Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 12, 2016

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 28/2016 ಕಲಂ: 87 Karnataka Police Act.
ದಿನಾಂಕ: 11-03-2016 ರಂದು 7-00 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 11 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 5-10 ಪಿಎಂಕ್ಕೆ ಮುತ್ತಾಳ ಗ್ರಾಮದ ಹಳ್ಳದ ದಂಡೆಯ ಸಾರ್ವಜನಿಕ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 17680/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ. 62/2016 ಕಲಂ: 78(3) Karnataka Police Act.
ದಿನಾಂಕಃ- 11-03-2013 ರಂದು  ರಾತ್ರಿ 8-45 ಗಂಟೆಯ ಸುಮಾರಿಗೆ ಪಿ.ಎಸ್.ಐ  ಕಾರಟಗಿ ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 11-03-2016 ರಂದು ಹಗೇದಾಳ ಗ್ರಾಮದ ಆರೋಪಿತನು ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮೋಸಮಾಡುವ ಉದ್ದೆಶದಿಂದ ಸಾರ್ವ ಜನಿಕರಿಂದ ಹಣವನ್ನು ಪಡೆದುಕೊಂಡು ಸಾರ್ವಜನಿಕರಿಗೆ ಯಾವುದೇ ಜವಾಬು ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಆರೋಪಿ ಪ್ರಭುರಾಜ ದೇಸಾಯಿ ತಂದಿ ದೇವೇಂದ್ರಪ್ಪ ದೇಸಾಯಿ ವಯಾ-48 ವರ್ಷ ಜಾ.ಲಿಂಗಾಯತ - ಕಿರಾಣಿ ಅಂಗಡಿ ಸಾ. ಹಗೇದಾಳ ತಾ. ಗಂಗಾವತಿ ಈತನ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ  ಆರೋಪಿತನ ಕಡೆಯಿಂದ ಸಾರ್ವಜನಿಕರಿಗೆ ಮೋಸ ಮಾಡಿ ತೆಗೆದುಕೊಂಡ ನಗದು ಹಣ ರೂ.590=00 ಗಳನ್ನು ಮತ್ತು ಒಂದು ಮಟ್ಕಾ ಪಟ್ಟಿ ಒಂದು ಬಾಲ್ ಪೆನ್ನು ಒಂದು ಸೆಲ್ ಕಾನ್ ಮೋಬೈಲ್ ಅಂ.ಕಿ 500=00 ನೆದ್ದನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ನೀಡದ ವರದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ. ನಂ. 50/2016 ಕಲಂ: 354, 323, 504, 506 ಐ.ಪಿ.ಸಿ:.
ದಿನಾಂಕ: 11-03-2016 ರಂದು ಮಧ್ಯಾಹ್ನ 03-30 ಗಂಟೆಗೆ ಫಿರ್ಯಾದಿ ಶ್ರೀಮತಿ ವಿಜಯಾ ಹಿರೇಮಠ ಸಾ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ನನಗೆ ದಿನಾಂಕ: 11-03-2016 ರಂದು ಮಧ್ಯಾಹ್ನ 02-00 ಗಂಟೆಗೆ ಕೊಪ್ಪಳ ನಗರದ ನಗರಸಭೆಯ ಸಭಾಂಗಣದಲ್ಲಿ ನಡೆಯುತ್ತಿದ್ದ ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರೀಯೆ ಮುಗಿದ ನಂತರ ನಗರಸಭೆ ಸದಸ್ಯರಾದ ಚನ್ನಪ್ಪ ಕೊಟ್ಯಾಳ ಇವರು ಏಕಾಏಕಿ ಬಂದು ನನಗೆ ಅವಾಚ್ಯವಾಗಿ ಬೈದಾಡಿ ನನ್ನ ಎಡ ಕಪಾಳಕ್ಕೆ ನನ್ನ ಕೈ ಹಿಡಿದು ಎಳೆದಾಡಿ, ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಕಾರಣ ಚನ್ನಪ್ಪ ಕೊಟ್ಯಾಳ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ. ನಂ. 51/2016 ಕಲಂ: 323, 307, 504, 506 ಐ.ಪಿ.ಸಿ:.
ದಿನಾಂಕ: 11-03-2016 ರಂದು ಸಂಜೆ 5-35 ಗಂಟೆಗೆ ಫಿರ್ಯಾದಿದಾರರ ಪರವಾಗಿ ರಾಜು ಬಾಕಳೆ ವಕೀಲರು ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 11-03-2016 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರೀಯೆ ಮುಗಿದ ನಂತರ ಆರೋಪಿತಳಾದ ಶ್ರೀಮತಿ ವಿಜಯಾ ಹಿರೇಮಠ ಇವಳಿಗೆ ಚುನಾವಣೆಯಲ್ಲಿ ಮತ ಹಾಕಿದ ವಿಷಯವಾಗಿ ಕೇಳಲು ಹೋದಾಗ ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳಕ್ಕೆ ಹೊಡೆದು ಮತ್ತು ಕೊಲೆ ಮಾಡುವ ಉದ್ದೇಶದಿಂದ ಮರ್ಮಾಂಗಕ್ಕೆ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನುಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ. 59/2016 ಕಲಂ: 379 ಐ.ಪಿ.ಸಿ:.
ದಿನಾಂಕ 11-03-2016 ರಂದು 10-00 ಗಂಟೆಗೆ ವಿರೇಶ ತಂದೆ ನೀಲಪ್ಪ ಮಾಲಗಾರ, ವಯಸ್ಸು 46 ವರ್ಷ ಜಾ: ಲಿಂಗಾಯತ, ಉ: ವಿ.ಆರ್.ಎಲ್. ಕಂಪನಿಯಲ್ಲಿ ಕರ್ಕ ಕೆಲಸ, ಸಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 05-03-2016 ರಂದು ಸಾಯಂಕಾಲ 7-35 ಗಂಟೆಯ ಸುಮಾರಿಗೆ ಲಾರಿ ನಂ: ಎಂ.ಹೆಚ್-11, ಎ.ಎಲ್. 4352 ನೇದ್ದರಲ್ಲಿ ಸೊಲ್ಲಾಪೂರದಿಂದ ಗಂಗಾವತಿಗೆ 118 ಕನ್ನಂಜಾಯನ್ ಮೆಂಟ್ ನಲ್ಲಿ 238 ಸರಕುಗಳನ್ನು ಲೋಡ್ ಮಾಡಿಕೊಂಡು ದಿನಾಂಕ: 06-03-2016 ರಂದು ಬೆಳಗಿನ ಜಾವ 6-00 ಗಂಟೆಗೆ ಬಂದಿದ್ದು ಲಾರಿಯ ಚಾಲಕ ಮತ್ತು ಕ್ಲೀನರ್ ಇಬ್ಬರೂ ಮಾಲನ್ನು ಅನ್ ಲೋಡ್ ಮಾಡುವ ಕಾರ್ಮಿಕರನ್ನು ಕರೆಯದೇ ಚಾಲಕ ಮತ್ತು ಕ್ಲೀನರ್ ಇಬ್ಬರೂ ಸೇರಿ ಆಪೀಸಿನಲ್ಲಿ ಟಪಾಲನ್ನು ಚೆಕ್ ಮಾಡುವುದರೊಳಗಾಗಿ ತಾಡಪತ್ರಿ ಮತ್ತು ಹಗ್ಗವನ್ನು ಬಿಚ್ಚಿದ್ದು ಪಾರ್ಸಲ್ ಪ್ರಕಾರ ಒಟ್ಟು 238 ಪಾರ್ಸಲ್ ಇದ್ದು ಅದರಲ್ಲಿ ಗಂಗಾವತಿಯ ಆಪೀಸಿಗೆ ಬರುವಷ್ಟರಲ್ಲಿ 229 ಪಾರ್ಸಲ್ ಗಳು ಮುಟ್ಟಿದ್ದು ಅದರಲ್ಲಿ 7 ಬಟ್ಟೆಯ ಬಂಡಲ್ ಗಳು ಕಡಿಮೆ ಬಂದಿರುತ್ತವೆ. ಲಾರಿಯ ಚಾಲಕ ಮತ್ತು ಕ್ಲೀನರ್ ಇಬ್ಬರೂ ಸೇರಿ ಲಾರಿಯ ಮೇಲಿನ ತಾಡಪಾಲನ್ನು ಕೊಯ್ದು ಅದರೊಳಗಿನಿಂದ ಒಟ್ಟು ಕಿ.ರೂ. 1,55,726-00 ಬೆಲೆ ಬಾಳುವ ಒಟ್ಟು 07 ಬಟ್ಟೆಯ ಬಂಡಲ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸಂಶಯ ಇರುವ ಬಗ್ಗೆ ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ   ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6) ತಾವರಗೇರಾ ಪೊಲೀಸ್ ಠಾಣೆ ಗುನ್ನೆ. ನಂ. 22/2016 ಕಲಂ: 379 ಐ.ಪಿ.ಸಿ:.
ದಿನಾಂಕ: 11-03-2016 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮಣ್ಣ ತಂದೆ ರಾಮಣ್ಣ ಗರ್ಜನಾಳ ವಯ: 33 ವರ್ಷ, ಜಾತಿ: ಕುರುಬರು : ಒಕ್ಕಲುತನ. ಸಾ: ತಾವರಗೇರಾ. 9916489398 ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರರು ಸುಮಾರು ಒಂದು ವರ್ಷದ ಹಿಂದೆ ಒಂದು ಹೆಚ್.ಎಫ್. ಡಿಲಕ್ಸ್ ದ್ವಿಚಕ್ರ ವಾಹನ ನಂ: ಕೆ.-37/ಎಕ್ಸ್-8467 ಚೆಸ್ಸಿ ನಂ: MBLHA11ALE9J10839  ಹಾಗೂ ಎಂಜಿನ್ ನಂ: HA11EJE9J10406 ನೇದ್ದನ್ನು ಖರೀದಿಸಿದ್ದು ಅದನ್ನು ಅವರೇ ಓಡಿಸಿಕೊಂಡಿದ್ದು ಇದ್ದು ನಿನ್ನೆ ದಿನಾಂಕ: 10-03-2016 ರಂದು ಸಂಜೆ 7-00 ಗಂಟೆ ಸುಮಾರಿಗೆ ತಾವರಗೇರಾದ ಎಸ್.ಬಿ.ಹೆಚ್. ಬ್ಯಾಂಕ್ ಎದುರಿಗೆ ಇರುವ ಪಾನಶ್ಯಾಪ್ ಹತ್ತಿರ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಬಿಲ್ಡಿಂಗ್ ಮೇಲಿರುವ ತಮ್ಮ ರೂಮಿಗೆ ಹೋಗಿ ವಾಪಾಸು ಅರ್ಧ ಗಂಟೆಯೋಳಗೆ ಬಂದು ನೋಡಿದಾಗ ಫಿರ್ಯಾದಿದಾರರ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಬಗ್ಗೆ ಫಿರ್ಯಾದಿದಾರರು ತಮ್ಮ ಗೆಳೆಯರಲ್ಲಿ. ಸಂಭಂದಿಕರಲ್ಲಿ ಹಾಗೂ ಗ್ರಾಮದ ಬಸ್ ನಿಲ್ದಾಣ, ಸಿಂಧನೂರು ವೃತ್ತ, ಮೇನ್ ಬಜಾರ್. ಅಲ್ಲಿ ಇಲ್ಲಿ ಸುತ್ತ ಮುತ್ತಾ ಹುಡುಕಾಡಿಲಾಗಿ ಸದರಿ ಮೋಟಾರು ಸೈಕಲ್ ನಂ: ಕೆ.-37/ಎಕ್ಸ್-8467 ನೇದ್ದು ಸಿಗದೇ ಇದ್ದು, ಕಾರಣ ಇಂದು ತಡವಾಗಿ ಬಂದು ತಮ್ಮ ಮೋಟಾರು ಸೈಕಲ್ ನಂ: ಕೆ.-37/ಎಕ್ಸ್-8467 ಅಂ.ಕಿ 30,000=00 ರೂ ಬೆಲೆ ಬಾಳುವುದನ್ನು ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
7) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 27/2016  ಕಲಂ:. 279, 337, 338 ಐ.ಪಿ.ಸಿ:.

ದಿನಾಂಕ: 11-03-2016 ರಂದು ಮುಂಜಾನೆ 10-15 ಗಂಟೆಯ ಸುಮಾರಿಗೆ ಆರೋಪಿ ನಂ. 01 ನೇದ್ದವನು ನೊಂದಣಿ ಸಂಖ್ಯೆ ಇರದ ಮೋಟಾರ್ ಸೈಕಲ್ ಮೇಲೆ ಪಿರ್ಯಾದಿದಾರನನ್ನು ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಕರೆದುಕೊಂಡು ಹಗೇದಾಳದಿಂದ ಹೋರಟಿದ್ದು, ಆರೋಪಿ ನಂ. 01 ನೇದವನು ತಾನು ಚಲಾಯಿಸುತಿದ್ದ ಮೋಟಾರ್ ಸೈಕಲ ಅನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಯಲಬುರ್ಗಾ-ಬಂಡಿ ರಸ್ತೆಯ ಮೇಲೆ ಬಸಾಪುರ ಸೀಮಾದಲ್ಲಿಯ ಬಸವರಾಜ ಚಿತ್ತರಗಿ ಇವರ ಹೋಲದ ಹತ್ತಿರ ಮುಂಜಾನೆ 10-30 ಗಂಟೆ ಸುಮಾರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ ಬಂಡಿ ಕಡೆಯಿಂದ ಆರೋಪಿ ನಂ. 02 ನೇದವನು ತಾನು ಚಲಾಯಿಸುತಿದ್ದ ಮೋಟಾರ್ ಸೈಕಲ್ ನಂ. ಕೆಎ-17/ಈಸಿ-1608 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಯಲಬುರ್ಗಾ ಕಡೆಗೆ ಹೋರಟಿದ್ದು, ಆಗ ಆರೋಪಿರಿಬ್ಬರು ಒಬ್ಬರಿಗೋಬ್ಬರು ಸೈಡ್ ಕೊಡದೇ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ. ಇದರಿಂದಾಗಿ ಆರೋಪಿತರಿಬ್ಬರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಕಾರಣ ಆರೋಪಿತರಿಬ್ಬರ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ  ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008