Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 17, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 67/2016 ಕಲಂ: 279, 304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:-17-03-2016 ರಂದು  02-30 .ಎಮ್. ಸುಮಾರಿಗೆ ಫಿರ್ಯಾದಿದಾರರಾದ ಮಲ್ಲಪ್ಪ ತಂದಿ ಬಸಪ್ಪ ಕಮಲದಿನ್ನಿ ವಯಾ- 40 ವರ್ಷ ಜಾ- ಕುರಬರಒಕ್ಕಲುತನ ಸಾಬೆನ್ನೂರ ತಾ- ಗಂಗಾವತಿ. ಜಿ- ಕೊಪ್ಪಳ ಇವರು ಠಾಣೆಗೆ ಹಾಜರಾಗಿ  ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ದಿನಾಂಕ : 16-03-2016 ರಂದು  ರಾತ್ರಿ 9-30 ಗಂಟೆಯ ಸುಮಾರಿಗೆ  ಊಳೇನೂರ್  ರಸ್ತೆಯ ಪಕ್ಕದಲ್ಲಿ ಬರುವ ವಾಟರ್  ಪಂಪ ಹತ್ತಿರ ನಾನು ಮತ್ತು ನಮ್ಮೂರಿನ ಸೋಮಶೇಖರ ಹುನೂರ್  ಹೊಗಿ  ಪಂಪಸೆಟ್ಟ  ಹತ್ತಿರ ನೀರು  ನೋಡಲೆಂದು  ಹೊಗಿದ್ದೇವುಅದೇ ವೇಳೆಗೆ ಬೆಣ್ಣೂರ  ಕಡೆಯಿಂದ ಒಂದು ಟ್ರ್ಯಾಕ್ಟರ  ಉಸಕು ಏರಿಕೊಂಡು ಮುಂದುಗಡೆ ಇಂಜಿನ್ದಲ್ಲಿ ಚಾಲಕ  ಹಾಗೂ ಪಕ್ಕದಲ್ಲಿ ಒಬ್ಬ ಕುಳಿತಿದ್ದು  ಹಿಂದುಗಡೆ ಟ್ರ್ಯಾಕ್ಟರ್ ಟ್ರೇಲರದ ಉಸಿಕಿನ  ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದು  ಸದರ್ ಟ್ರ್ಯಾಕ್ಟರ ಚಾಲಕ  ಅತೀ ವೇಗ ಹಾಗೂ ಅಲಕ್ಷತನದಿಂದ ಯರ್ರಾಬಿರಿಯಾಗಿ  ಓಡಿಸಿಕೊಂಡು  ಅಡ್ಡೇರ ಈರಪ್ಪ  ಇವರ ಹೊಲದ ಹತ್ತಿರ ಹೊಗುತ್ತಿರುವಾಗ್ಗೆ  ಟ್ರೇಲರದಲ್ಲಿಯ ಉಸಿಕಿನ ಮೇಲೆ ಕುಳಿತಿದ್ದ ವ್ಯಕ್ತಿ ಪುಟಿದು  ಟ್ರ್ಯಾಕ್ಟರದಿಂದ ಕೆಳಗೆ ಬಿದ್ದಿದ್ದರಿಂದ  ಟ್ರ್ಯಾಕ್ಟರ ಚಾಲಕ ಮತ್ತು ಪಕ್ಕದಲ್ಲಿ ಕುಳಿತಿದ್ದವರು ಟ್ರ್ಯಾಕ್ಟರನ್ನು ನಿಲ್ಲಿಸಿ ಕೆಳಗೆ ಇಳಿದು ಬಂದು ನೋಡಲು, ನಾವು ಕೂಡಾ ಓಡಿ ಹೊಗಿ ನೋಡಲು  ಟ್ರ್ಯಾಕ್ಟರ ಮೇಲಿಂದ ಕೆಳಗೆ ಬಿದ್ದ ವ್ಯಕ್ತಿಗೆ ತಲೆಗೆ ಎದೆಗೆ ಹೊಟ್ಟೆಗೆ ಭಾರೀ ಒಳಪೆಟ್ಟಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದು  ಸದರ್ ವ್ಯಕ್ತಿಯ ಸಂಗಾಪೂರದವನೆಂದು ಗೊತ್ತಾಗಿದ್ದು, ಅಪಘಾತವಾದ ನಂತರ ಟ್ರ್ಯಾಕ್ಟರ ಚಾಲಕ ಮತ್ತು ಅದರಲ್ಲಿದ್ದ ಇನ್ನೊಬ್ಬ  ಈ ಇಬ್ಬರೂ ಓಡಿ ಹೊಗಿದ್ದು,  ಸದರ್ ಟ್ರ್ಯಾಕ್ಟರ ನೋಡಲು ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ನಂಬರ್ ; ಕೆ.ಎ- 37 / ಟಿ.ಎ- 2871 ಟ್ರೇಲರ್ ನಂಬರ್- ಕೆ.ಎ- 37 / ಟಿ.ಎ- 4125 ಅಂತಾ ಇರುತ್ತದೆ.  ಸದರ್ ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿದಿದರಿಂದ ಈ ಘಟನೆ ಜರುಗಿದ್ದು  ಸದರ್ ಘಟನೆಗೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಸದರಿ ಮೃತ ವ್ಯಕ್ತಿಯ ಹೆಸರು  ಮತ್ತು ವಿಳಾಸ ತಿಳಿದುಕೊಳ್ಳುವ ಸಲುವಾಗಿ ವಿಚಾರಿಸಿ ಈಗ ತಡವಾಗಿ ಬಂದು ಫಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ: 78(3) Karnataka Police Act.
ದಿನಾಂಕಃ- 16-03-2013 ರಂದು  ರಾತ್ರಿ 9-10 ಗಂಟೆಯ ಸುಮಾರಿಗೆ ಪಿ.ಎಸ್.ಐ  ಕಾರಟಗಿ ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 16-03-2016 ರಂದು ನಾಗನಕಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ  ಆರೋಪಿ 1) ಸುರೇಶ ತಂದಿ ವೆಂಕಟೇಶ ಈಡಿಗೇರ ವಯಾ-26 ವರ್ಷ ಜಾ, ಇಡಿಗೇರ ಆಟೋ ಚಾಲಕ ಸಾ. ನಾಗನಕಲ್ ತಾ. ಗಂಗಾವತಿ 2) ಯಮನೂರಪ್ಪ ತಂದಿ ವೆಂಕಟೇಶ ಈಡಿಗೇರ ವಯಾ-30 ವರ್ಷ ಜಾ, ಇಡಿಗೇರ ಆಟೋ ಚಾಲಕ ಸಾ. ನಾಗನಕಲ್ ತಾ. ಗಂಗಾವತಿ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ  ಆರೋಪಿ ನಂ 1 ಈತನು ಸಿಕ್ಕಿಬಿದ್ದಿದ್ದು ಆರೋಪಿ ನಂ 2 ಓಡಿಹೊಗಿದ್ದು ಸಿಕ್ಕಿಬಿದ್ದ ಆರೋಪಿತನ ಕಡೆಯಿಂದ ನಗದು ಹಣ ರೂ.1330=00 ಗಳನ್ನು ಮತ್ತು ಒಂದು ಮಟ್ಕಾ ಪಟ್ಟಿ ಒಂದು ಬಾಲ್ ಪೆನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ನೀಡದ ವರದಿಯ ಸಾರಾಂಶದ ಮೇಲಿಂದ  ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 99/2016 ಕಲಂ:  78(3) Karnataka Police Act ಮತ್ತು 420 ಐ.ಪಿ.ಸಿ.
ದಿನಾಂಕ: 16-03-2016 ರಂದು ರಾತ್ರಿ 8:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಇಬ್ಬರು ಆರೋಪಿತರೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. "ಇಂದು ದಿನಾಂಕ:- 16-03-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ   ಶ್ರೀರಾಮನಗರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 429, 358 ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಚಾಲಕ ಎ.ಪಿ.ಸಿ. 77 ಕನಕಪ್ಪ ಇವರನ್ನು ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಶ್ರೀರಾಮನಗರ ಗ್ರಾಮದಲ್ಲಿ ಹೋಗಿ ಜೀಪ್ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಶ್ರೀರಾಮನಗರದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಬೀದಿಯ ಲೈಟಿನ ಬೆಳಕಿನಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆಯುತ್ತಿದ್ದನು.  ಇನ್ನೊಬ್ಬನು ನಿಂತುಕೊಂಡು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 6:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು ವೀರಬಸಯ್ಯ ತಂದೆ ಸಂಗಯ್ಯ, ವಯಸ್ಸು 32 ವರ್ಷ, ಜಾತಿ: ಜಂಗಮರು ಉ: ಪಾನ್ಶಾಪ್ ಸಾ: 4ನೇ ವಾರ್ಡ-ಶ್ರೀರಾಮನಗರ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 350/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಕೂಗುತ್ತಿದ್ದವನಿಗೆ ವಿಚಾರಿಸಲು ಅವನು ತನ್ನ ಹೆಸರು ಉಮಾಪತಿ ತಂದೆ ಹೊನ್ನೂರಗೌಡ ವಯಸ್ಸು 40 ವರ್ಷ, ಜಾತಿ: ಗೊಲ್ಲರು ಉ: ಫೋಟೋಗ್ರಾಫರ್ ಸಾ: 6ನೇ ವಾರ್ಡ-ಶ್ರೀರಾಮನಗರ ಅಂತಾ ತಿಳಿಸಿದ್ದು, ಅವನ ಹತ್ತಿರ ಯಾವುದೇ ಹಣ ಮತ್ತು ಪಟ್ಟಿ ದೊರೆಯಲಿಲ್ಲಾ. ನಂತರ ಅವರಿಬ್ಬರಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀರಾ ? ಅಂತಾ ವಿಚಾರಿಸಲು ಯಾರಿಗೂ ಕೊಡುವುದಿಲ್ಲಾ ತಾವೇ ಇಟ್ಟುಕೊಳ್ಳುವದಾಗಿ ತಿಳಿಸಿದರು. ಈ ಬಗ್ಗೆ ಸಂಜೆ 6:30 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ನಂತರ ಸದರಿ ಆರೋಪಿತರ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ" ಅಂತಾ ಸಾರಾಂಶ ಇದ್ದು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 97/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 16-03-2016 ರಂದು ಮದ್ಯಾಹ್ನ 1-00 ಗಂಟೆಗೆ ರಾತ್ರಿ 07-15 ಗಂಟೆಗೆ ಪಿರ್ಯಾದಿದಾರರಾದ  ಚಂದಪ್ಪ ತಂದೆ ಬಸಪ್ಪ ಗುನ್ನಾಳ ವಯಾ 46 ವರ್ಷ ಜಾ: ಗಾಣಿಗೇರ ಉ:  ಕೂಲಿ ಕೆಲಸ  ಸಾ: ಮನ್ನೆರಾಳ  ತಾ:ಕುಷ್ಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರರು ಇಂದು  ದಿನಾಂಕ:16-03-2016 ರಂದು ಮುಂಜಾನೆ 09-30 ಗಂಟೆಯ ಸುಮಾರಿಗೆ ಮನ್ನೆರಾಳದಿಂದ  ಕುಷ್ಟಗಿಯಲ್ಲಿ ನನ್ನ ಹೊಸ ಹಿರೋ ಸ್ಪೇಂಡರ್ ಪ್ರೋ ಮೋ.ಸೈ. ಚೆಸ್ಸಿ ನಂ: MBLHA10CAFHL32718 ಮತ್ತು ಇಂಜೀನ್ ನಂ: HA10EYFHL62129 ನೇದ್ದನ್ನು ಆರ್.ಟಿ.ಓ. ಕೊಪ್ಪಳರವರು ಕುಷ್ಟಗಿಗೆ ಬಂದಿದ್ದರಿಂದ ಪಾಸಿಂಗ್ ಮಾಡಿಸುವ ಸಲುವಾಗಿ ಮೋ.ಸೈ. ನ್ನು ತೆಗೆದುಕೊಂಡು ಬಂದಿದ್ದು ಆರ್.ಟಿ.ಓ. ರವರು ಕೊಪ್ಪಳ ರಸ್ತೆಯಲ್ಲಿರುವ ಸರ್ಕಿಟ್ ಹೌಸ್ ನಲ್ಲಿ ಕ್ಯಾಂಪ್ ಮಾಡಿದ್ದರಿಂದ ನಾನು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಅಲ್ಲಿಗೆ ಹೋಗುತ್ತಿರುವಾಗ ಕೊಪ್ಪಳ ರಸ್ತೆಯಲ್ಲಿ ಪುರಸಭೆಯ ಕಮಾನಿನ ಹತ್ತಿರ ರಸ್ತೆಯ ಎಡಗಡೆಗೆ ಹೋಗುತ್ತಿರುವಾಗ ನನ್ನ ಮೋ.ಸೈ. ನ ಬ್ಯಾಗ್ ನಲ್ಲಿರುವ ದಾಖಲಾತಿಗಳು ಗಾಳಿಯ ರಭಸಕ್ಕೆ ಕೆಳಗೆ ಬಿದ್ದಿದ್ದು ನಾನು ನೋಡಿ ಸದರಿ ದಾಖಲಾತಿಗಳನ್ನು ತೆಗೆದುಕೊಂಡು ಬರುವ ಸಲುವಾಗಿ ರಸ್ತೆಯ ಪಕ್ಕದಲ್ಲಿ ನನ್ನ ಮೋ.ಸೈ. ನ್ನು ನಿಲ್ಲಿಸಿ ಕೆಳಗೆ ತೆಗ್ಗಿನಲ್ಲಿ ಹೋದ ದಾಖಲಾತಿಗಳನ್ನು ತೆಗೆದುಕೊಂಡು ಬರುವಷ್ಟರಲ್ಲಿ ಕುಷ್ಟಗಿ ಕಡೆಯಿಂದ ಒಂದು ಮೋ.ಸೈ. ಸವಾರನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತ ನನ್ನ ಮೋ.ಸೈ.ಗೆ ಟಕ್ಕರ್ ಕೊಟ್ಟಿದ್ದು ಕೂಡಲೇ ನಾನು ರಸ್ತೆಯ ಮೇಲೆ ಬಂದು ನೋಡಲಾಗಿ ಸದರಿಯವನು ಟಕ್ಕರ ಕೊಟ್ಟು ರಸ್ತೆಯ ಮೇಲೆ ಬಿದ್ದಿದ್ದು ಅವನನ್ನು ನೋಡಲಾಗಿ ಅವನಿಗೆ ನೆತ್ತಿಯ ಮೇಲೆ ತೆರಚಿದ ಗಾಯವಾಗಿ, ಎಡಗಾಲು ಮೊಲಕಾಲು ಕೆಳಗೆ ಮುರಿದಂತಾಗಿ ರಕ್ತ ಗಾಯವಾಗಿದ್ದು ಅವನನ್ನು ವಿಚಾರಿಸಲು ತನ್ನ ಹೆಸರು ಯಲ್ಲನಗೌಡ ತಂದೆ ಶರಣಗೌಡ ಪೂಜಾರ ವಯಾ: 30 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ತೋಪಲಕಟ್ಟಿ ಅಂತಾ ತಿಳಿಸಿದ್ದು ನಂತರ ಅವನ ಮೋ.ಸೈ. ನಂಬರ ನೋಡಲಾಗಿ ಅದು ಹೊಸ ಹಿರೋ ಹೆಚ್.ಎಫ್.ಡಿಲಕ್ಸ ಚೆಸ್ಸಿ ನಂ: MBLHA11ATG9A31721 ಮತ್ತು ಇಂಜೀನ್ ನಂ: HA11EJG9A57347 ಅಂತಾ ಇದ್ದು ಕೂಡಲೇ ಸ್ಥಳಕ್ಕೆ ಅವರ ತಂಗಿಯ ಗಂಡನಾದ ಸಣ್ಣಹುಲಗಪ್ಪ ತಂದೆ ಹಿರೇಹನಮಪ್ಪ ಚೌಡಕಿ ವಯಾ: 35 ವರ್ಷ ಜಾ: ವಾಲ್ಮಿಕಿ ಉ: ಒಕ್ಕಲುತನ ಸಾ: ಗಂಗನಾಳ ಇತನು ಬಂದಿದ್ದು ಇಬ್ಬರೂ ಕೂಡಿ  ಅವನನ್ನು ಒಂದು ಖಾಸಗಿ ವಾಹನದಲ್ಲಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ  ಅಂತಾ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008