Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 26, 2016

1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 25/2016 ಕಲಂ279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 25-03-2016 ರಂದು ರಾತ್ರಿ 22-50 ಗಂಟೆಗೆ ಫಿರ್ಯಾದಿದಾರಾದ ಹುಸೇನಸಾಬ ತಂದೆ ಹಸನಸಾಬ ಹೊಸಮನಿ ಸಾ: ಯರಗುಂಟಿ ತಾ: ಲಿಂಗಸೂಗರ ರವರು ಇಂದು ತಮ್ಮ ಜನಾಂಗದವರೆಲ್ಲಾ ಸೇರಿ ಯಮನೂರಪ್ಪನ ಉರಸಿಗೆ ಯಮನೂರಕ್ಕೆ ಹೊಗುವ ಕುರಿತು ನಾನು ಮತ್ತು ನಮ್ಮ ಮನೆಯ ಪಕ್ಕದ ರಸೂಲಬಿ ಗಂಡ ಗಫೂರಸಾಬ ಮುಲ್ಲಾರ ವಯಾ: 55 ವರ್ಷ ಹಾಗೂ ಆಕೆಯ ಸೋಸಿ ಗುಲಸಾಂಬಿ ಗಂಡ ಹುಸೇನಸಾಬ ಮತ್ತು ಷಮ್ಮಸಾದಬೇಗಂ ಗಂಡ ಮಕ್ತುಂಸಾಬ, ಮತ್ತು ಮಕ್ತುಂಬಿ ಗಂಡ ಕರಿಂಸಾಬ ಮುಲ್ಲಾರ, ಕಾಸಿಂಸಾಬ ಆನೇಹೊಸೂರ, ರವರೆಲ್ಲಾಸೇರಿ ತಮ್ಮೂರ ಹುಸೇನಸಾಬ ಇವರ ಹೊಸ ಆಟೋದಲ್ಲಿ ತಾವು ಇನ್ನೊಂದು ಆಟೋದಲ್ಲಿ ಇನ್ನಷ್ಟು ಜನರು ಹತ್ತಿ ಅದನ್ನು ಹುಸೇನಸಾಬ ಇವರು ನಡೆಸುತ್ತಿದ್ದು ನಾವು ಕುಳಿತ ಆಟೋವನ್ನು ಇಸಾಕಸಾಬ ನವಲಿ ನಡೆಸುತ್ತಿದ್ದು ಮದ್ಯಾಹ್ನ 1-00 ಗಂಟೆಗೆ ನಮ್ಮೂರಿಂದ ಹೊರಟು ಇಲಕಲ, ಹನಮಸಾಗರ ಮಾರ್ಗವಾಗಿ ರಾತ್ರಿ 8-00 ಗಂಟೆಯ ಸುಮಾರಿಗೆ ಹನಮಸಾಗರ ದಾಟಿ ಹನಮನಾಳ ಕಡೆಗೆ ಕೆ.ಇ.ಬಿ. ದಾಟಿ ಮುಂದೆ ಹೊರಟಾಗ ಎದರುಗಡೆಯಿಂದ ಒಂದು ಟಂ.ಟಂ ಚಾಲಕನು ತನ್ನ ಗಾಡಿಯನ್ನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಡಸಿಕೊಂಡು ಬಂದು ಎಡಗಡೆ ಹೊರಟ ಆಟೋದ ಬಲಗಡೆ ಠಕ್ಕರ ಕೊಟ್ಟು ಅಪಘತ ಪಡಿಸಿದಾಗ ಆಟೋದ ನಡುವಿನ ಶೀಟಿನ ಬಲಗಡೆ ಕುಳಿತ ರಸೂಲಬಿ ಗಂಡ ಗಫೂರಸಾಬ ಮುಲ್ಲಾರ ಈಕೇಯ ಕಾಲುಗಳು ಎದರುಗಡೆಯ ಟಂ.ಟಂ ಹಿಂದಿನ ಬಲಗಾಲಿಯಲ್ಲಿ ಸಿಕ್ಕಿಹಾಕಿಕೋಂಡು ಕೆಳಗೆ ರೋಡಿಗೆ ಬಿದ್ದಳು ಎಲ್ಲರೂ ಕೆಳಗೆ ಇಳಿದು ನೋಡಲಾಗಿ ರಸೂಲಬಿಯ ಎರಡುಕಾಲುಗಳು ಮುರಿದು ಬಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು. ಟಂ.ಟಂ ಡ್ರೈವರನ ನೋಡಲಾಗಿ ಡ್ರೈವರ ಓಡಿ ಹೊಗಿದ್ದು ಅದರ ನಂ: ಕೆ.-37ಎ-1047 ಅಂತಾ ಇದ್ದು ನಂತರ ರಸೂಲಬಿಯನ್ನು ಹಿಂದಿನ ಆಟೋದಲ್ಲಿ ಹಾಕಿಕೊಂಡು ಹನಮಸಾಗರ ಆಸ್ಪತ್ರೆಗೆ ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಅಲ್ಲಿ ವೈಧ್ಯರು ಇಲ್ಲದ ಕಾರಣ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟ ಆಸ್ಪತ್ರೆಗೆ 108 ಅಬುಲೈನ್ಸದಲ್ಲಿ ಷಮ್ಮಸಾದಬೇಗಂ ಗಂಡ ಮಕ್ತುಂಸಾಬ, ಮತ್ತು ಕಾಸಿಂಸಾಬ ಆನೇಹೊಸೂರ ರವರ ಸಂಗಡ ಕಳಿಸಿ ಊರಿಗೆ ಫೋನಾಮಾಡಿ ಉಳಿದ ಜನರನ್ನು ಇನ್ನೊಂದು ಆಟೋದಲ್ಲಿ ಕರೆದುಕೊಂಡು ಬರುವಷ್ಟರಲ್ಲಿ ರಾತ್ರಿ 10-30 ಗಂಟೆಗೆ ರಸೂಲಬಿ ಮುಲ್ಲಾರವರು 108 ಆಬುಲೈನ್ಸದಲ್ಲಿ ಕಮತಿಗಿ ಹತ್ತಿರ ಮೃತಪಟ್ಟಿದ್ದು ಅಂತಾ ಫೋನಮೂಲಕ ವಿಷಯ ತಿಳಿಸಿದರು.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಸಂಚಾರಿ ಪೊಲೀಸ ಠಾಣೆ ಗಂಗಾವತಿ ಗುನ್ನೆ ನಂ: 09/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 25-03-2016  ರಂದು ಮದ್ಯಾನ್ನ 1-00 ಗಂಟೆಗೆ  ಆರೋಪಿತನು ತನ್ನ ಹಿರೊಹೊಂಡಾ ಕ್ವಾಂಟಮ್ ಕೋರ್ ಮೋ/ಸೈ ನಂ ಕೆ.ಎ. 36 ಕ್ಯೂ 138 ನೇದನ್ನು ಗಂಗಾವತಿ ಸಿ.ಬಿ.ಎಸ್. ಸರ್ಕಲ್ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೊರಟಿರುವಾಗ ಮೋಟಾರು ಸೈಕಲನ್ನು ಕೊಪ್ಪಳ ರಸ್ತೆಯ ಕೆಂದೋಳಿ ರಾಮಣ್ಣ ಶಾಲೆ ಕ್ರಾಸ್ ಹತ್ತಿರ ಇರುವ ರೋಡ್ ಹಂಪ್ಸನ್ನು ಗಮನಿಸದೇ ಒಮ್ಮೆಲೆ ವೇಗದಲ್ಲಿದ್ದ  ಮೋಟಾರು ಸೈಕಲ್ಲನ್ನು ರೋಡ್ ಹಂಪ್ಸನ್ನು ಎಗರಿಸಿದಾಗ ನಿಯಂತ್ರಣಗೊಳ್ಳದೇ ಸ್ಕಿಡ್ ಆಗಿ ತಾನೇ ಮೋಟಾರು ಸೈಕಲ್ಲ ಹಾಕಿಕೊಂಡು ರಸ್ತೆ ಮೇಲೆ ಬಿದ್ದಿದ್ದು ಇದರಿಂದ ಆರೋಪಿತನ ಹಣೆಗೆ ರಕ್ತಗಾಯವಾಗಿದ್ದು ಮತ್ತು ತಲೆಗೆ ಭಾರಿ ಒಳಪೆಟ್ಟಾಗಿದ್ದು ಮತ್ತು ಎಡಮೋಣಕಾಲ ಮೇಲೆ ತರೆಚಿದಗಾಯಗಳಾಗಿದ್ದು ಇರುತ್ತದೆ. ಪಿರ್ಯಾದಿದಾರನು ಆರೋಪಿತನಿಗೆ ಸಿಟಿ ಸ್ಕ್ಯಾನ ಮಾಡಿಸಿಕೊಂಡು ಬಂದು ನಂತರ ಆರೋಪಿತನ ಮನೆಯವರಿಗೆ ವಿಚಾರಿಸಿ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿರುತ್ತಾನೆ. ಕಾರಣ ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 26/2016 ಕಲಂ: 279, 337 ಐ.ಪಿ.ಸಿ:.
ದಿನಾಂಕ: 25-03-2016 ರಂದು ಮದ್ಯಾಹ್ನ 4-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ಈರಪ್ಪ ಇಳಿಗೇರ ವಯ: 46 ವರ್ಷ, ಜಾತಿ: ಇಳಿಗೇರ : ಕೇಬಲ್ ಅಪರೇಟರ್. ಸಾ: ವೀರಭದ್ರೇಶ್ವರ ನಗರ ತಾವರಗೇರಾ. ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿಯರ್ಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರು ತಮ್ಮ ಕಾರ ನಂ; ಕೆ.-37/ಎಂ-6475 ಮಾರುತಿ ಸ್ವಿಪ್ಟ್ ಡಿಜೈರ್ ನೇದ್ದನ್ನು ತೆಗೆದುಕೊಂಡು ತಾವು ಮತ್ತು ತಮ್ಮ ಕಾರ್ ಚಾಲಕ ಮಹೆಬೂಬ ತಂದೆ ಹುಸೇನಸಾಬ ಮುಜಾವರ ಸಾ: ತಾವರಗೇರಾ ಇವರೊಂದಿಗೆ ಪುರ ದೇವಸ್ಥಾನಕ್ಕೆ ಕಾಯಿಯನ್ನು ಕೊಟ್ಟು ಬರಲು ಹೋಗಿದ್ದು ವಾಪಾಸು  ಸಿಂಧನೂರು ತಾವರಗೇರಾ ರಸ್ತೆಯಲ್ಲಿ ಬರುತ್ತಿದ್ದಾಗ ಅವರ ಕಾರ್ ಚಾಲಕ ಮಹೆಬೂಬ ಮುಜಾವರ ಈತನು ಮದ್ಯಾಹ್ನ 04-00 ಗಂಟೆ ಸುಮಾರಿಗೆ ಗೆದ್ದರಹಟ್ಟಿ ಕ್ರಾಸ್ ಹತ್ತಿರ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನಿಯಂತ್ರಣ ಮಾಡದೇ ರಸ್ತೆಯ ಬಲಗಡೆ ತೆಗ್ಗನಲ್ಲಿ ಹೋಗಿ ಕಾರನ್ನು ಪಲ್ಟಿ ಮಾಡಿದ್ದು, ಇದರಿಂದ ಫಿಯರ್ಾದಿದಾರರಿಗೆ ಬಲಹಣೆಗೆ, ಬಲಮೋಣಗೈಗೆ ರಕ್ತಗಾಯ, ಹಾಗೂ ಎಡಭುಜಕ್ಕೆ ಒಳಪೆಟ್ಟುಗಳಾಗಿದ್ದು, ಚಾಲಕ ಮೆಹಬೂಬ ಮುಜಾವರ ಈತನಿಗೆ ಯಾವುದೇ ಗಾಯಗಳು ಆಗಿರಲ್ಲಿಲ್ಲ. ಆದರೆ ಕಾರು ಜಖಂ ಆಗಿದ್ದು ಕಾರಣ ಸದರಿ ವಾಹನ ಚಾಲಕ ಮೆಹಬೂಬ ಮುಜಾವರ ಸಾ: ತಾವರಗೇರಾ ಈತನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ
4) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 20/2016 ಕಲಂ: 143, 147, 323, 504, 506 ಸಹಿತ 149  ಐ.ಪಿ.ಸಿ:.

ದಿನಾಂಕ: 24.03.2016 ರಂದು ರಾತ್ರಿ 8 ಗಂಟೆ ಸುಮಾರಿಗೆ ಪಿರ್ಯಾದಿದಾರ ಬಸಪ್ಪ ಹಳ್ಳಿ ಇತನು ಬೇವೂರ ಗ್ರಾಮದ ಪ್ರಭು ಇವರ ಪಾನ್ ಶಾಪದಲ್ಲಿ ಪಾನ್ ಹಾಕಿಕೊಂಡು ತಮ್ಮ ಹೊಲದ ಕಬ್ಬು ಸುಟ್ಟ ಬಗ್ಗೆ ಮಾತನಾಡುತ್ತಾ ನಿಂತಿದ್ದಾಗ ಅದೆ ವೆಳೆಗೆ ಪಾನ್ ಶಾಪ್ ಮುಂದುಗಡೆ ರಸ್ತೆಯ ಮೇಲೆ ಆರೋಪಿತರೆಲ್ಲರೂ ಪಿರ್ಯಾದಿದಾರನೊಂದಿಗೆ ಜಗಳ ತೆಗೆಯುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಬಂದವರೆ ಫಿರ್ಯಾದಿದಾರನಿಗೆ ಏನಲೆ ಬೊಸುಡಿ ಮಗೆ ನಿಮ್ಮ ಹೊಲದಲ್ಲಿನ ಕಬ್ಬು ಸುಟ್ಟ ಬಗ್ಗೆ ನಮಗೆ ಬೈದಾಡುತ್ತಿಯೆನಲೆ ಅವರಿವರಿಗೆ ಅದನೆನ್ನು ಹೇಳುತ್ತಿ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅಂದವರೆ  ಅವರ ಪೈಕಿ ಆರೋಪಿ ನಂ 1 ರಿಂದ 3 ನೇದ್ದವರಾದ ಬೆಟದಪ್ಪ, ಮತ್ತು ಇತನ ಮಕ್ಕಳಾದ ಬಸವರಾಜ, ಶಂಕ್ರಪ್ಪ ಇವರು ಪಿರ್ಯಾದಿದಾರನಿಗೆ ಕೈಯಿಂದ ಮೈಕೈಗೆ ಹೊಡೆ ಬಡಿ ಮಾಡಿದ್ದು ಇನ್ನೂಳಿದ ಆರೋಪಿ ನಂ 4 ರಿಂದ 5 ನೆದ್ದವರಾದ ಬಸಪ್ಪ ಮತ್ತು ಈಶಪ್ಪ  ಇವರಿಬ್ಬರೂ ಪಿರ್ಯಾದಿದಾರನಿಗೆ ಅವಾಶ್ಚಶಬ್ದಗಳಿಂದ ಬೂದಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿ ಪಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008