ ಗೆ ಕುಷ್ಟಗಿ ಬಸ್ ನಿಲ್ದಾಣದ ಹತ್ತಿರ
ದೂರದಲ್ಲಿ
ನಿಂತು ನೋಡಲು ಗಣೇಶ ಹೊಟೇಲ್ ಮುಂದೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ
ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು
ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು,
ಮಟಕಾ ಬರೆಯುದ್ದವನು
ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಗಣೇಶ ತಂದೆ ತಿಪ್ಪಣ್ಣ ಕಾಟವಾ ವಯಾ: 25 ವರ್ಷ ಜಾತಿ: ಸಾವಜಿ ಉ:
ವ್ಯಾಪಾರ ಸಾ: ವಿದ್ಯಾನಗರ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಹಣ ಪಡೆದು 1
ರೂಪಾಯಿಗೆ 80
ರೂಪಾಯಿ ಕೊಡುವುದಾಗಿ
ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು.
ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 1360-00 ರೂಪಾಯಿ
ನಗದು ಹಣ, ಒಂದು ಶ್ಯಾಮಸಂಗ್
ಕಂಪನಿಯ ಮೊಬೈಲ್ ಅಂ ಕಿ. 400-00 ರೂ,
ಒಂದು ಬಾಲ್ ಪೆನ್ನು
ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
2)
ಬೇವೂರ
ಪೊಲೀಸ್ ಠಾಣೆ ಗುನ್ನೆ ನಂ: 21/2016 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ : 29.03.2016 ರಂದು ಬೆಳಗಿನ ಜಾವ 05:30 ಗಂಟೆ ಸುಮಾರಿಗೆ ಕುಷ್ಟಗಿ - ಹೊಸಪೇಟ್ ಎನ್ಹೆಚ್ 50 ರಸ್ತೆಯ ಮೇಲೆ ಪುಟಗಮರಿ ಕ್ರಾಸ್ ಹತ್ತಿರ ರೋಡ ಹಂಪ್ಸ ಇದ್ದುದ್ದರಿಂದ ಫಿರ್ಯಾದಿದಾರನು ತಾನು ನಡೆಸುತ್ತಿದ್ದ ಬಸ್ ನಂ KA-42 / 7787 ನೇದ್ದನ್ನು ಸಿಗ್ನಲ್ ಹಾಕುತ್ತಾ ನಿಧಾನವಾಗಿ ನಡೆಸಿಕೊಂಡು ಹೋಗುವ ಕಾಲಕ್ಕೆ ಅದೇ ವೇಳೆಗೆ ಹಿಂದಿನಿಂದ ಆರೋಪಿತನು ತಾನು ನಡೆಸುತ್ತಿದ್ದ ವರಲಕ್ಷ್ಮೀ ಟ್ರಾವೇಲ್ಸ್ ಬಸ್ ನಂಬರ KA-51 C-7894 ನೇದ್ದನ್ನು ಹೊಸಪೇಟಿ ಕಡೆಯಿಂದ ಕುಷ್ಟಗಿ ಕಡೆಗೆ ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದವನೇ ಮುಂದೆ ಹೊರಟಿದ್ದ ಫಿರ್ಯಾದಿದಾರನ ಬಸ್ಸಿಗೆ ಅಂತರವನ್ನು ಕಾಪಾಡದೆ ಸದರಿ ಬಸ್ಸಿಗೆ ಆರೋಪಿತನು ಹಿಂದಿನಿಂದ ಟಕ್ಕರ್ ಕೊಟ್ಟು ಅಪಘಾತ ಮಾಡಿದರಿಂದ ಸದರಿ ಅಫಘಾತದಲ್ಲಿ ಫಿರ್ಯಾದಿಗೆ ಹಾಗೂ ಪಿಯರ್ಾದಿದಾರನ ಬಸ್ಸಿನಲ್ಲಿದ್ದ ಸುಮಾರು 07 ಜನ ಪ್ರಯಾಣಿಕರಿಗೆ ಹಾಗೂ ಅಪಘಾತ ಮಾಡಿದ ಆರೋಪಿತನಿಗೆ ಮತ್ತು ಸದರಿ ಆರೋಪಿತನ ಬಸ್ಸಿನಲ್ಲಿದ್ದ ಸುಮಾರು 10-12 ಜನ ಪ್ರಯಾಣಿಕರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಹಾಗೂ ಭಾರಿ ಒಳಪೆಟ್ಟುಗಳಾಗಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment