Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 8, 2016

1) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 22/2016 ಕಲಂ: 354(ಎ), 354(ಬಿ), 376, 511 ಸಹಿತ 34 ಐ.ಪಿ.ಸಿ ಮತ್ತು Protection of Children from Sexual offences Act-2012 under section-08, 12, 18
ದಿನಾಂಕ: 07-03-2016 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿದಾರರಾಳ ಸಾ: ಬೇವಿನಕಟ್ಟಿ, ಸಾ: ಪಟ್ಟಲಚಿಂತಿ ರವರು ತಮ್ಮ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನಂದರೆ, ಫಿರ್ಯಾದಿ ಮೂಕಳಿದ್ದು, ಕಿವಿ ಕೇಳದೆ ಇದ್ದು, ಈಕೆಯು 16 ವರ್ಷದವಳಾಗಿದ್ದು, ದಿನಾಂಕ: 07-03-2016 ರಂದು ಗೊಡೆ ಕಟ್ಟುವ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡುವಲ್ಲಿ ಯಮನೂರಪ್ಪ ಮಾದರ, ಮತ್ತು ನಿಂಗಪ್ಪ  ಭಜಂತ್ರಿ ಇವರು ಕೆಲಸಕ್ಕೆ ಬಂದು ಮಧ್ಯಾಹ್ನ 01-00 ಗಂಟೆಯ ಸುಮಾರು ಫಿರ್ಯಾದಿಯನ್ನು ರಮಿಸಿ ಖಾಲಿ ಜೋಪಡಿಗೆ ಕರೆದುಕೊಂಡು ಹೋಗಿ ಯಮನೂರಪ್ಪ, ಮತ್ತು ನಿಂಗಪ್ಪ ಇಬ್ಬರೂ ಫಿರ್ಯಾದಿ ಮಂಜುಳಾಳನ್ನು ಜಗ್ಗಾಡಿ ಎದೆ ಹಿಚುಕಿ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ಅದೇ ಊರಿನ ಬಾಲಪ್ಪ ರಾಜೂರ, ಮತ್ತು ಕರಿಬಸಯ್ಯ ಹಿರೇಮಠ ಇವರು ಅಲ್ಲಿಗೆ ಬಂದಾಗ ಯಮನೂರಪ್ಪ, ಮತ್ತು ನಿಂಗಪ್ಪ ಓಡಿ ಹೋದರು. ನಂತರ ಫಿರ್ಯಾದಿ ಮಂಜುಳಾ ತನ್ನ ತಾಯಿಯನ್ನು ಕರೆದುಕೊಂಡು ಠಾಣೆಗೆ ಬಂದು ಈ ಮೇಲಿನವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 54/2016 ಕಲಂ: 87 Karnataka Police Act.
ದಿನಾಂಕ: 5-15 ಗಂಟೆಗೆ ಬೂದಗುಂಪಾ ಸೀಮಾದ ಅಡ್ಡಹಳ್ಳದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿದಾರರಾದ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ತಮ್ಮ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದಿದ್ದು, 4 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಅವರ ಹತ್ತಿರ ಇಸ್ಪೇಟ ಜೂಜಾಟದ 5600-00 ರೂ. ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಮತ್ತು ಒಂದು ಹಳೆಯ ಪ್ಲಾಸ್ಟಿಕ್ ಬರ್ಕಾ ಸಿಕ್ಕಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 46/2016 ಕಲಂ: 143, 147, 504, 341, 324, 323, 506 ಸಹಿತ 149 ಐ.ಪಿ.ಸಿ 

ದಿನಾಂಕ: 07-03-2016 ರಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಫೋನ್ ಮುಖಾಂತರ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ನಾನು ಕೊಡಲೇ ಸದರಿ ಆಸ್ಪತ್ರೆಗೆ ಬೇಟಿ ನೀಡಿ, ಅಲ್ಲಿ ಜಗಳದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ ಗಾಯಾಳುಗಳನ್ನು ವಿಚಾರ ಮಾಡಿದ್ದು, ಗಾಯಾಳುಗಳು ತಮ್ಮ ಹಿರಿಯರನ್ನು ವಿಚಾರ ಮಾಡಿ, ನಂತರ ಪಿರ್ಯಾದಿಯನ್ನು ನೀಡುವುದಾಗಿ ತಿಳಿಸಿದ್ದು, ಸಾಯಂಕಾಲ 5-00 ಗಂಟೆಯ ಸುಮಾರಿಗೆ ಗಾಯಾಳುಗಳ ಫೈಕಿ ಪಿರ್ಯಾದಿದಾರರು ತಮ್ಮ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು, ಸದರಿ ಹೇಳಿಕೆಯನ್ನು ಪಡೆದುಕೊಂಡಿದ್ದು ಅವರ ಸಾರಾಂಶವೆನೆಂದರೆ, ಪಿರ್ಯಾದಿದಾರರ ಮತ್ತು ಆರೋಪಿತರ ಪ್ಲಾಟ್ಗಳು ಅಕ್ಕಪಕ್ಕ ಇದ್ದು, ಪ್ಲಾಟ್ ಜಾಗೆಯ ವಿಷಯವಾಗಿ ಮೊದಲಿನಿಂದಲೂ ಇಬ್ಬರಿಗೂ ವೈಮನಸ್ಸು ಇದ್ದು, ನಿನ್ನೆ ದಿನಾಂಕ: 06-03-2016 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾದಿದಾರಳು ಮತ್ತು ಅವರ ಮಗನಾದ ಲಕ್ಷ್ಮಣ ಈತನು ತಮ್ಮ ಪ್ಲಾಟ್ನಲ್ಲಿ ಮನೆಯನ್ನು ಕಟ್ಟಿಸುವ ಸಲುವಾಗಿ ಜೆ.ಸಿ.ಬಿ. ಯಿಂದ ಬುನಾದಿಯನ್ನು ತೆಗಯುವ ಕಾಲಕ್ಕೆ ಸದರಿ ಜೆ.ಸಿ.ಬಿ. ಯು ಆರೋಪಿತರ ಪ್ಲಾಟ್ನಲ್ಲಿ ಹೋಗಿದ್ದರಿಂದ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿಯರ್ಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಕಟ್ಟಿಗೆಯಿಂದ, ಕೈಯಿಂದ ಹೊಡೆ ಬಡೆ ಮಾಡಿ, ದುಖಾಃಪಾತ ಮಾಡಿದ್ದು ಇರುತ್ತದೆ. ಅಲ್ಲದೇ ಜಗಳವನ್ನು ನೋಡಿ, ಬಿಡಿಸಲು ಬಂದ ಪಿರ್ಯಾದಿದಾರರ ಮಗನಾದ ಲಕ್ಷ್ಮಣ ಈತನಿಗೂ ಕೂಡಾ ಆರೋಪಿತರು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದು ಕೊಂಡು ಕೈಯಿಂದ ಮೈ ಕೈಗೆ ಹೊಡೆಬಡೆ ಮಾಡಿ, ದುಖಾಃಪಾತ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತಮಗೆ ಹೊಡೆ ಬಡೆ ಮಾಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿ ಸಾರಾಂಶದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

0 comments:

 
Will Smith Visitors
Since 01/02/2008