Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 19, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 29/2016 ಕಲಂ: 279, 338, 304(ಎ) ಐ.ಪಿ.ಸಿ.
ದಿನಾಂಕ:19-03-2016 ರಂದು 11-30 ಎಎಂಕ್ಕೆ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:19-03-2016 ರಂದು ಮುಂಜಾನೆ 9-30 ಗಂಟೆಗೆ ತನ್ನ ತಮ್ಮ ಮೃತ ಉಮೇಶಪ್ಪ ಕಲ್ಲೂರ ಇವನು ತಮ್ಮ ಹೊಲಕ್ಕೆ ಹೋಗಲು ಅಂತಾ ಕರಮುಡಿ ರಸ್ತೆಯಲ್ಲಿರುವ ತಮ್ಮ ಮಡಿಹೊಲಕ್ಕೆ ತಮ್ಮೂರ ದೇವರಾಜ ಅರಸು ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮುಂದೆ ರಸ್ತೆಯ ಎಡಬಾಜು ಹೊರಟಿರುವಾಗ ಹಿಂದಿನಿಂದ ಅಂದರೆ ಬಂಡಿಹಾಳ ಊರ ಕಡೆಯಿಂದ ಆರೋಪಿತ ಶರಣಪ್ಪ ಇವನು ಮೋ.ಸೈ. ನಂ:ಕೆಎ-37 ವೈ-7843 ನೇದ್ದನ್ನು ಅತೀವೇಗ ಮತ್ತು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಉಮೇಶಪ್ಪನಿಗೆ ಹಿಂದಿನಿಂದ ಟಕ್ಕರ್ ಕೊಟ್ಟಿದ್ದರಿಂದ ಅಪಘಾತವಾಗಿ ಇಬ್ಬರೂ ರಸ್ತೆಗೆ ಬಿದ್ದಿದ್ದು, ಉಮೇಶಪ್ಪನಿಗೆ ಬಲಹಣೆಗೆ ಭಾರೀ ರಕ್ತಗಾಯ ಮತ್ತು ಬಲಗಾಲ ಮೊಣಕಾಲ ಕೆಳಗೆ ಮುರಿದು ಭಾರೀ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶರಣಪ್ಪ ಇವನಿಗೂ ಸಹ ತಲೆಗೆ ಭಾರೀ ಪೆಟ್ಟಾಗಿ ಗಾಯಗೊಂಡಿದ್ದು, ಸದರಿ ಅಪಘಾತವು ಶರಣಪ್ಪ ಇವನ ಅತೀವೇಗ ಮತ್ತು ಅಲಕ್ಷ್ಯತನದ ಚಾಲನೆಯಿಂದ ಉಂಟಾಗಿದ್ದು, ಕಾರಣ, ಶರಣಪ್ಪ ಇವನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 105/2016 ಕಲಂ: 279, 304(ಎ) ಐ.ಪಿ.ಸಿ.

ದಿನಾಂಕ: 19-03-2016 ರಂದು ಮುಂಜಾನೆ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪೀರಪ್ಪ ತಂದೆ ರೆಡ್ಡೆಪ್ಪ ಬಳ್ಳಾರಿ, ವಯಸ್ಸು 40 ವರ್ಷ, ಜಾತಿ: ಲಮಾಣಿ ಉ: ಒಕ್ಕಲುತನ ಸಾ: ವಿರುಪಾಪೂರು ತಾಂಡಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶ ಏನಂದರೆ, " ಇಂದು ದಿನಾಂಕ:- 19-03-2016 ರಂದು ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ಫಕೀರಪ್ಪನು ಸುರೇಶ ಇವರ ಟ್ರ್ಯಾಕ್ಟರ್ ನಂಬರ್: ಕೆ.ಎ-36/ ಟಿ.ಎ-9804 ಮತ್ತು ಟ್ರಾಲಿ ( ನಂಬರ್ ಇರಲಾರದ್ದು) ನೇದ್ದನ್ನು ನಡೆಯಿಸಿಕೊಂಡು ಸೈಜ್ ಕಲ್ಲುಗಳನ್ನು ಹೇರಿಕೊಂಡು ಬರಲು ಬಂಡಿಬಸಪ್ಪ ಕ್ಯಾಂಪ್ ಗುಡ್ಡಕ್ಕೆ ಹೋಗಿ ಬರುವುದಾಗಿ ಹೇಳಿ ಹೋದನು. ನಂತರ ನನ್ನ ತಮ್ಮನ ಜೊತೆಗೆ ಹೋಗಿದ್ದ ಟ್ರ್ಯಾಕ್ಟರ್ ಮಾಲೀಕ ಸುರೇಶನು ಫೋನ್ ಮಾಡಿ ಬಂಡಿಬಸಪ್ಪ ಕ್ಯಾಂಪ್ ಗುಡ್ಡದಲ್ಲಿ ಫಕೀರಪ್ಪನು ಓಡಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಉರುಳಿ ಬಿದ್ದು, ಫಕೀರಪ್ಪನು ಟ್ರ್ಯಾಕ್ಟರ್ ಅಡಿಯಲ್ಲಿ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು.  ಕೂಡಲೇ ನಾನು  ಮತ್ತು ನಮ್ಮ ಓಣಿಯ ಲಕ್ಷ್ಮಣ @ ಗಿಡ್ಡಪ್ಪ ತಂದೆ ರಾಮಪ್ಪ, 30 ವರ್ಷ, ಲಮಾಣಿ ಇವರು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮನು ಟ್ರ್ಯಾಕ್ಟರ್ ಅಡಿಯಲ್ಲಿ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ವಿಚಾರಿಸಲು ಸುರೇಶನು ತಿಳಿಸಿದ್ದೇನೆಂದರೆ, “ ಇಂದು ಬೆಳಿಗ್ಗೆ ಇಬ್ಬರೂ ಕೂಡಿಕೊಂಡು ಬಂಡಿಬಸಪ್ಪ ಕ್ಯಾಂಪ್ ಗುಡ್ಡದಲ್ಲಿ ಹೋಗಿ ಟ್ರ್ಯಾಕ್ಟರ್/ಟ್ರಾಲಿಯಲ್ಲಿ ಸೈಜ್ ಕಲ್ಲುಗಳನ್ನು ಲೋಡ್ ಮಾಡಿಕೊಂಡು ವಾಪಸ್ ಗಂಗಾವತಿಗೆ ಬರಲು ಗುಡ್ಡದ ಇಳಿಜಾರಿನಲ್ಲಿ ಬರುತ್ತಿದ್ದೆವು.  ಫಕೀರಪ್ಪನು ಟ್ರ್ಯಾಕ್ಟರ ನಡೆಯಿಸುತ್ತಿದ್ದು, ನಾನು ಮುಂಭಾಗದಲ್ಲಿ ನಡೆದುಕೊಂಡು ಬರುತ್ತಿದ್ದೆನು. ಬೆಳಿಗ್ಗೆ 07:30 ಗಂಟೆಯ ಸುಮಾರಿಗೆ ಫಕೀರಪ್ಪನು ಟ್ರ್ಯಾಕ್ಟರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿದ್ದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್/ಟ್ರಾಲಿ ಪಲ್ಟಿಯಾಗಿ ಉರುಳಿ ಬಿದ್ದು ಫಕೀರಪ್ಪನು ಟ್ರ್ಯಾಕ್ಟರನ ದೊಡ್ಡ ಗಾಲಿಯ ಅಡಿಯಲ್ಲಿ ಸಿಕ್ಕಿಕೊಂಡು ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಅಂತಾ ತಿಳಿಸಿದನು. ನಂತರ ನಾವು ಹಾಗೂ ಅಲ್ಲಿ ಸೇರಿದ ಜನರು ಟ್ರ್ಯಾಕ್ಟರನ್ನು ಮೇಲಕ್ಕೆ ಎತ್ತಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಹಾಗೂ ಕಾಲಿಗೆ ತೀವ್ರ ಗಾಯವಾಗಿ ಒಳಪೆಟ್ಟಾಗಿದ್ದವು.  ನಂತರ ಯಾವುದೋ ಒಂದು ಟಾಟಾ ಏಸ್ ವಾಹನದಲ್ಲಿ ಶವವನ್ನು ಹಾಕಿಕೊಂಡು ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ಈಗ ತಡವಾಗಿ ಬಂದು ದೂರನ್ನು ಸಲ್ಲಿಸಿರುತ್ತೇನೆ. ಈ ಅಪಘಾತಕ್ಕೆ ನನ್ನ ತಮ್ಮ ಫಕೀರಪ್ಪನೇ ಕಾರಣನಾಗಿದ್ದು, ಕಾರಣ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

0 comments:

 
Will Smith Visitors
Since 01/02/2008