Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 29, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 104/2016 ಕಲಂ. 87 Karnataka Police Act.
ದಿನಾಂಕ 28-03-2016 ರಂದು ರಾತ್ರಿ 10-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಕಂದಕೂರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-63 ಪಿ.ಸಿ-109, 116,117,161, 407, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 7 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 10900-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 72/2016 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:28-03-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗಂಗಮ್ಮ ಗಂಡ ಯಂಕಪ್ಪ ಹಲಗಿ. ಸಾ: ಕುಣಿಕೇರಿ. ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:28-03-16 ರಂದು ಮಧ್ಯಾಹ್ನ 1-00 ಗಂಟೆಗೆ ಮೃತ ಯಂಕಪ್ಪನು ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಊರಿಗೆ ಅಂತಾ ತನ್ನ ಮೋಟಾರ ಸೈಕಲ್ ನಂ: ಕೆಎ-37/ಯು-1801 ನೇದ್ದನ್ನು ಓಡಿಸಿಕೊಂಡು ಗಾಳೆಮ್ಮ ಗುಡಿಯ ಸಮೀಪ ಬರುವಾಗ ಗೊಂಡಬಾಳ ಕಡೆಯಿಂದ ಟಿಪ್ಪರ ಲಾರಿ ನಂ: ಕೆಎ-35/9552 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಮೃತ ಯಂಕಪ್ಪನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಯಂಕಪ್ಪನಿಗೆ ಭಾರಿ ಪೆಟ್ಟುಗಳಾಗಿದ್ದು ಆತನಿಗೆ ಉಪಚಾರಕ್ಕಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಉಪಚಾರಕ್ಕೆ ಎಸ್.ಡಿ.ಎಮ್ ಆಸ್ಪತ್ರೆ ಧಾರವಾಢಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗದ ಲಕ್ಕುಂಡಿ ಹತ್ತಿರ ಇಂದು ಸಾಯಂಕಾಲ 4-30 ಗಂಟೆಗೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟಿಪ್ಪರ ಚಾಲಕನು ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ವಾಹನದ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:28-03-2016 ರಂದು ರಾತ್ರಿ 11-30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯಮನೂರಪ್ಪ ಬೆಣಕಲ್. ಸಾ: ಒಣಬಳ್ಳಾರಿ ತಾ:ಜಿ: ಕೊಪ್ಪಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:28-03-16 ರಂದು ರಾತ್ರಿ ಫಿರ್ಯಾದಿಯು ತಮ್ಮ ಅಳಿಯ ಚೆನ್ನಪ್ಪ ಮ್ಯಾಗೇರಿ ಇವರ ತಂಗಿ ರತ್ನಮ್ಮ ಎಂಬ ಗರ್ಭಿಣಿ ಹೆಣ್ಣುಮಗಳಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿ ಇಬ್ಬರೂ ವಾಪಾಸ್ ತಮ್ಮೂರಿಗೆ ಹೋಗಲು ಅಂತಾ ತಮ್ಮ ಅಳಿಯ ಚೆನ್ನಪ್ಪನ ಮೋಟಾರ ಸೈಕಲ್ ನಂ: ಕೆಎ-37/ಕ್ಯೂ-3729 ನೇದ್ದರ ಹಿಂದೆ ಕುಳಿತುಕೊಂಡು ರಾತ್ರಿ 9-30 ಗಂಟೆಯ ಸುಮಾರಿಗೆ ಕೊಪ್ಪಳ-ಗಿಣಿಗೇರಿ ರಸ್ತೆಯ ಬಸಾಪೂರ ದಾಟಿ ಗಿಣಿಗೇರಿ ಕಡೆಗೆ ಹೋಗುತ್ತಿದ್ದಾಗ ಅದೇವೇಳೆಗೆ ಎದುರುಗಡೆ ಅಂದರೆ ಗಿಣಿಗೇರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-47/ಹೆಚ್-830 ನೇದ್ದು ಬರುತ್ತಿದ್ದು ಸದರಿ ಮೋಟಾರ ಸೈಕಲ್ ಹಿಂದೆ ಬರುತ್ತಿದ್ದ ಒಂದು ಲಾರಿಯ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ್ ಗೆ ನಿಗದಿತ ಅಂತರ ಕಾಪಾಡದೇ ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದಲ್ಲದೇ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಫಿರ್ಯಾದಿ ಕುಳಿತು ಬರುತ್ತಿದ್ದ ಮೋಟಾರ ಸೈಕಲ್ ಗೆ ಸಹ ಟಕ್ಕರ ಕೊಟ್ಟು ಅಪಘಾತ ಮಾಡಿ ಸದರಿ ಲಾರಿಯ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಕೊಪ್ಪಳ ಕಡೆಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಮೋಟಾರ ಸೈಕಲ್ ಸವಾರ ಚೆನ್ನಪ್ಪನಿಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಮತ್ತು ಇನ್ನೊಂದು ಮೋಟಾರ ಸೈಕಲ್ ನಂ:ಕೆಎ-47/ಹೆಚ್-830 ನೇದ್ದರ ಸವಾರ ಯಮನೂರಸಾಬ ನದಾಫ್ ಹಾಗೂ ಸದರಿ ಮೋಟಾರ ಸೈಕಲ್ ಹಿಂದೆ ಕುಳಿತು ಬಂದಿದ್ದ ಅಲ್ಲಾಸಾಬ ಅಂಗಡಿ ಇಬ್ಬರೂ ಸಾ: ಕರ್ಕಿಹಳ್ಳಿ ತಾ:ಜಿ: ಕೊಪ್ಪಳ ಎಂಬುವವರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಯಾವುದೋ ಲಾರಿ ಚಾಲಕನು ಎರಡೂ ಮೋಟಾರ ಸೈಕಲ್ ಗಳಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ನಿಲ್ಲಿಸದೇ ಹೋಗಿದ್ದು ಸದರಿ ವಾಹನ ಮತ್ತು ಲಾರಿಯ ಚಾಲಕನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 101/2016 ಕಲಂ: 279, 338,  304(ಎ) ಐ.ಪಿ.ಸಿ:.


ದಿನಾಂಕ 28-03-2016 ರಂದು ರಾತ್ರಿ 11-45 ಗಂಟೆಗೆ  ಫಿರ್ಯಾಧಿದಾರ ಶ್ರೀ ಹನುಮನಗೌಡ ತಂದೆ ಸಕ್ರಗೌಡ ಸಾ: ಭಟ್ಟರ ನರಸಾಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಗ್ರಾಮದ ನನ್ನ 2 ನೇ ಅಣ್ಣ -ತಮ್ಮಂದಿರ ಪೈಕಿ ಬಸವರಾಜ ತಂದೆ ನಾಗಪ್ಪ ಕಾರಪುಡಿ, ಅಳಿಯ ಮಂಜುನಾಥ ತಂದೆ ಹನುಮಂತಪ್ಪ ದಳಪತಿ ಮತ್ತು ಆಂಜನೇಯ ತಂದೆ ಯಲ್ಲಪ್ಪ ಈಳಿಗೇರ್ ಇವರೆಲ್ಲರೂ ಒಟ್ಟುಗೂಡಿ ಆಗಾಗ ಜಾತ್ರೆಗೆ ಮೋ.ಸೈ. ಮೇಲೆ ಹೋಗಿ ಬರುತ್ತಿದ್ದರು. ನನ್ನ ತಮ್ಮ ಬಸವರಾಜ, ಅಳಿಯ ಮಂಜುನಾಥ ಇವರಿಗೆ ಮೊ.ಸೈ. ನಡೆಸಲು ಬರುವದಿಲ್ಲ. ಅದರಂತೆ ಇಂದು ದಿನಾಂಕ 28-03-2016 ರಂದು ಸಂಜೆ 4-00 ಗಂಟೆಗೆ ಅಂಜನೇಯ ಇತನು ಹೊಸ ಹಿರೋ ಹೆಚ್.ಎಪ್.ಡಿಲೆಕ್ಸ್ ಮೋಟಾರ ಸೈಕಲ್ ನಂ.ಇರುವದಿಲ್ಲ. ಅದರ ಚಸ್ಸಿ ನಂ. MBLHA11ATG9B36944 ನೇದ್ದನ್ನು ತೆಗೆದುಕೊಂಡು ಬೆನಕನಾಳ ಗ್ರಾಮಕ್ಕೆ ಶರಣಬಸವೇಶ್ವರ್ ಜಾತ್ರೆಗೆ ಹೋಗಿ ಅಲ್ಲಿ ಜಾತ್ರೆ ಮುಗಿಸಿಕೊಂಡು ಕನಕಗಿರಿಯಲ್ಲಿ ಊಟ ಮಾಡಿಕೊಂಡು ವಾಪಸ್ ನಮ್ಮೂರಿಗೆ ಬರುತ್ತಿದ್ದರು. ಸದ್ರಿ ಮೊ.ಸೈ.ನ್ನು ಚಾಲಕ ಆಂಜನೇಯ ತಂದೆ ಯಲ್ಲಪ್ಪ ಈಳಿಗೇರ್ ಈತನು ನಡೆಸುತ್ತಿದ್ದು. ಆತನ ಹಿಂದೆ ಬಸವರಾಜ, ಮಂಜುನಾಥ ಇವರು ಕುಳಿತುಕೊಂಡಿದ್ದರು. ಆಂಜನೇಯ ಈತನು ರಾತ್ರಿ 9-00 ಗಂಟೆಯ ಸುಮಾರಿಗೆ ತನ್ನ ಮೊ.ಸೈ.ನ್ನು ಕನಕಗಿರಿ ಕಡೆಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಭಟ್ಟರ ನರಸಾಪೂರ ಕಡೆ ಬರುತ್ತಾ ರಾತ್ರಿ 9-30 ಗಂಟೆಯ ಸುಮಾರಿಗೆ ಅರಳಹಳ್ಳಿ ಕ್ರಾಸ್ ಹತ್ತಿರ ಅರಳಹಳ್ಳಿ ಸೀಮಾದ ಸಿದ್ದಪ್ಪ ನಾಗೂರ ಇವರ ಹೊಲದ ಪಕ್ಕದಲ್ಲಿ ರಸ್ತೆಯ ಬಾಜು ಇದ್ದ ಕುಡಿಯುವ ನೀರಿನ ಪೈಪಿಗೆ ಜೋರಾಗಿ ಟಕ್ಕರ್ ಕೊಟ್ಟಿದ್ದರಿಂದ ಮಂಜುನಾಥನು ಎರಡೂ ಮೊಣಕಾಲು ಕೆಳಗೆ ಭಾರಿ ಪೆಟ್ಟಾಗಿ ಮೂಳಗೆಗಳು ಮುರಿದು ಹೊರ ಬಂದಿದ್ದು, ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಅಲ್ಲದೇ ಭಾರಿ ಗಾಯಗೊಂಡ ಆಂಜನೇಯ, ಬಸವರಾಜ ಇವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಸವರಾಜ ತಂದೆ ನಾಗಪ್ಪ ಕಾರಪುಡಿ ಈತನು ಗಂಗಾವತಿ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಲಿಸದೇ ರಾತ್ರಿ 11-20 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಆಂಜನೇಯ ಇವರನ್ನು ಗಂಗಾವತಿಯಿಂದ ಕೊಪ್ಪಳಕ್ಕೆ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008