Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, March 25, 2016

1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 18/2016 ಕಲಂ: 376, 341, 504, 506  ಐ.ಪಿ.ಸಿ ಮತ್ತು 3, 4 POCSO Act 2012:.
ಆರೋಪಿ ಸಂಗಪ್ಪನು ಈಗ್ಗೆ ಸುಮಾರು ಒಂದು ವರ್ಷಗಳಿಂದ ಪಿರ್ಯಾದಿದಾರಳ ಜೊತೆ ಪ್ರೀತಿಸುತ್ತಾ ಬಂದಿದ್ದು ಆಗ ಪಿರ್ಯಾದಿದಾಳು ನಾನು ಈಗ ಸದ್ಯ ಮದುವೆ ಆಗುವುದಿಲ್ಲಾ ನಾನು ಇನ್ನೂ ಅಪ್ರಾಪ್ತ ವಯಸ್ಸಿನವಳಿದ್ದೆನೆ ಅಂತಾ ಅಂದರು ಕೂಡಾ ಆರೋಪಿತನು ಪಿರ್ಯಾದಿದಾರಳಿಗೆ ಮದುವೆ ಆಗುತ್ತೆನೆಂದು ಬಲವಾಗಿ ನಂಬಿಸುತ್ತಾ ಬಂದಿದ್ದು ನಂತರ ಈಗ್ಗೆ ಸುಮಾರು 8 ತಿಂಗಳ ಹಿಂದೆ ಒಂದು ದಿನ ಪಿರ್ಯಾದಿದಾರಳು ಕೂಲಿಕೆಲಸಕ್ಕೆ ಅಂತಾ ಆರೋಪಿತನ ಹೊಲಕ್ಕೆ ಹೋದಾಗ ತನಗೆ ಮೈಯಲ್ಲಿ ಆರಾಮ ಇಲ್ಲದಿದ್ದರಿಂದ ಹೊಲದಿಂದ ವಾಪಾಸ್ ಮನೆಗೆ ಬರುವ  ಕಾಲಕ್ಕೆ ಅಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಆರೋಪಿತನು ಪಿರ್ಯಾದಿದಾರಳಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಳ ಬಾಯಿ ಮುಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಅವಳಿಗೆ ಬಲವಂತವಾಗಿ ಎಳೆದುಕೊಂಡು ಚಿಗಹಳ್ಳದ ಹತ್ತಿರ ಹೋಗಿ ನೆಲಕ್ಕೆ ಕೆಡವಿ ಬಲವಂತವಾಗಿ ಹಠ ಸಂಭೊಗ ಮಾಡಿ ನಂತರ ಪಿರ್ಯಾದಿದಾರಳಿಗೆ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪುನಃ ನೀನು ಎಲ್ಲಾದರೂ ಒಬ್ಬಳೆ ಸಿಕ್ಕಾಗ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ನಂತರ ವಿಷಯವು ಪಿರ್ಯಾದಿದಾರಳ ಮನೆಯವರಿಗೆ ಗೊತ್ತಾಗಿದ್ದರಿಂದ ಪಿರ್ಯಾದಿದಾರಳು ಆರೋಪಿತನ ಮನೆಗೆ ಹೋಗಿ ನನಗೆ ಮದುವೆ ಮಾಡಿಕೋ ಅಂತಾ ಕೇಳಿದಾಗ ಆರೋಪಿತನು ಪಿರ್ಯಾದಿದಾರಳಿಗೆ  ನೀನು ಹೊಲಸು ಸೂಳೆ ಅದಿದಿ ನಿನ್ನನ್ನು ಮದುವೆ ಮಾಡಿಕೊಳ್ಳುವದಿಲ್ಲಾ ಏನು ಮಾಡಿಕೊಳ್ಳ್ಳುತ್ತಿ ಹೋಗು ಅವಾಚ್ಯವಾಗಿ ಬೈದಾಡಿ ಕಳುಹಿಸಿದ್ದು  ನಂತರ ಪಿರ್ಯಾದಿದಾರಳು ಮತ್ತು ಇವಳ ಮನೆಯವರು ಸೇರಿ ಹಿರಿಯರಿಗೆ ತಿಳಿಸಿದಾಗ ವಿಷಯ ಆರೋಪಿತನಿಗೆ ಗೊತ್ತಾಗಿ ತನಗೆ ಮುಂದೆ ಸಮಸ್ಯೆ ಆಗುತ್ತದೆ ಅಂತಾ ತಿಳಿದು ಆರೋಪಿತನು ಈಗ್ಗೆ ಸುಮಾರು 4 ತಿಂಗಳ ಹಿಂದೆ ದಿನಾಂಕ:09.12.2015 ರಂದು ವಣಗೇರಿ ಗ್ರಾಮದ ಕಲ್ಯಾಣ ಬಸವೇಶ್ವರ ದೇವಸ್ಥಾನದಲ್ಲಿ ಪಿರ್ಯಾದಿದಾರಳನ್ನು ಮದುವೆಯಾಗಿ ಫಿಪಿರ್ಯಾದಿದಾರಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳಿಗೆ ಸುಮಾರು ಒಂದು ತಿಂಗಳವರೆಗೆ ತನ್ನ ಮನೆಯಲ್ಲಿ ಇರಿಸಿಕೊಂಡು ನಂತರ ಆರೋಪಿತನು ಪಿರ್ಯಾದಿದಾರಳಿಗೆ ನಿನು ನಮ್ಮ ಮನೆಗೆ ಹೊಂದಾಣಿಕೆಯಾಗುವದಿಲ್ಲಾ ನಿನಗೆ ಬೇರೆ ಮನೆ ಮಾಡಿಕೊಡುತ್ತೆನೆ ಅಂತಾ ಹೇಳಿ, ಅವಳನ್ನು ಒಂದು ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಇರಿಸಿ ಇಲ್ಲಿಯೂ ಕೂಡಾ ಆರೋಪಿತನು ಪಿರ್ಯಾದಿದಾರಳು ಅಪ್ರಾಪ್ತ ವಯಸ್ಕಳಿದ್ದಾಳೆ ಅಂತಾ ಗೋತ್ತಿದ್ದರೂ ಕೂಡಾ ಅವಳು ಹಾಗೂ ಅವಳು ಬೇಡವೆಂದರೂ ಅವಳ ಮನಸ್ಸಿನ ವಿರುದ್ದವಾಗಿ ಆರೋಪಿತನು ಬಲವಂತವಾಗಿ ಸುಮಾರು ಸಲ ಹಠ ಸಂಭೋಗ ಮಾಡಿದ್ದು ಇರುತ್ತದೆ. ನಂತರ ಇತ್ತೀಚಿಗೆ ಈಗ್ಗೆ ಸುಮಾರು 8 ದಿಗಳಿಂದ ಆರೋಪತನು ಫಿಯರ್ಾದಿದಾರಳೊಂದಿಗೆ ವಿನಾ: ಕಾರಣ ಜಗಳ ಮಾಡುತ್ತಾ ನಾನು ಇನ್ನೊಂದು ಬೇರೆ ಮದುವೆಯಾಗಿದ್ದೆನೆ ನೀನು ಮನೆ ಬಿಟ್ಟು ಎಲ್ಲಿಯಾದರೂ ಹೋಗಿ ನಿನ್ನ ಜೀವನ ನೀನು ನೋಡಿಕೊ ಅಂತಾ ಹೇಳಿ ಅವಳಿಗೆ ಮನೆಯಿಂದ ಹೊರಗೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.       
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 67/2016 ಕಲಂ: 143, 147, 148, 341, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 24-03-2016 ರಂದು 21-30 ಗಂಟೆಗೆ  ರಾಜು ತಂದೆ ಜಯಸಿಂಗ್ ರಾವ್ ಕಾತರಕಿ ವಯಸ್ಸು 21 ವರ್ಷ ಜಾ:ಮರಾಠ (ಕ್ಷತ್ರೀಯ) ಉ:ರಾಡ್ ಬೆಂಡಿಂಗ್ ಕೆಲಸ ಸಾ: 11 ನೇ ಲೈನ್ ಲಿಂಗರಾಜ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 24-03-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಲಿಂಗರಾಜ ಕ್ಯಾಂಪಿನಲ್ಲಿಯ ಕಟ್ಟಿಗೆ ಅಡ್ಡೆಯ ಹತ್ತಿರ ಕುಳಿತ್ತಿದ್ದು, ಫಿರ್ಯಾದಿಯು ಈ ಹಿಂದೆ ಉಪ್ಪಿನಮಾಳಿ ಕ್ಯಾಂಪಿನ ನಿವಾಸಿಗಳಿಗೆ ಗಂಡು ಮಕ್ಳು ಅಲ್ಲವೆಂದು, ಬಳೆ ತೊಟ್ಟುಕೊಳ್ರಿ ಅಂತಾ ಹೇಳಿರುತ್ತಾನೆಂದು ಆರೋಪಿತರಾದ ಲಾಟರಿ ಬಸುವ, ವಡ್ಡರ ರವಿ, ಬೀಡರ್ ಮಂಜ, ಅಂಬ್ರೇಶ, ಮುದುಗಲ್  ಬಸುವ, ಗಿಡ್ಡ ಮಂಜು, ಜಾಂಟಿ ಕೃಷ್ಣ, ಮುದುಗಲ್ ಅಂಜಿ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಬಂದು ಕಟ್ಟಿಗೆ ಅಡ್ಡೆ ಹತ್ತಿರ ಕುಳಿತಿರುವ ಫಿರ್ಯಾದಿದಾರನಿಗೆ ನೋಡಿ ಆ ಸೂಳೇಮಗನಿಗೆ ಬಿಡಬ್ರ್ಯಾಡ್ರಿ ನಮ್ಮ ಏರಿಯಾದವರಿಗೆ ಗಂಡು ಮಕ್ಳು ಅಲ್ಲಾ, ಬಳೆ ತೊಟ್ಟು ಕೊಳ್ರಿ ಅಂತಾ ಈ ಹಿಂದೆ ಹೇಳಿರುತ್ತೇನೆಂದು ಹೇಳುತ್ತಾ ಕೈಯಿಂದ ಹೊಡಿ-ಬಡಿ ಮಾಡುತ್ತಾ ಕೆಳಗಡೆಗೆ ಹಾಕಿ ಕಾಲಿನಿಂದಲು ಒದ್ದಿದ್ದು, ಫಿರ್ಯಾದಿಯು ಅವರಿಂದ ತಪ್ಪಿಸಿಕೊಂಡು ಓಡಿ ಹೋದರು ಸಹ ಬಿಡದೆ ಫಿರ್ಯಾದಿಯನ್ನು ಬೆನ್ನಟ್ಟಿ ಹೋಗಿ ಕೃಷ್ಣ ಎಂಬುವವರ ಮನೆಯ ಹತ್ತಿರ ಅಡ್ಡಗಟ್ಟಿ ತಡೆದು ನಿಲ್ಲಿಸಿ ಈ ಸೂಳೇಮಗನಿಗೆ ಬಿಡಬ್ಯಾಡ್ರಿ ಅಂತಾ ಹೇಳುತ್ತಾ ಜೀವದ ಬೆದರಿಕೆ ಹಾಕುತ್ತಾ ಎಲ್ಲರೂ ಸೇರಿಕೊಂಡು ಕಟ್ಟಿಗೆಯಿಂದ, ಕೈಯಿಂದ ಬಡಿದು, ಕಾಲಿನಿಂದ ಒದ್ದಿರುತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 103/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 24-03-2016 ರಂದು ಸಂಜೆ 05-30 ಗಂಟೆಗೆ ಪಿರ್ಯಾದಿದಾರರಾದ  ಖಾಜಾಹುಸೇನ್  ತಂದೆ ಹಜರತ್ ಸಾಬ ಸೈಯದ್  ವಯಾ 34 ವರ್ಷ ಜಾ: ಮುಸ್ಲಿಂ ಉ: ಲಾರಿ ನಂ:KA-32-C-5965  ನೇದ್ದರ ಚಾಲಕ ಸಾ:ಗೌಡೂರು ಠಾಣೆಗೆ ಹಾಜರಾಗಿ ಹೇಳಿಕೆ  ಫಿರ್ಯಾದಿಯನ್ನು ನೀಡಿದ್ದು  ಸಾರಾಂಶವೆನೆಂದರೆ ನಿನ್ನೆ ದಿನಾಂಕ:23-03-2016 ರಂದು ವಾಸವದತ್ತ ಬಿರ್ಲಾ ಪ್ಯಾಕ್ಟರಿಯಿಂದ ನಮ್ಮ ಲಾರಿ ನಂ:KA-32-C-5965 ನೇದ್ದಕ್ಕೆ  ಸಿಮೆಂಟ ಲೋಡ ಮಾಡಿದ್ದ ಅದರಂತೆ ಇನ್ನೊಂದು ಲಾರಿ ನಂ: KA-01-AD-6302 ನೇದ್ದರಲ್ಲಿ ಸಹ ಸದರ ಪ್ಯಾಕ್ಟರಿಯಿಂದ ಸಿಮೆಂಟ ಲೋಡ ಮಾಡಿಕೊಂಡು ಅದರ ಚಾಲಕ ನಮ್ಮೂರ ಬಸವರಾಜ ತಂದೆ ಅಡಿವೆಪ್ಪ ಗುಡದನಾಳ ವಯಾ 36 ವರ್ಷ ಜಾ:ಬಣಜಿಗ ಈತನು ತನ್ನ ಲಾರಿಯನ್ನು ಮುಂದೆ ಚಾಲನೆ ಮಾಡಿಕೊಂಡು ಹೊರಟನು ನಾನು ಆತನ ಹಿಂದೆಯೇ ನಮ್ಮ ಲಾರಿ ಚಾಲನೆ ಮಾಡಿಕೊಂಡು  ಬೆಳಿಗ್ಗೆ 07-00 ಗಂಟೆಗೆ ಸೇಡಂದಿಂದ ಹುಬ್ಬಳ್ಳಿಗೆ ಹೋಗಲು ಹೊರಟೇವು. ನಿನ್ನೆ ರಾತ್ರಿ 11-30 ಗಂಟೆಯ ಸುಮಾರಿಗೆ  ತಾವರಗೇರಾ-ಕುಷ್ಟಗಿ ರಸ್ತೆಯ ಮೇಲೆ ಹಿರೇಮನ್ನಾಪೂರ ಗ್ರಾಮದ ಹತ್ತಿರ ನಮ್ಮ ಲಾರಿಯ ಮುಂದೆ ಹೋಗುತ್ತಿದ್ದ ಲಾರಿ ನಂ: KA-01-AD-6302 ನೇದ್ದು ರಸ್ತೆಯ ಎಡಗಡೆ ಹೋಗುತ್ತಿರುವಾಗ ಎದರುಗಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ಸದರಿ ಲಾರಿ ನಂ: KA-01-AD-6302 ನೇದ್ದಕ್ಕೆ ರಾಂಗ್ ಸೈಡ್ ಬಂದು ಟಕ್ಕರ್ ಮಾಡಿದನು, ಆಗ ನಾನು ಗಾಭರಿಯಾಗಿ ಎಡಗಡೆ ರಸ್ತೆಯ ಬಾಜು ನಮ್ಮ ಲಾರಿಯನ್ನು ನಿಲ್ಲಿಸಿ ಇಳಿದು ಹೋಗಿ ನೋಡಲು ಲಾರಿ ನಂ: KA-01-AD-6302 ಯ ಚಾಲಕನಾದ  ನಮ್ಮೂರ ಬಸವರಾಜ ತಂದೆ ಅಡಿವೆಪ್ಪ ಗುಡದನಾಳ ಈತನಿಗೆ ಬಲಗಡೆ ತಲೆಗೆ ರಕ್ತಗಾಯವಾಗಿ, ಬಲಗಾಲು ಮೊಣಕಾಲು ಕೆಳಗೆ ಮುರಿದಂತಾಗಿ ರಕ್ತಗಾಯವಾಗಿದ್ದು ನಂತರ ಸದರ ಲಾರಿಗೆ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರಕೊಟ್ಟು ಅಪಘಾತಪಡಿಸಿದ ಲಾರಿ ನಂಬರ ನೋಡಲು KA-36-7228 ಅಂತಾ ಇದ್ದು ಸದರಿ ಲಾರಿಯ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ರವಿ ತಂದೆ ಲಾಲಪ್ಪ ಈಳಗೇರ ಸಾ:ಕಲ್ಲೂರ ತಾ: ಮಾನವಿ ಜಿ:ರಾಯಚೂರ ಅಂತಾ ಹೇಳಿದ್ದು ಸದರಿಯವನಿಗೆ ಬಲಗಾಲು ಮೊಣಕಾಲಿಗೆ, ಬಲ ಕುಂಡಿಗೆ ಒಳಪೆಟ್ಟಾಗಿ ಎರಡು ಕೈಗಳಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ 108 ಅಂಬುಲೆನ್ಸಗೆ ಪೋನ್ ಮಾಡಿ ಅಂಬುಲೆನ್ಸ ಬಂದ ನಂತರ ಅವರಿಬ್ಬರನ್ನು ಬಾಗಲಕೋಟ ಧನುಷ್ಯ ಆಸ್ಪತ್ರೆಗೆ ಸೇರಿಕೆ ಮಾಡಿ ಈಗ ಠಾಣೆಗೆ ಬಂದು  ಲಾರಿ ನಂ: KA-01-AD-6302 ನೇದ್ದರ ಚಾಲಕನಾದ ಬಸವರಾಜ ಗುಡದನಾಳ ಇತನಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ ಲಾರಿ ನಂ: KA-36-7228 ನೇದ್ದರ ಚಾಲಕನಾದ ರವಿ ತಂದೆ ಲಾಲಪ್ಪ ಈಳಗೇರ ಸಾ:ಕಲ್ಲೂರ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 76/2016 ಕಲಂ: 279, 338 ಐ.ಪಿ.ಸಿ:.
ದಿನಾಂಕಃ-24-03-2016 ರಂದು ರಂದು  ಸಾಯಂಕಾಲ 7-00 ಗಂಟೆಯ ಸುಮಾರಿಗೆ ಗಂಗಾವತಿಯ ಡಾ- ಮಲ್ಲನಗೌಡ ಆಸ್ಪತ್ರೆಯಿಂದ   ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೆ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಹೊಗಿ ಬೇಟಿಕೊಟ್ಟು  ಗಾಯಾಳು ಈರಣ್ಣ ತಂದಿ ಮುರಿಗೇಪ್ಪ  ಹೊಟ್ಟಿ ವಯಾ- 26 ವರ್ಷ  ಜಾ- ಲಿಂಗಾಯತಗುಮಾಸ್ತ ಕೆಲಸ  ಸಾ- ಕಾರಟಗಿ ತಾ- ಗಂಗಾವತಿ. ಇವರಿಗೆ ವಿಚಾರಿಸಿ  ಅವರ ಹಾಜರುಪಡಿಸಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,  ನಾನು ಗುಮಾಸ್ತ ಕೆಲಸ ಮಾಡಿಕೊಂಡಿದ್ದು ನಮ್ಮ ವ್ಯವಹಾರದ ಸಲುವಾಗಿ  ನಮ್ಮ ಪಲ್ಸರ್ ಮೊಟಾರ್ ಸೈಕಲ್ ನಂಬರ್ – ಕೆ.ಎ- 37 / ಇಎ- 3185 ನೇದ್ದರ ಮೇಲೆ ಕಾರಟಗಿಯಿಂದ  ಗಂಗಾವತಿಗೆ ಹೊಗಲೆಂದು ಸಿದ್ದಾಪೂರದ ಪಿ.ಎಮ್.ಸಿ. ಎದುರುಗಡೆ ಇರುವ ಪೆಟ್ರೋಲ್ ಬಂಕ ಹತ್ತಿರ  ಪೆಟ್ರೋಲ್ ಹಾಕಿಸಲು ರಸ್ತೆಯ ಬದಿಗೆ ಹೊರಟಿದ್ದಾಗ್ಗೆ  ಹಿಂದುಗಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್- ಕೆ.ಎ- 37 / ಎಪ್- 0463 ರ ಚಾಲಕ ಅತೀ ವೇಗ ಹಾಗೂ ಅಲಕ್ಷತನದಿಂದ  ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು  ನನ್ನ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ನಾನು ನನ್ನ ಮೊಟಾರ್ ಸೈಕಲ್ ಸಮೇತ  ಕೆಳಗೆ ಬಿದ್ದಿದ್ದರಿಂದ  ನನ್ನ ಬಲತೊಡೆಗೆ ಹಾಗೂ ಮೊಣಕಾಲಿಗೆ ಕೆಳಗೆ ಪಾದಕ್ಕೆ ಭಾರೀ ಒಳಪೆಟ್ಟಾಗಿ ಮೂಳೆ ಮುರಿತವಾಗಿದ್ದು ಹಾಗೂ ಬಲಗೈ ಮುಂಗೈ ಹತ್ತಿರ ಹಾಗೂ ಬೆರಳಿಗೆ ಬಾರೀ ರಕ್ತಘಾಯುವಾಗಿದ್ದು ಇರುತ್ತದೆ. ಈ ಅಪಘಾತವಾದಾಗ್ಗೆ  ಇಂದು ದಿನಾಂಕ : 24-03-2016 ರಂದು  ಸಾಯಂಕಾಲ 5-15  ಗಂಟೆಯಿಂದ   5-30 ಗಂಟೆ ಆಗಿತ್ತು.    ಘಟನೆಯನ್ನು ಅಲ್ಲೆ ಪೆಟ್ರೋಲ್ ಬಂಕದಲ್ಲಿದ್ದ  ಜನರಾದ ದಾದಾಪೀರ್ ಮತ್ತು ಇಮಾನ್ ಎಂಬುವವರು ಬಂದು ನೋಡಿ ನನಗೆ ಎಬ್ಬಿಸಿ ಕೂಡ್ರಿಸಿದ್ದು ನನಗೆ ಅಪಘಾತಪಡಿಸಿದ ಬಸ್  ನಂಬರ್ ನೋಡಲು ಕೆ.ಎ- 37 / ಎಫ್- 0463 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ಬಸವರಾಜ ತಂದಿ ಈರಪ್ಪ ಬೋಚನಹಳ್ಳಿ ಸಾ- ಗಂಗಾವತಿ ಡಿಪೋ ಅಂತಾ ಗೊತ್ತಾಗಿದ್ದು. ಅಪಘಾತವಾದ ನಂತರ ಸ್ಥಳಕ್ಕೆ ಬಂದ 108 ಅಂಬುಲೇನ್ಸದಲ್ಲಿ ಚಿಕಿತ್ಸೆಗಾಗಿ ಗಂಗಾವತಿಯ ಡಾ- ಮಲ್ಲನಗೌಡ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ   ನನಗೆ ಕೈಗಳಿಗೆ ಗಂಭೀರಗಾಯವಾಗಿದ್ದರಿಂದ  ನಮ್ಮ ಮಾವ  ಸಿದ್ದಪ್ಪ ತಂದಿ ಪರಮ್ಮ ದೊಡ್ಡಮನಿ ಸಾ-ಕಾರಟಗಿ ಇವರ ಕಡಯಿಂದ ಫಿರ್ಯಾದಿಯನ್ನು ಬರೆಸಿಕೊಟ್ಟಿರುತ್ತೇನೆ. ಈ ಘಟನೆಗೆ ಕಾರಣನಾದ ಕ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪೀರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 69/2016 ಕಲಂ: 379 ಐ.ಪಿ.ಸಿ:.

ದಿ:24.03.2016 ರಂದು ಮಧ್ಯಾನ್ನ 02.00 ಗಂಟೆಗೆ ಫಿರ್ಯಾದಿದಾರರಾದ ಹೊನಕೇರಪ್ಪ ತಂದೆ ಯಮನಪ್ಪ ಗೊರವರ. ಸಾ: ಹಾಲವತರ್ಿ, ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪೀರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೆನಂದರೆ, ದಿ:24-03-2016 ರಂದು ಬೆಳಗಿನ ಜಾವ 02.45 ಗಂಟೆ ಸುಮಾರಿಗೆ ಹಾಲವತರ್ಿ ಗ್ರಾಮದ ಕೊಪ್ಪಳ-ಅಲ್ಲಾನಗರ ರಸ್ತೆಯ ಬಾಜು ಇರುವ ನಮ್ಮ ಮನೆಯ ಮುಂದೆ ಬಿಟ್ಟಿದ್ದ 100 ಕುರಿಗಳ ಪೈಕಿ 30 ಕುರಿಗಳನ್ನು ಮತ್ತು 05 ಕುರಿಯ ಮರಿ ಅ,ಕಿ-1,50,000-00 ಬೆಲೆಬಾಳುವ 35 ಕುರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದ ಕಳ್ಳರನ್ನು ಹಾಗೂ ಕುರಿ ಮತ್ತು ಮರಿಗಳನ್ನು ಪತ್ತೆ ಮಾಡಲು ಕೋರಿದ ವಗೈರಾ ಫಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008