Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 20, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ: 376 ಮತ್ತು 4 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012:.
ದಿನಾಂಕ:- 19-03-2016 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿದಾರರಾದ ಕುಮಾರಿ  ವಯಾ: 17 ವರ್ಷ 5 ತಿಂಗಳು ಜಾತಿ: ಮಾದಿಗ, ಉ: ಮನೆಗೆಲಸ, ಸಾ: 3ನೇ ವಾರ್ಡ-ಪ್ರಗತಿನಗರ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದ ನಿವಾಸಿ ಇದ್ದು, ನಾನು ಗಂಗಾವತಿಯ ಹೆಚ್.ಆರ್. ಸರೋಜಮ್ಮ ಶಾಲೆಯಲ್ಲಿ 8ನೇ ತರಗತಿಯಿಂದ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ 10ನೇ ತರಗತಿಯನ್ನು ಅರ್ಧಕ್ಕೆ ಬಿಟ್ಟು ಮನೆಯಲ್ಲಿಯೇ ಇರುತ್ತಿದ್ದೆನು. ಸನ್ 2014ನೇ ಸಾಲಿನ ಫೆಬ್ರುವರಿ 1ನೇ ತಾರೀಖ ಮಧ್ಯಾಹ್ನ 2:30 ಗಂಟೆಯಿಂದ   ನಾನು ಪ್ರಗತಿನಗರದಿಂದ ಗಂಗಾವತಿಗೆ ಶಾಲೆಗೆ ಬರುವಾಗ ಹನುಮೇಶ ತಂದೆ ಹನುಮಂತ ವಯಸ್ಸು 26 ವರ್ಷ, ಜಾತಿ: ಮಾದಿಗ ಉ: ಟಾಟಾ ಮ್ಯಾಜಿಕ್ ವಾಹನ ಚಾಲಕ ಸಾ: ವಡ್ಡರಹಟ್ಟಿ ಹಾಲಿವಸ್ತಿ: ಲಕ್ಷ್ಮೀ ಕ್ಯಾಂಪ್-ಗಂಗಾವತಿ ಇತನು ನನ್ನನ್ನು ಹಿಂಬಾಲಿಸುತ್ತಾ, ನನ್ನನ್ನು ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳುತ್ತಿದ್ದನು. ಆದರೆ ಮೊದ ಮೊದಲಿಗೆ ನಾನು ಆತನ ಮಾತಿಗೆ ಒಪ್ಪಲಿಲ್ಲಾ. ನಂತರ ಅವನು ನಾನು ಹೋದ ಕಡೆಯೆಲ್ಲಾ ಹಿಂಬಾಲಿಸುತ್ತಾ ತಾನು ಒಬ್ಬ ಅನಾಥನಿದ್ದು, ತಂದೆ-ತಾಯಿ ಯಾರೂ ಇಲ್ಲಾ, ಬೇರೊಬ್ಬರೂ ತನ್ನನ್ನು ಸಾಕಿದ್ದಾರೆ ತನ್ನಂಥವರನ್ನು ಯಾರೂ ಇಷ್ಟ ಪಡುವುದಿಲ್ಲಾ, ಹಾಗೆ, ಹೀಗೆ ಅಂತಾ ನಾನಾ ವಿಷಯಗಳನ್ನು ತಿಳಿಸಿ ನನ್ನ ಮನವೊಲಿಸಿದ್ದರಿಂದ ನಾವಿಬ್ಬರೂ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದೆವು.  ನಂತರ ನಾವಿಬ್ಬರೂ ಕೂಡಿ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದೆವು. ನಂತರ  ಹನಮೇಶನು ಈಗ್ಗೆ 6 ತಿಂಗಳ ಹಿಂದೆ ಒಂದು ದಿವಸ ಪೇಂಟ್ ಪ್ಯಾಕ್ಟರಿಯ ಹಿಂದುಗಡೆ ಮತ್ತು ಇನ್ನೊಂದು ಬಾರಿ ನಮ್ಮೂರ ಶುಗರ್ ಫ್ಯಾಕ್ಟರಿಯ ಅಂಗನವಾಡಿ ಶಾಲೆಯ ಹತ್ತಿರ ಒಟ್ಟು ಎರಡು ಬಾರಿ ಸಂಭೋಗ ಮಾಡಿದನು. ಸಂಭೋಗ ಮಾಡಿದ 8-10 ದಿನಗಳ ನಂತರ ಅವನಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಅವನು ತನಗೆ ಮದುವೆಯಾಗಿರುತ್ತದೆ ಅಂತಾ ಹೇಳಿ ನನ್ನನ್ನು ಮದುವೆಯಾಗಲು ನಿರಾಕರಿಸಿದನು.  ಈ ವಿಷಯ ನನ್ನ ತಾಯಿ ಮತ್ತು ಅಕ್ಕ ಇವರಿಗೆ ತಿಳಿಸಿದಾಗ ಅವರೂ ಸಹ ಹನುಮೇಶನಿಗೆ ಕೇಳಿದಾಗ ಆತನು ಮದುವೆಯಾಗಲು ನಿರಾಕರಿಸಿದನು. ನಾನು ಅಲ್ಲಿಂದ ಇಲ್ಲಿಯವರೆಗೆ ಪದೇ ಪದೇ ಕೇಳುತ್ತಾ ಬಂದರೂ ಸಹ ಮದುವೆಯಾಗಲು ಒಪ್ಪದೇ ಇದ್ದಾಗ ನನಗೆ ಜೀವನ ತೀವ್ರ ಬೇಸರ ಉಂಟಾಗಿ ನಾನು ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ವಿಷವನ್ನು ತೆಗೆದುಕೊಂಡು ನನ್ನ ಹತ್ತಿರ ಇಟ್ಟುಕೊಂಡಿದ್ದೆನು. ನಾನು ಮನೆಯಿಂದ ಹೊರಗಡೆ ಗಂಗಾವತಿಗೆ ಬಂದಾಗ ಹನುಮೇಶನು ಕಂಡರೆ ಆತನ ಎದುರುಗಡೆ ವಿಷ ಕುಡಿಯಬೇಕೆಂದು ವಿಷದ ಬಾಟಲನ್ನು ನನ್ನ ಸಂಗಡ ಇಟ್ಟುಕೊಂಡು ಬರುತ್ತಿದ್ದೆನು.  ದಿನಾಂಕ:- 15-03-2016 ರಂದು ಸಂಜೆ ನಾನು ಗಂಗಾವತಿಗೆ ಬಂದಾಗ ಹನುಮೇಶನು ನನಗೆ ಕರೆ ಮಾಡಿ ಇಂದು ನಿನ್ನ ಎಲ್ಲಾ ಸಮಸ್ಯೆಯನ್ನು ಮಾತನಾಡಿ ಬಗೆಹರಿಸುತ್ತೇನೆ ಅಂತಾ ಹೇಳಿ ಗಂಗಾವತಿಯ ರಾಯಚೂರು ರಸ್ತೆಯಲ್ಲಿರುವ ರಾಣಾ ಪ್ರತಾಪ್ ಸಿಂಹ ವೃತ್ತದ ಹತ್ತಿರ ಕರೆದನು. ರಾತ್ರಿ 7:30 ರಿಂದ 8:00 ಗಂಟೆಯ ಅವಧಿಯಲ್ಲಿ ಹನುಮೇಶನು ನನ್ನೊಂದಿಗೆ ಮಾತನಾಡುತ್ತಾ ನನ್ನೊಂದಿಗೆ ಮದುವೆಯಾಗಲು ಒಪ್ಪಲಿಲ್ಲಾ ಇದರಿಂದ ನಾನು ಅವನ ಎದುರಿಗೆ ವಿಷ ಸೇವಿಸಿದೆನು. ಆಗ ಹನುಮೇಶನು ಬಾಟಲಿಯನ್ನು ಕಸಿದುಕೊಂಡು ಎಸೆದು ನನ್ನನ್ನು ಚಿಕಿತ್ಸೆಗಾಗಿ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದೆನು. ನಂತರ ವಿಷಯ ತಿಳಿದು ನನ್ನ ಅಕ್ಕ ಮತ್ತು ಇನ್ನೊಬ್ಬ ಅಕ್ಕ ಸಾ: ಹೆಚ್.ಆರ್.ಎಸ್. ಕಾಲೋನಿ ಗಂಗಾವತಿ ಇವರುಗಳು ಬಂದು ಹೆಚ್ಚಿನ ಚಿಕಿತ್ಸೆಗಾಗಿ ನನಗೆ ಗಂಗಾವತಿಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದರು. ನಾನು ಚಿಕಿತ್ಸೆ ಪಡೆದು ನಿನ್ನೆ ದಿವಸ ರಾತ್ರಿ ಬಿಡುಗಡೆಯಾಗಿ ಬಂದಿರುತ್ತೇನೆ. ಈಗ್ಗೆ 2 ವರ್ಷಗಳಿಂದ ಗಂಗಾವತಿಯ ಲಕ್ಷ್ಮೀ ಕ್ಯಾಂಪಿನ ಹನುಮೇಶ ತಂದೆ ಹನುಮಂತಪ್ಪ ಇವನು ಅಪ್ರಾಪ್ತ ವಯಸ್ಸಿನ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮನವೊಲಿಸಿ ಪ್ರೀತಿಸಿ ಎರಡು ಬಾರಿ ಸಂಭೋಗ ಮಾಡಿ ಈಗ ಮದುವೆಯಾಗುವುದಿಲ್ಲಾ ಅಂತಾ ಹೇಳುತ್ತಿದ್ದು ಕಾರಣ  ಹನುಮೇಶನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 65/2016 ಕಲಂ: 379 ಐ.ಪಿ.ಸಿ.
ದಿನಾಂಕ:19-03-2016 ರಂದು 7-00 ಪಿ.ಎಮ್ ಕ್ಕೆ. ಫಿಯರ್ಾದಿದಾರರಾದ ಶ್ರೀ ಆನಂದ. ಎಸ್.ಆರ್ ತಂದೆ ಎಸ್.ಎಸ್. ರಾಮಣ್ಣ.  ಸಾ: ರಾಮನಗರ ತಾ: ಹಗರಿಬೊಮ್ಮನಹಳ್ಳಿ. ಹಾ:ವ; ವಾರ್ಡ ನಂ: 03 ಗಂಗಾವತಿ ರಸ್ತೆ ಗಿಣಿಗೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೇಂದರೇ, ದಿ:20-12-2015 ರಂದು ರಾತ್ರಿ 11-00 ಗಂಟೆಯಿಂದ ದಿ:21-12-2015 ರಂದು ಬೆಳಿಗ್ಗೆ 06:00 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಮುಂದೆ ಇಟ್ಟಿದ್ದ ಸುಮಾರು 30,000=00 ರೂ. ಬೆಲೆಬಾಳುವ ನನ್ನ ಮೋಟಾರ ಸೈಕಲ್ ನಂ:ಕೆಎ-35/ಎಕ್ಸ-2752 ನೇದ್ದನ್ನು 1] ನಿಂಗಪ್ಪ ತಾಯಿ ಫಕೀರವ್ವ ಹರಿಜನ. ಸಾ: ಪುಟಗಾವ ಬಡ್ನಿ. 2] ಮಂಜುನಾಥ ತಂದೆ ಅಶೋಕಪ್ಪ ಬಡಿಗೇರ. ಸಾ: ಮೊರಬ. ತಾ: ನವಲಗುಂದ. 3] ಶಿದ್ದನಗೌಡ ತಂದೆ ಬಸನಗೌಡ ಲಿಂಗನಗೌಡ್ರ ಸಾ: ಕೋಡಬಾಳ. ತಾ: ಹಾವೇರಿ ಹಾ;ವ: ಪುಟಗಾವ ಬಡ್ನಿ ಹಾಗೂ 4] ಕಾಸೀಂಸಾಬ ತಂದೆ ಮಕ್ಬುಲ್ ಸಾಬ ಕೋಲ್ಕಾರ್. ಸಾ: ಸೂರಣಗಿ. ಇವರುಗಳು ಕಳವು ಮಾಡಿಕೊಂಡು ಹೋಗಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪೊಲೀಸರಿಗೆ ಸಿಕ್ಕಿದ್ದರಿಂದ ನನ್ನ ಮೋಟಾರ ಸೈಕಲ್ ಪತ್ತೆಯಾಗಿದ್ದು ಇರುತ್ತದೆ. ಕಾರಣ ಸದರಿ 04 ಜನರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 379 ಐ.ಪಿ.ಸಿ:.
ದಿನಾಂಕ 19-03-2016 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾಧಿದಾರ ಶ್ರೀ ಹುಲ್ಲಪ್ಪ ತಂದೆ ಫಕೀರಪ್ಪ ಕುಷ್ಟಗಿ ವಯಾ 34 ವರ್ಷ ಜಾತಿ ಕುರುಬರು ಉ: ಕೂಲಿಕೆಲಸ ಸಾ: ಅಮರ ಭಗತ್ ಸಿಂಗ್ ನಗರ, 14 ನೇ ವಾರ್ಡ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾಧಿಯನ್ನು ಹಾಜರ ಪಡಿಸಿದು, ಅದರ ಸಾರಾಂಶವೇನೆಂದರೆ, ನನ್ನದು ಒಂದು ಹೊಂಡಾ ಶೈನ್ ಕಂಪನಿಯ ಬೂದಿ ಬಣ್ಣದ ಮೋಟಾರ ಸೈಕಲ್ ನಂ.ಕೆಎ-37/ವೈ-5462 ನೇದ್ದು ಇರುತ್ತದೆ ನಾನು ಈಗ್ಗೆ ಒಂದು ವಾರದ ಹಿಂದೆ ಅಂದರೆ ಒಂದು ದಿನಾಂಕ 09-03-2016 ರಂದು ಶುಕ್ರವಾರ ದಿವಸ ಗಂಗಾವತಿಯಿಂದ ನನ್ನ ಮೋಟಾರ ಸೈಕಲ್ಲಿನ ಮೇಲೆ ಕೆಸಲದ ನಿಮಿತ್ಯವಾಗಿ ಯಲಬುಗರ್ಾ ತಾಲೂಕಿನ ಬೂನಕೊಪ್ಪ ಗ್ರಾಮಕ್ಕೆ ಹೋಗಿ ಕೆಲಸ ಮುಗಿದ ನಂತರ ವಾಪಸ್ ಗಂಗಾವತಿಗೆ ದಿನಾಂಕ 11-03-2016 ರಂದು ವಿಠಲಾಪೂರ ಮುಖಾಂತರ ವಿಠಲಾಪೂರ ಗ್ರಾಮವು ಇನ್ನೂ ಒಂದು ಫಲಾಂಗ್ ದೂರ ಇರುವಾಗ ನನಗೆ ಬಿಸಿಲಿನಿಂದ ಧಣಿ ಹೆಚ್ಚಾಗಿದ್ದರಿಂದ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಅಲ್ಲಿ ರಸ್ತೆಯ ಪಕ್ಕದಲ್ಲಿರುವ ಒಂದು ಬೇವಿನ ಗಿಡದ ಕೆಳಗಡೆ ನನ್ನ ಮೋಟಾರ ಸೈಕಲ್ನ್ನು ನಿಲ್ಲಿಸಿ ಚಾವಿ ಹಾಕದೇ ಕೀಲಿಯನ್ನು ನನ್ನ ಜೇಬಿನಲ್ಲಿ ಹಾಕಿಕೊಂಡು ಅಲ್ಲೆ ಗಿಡದ ಕೆಳಗೆ ಮಲಗಿಕೊಂಡೆನು. ನಂತರ ಸುಮಾರು 4 ಗಂಟೆಗೆ ಎಚ್ಚರವಾಗಿದ್ದು, ಎದ್ದು ನೋಡಲಾಗಿ, ನನ್ನ ಮೋಟಾರ ಸೈಕಲ್ವು ಇರಲಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಂತರ ಗಾಬರಿಗೊಂಡು ವಿಠಲಾಪೂರ, ಮಾದಿನಾಳ, ರಾಮದುಗರ್ಾ, ಮುಸಲಾಪೂರ, ಗಂಗಾವತಿ ಮುಂತಾದ ಕಡೆಗಳಲ್ಲಿ ನನ್ನ ಮೋಟಾರ ಸೈಕಲ್ನ್ನು ಹುಡುಕಾಡಿದರೂ ಸಹಾ ಸಿಕ್ಕಿರುವದಿಲ್ಲ. ಕಾರಣ ಮಾನ್ಯರವರು ಕಳ್ಳತನವಾದ ನನ್ನ ಮೋಟಾರ ಸೈಕಲ್ ನಂ.ಕೆಎ-37/ವೈ-5462 ಅ.ಕಿ.ರೂ.40,000/- ಆಗಬಹುದು ಕಳುವಾದ ನನ್ನ ಮೋಟಾರ ಸೈಕಲ್ನ್ನು ಇಲ್ಲಿಯವರೆಗೂ ಹುಡಿಕಾಡಿದರೂ ಸಹಾ ಸಿಗಲಾರದ್ದರಿಂದ ಈಗ ತಡವಾಗಿ ಫಿರ್ಯಾದಿ ಸಲ್ಲಿಸಿರುವೆನು ಅಂತಾ  ಕೊಟ್ಟ ಗಣಕಿಕೃತ ಮಾಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.98/2016 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


0 comments:

 
Will Smith Visitors
Since 01/02/2008