Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 28, 2016

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ. 143, 298, 109 ಸಹಿತ 149 ಐ.ಪಿ.ಸಿ:.  
ದಿನಾಂಕ 27-03-2016 ರಂದು ಮುಂಜಾನೆ 10-00 ಗಂಟೆಗೆ  ಸೈಯದ್ ನೂರುದ್ದೀನ್ ಖಾದ್ರಿ, ಜಾಮೀಯಾ ಮಸ್ಜೀದ್ ಕಮೀಟಿ ಅಧ್ಯಕ್ಷರು ಗಂಗಾವತಿ ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 26-03-2016 ರಂದು ಸಾಯಂಕಾಲ 5-30 ಗಂಟೆಗೆ ಹಿಂದೂ ಜಾಗರಣಾ ವೇದಿಕೆಯವರು ಶಿವಾಜಿ ಜಯಂತಿಯನ್ನು ಆಚರಿಸಲು ಸುಮಾರು ಸಾವಿರ ಜನರ ಮೆರವಣಿಗೆಯು ಜಾಮೀಯಾ ಮಸ್ಜೀದ ಮುಖಾಂತರ  ಹೋಗುತ್ತಿರುವಾಗ ಮೆರವಣಿಗೆಯಕಲ್ಲಿದ್ದ ಸುಮಾರು 50-60 ಜನರು ಮುಸ್ಲಿಂ ಜನಾಂಗದವರ ಭಾವನೆಗೆ ನೋವುಂಟು ಮಾಡುವ ಉದ್ದೇಶದಿಂದ ಮುಸ್ಲಿಂ ದೇವರ ಬಗ್ಗೆ ಅವಹೇಳನಕಾರಿಯಾದ ಪದಗಳನ್ನು ಉಚ್ಚರಿಸುತ್ತ ಹಾಗೂ ರಾಮ ಬಂದ ಕುದುರೆಯ ಮೇಲೆ, ಅಲ್ಲಾ ಬಂದ ತುಣಿ ಮೇಲೆ ಎಂದು ಉಚ್ಚರಿಸುತ್ತ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ಜನಾಂಗದವರ ಭಾವನೆಗೆ ನೋವುಂಟು ಮಾಡಿದವರ ವಿರುದ್ದ ಹಾಗೂ ಪ್ರಚೋಧನೆ ನೀಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 68/2016 ಕಲಂ. 143, 298, 109 ಸಹಿತ 149 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 69/2016 ಕಲಂ. 37 ಸಹಿತ 109 Karnataka Police Act.  
ದಿನಾಂಕ 26-03-2016 ರಂದು ಗಂಗಾವತಿ ನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯವರು ಶಿವಾಜಿ ಜಯಂತಿಯನ್ನು ಅಚರಣೆ ಮಾಡಿದ್ದು ಅಲ್ಲದೇ ಶಿವಾಜಿ ಜಯಂತಿಯ ಅಚರಣೆಯನ್ನು ಮಾಡುವ ಕುರಿತು ಅಟೋ ನಂಬರು ಕೆಎ-34-2243 ನೇದ್ದಕ್ಕೆ ಮೈಕ್ ಸೆಟ್ ಅಳವಡಿಸಿ ಪ್ರಚಾರವನ್ನು ಮಾಡಿದ್ದು ಹಾಗೂ ನಗರದ ಎ.ಪಿ.ಎಂ.ಸಿ. ಯಾರ್ಡಿನಿಂದ ಮೆರವಣಿಗೆಯ ಮುಖೇನಾ ನಗರದ ಮುಖ್ಯ ರಸ್ತೆಗಳ ಮುಖಾಂತರವಾಗಿ ಶ್ರೀ ಕೊಟ್ಟುರು ಬಸವೇಶ್ವರ ದೇವಸ್ಥಾನಕ್ಕೆ ಬಂದು ದೇವಸ್ಥಾನದ ಆವರಣದಲ್ಲಿ ವೇದಿಕೆಯ ಕಾರ್ಯಕ್ರಮವನ್ನು ನಿರ್ವಹಿಸಿರುತ್ತಾರೆ.  ಸದರಿಯವರು ಶಿವಾಜಿ ಜಯಂತಿ ಕಾರ್ಯಕ್ರಮದ ಸಲುವಾಗಿ ಧ್ವನಿವರ್ಧಕ ಉಪಯೋಗಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಲ್ಲಿ ಅನುಮತಿ ಪಡೆದುಕೊಂಡಿರುವುದಿಲ್ಲ.   ಹಿಂದೂ ಜಾಗರಣಾ ವೇದಿಕೆಯವರು ಕಲಂ: 37 ಸಹಿತ 109 ಕ.ಪೊ. ಕಾಯ್ದೆ ಅಡಿಯಲ್ಲಿ ಅಪರಾಧ ವೆಸಗಿದ್ದು ಸದರಿ ಅಫರಾದವು ಆಸಂಜ್ಞೆಯ ಅಪರಾಧ ಅಗಿದ್ದರಿಂದ ಅರೋಪಿತರ ವಿರುದ್ದ ಕಲಂ 37 ಸಹಿತ 109 ಕ.ಪೊ. ಕಾಯ್ದೆ ಅಡಿಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 52/2016 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ 27-03-2016 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೇಂದರೆ, ಇಂದು ದಿನಾಂಕ: 27-03-2016 ರಂದು ಬೆಳಗ್ಗೆ 08-30 ಗಂಟೆಯ ಸುಮಾರಿಗೆ ಮೃತ ರಿಯಾಜ್ ಅಹ್ಮದ್ ಬಿಸ್ತಿ ಈತನು ತಾನು ನಡೆಸಿಕೊಂಡು ಬರುತ್ತಿದ್ದ ಮೋಟರ್ ಸೈಕಲ್ ನಂ:ಕೆಎ-26 ಎ-2239 ನೇದ್ದನ್ನು ಕೊಪ್ಪಳ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ವೇಗದ ನಿಯಂತ್ರಣ ತಪ್ಪಿ, ರಸ್ತೆಯ ಬಲ ಬದಿಗೆ ಮೋಟರ್ ಸೈಕಲ್ ನೊಂದಿಗೆ ಬಿದ್ದು, ಮೋಟರ್ ಸೈಕಲ್ ಮೃತನ ಮೇಲೆ ಬಿದ್ದ ಪರಿಣಾಮ ಮೃತನಿಗೆ ಬಲಗಡೆಯ ಕಪಾಳಕ್ಕೆ, ಹಣೆಯ ಮೇಲೆ, ಎಡಗಣ್ಣಿನ ಹುಬ್ಬಿಗೆ, ಬಲಗೈ ಮೋಣ ಕೈ ಕೆಳಗಿನ ಭಾಗದಲ್ಲಿ, ಬಲಗಾಲಿನ ಒಳ ಹಿಮ್ಮಡಿಗೆ, ಬಲಗಾಲ ಮೋಣ ಕಾಲ ಹತ್ತಿರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಸದರಿ  ರಿಯಾಜ್ ಅಹ್ಮದ್ ತಂದೆ ಜಂದಿಸಾಬ ಬಿಸ್ತಿ ಸಾ: ಮುಂಡರಗಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿದಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 14/2016 ಕಲಂ: 279, 337 ಐ.ಪಿ.ಸಿ:.
ದಿನಾಂಕ 27-03-2016 ರಂದು ಬೆಳಿಗ್ಗೆ 9-00 ಗಂಟೆಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 27-03-2016 ರಂದು ಬೆಳಿಗ್ಗೆ 8-45 ಗಂಟೆಗೆ ಫಿರ್ಯಾದಿಯ ಹೆಂಡತಿ ನೀಲಾ ಈಕೆಯು ಹಾಲನ್ನು ತೆಗೆದುಕೊಂಡು ಬರಲು ಕಿಮ್ಸ ಆಸ್ಪತ್ರೆಯ ಮುಂದೆ ಹೊಗಲು ತಮ್ಮ ಹೊಟೆಲ್ ಮುಂದೆ ಇರುವ ಗಂಗಾವತಿ ರಸ್ತೆಯನ್ನು ದಾಟುತ್ತಿರುವಾಗ ಕೊಪ್ಪಳದ ಕಡೆಯಿಂದ ಈ ಕ್ರುಸರ್ ನಂಬರ. KA-37/5097 ನೆದ್ದರ ಚಾಲಕ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಹೆಂಡತಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಯ ಹೆಂಡತಿ ಪುಟಿದು ರಸ್ತೆಯ ಮೇಲೆ ಬಿದ್ದಳು. ಇದರಿಂದ ಆಕೆಯ ತಲೆಯ ಹಿಂದೆ ರಕ್ತಗಾಯ ಮತ್ತು ಬಲಬುಜಕ್ಕೆ, ಬಲಕಾಲಿಗೆ ಒಳಪೆಟ್ಟು ಆಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ  ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 72/2016 ಕಲಂ: 143, 147, 323, 355, 342, 504, 506 ಸಹಿತ 149  ಐ.ಪಿ.ಸಿ:.

ದಿನಾಂಕ 26-03-16 ರಂದು 08-00 ಎ.ಎಂ ಕ್ಕೆ  ಪಿರ್ಯಾದುದಾರನು ತನ್ನ ಹೊಲಕ್ಕೆ ಹೋಗುವಾಗ ನಾಗಪ್ಪ ದೊಡ್ಡಮನಿ ಇವರ ಹೊಲದಲ್ಲಿ ಬಿಡಿ ಸೇದಿ ಬೂದಿಯನ್ನು ಜಾಡಿಸಲು ಕೈ ಜಾಡಿಸಿದ್ದು ಇದನ್ನು ನೋಡಿದ ನಾಗಪ್ಪನ ಮಗ ಹನುಮೇಶ ಇತನು ಮಾಟಮಾಡಿ ಏನೋ ಒಗೆದಿರುವೆ ಸೂಳೆಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಹೋಗಿದ್ದನು, ನಂತರ ಪಿರಯಾದಿದಾರನು 09-00 ಎ.ಎಂ ಕ್ಕೆ ವಾಪಾಸ್ ಮನೆಗೆ ಬಂದಾಗ ಆರೋಪಿತರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಪಿರ್ಯಾದಿದಾರನ ಮನೆಗೆ ಬಂದು ಪರ್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಹೊಲಕ್ಕೆ ಎಳೆದುಕೊಂಡು ಹೋಗಿ ಹೊಲದಲ್ಲಿ ಚಪ್ಪಲಿಯಿಂದ , ಕೈಯಿಂದ  ಹೊಡೆದು ಹಗ್ಗದಿಂದ ಗಿಡಕ್ಕೆ ಕಟ್ಟಿಹಾಕಿ ನಂತರ ಎಲ್ಲರೂ ಕೂಡಿ ಪಿರ್ಯಾದಿಗೆ ಗಿಡಕ್ಕೆ ಕಟ್ಟಿದ ಹಗ್ಗ ಬಿಚ್ಚಿ ಕೈಗಳನ್ನು ಕಟ್ಟಿ ಊರಿನಲ್ಲಿ ಕರೆದುಕೊಂಡು ಬಂದು ಪಿರ್ಯಾದಿಗೆ ಕೆಂಚಮ್ಮನ ಗುಡಿ ಹತ್ತಿರ ಇರುವ ಲೈಟಿನ ಕಂಬಕ್ಕೆ ಕಟ್ಟಿ ಇಲ್ಲಿಯೂ ಕೂಡ ಚಪ್ಪಲಿಯಿಂದ , ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಷಣೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008