Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 9, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 43/2016 ಕಲಂ: 51(ಎ), 68, 68(ಎ), 63 Copy Right Act 1957 ಮತ್ತು 420 ಐ.ಪಿ.ಸಿ.
ದಿನಾಂಕ : 08-03-2016 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ ಕುಮಾರ ಸಾ : ಅಶೋಕ ನಗರ ಚನೈ ಇವರು ಠಾಣೆಗೆ ಹಾಜರಾಗಿ ಒಂದು ಇಂಗ್ಲೀಷನಲ್ಲಿ ಟೈಪ್ ಮಾಡಿದ. ಫಿರ್ಯಾದಿಯನ್ನು ಹಾಜರಪಡಿಸಿದ್ದು. ಸಾರಾಂಶವೇನೆಂದರೆ ಆರೋಪಿತರು ತಮ್ಮ ಅಂಗಡಿಗಳಲ್ಲಿ ಪ್ರತಿಷ್ಠಿತ ಕಂಪನಿಯಾದ ಹಿಂದುಸ್ತಾನ ಯುನಿಲಿವರ್ ಇವರ ಹೆಸರನ್ನು ಮತ್ತು ಅವರ ಕಂಪನಿಯ ಚಿನ್ಹೆ (ಲೋಗೊ) ಬಳಸಿ. ನಕಲಿ ಕ್ಲಿನಿಕ್ ಪ್ಲಸ್ ಶಾಂಪೋ ಮತ್ತು ಲೈನರ್ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಟ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ. ಕಾರಣ ಫಿರ್ಯಾದಿಯಲ್ಲಿ ನಮೂದಿಸಿದ ಅಂಗಡಿಗಳ ಮಾಲೀಕರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದು ಫಿರ್ಯಾದಿಯ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 61/2016 ಕಲಂ: 379 ಐ.ಪಿ.ಸಿ:
ದಿನಾಂಕ-08.03.2016 ರಂದು ಮಧ್ಯಾನ್ನ 12.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹ್ಮದ್ ಅಲಿ ಸೂಪರ್ ವೈಜರ್, ನಿಶಾ ಕಂಪನಿ ಲಿಮಿಟೆಡ್, ಸಾ ಎಲ್.ಬಿ.ಎಸ್ ನಗರ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪೀರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ಗಿಣಗೇರಿ ಗ್ರಾಮದ ಭಾರತಿ ಎರಟೇಲ್ ಇವರ ಜಾಗೆಯಲ್ಲಿ ಹಾಕಿದ ಇಂಡಸ್ಟ್ರಿ ಟವರ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ದೂರವಾಣಿ ಟವರ್ IN No- 1119910HN6310  ಟವರನ ಎರಟೆಲ್ ಮತ್ತು ವಡೋಫೋನ್ ಸಂಪರ್ಕದ ಬ್ಯಾಟರಿ ಬ್ಯಾಂಕ್ ಹಂರಾಜ  600 AH 48 VH 24 ಸೆಲ್ಸ ಅಂ.ಕಿಮ್ಮತ್ತು 11000-00 ಬೆಲೆಬಾಳುವದನ್ನು ದಿ-01.03.2016 ರ ರಾತ್ರಿ 10.00 ಗಂಟೆ ಅವಧಿಯಿಂದ ದಿ-02.03.2016  ರ ಬೆಳಗಿನ 06.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಘಟನೆ ಜರುಗಿದ ನಂತರ  ಅಲ್ಲಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ತಡವಾಗಿ ಇಂದು ಬಂದು ದೂರನ್ನ ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 25/2016 ಕಲಂ: 420 ಐ.ಪಿ.ಸಿ:. 
ದಿನಾಂಕ:08-03-2016 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ತಾನು ಮ್ಮೂರಲ್ಲಿ ಹಾಗೂ ಕೊಪ್ಪಳದಲ್ಲಿ ಹಣ್ಣನ್ನು ವ್ಯಾಪಾರ ಮಾಡಿಕೊಂಡು ಇದ್ದು, 8-10 ದಿವಸಗಳ ಹಿಂದೆ ಹಣ್ಣನ್ನು ತರಲು ಗದಗಗೆ ಹೋಗಿ ವಾಪಾಸ್ಸು ಒಂದು ಖಾಸಗಿ ವಾಹನದಲ್ಲಿ ತಳಕಲ್ ವರೆಗೆ ಬಂದು ತಳಕಲ್ ಪೆಟ್ರೋಲ್ ಬಂಕ್ ಹತ್ತಿರ ಇದ್ದ ಡಾಬಾ ಹೋಟೆಲ್ ಗೆ ಊಟ ಮಾಡಲು ಹೋದಾಗ. ಮೂರು ಜನ ಅಪರಿಚಿತ ಮನುಷ್ಯರು ಬಂದು ನ್ನಂತೆ ಊಟ ಮಾಡಲು ಕುಳಿತು ನ್ನ ಹೆಸರು ವಿಳಾಸ ಕೇಳಿ ಪರಿಚಯ ಮಾಡಿಕೊಂಡು, ಸದರಿಯವರು ತನಗೆ ಹಣ್ಣಿನ ವ್ಯಾಪಾರದಲ್ಲಿ ಎಷ್ಟು ಲಾಭ ಆಗುತ್ತದೆ ಅಂತಾ ಕೇಳಿದರು. ಆಗ ತಾನು ಎಲ್ಲಾ ಖರ್ಚು ತೆಗೆದು ಅಲ್ಪ ಸ್ವಲ್ಪ ಕೂಲಿ ಹಣ ಉಳಿಯುತ್ತದೆ ಅಂತಾ ಹೇಳಿದಾಗ ಆರೋಪಿತರು ತನಗೆ ತಮ್ಮ ಮಾತನ್ನು ಕೇಳಿದರೆ ನಿನಗೆ ಹಣದ ಅಡಚಣೆಯಾಗುವದಿಲ್ಲಾ ಅಂತಾ ನಂಬಿಸಿದರು. ಆಗ ಆರೋಪಿತರು ಮ್ಮಲ್ಲಿ ಕಪ್ಪು ಬಣ್ಣದ ನೋಟುಗಳು ಇದ್ದಂತೆ ಕಾಗದಗಳಿರುತ್ತವೆ. ಅವುಗಳನ್ನು ನಾವು ಕೊಟ್ಟ ಎಣ್ಣೆಯಿಂದ ತೊಳೆದರೆ ಅವು ರೂ.500 ನೋಟುಗಳಾಗುತ್ತವೆ. ಈ ನೋಟುಗಳನ್ನು ನೀನು ಎಲ್ಲಿಯಾದರೂ ಕೊಟ್ಟು ನಿನಗೆ ಬೇಕಾದ ಹಣ್ಣು ಮತ್ತು ಇತರ ಸಾಮಾನುಗಳನ್ನು ತರಲು ಅನುಕೂಲವಾಗುತ್ತದೆ ಅಂತಾ ಹೇಳಿದ್ದು ಅವರ ಪೈಕಿ ಒಬ್ಬನನ್ನು ವಿಚಾರಿಸಲು ತನ್ನ ಹೆಸರು ಬಸವರಾಜ ಪಟೇಲ್ ಅಂತಾ ಹೇಳಿ  ಫಿರ್ಯಾದಿಯ ಮೊಬೈಲ್ ನಂಬರ ಪಡೆದುಕೊಂಡನು. ಆಗ ತಾನು ಊಟ ಮಾಡಿ ಹೋಗುತ್ತಿದ್ದಾಗ ಸದರಿಯವನು ಆರೋಪಿ ತನ್ನ ಮೋಬೈಲ್ ನಂ.8748937573 ನೇದ್ದನ್ನು ಕೊಟ್ಟು ಮಾತನಾಡಲು ಹೇಳಿದನು. ದಿನಾಂಕ:08-03-2016 ರಂದು ಮುಂಜಾನೆ 10.00 ಗಂಟೆ ಸುಮಾರು ಫಿರ್ಯಾದಿ ಮ್ಮೂರ ಬಸ್ ಸ್ಟ್ಯಾಂಡ್ ದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾಗ ಪೋನ ಮಾಡಿ ಆರೋಪಿ ಬಸವರಾಜ ಪಟೇಲ್ ಈಗ 8-10 ದಿನಗಳ ಹಿಂದೆ ತಳಕಲ್ ಡಾಬಾದಲ್ಲಿ ಮಾತನಾಡಿದ ಬಗ್ಗೆ ಹೇಳಿದನು. ನಿನಗೆ ಕೊಡಲು ಕಪ್ಪು ಬಣ್ಣದ ನೋಟುಗಳನ್ನು ತಂದಿದ್ದೇವೆ. ನೀನು ರೂ. 2500 ಹಣವನ್ನು ತಳಕಲ್ ಡಾಬಾದ ಹತ್ತಿರ ಇರುವ ಗುಡಿ ಹತ್ತಿರ ಕುಳಿತಿದ್ದೇವೆ ನೀನು ಹಣ ತೆಗೆದುಕೊಂಡು ಬಾ ಅಂತಾ ಹೇಳಿದ ಮೇರೆಗೆ ಫಿರ್ಯಾದಿ ಅಲ್ಲಿಗೆ ಹೋದಾಗ ಅವರ ಪಕ್ಕದಲ್ಲಿ ಒಂದು ಸ್ಕೂಟಿ ಮೋಟಾರ್ ಸೈಕಲ್ ನಂ. KA 26 U 4639 ಇತ್ತು. ಆರೋಪಿ ತನಗೆ ಹಣ ಕೊಡಲು ಹೇಳಿದನು. ಆಗ ನಾನು ನನ್ನ ಹತ್ತಿರ ರೂ.2500 ಹಣ ಅಲ್ಲಲ್ಲಿ ಸಾಲ ಮಾಡಿ ತಂದಿದ್ದೇನೆ ಅಂತಾ ಹೇಳಿ ಹಣವನ್ನು ಬಸವರಾಜನಿಗೆ ಕೊಟ್ಟೆನು. ಆಗ ಸದರಿಯವನು ಒಂದು ಕಪ್ಪು ಬಣ್ಣದ ಒಂದು ಕಟ್ಟನ್ನು ಕೊಟ್ಟು ಮತ್ತು ಒಂದು ಎಣ್ಣೆ ಇದ್ದ ಬಾಟಲಿ ಕೊಟ್ಟು ನೀನು ಮನೆಗೆ ಹೋಗಿ ನಾವು ಕೊಟ್ಟ ಕಪ್ಪು ಬಣ್ಣದ ಕಟ್ಟುಗಳಿಗೆ ಒಂದೊಂದಾಗಿ ಎಣ್ಣೆ ಹಚ್ಚಿದರೆ ಅವು ರೂ.500 ನೋಟುಗಳಾಗುತ್ತವೆ ಅಂತಾ ಹೇಳಿ ನನ್ನಿಂದ ಹಣ ಪಡೆದುಕೊಂಡು ಮೂರು ಜನರು ತಾವು ತಂದಿದ್ದ ಸ್ಕೂಟಿ ಮೇಲೆ ತಳಕಲ್ ಕಡೆಗೆ ಹೋದರು. ಸದರಿ ಜನರು ಸುಮಾರು 48 ರಿಂದ 62 ವಯಸ್ಸಿನವರಾಗಿದ್ದು ಎಲ್ಲರೂ ಕನ್ನಡ ಮಾತನಾಡುತ್ತಿದ್ದರು. ಹಾಗೂ ಮೂರು ಜನರು ಬಿಳಿ ಬಣ್ಣದ ಶರ್ಟ ಹಾಗೂ ಕಪ್ಪು ಬಣ್ಣದ ಪ್ಯಾಂಟು ತೊಟ್ಟು ಕೊಂಡಿದ್ದರು. ಸದರಿ ಜನರು ನನಗೆ ಮೋಸ ಮಾಡುವ ಹಾಗೂ ನನ್ನ ಹಣವನ್ನು ಲಪಟಾಯಿಸುವ ದುರುದ್ದೇಶದಿಂದ ಯಾವುದೋ ಕಪ್ಪು ಕಾಗದಗಳನ್ನು ಕೊಟ್ಟು ನನಗೆ ಮೋಸ ಮಾಡಿರುತ್ತಾರೆ. ಸದರಿ ಜನರು ಕೊಟ್ಟಂತಹ ಕಪ್ಪು ಕಾಗದಗಳನ್ನು ಹಾಗೂ ಎಣ್ಣೆಯ ಬಾಟಲಿಯನ್ನು ಹಾಜರಪಡಿಸಿದ್ದು ಇರುತ್ತದೆ. ಸದರಿ ಜನರನ್ನು ನೋಡಿದರೆ ಗುರುತಿಸುತ್ತೇನೆ. ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನಾನು ಕೊಟ್ಟ ರೂ.2500 ಹಣವನ್ನು ವಾಪಾಸ್ಸು ಕೊಡಿಸಲು ವಿನಂತಿ ಇರುತ್ತದೆ ಅಂತಾ ವಗೈರೆ ಫಿರ್ಯಾದಿ ಕೊಟ್ಟಿದ್ದು ಸದರಿ ಫಿರ್ಯಾದಿ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಯಿತು.
4) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 21/2016 ಕಲಂ: 279, 337, 338 ಐ.ಪಿ.ಸಿ:. 

ದಿನಾಂಕ: 08-03-2016 ರಂದು ಸಂಜೆ 7-00 ಗಂಟೆಗೆ ತಾವರಗೇರಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಹೋಗಿ ಇಲಾಜು ಪಡೆಯುತ್ತಿದ್ದ ಗಾಯಾಳು ಪಿರ್ಯಾದಿದಾರರಾದ ಶ್ರೀ ರುದ್ರಪ್ಪ ತಂದೆ ಮಾನಪ್ಪ ಮದ್ದಿನ್ ವಯ: 24 ವರ್ಷ, ಜಾತಿ: ಕುರುಬರು. ಉ: ಒಕ್ಕಲುತನ. ಸಾ: ಕುರುಬರ ಓಣಿ ತಾವರಗೇರಾ.ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿಯರ್ಾದಿದಾರರು ಹಾಗೂ ಅವರ ಓಣಿಯ ಪರಿಚಯಸ್ಥರಾದ ಶ್ಯಾಮಣ್ಣ ಕೈಲವಾಡಗಿ ಮತ್ತು ರಾಮಣ್ಣ ಬಗಡಿ ರವರು ಕೂಡಿ ಇಂದು ದಿನಾಂಕ: 08-03-2016 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಂದಾಪುರ ಗ್ರಾಮಕ್ಕೆ ಈಶ್ವರ ಜಾತ್ರೆ ಹಾಗೂ ಎತ್ತುಗಳು ಭಾರ ಎಳೆಯುವ ಸ್ಪದರ್ೆಯನ್ನು ನೋಡಲು ತಮಗೆ ಪರಿಚಯದ ಕೃಷ್Ùಳರವರ ಹೊಂಡಾ ಸೈನ್ ಮೋಟಾರು ಸೈಕಲ್ ನಂ: ಕೆ.ಎ-37/ಕ್ಯೂ-7462 ನೇದ್ದನ್ನು ತೆಗೆದುಕೊಂಡು ಹೋಗಿದ್ದು, ಜಾತ್ರೆಯನ್ನು ನೋಡಿಕೊಂಡು ನಂದಾಪುರದಿಂದ ತಾವರಗೇರಾಕ್ಕೆ ವಾಪಾಸು ಬರುತ್ತಿದ್ದಾಗ ಮೋಟಾರು ಸೈಕಲ್ನ್ನು ಶ್ಯಾಮಣ್ಣ ಕೈಲವಾಡಗಿ ಈತನು ನಡೆಸುತ್ತಿದ್ದು, ಇಂದು ಸಂಜೆ 05-30 ಗಂಟೆ ಸುಮಾರಿಗೆ ಕುಷ್ಟಗಿ ತಾವರಗೇರಾ ಮುಖ್ಯರಸ್ತೆಯ ಶೋಭಾ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ತಿರುವಿನಲ್ಲಿ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರು ಸೈಕಲ್ನ್ನು ನಿಯಂತ್ರಣ ಮಾಡದೇ ರಸ್ತೆಯ ಎಡಬದಿಯಲ್ಲಿ ಇಟ್ಟಿದ್ದ ಒಂದು ಕಲ್ಲಿಗೆ ಟಕ್ಕರು ಮಾಡಿದ್ದು ಇದರಿಂದ ಎಲ್ಲರೂ ಕೆಳಗೆ ಬಿದ್ದಿದ್ದು ನೋಡಲಾಗಿ ಫಿಯರ್ಾದಿದಾರರಿಗೆ ಎಡಗಾಲ ಪಾದದ ಹತ್ತಿರ, ಎದೆಗೆ, ತಲೆಯ ಬಲ ಭಾಗಕ್ಕೆ ಒಳಪೆಟ್ಟು, ರಾಮಣ್ಣನಿಗೆ ಎಡಗಾಲ ಪಾದದ ಹತ್ತಿರ ಒಳಪೆಟ್ಟು ಮತ್ತು ಎಡಭುಜಕ್ಕೆ ತೆರಚಿದ ಗಾಯ ಮತ್ತು ಶ್ಯಾಮಣ್ಣನಿಗೆ ಎಡಗಾಲ ಮೊಣಕಾಲ ಹತ್ತಿರ ಭಾರಿ ರಕ್ತಗಾಯ ಮತ್ತು ಒಳಪೆಟ್ಟು ಹಾಗೂ ತಲೆಗೆ ಭಾರಿ ರಕ್ತಗಾಯಗಳಾಗಿದ್ದು ನಂತರ ತಾವು ಯಾವುದೋ ಒಂದು ಖಾಸಗಿ ವಾಹನದಲ್ಲಿ ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಕಾರಣ ಸದರಿ ವಾಹನ ಚಾಲಕ ಶ್ಯಾಮಣ್ಣ ಕೈಲವಾಡಗಿ ಸಾ: ತಾವರಗೇರಾ ಈತನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು  ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008