Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 21, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 69/2016 ಕಲಂ: 87 Karnataka Police Act.
ದಿನಾಂಕ:-20-03-2016 ರಂದು ರಾತ್ರಿ 8-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 20-03-2016 ರಂದು ಸಾಯಂಕಾಲ 5-45 ಗಂಟೆಯ ಸುಮಾರಿಗೆ ಹುಳ್ಕಿಹಾಳ ಗ್ರಾಮದ ಹಳ್ಳದ ದಂಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 6 ಜನ ಆರೋಪಿತನ್ನು ಹಿಡಿದುಕೊಂಡು ಆರೋಪಿತರಿಂದ ರೂ.8400=00 ನಗದು ಹಣ ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು 6 ಜನ ಆರೋಪಿತರಾದ ಎ-7 ಮತ್ತು ಎ-12 ರವರು ಓಡಿ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ವರದಿಯ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 100/2016 ಕಲಂ: 279, 337, 338, 304(ಎ) ಐ.ಪಿ.ಸಿ:.
ದಿನಾಂಕ: 20-03-2016 ರಂದು ರಾತ್ರಿ 10-00   ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೆಂಕೋಬ  ತಂದೆ ರಾಮಚಂದ್ರಪ್ಪ ಶೆಟ್ಟಿ ವಯಾ: 35 ವರ್ಷ ಜಾತಿ: ಹಿಂದೂ ವೈಶ್ಯ  ಉ:  ವ್ಯಾಪಾರ   ಸಾ: ವಜ್ರಬಂಡಿ ಹಾಲಿ ವಸ್ತಿ ಬಿ.ಬಿ.ನಗರ ಕುಷ್ಟಗಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ ಎನ್.ಹೆಚ್ ಕ್ರಾಸ್ ನಲ್ಲಿದ್ದಾಗ ಸುರೇಶ ಇತನು ತನ್ನ ಮೋ.ಸೈ ನಂ: ಕೆ.ಎ-29/ಎಸ್-3840 ನೇದ್ದನ್ನು ತಂದು ಇಲಕಲ್ ಗೆ ಹೋಗಿ ಬೆಳಿಗ್ಗೆ ಬರೋಣ ಬಾ ಅಂತಾ ಫಿರರ್ಯಾದಿಯನ್ನು ಹತ್ತಿಸಿಕೊಂಡು ಇಲಕಲ ಕಡೆಗೆ ಹೋಗುತ್ತಿದ್ದಾಗ ಸುರೇಶ ಇತನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ವಣಗೇರಿ ಬ್ರಿಜ್ ಮೇಲೆ ಸ್ಕೀಡ್ ಮಾಡಿ ಕೆಡವಿದ್ದರಿಂದ ಸುರೇಶ ಇತನಿಗೆ ತಲೆಗೆ ಮುಖಕ್ಕೆ ಹಣೆಗೆ ತಿರ್ವ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಫಿರ್ಯಾದಿಗೆ ಗಾಯ ಪೆಟ್ಟುಗಳಾಗಿದ್ದು ಅಂತಾ ವಗೈರೆ ಫಿರ್ಯಾದಿಯ ಹೇಳಿಕೆಯ ಮೇಲಿಂದ  ವಾಪಾಸ್ ಠಾಣೆಗೆ ರಾತ್ರಿ 11-15 ಗಂಟೆಗೆ ಬಂದು ಠಾಣಾ ಗುನ್ನೆ ನಂ: 100/2016 ಕಲಂ: 279,337,338, 304(ಎ) ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 107/2016 ಕಲಂ: 392 ಐ.ಪಿ.ಸಿ:.
ದಿನಾಂಕ:- 20-03-2016 ರಂದು ರಾತ್ರಿ 7:30 ಗಂಟೆಗೆ ಫಿರ್ಯಾದಿದಾರರಾದ  ಶಿವು ತಂದೆ ಅಪ್ಪಾಜಿರಾವ್, ವಯಸ್ಸು 23 ವರ್ಷ, ಜಾತಿ: ಮರಾಠ ಉ: ವೆಲ್ಡಿಂಗ್ ಕೆಲಸ ಸಾ: ಕೋಟೆ-ಕಂಪ್ಲಿ ತಾ: ಹೊಸಪೇಟೆ ಜಿಲ್ಲೆ: ಬಳ್ಳಾರಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದÀ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಗಂಗಾವತಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ:- 16-03-2016 ರಂದು ಬುಧವಾರ ದಿವಸ ನಾನು ಎಂದಿನಂತೆ ರಾತ್ರಿ ನನ್ನ ಕೆಲಸ ಮುಗಿಸಿಕೊಂಡು ಮೋ.ಸೈ. ಮೇಲೆ ಹಿರೇಜಂತಕಲ್ ಮಾರ್ಗವಾಗಿ ಚಿಕ್ಕಜಂತಕಲ್ ಗೆ ಹೋಗುತ್ತಿರುವಾಗ ಹಿರೇಜಂತಕಲ್ ನಿಂದ ನನ್ನ ಹಿಂದೆ ಹಿಂದೆ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಹಿಂಬಾಲಿಸುತ್ತಾ ಬಂದಿದ್ದು, ದಾರಿ ಮಧ್ಯೆ ದೇವಿನಗರ ಸೀಮಾದಲ್ಲಿ ರಾತ್ರಿ 11:45 ಗಂಟೆಯ ಸುಮಾರಿಗೆ ಅವರು ನನ್ನ ಮೋಟಾರ ಸೈಕಲ್ ಗೆ ಅಡ್ಡ ಬಂದು ನನ್ನನ್ನು ತಡೆದು ನಿಲ್ಲಿಸಿ ಪೆಟ್ರೋಲ್ ಕೊಡು ಅಂತಾ ಕೇಳಿದರು. ನನ್ನ ಹತ್ತಿರ ಪೆಟ್ರೋಲ್ ಕಡಿಮೆ ಇದೆ ಅಂತಾ ಹೇಳಿದ್ದಕ್ಕೆ ಅವರು ಪೆಟ್ರೋಲ್ ಗೆ ಹಣ ಕೊಡು ಅಂತಾ ಕೇಳಿದರು.  ಆಗ ನಾನು ಹಣ ಕೊಡುವುದಿಲ್ಲಾ ಮುಂದೆ ನಾಗನಹಳ್ಳಿ ಅಥವಾ ಚಿಕ್ಕಜಂತಕಲ್ ನಲ್ಲಿ ಪೆಟ್ರೋಲ್ ಹಾಕಿಸುತ್ತೇನೆ ಬರ್ರಿ ಅಂತಾ ಹೇಳಿದಾಗ ಅವರಲ್ಲಿ ಮೋಟಾರ ಸೈಕಲ್ ನಡೆಸುವವನು ದಬ್ಬಗೆ ಇದ್ದು, ಕೆಂಪು ಮೈಬಣ್ಣ, ಅಂದಾಜು 25 ವರ್ಷ ವಯಸ್ಸು ಇದ್ದು, ಬಿಳಿ ಅಂಗಿಯಲ್ಲಿ ಸ್ವಲ್ಪ ಡಿಜೈನ್ ಇತ್ತು.  ಅವನ ಪ್ಯಾಂಟನ್ನು ಸರಿಯಾಗಿ ಗಮನಿಸಲಿಲ್ಲಾ.  ಅವನ ಸಂಗಡ ಇದ್ದವನು ತೆಳ್ಳಗೆ ಇದ್ದು, ಅವನು ಸಾದಾಗಪ್ಪು ಬಣ್ಣ ಇದ್ದು, ವಯಸ್ಸು ಅಂದಾಜು 25 ವರ್ಷ ವಯಸ್ಸು ಇದ್ದು, ಅವರಲ್ಲಿ ತೆಳ್ಳನೆಯವನು ನನ್ನ ಹತ್ತಿರ ಬಂದು ಎದೆಯ ಮೇಲೆ ಕೈ ಹಾಕಲು ಪ್ರಯತ್ನಿಸಿದಾಗ ನಾನು ಅವನನ್ನು ತಳ್ಳಿದೆನು. ಆಗ ಅವನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ಹಿಡಿದುಕೊಂಡು ನನಗೆ ಎಸೆಯುವುದಾಗಿ ಹೇಳಿದನು.  ಆಗ ದಬ್ಬನೆಯವನು ನನ್ನ ಹತ್ತಿರ ಬಂದು ನನ್ನ ಪ್ಯಾಂಟಿನ ಜೇಬಿನಲ್ಲಿ ಕೈ ಹಾಕಿ ನನ್ನ ಲಾವಾ X1 ಆಟಮ್ ಕಂಪನಿ ಮೊಬೈಲ್ ಅಂ.ಕಿ. ರೂ. 5,000-00 ನ್ನು  ಕಸಿದುಕೊಂಡನು. ಮೊಬೈಲ್ ನಲ್ಲಿ ಐಡಿಯಾ ಕಂಪನಿಯ ಸಿಮ್ ನಂಬರ್: 9964271714 ಇತ್ತು. ಹಾಗೂ ಇನ್ನೊಂದು ಜೇಬಿಗೆ ಕೈ ಹಾಕಿ ನಗದು ಹಣ ರೂ. 7,000-00 ಗಳನ್ನು ಕಸಿದುಕೊಂಡನು. ಆಗ ನಾನು ಅವರಿಗೆ ಈ ರೀತಿ ಮಾಡಬೇಡಿರಿ ನಾನು ಸ್ಥಳೀಯವನಿದ್ದು, ಪ್ರತಿನಿತ್ಯ ಇಲ್ಲಿಯೇ ತಿರುಗಾಡುತ್ತಿರುತ್ತೇನೆ.  ನನಗೆ ಜನರ ಪರಿಚಯ ಇದೆ ನಾಳೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿದ್ದಕ್ಕೆ.  ಅವರು ನೀನೇನು ಮಾಡುಕೊಳ್ಳುತ್ತೀಯಾ ಹೋಗು ಅಂತಾ ಹೇಳಿ ಮೋಟಾರ ಸೈಕಲ್ ಹತ್ತಿ ಹಿರೇಜಂತಕಲ್ ಕಡೆಗೆ ಹೋದರು.  ಆ ಸಮಯದಲ್ಲಿ ನಾನು ಅವರ ಮೋಟಾರ ಸೈಕಲ್ ನೋಡಲು ಅದು ಕಪ್ಪು ಬಣ್ಣದ ಬಜಾಜ್ ಪಲ್ಸರ್ ಕಂಪನಿ ಇದ್ದು, ಅದರ ನಂಬರ್: ಕೆ.ಎ-37/ ಆರ್-4060 ಅಂತಾ ಇತ್ತು.  ಕೂಡಲೇ ನಾನು ನಾಗನಹಳ್ಳಿಗೆ ಹೋಗಿ ಅಲ್ಲಿ ನನ್ನ ಪರಿಚಯಸ್ಥರಿಗೆ ವಿಷಯ ತಿಳಿಸಿ ಮೊಬೈಲ್ ಮೂಲಕ ನಮ್ಮ ಮಾಲೀಕರಿಗೆ ವಿಷಯ ತಿಳಿಸಿದೆನು.  ನಂತರ   ನಾನು ಗಂಗಾವತಿಗೆ ಬಂದಿದ್ದು, ನಮ್ಮ ಮಾಲೀಕರೊಂದಿಗೆ ಅಲ್ಲಿ ತಿರುಗಾಡಲು ಅವರು ಸಿಗಲಿಲ್ಲಾ. ನಂತರ ನಾವುಗಳು ಗಂಗಾವತಿ, ಕಂಪ್ಲಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ತಿರುಗಾಡಿ ಹುಡುಕಾಡಲು ಅವರು ಎಲ್ಲಿಯೂ ಕಂಡುಬರಲಿಲ್ಲಾ.  ಕಾರಣ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ.  ಅವರನ್ನು ನೋಡಿದರೆ ನಾನು ಗುರುತಿಸುತ್ತೇನೆ.  ಕಾರಣ ನನ್ನ ಮೊಬೈಲ್ ಹಾಗೂ ಹಣವನ್ನು ದೋಚಿದ ಇಬ್ಬರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ. ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ: 279, 338 ಐ.ಪಿ.ಸಿ.
ದಿ:20-03-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ರಾಮಚಂದ್ರಪ್ಪ ಕಿನ್ನಾಳ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ:17-03-16 ರಂದು ಬೆಳಿಗ್ಗೆ ಫಿರ್ಯಾದಿ ಹಾಗೂ ಇತರರು ಕೂಡಿ ತಮ್ಮ ಗ್ರಾಮದ ಬಸಪ್ಪ ತೆಗ್ಗಿನಮನಿ ಇವರ ಟ್ರ್ಯಾಕ್ಟರ್ ದಲ್ಲಿ ಕಾಮನೂರಗೆ ಹೋಗಿ ಬೇವಿನಮರದ ಕಟ್ಟಿಗೆಗಳನ್ನು ಲೋಡ ಮಾಡಿಕೊಂಡು ವಾಪಾಸ್ ಕೊಪ್ಪಳಕ್ಕೆ ಬರುವಾಗ ಕಾಮನೂರ ಗ್ರಾಮದ ದೇವಾಲಯದ ಮುಂದೆ ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಮ್ಮ ಟ್ರ್ಯಾಕ್ಟರ್ ನಂ: ಕೆಎ-37/ಟಿಬಿ-2825 ಹಾಗೂ ಟ್ರೇಲರ್ ನಂ: ಕೆಎ-37/ಟಿ-282 ನೇದ್ದರ ಚಾಲಕ ಬಸಪ್ಪ ತೆಗ್ಗಗಿನಮನಿ ಇತನು ತನ್ನ ಟ್ರ್ಯಾಕ್ಟರಿಯನ್ನು ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸುತ್ತಾ ಹೊರಟಿದ್ದಾಗ ಟ್ರ್ಯಾಕ್ಟರದಲ್ಲಿದ್ದ ಪರಸಪ್ಪ ಬುಲ್ಟಿ ಇತನು ಕೆಳಗಡೆ ಬಿದ್ದು ಬಲಕಾಲ ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಗಾಯಗೊಂಡ ಪರಸಪ್ಪನಿಗೆ ಯಾವುದೋ ಒಂದು ಆಟೋದಲ್ಲಿ ಕೂಡ್ರಿಸಿಕೊಂಡು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಸಿದೆವು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಉಪಚಾರಕ್ಕೆ ರೆಫರ್ ಮಾಢಿದ್ದರಿಂದ ಗಾಯಾಳು ಪರಸಪ್ಪನಿಗೆ ಕೆ.ಎಲ್.ಇ ಆಸ್ಪತ್ರೆ ಬೆಳಗಾವಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಟ್ರ್ಯಾಕ್ಟರ್ ಚಾಲಕ ಬಸಪ್ಪ ತಂದೆ ನಾಗಪ್ಪ ತೆಗ್ಗಿನಮನಿ ಸಾ: ಭಾಗ್ಯನಗರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) AiÀÄ®§ÄUÁð oÁuÁ UÀÄ£Éß £ÀA. 31/2016 PÀ®A. 143, 147, 323, 109, 504 R/W 149 IPC

ಹಿರೇಮ್ಯಾಗೇರಿ ಸೀಮಾ ಜಮೀನ ಸ.ನಂ. 330 ಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ಯಲಬುರ್ಗಾರವರು ಈ ದಿವಸ ದಿನಾಂಕ: 20-03-2016 ರಂದು ಸ್ಮಶಾನದ ಕುರಿತಾಗಿ ಸ್ಥಳ ಪರಿಶೀಲನೆ ಮಾಡಿ ಹೋದ ನಂತರ ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರನಿಗೆ ಆರೋಪಿ ನಂ. 01 ನೇದ್ದವನು  ಈ ಜಾಗ ನಮಗೆ ಸಂಬಂದಿಸಿದ್ದು ಇವರಿಗೆ ಏಕೆ  ಹೆಣ ಹೂಳಲು ಹೊಲ ಕೊಡಬೇಕು ಶರಣಪ್ಪನನ್ನು ಎಳೆದು ಬಡ್ರಿ ಈ ಸೂಳೆ ಮಗನದು ಸೊಕ್ಕು ಜಾಸ್ತಿಯಾಗಿದೆ ಅಂತಾ ತನ್ನ ಮಕ್ಕಳಿಗೆ ಪ್ರಚೋದನೆ ನೀಡಿದ್ದು  ಆರೋಪಿ ನಂ 05 ನೇದ್ದವನು ಪಿರ್ಯಾದಿದಾರನ ಎದೆಗೆ ಕೈಯಿಂದ ಬಡಿದು ಅಂಗಿ ಹಿಡಿದುಕೊಂ ಆರೋಪಿ ನಂ 04 ನೇದ್ದವನು ಪಿರ್ಯಾದಿಯೊಂದಿಗೆ ತೆಕ್ಕಿಮುಕ್ಕಿಬಿದ್ದಿದ್ದು ಆರೋಪಿ ನಂ 01 ನೇದ್ದವನ ಮಕ್ಕಳಾದ ಆರೋಪಿ ನಂ 02 ಮತ್ತು 03 ನೇದ್ದವರು ಪಿರ್ಯಾದಿದಾರನ ಬೆನ್ನಿಗೆ ಕೈಯಿಂದ ಬಡಿದಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008