Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 2, 2016

1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 23/2016 ಕಲಂ: 279, 337, 338 ಐ.ಪಿ.ಸಿ
ದಿನಾಂಕ: 29-02-2016 ರಂದು ಮುಂಜಾನೆ 9-30 ಗಂಟೆಯ ಸುಮಾರಿಗೆ ಗಾಯಾಳು ಹನುಮಂತಪ್ಪ ಜೂಲಕಟ್ಟಿ ಇವರ ಹೊಲಕ್ಕೆ ಹೋಗಿ ಬರುವ ಸಲುವಾಗಿ ಪಿರ್ಯಾದಿದಾರನು ತನ್ನ ಮೋಟಾರ ಸೈಕಲ ನಂ ಕೆಎ-37/ಯು-6529 ನೇದ್ದರ ಮೇಲೆ ಹಿಂದುಗಡೆ ಗಾಯಾಳು ಕುಳಿಸಿಕೊಂಡು ಪಿರ್ಯಾದಿದಾರನು ಮೋಟಾರ ಸೈಕಲನ್ನು ಕೊನಸಾಗರ ಸೀಮಾದಲ್ಲಿ ಬರುವ ವಜ್ರಬಂಡಿ – ಜೂಲಕಟ್ಟಿ ರಸ್ತೆ ಮೇಲೆ ಮಾಬುಸಾಬ ಕಲ್ಲೂರು ಇವರ ಹೊಲದ ಹತ್ತಿರ  ಕೊನಸಾಗರ ಗ್ರಾಮದ ಕಡೆಯಿಂದ ಜೂಲಕಟ್ಟಿ ಗ್ರಾಮದ ಕಡೆಗೆ ನಡೆಯಿಸಿಕೊಂಡು ಹೋಗುತ್ತಿರುವಾಗ  ಎದುರಗಡೆ ಅಂದರೆ ಜೂಲಕಟ್ಟಿ ಗ್ರಾಮದ ಕಡೆಯಿಂದ ವಜ್ರಬಂಡಿ ಗ್ರಾಮದ ಕಡೆಗೆ ಒಬ್ಬ ಕಾರ ಚಾಲಕನು ತಾನು ನಡೆಸುತ್ತಿದ್ದ ಕಾರ ನಂ ಕೆಎ-37/ಎಮ್ – 3480 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಮತ್ತು ಅದರ ಮೇಲಿದ್ದ  ಸವಾರನಿಗೆ ಮತ್ತು ಆತನ ಹಿಂದೆ ಕುಳಿತ್ತಿದ್ದ ಗಾಯಾಳು ಹನುಮಂತಪ್ಪನಿಗೆ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಮತ್ತು ಗಾಯಾಳು ಹನುಮಂತಪ್ಪ  ಜೂಲಕಟ್ಟಿ ಇವರಿಗೆ ಸಾದಾ ಮತ್ತು ಭಾರಿಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಸದರಿ ಕಾರ ನಂಬರ  ಕೆಎ-37/ಎಮ್ – 3480 ನೇದ್ದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ  ಇದ್ದ ಪಿರ್ಯಾದಿ ಸಾರಾಂಶ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 90/2016 ಕಲಂ: 341, 323, 504 ಸಹಿತ 34 ಐ.ಪಿ.ಸಿ:
ದಿನಾಂಕ:- 01-03-2016 ರಂದು ಸಂಜೆ 5:00 ಗಂಟೆಗೆ ಫಿರ್ಯಾದಿದಾರರಾದ ವಿನಯಕುಮಾರ ತಂದೆ ರಂಗಾರೆಡ್ಡಿ, ವಲ್ಲೆಲ, ವಯಸ್ಸು 19 ವರ್ಷ, ಜಾತಿ: ರೆಡ್ಡಿ ಉ: ಡಿಪ್ಲೋಮಾ ವಿದ್ಯಾಭ್ಯಾಸ ಸಾ: ಹನುಮನಹಳ್ಳಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಮರಳಿ ಎಂ.ಎಸ್.ಎಂ.ಎಸ್. ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಮ್ಮ ಮನೆಯ ಪಕ್ಕದಲ್ಲಿ ಪಂಚಾಯತಿ ಸಾರ್ವಜನಿಕ ನೀರಿನ ಟ್ಯಾಂಕ್ ಇರುತ್ತದೆ. ಈ ನೀರಿನ ಟ್ಯಾಂಕ್ ಗೆ ನಮ್ಮ ಮನೆಯ ಹತ್ತಿರ ರೆಸ್ಟೋರೆಂಟ್ ನಡೆಯಿಸಿಕೊಂಡಿರುವ ಮರ್ದಾನಸಾಬ ಮತ್ತು ಆತನ ತಮ್ಮ ರಾಜಾಸಾಬ ಇವರುಗಳು ಪೈಪ್ ನ್ನು ಜೋಡಿಸಿಕೊಂಡು ತಮ್ಮ ರೆಸ್ಟೋರೆಂಟ್ ಗೆ ನೀರನ್ನು ತೆಗೆದುಕೊಳ್ಳುತ್ತಾರೆ. ಅವರು ಪೈಪ್ ಜೋಡಿಸಿ ಬಟ್ಟೆ ಕಟ್ಟುವುದರಿಂದ ನೀರು ಸೋರಿಕೆಯಾಗಿ ನಮ್ಮ ಮನೆಯ ಮೇಲೆ ಬೀಳುತ್ತಿದ್ದು, ಇದರಿಂದ ಅವರಿಗೆ ನಮ್ಮ ಮನೆಯ ಮೇಲೆ ನೀರು ಬೀಳದಂತೆ ಸರಿಯಾಗಿ ಪೈಪ್ ಜೋಡಿಸಿಕೊಳ್ಳುವಂತೆ ತಿಳಿಸಿದ್ದೆವು. ಇದರಿಂದ ಅವರು ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡು ಇಂದು ದಿನಾಂಕ:-01-03-2016 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ನಾನು ಮನೆಯಿಂದ ಹೊರಗಡೆ ಟ್ಯಾಂಕ್ ಹತ್ತಿರ ಹೋಗುತ್ತಿರುವಾಗ (1) ಮರ್ದಾನಸಾಬ ತಂದೆ ಖಾಸೀಂ ಸಾಬ, ವಯಸ್ಸು 45 ವರ್ಷ (2) ರಾಜಾಸಾಬ ತಂದೆ ಖಾಸೀಂ ಸಾಬ, ವಯಸ್ಸು 38 ವರ್ಷ ಸಾ: ಹನುಮನಹಳ್ಳಿ ಇವರಿಬ್ಬರೂ ಕೂಡಿಕೊಂಡು ಬಂದು ನನ್ನನ್ನು ಅಕ್ರಮವಾಗಿ ಅಡ್ಡಗಟ್ಟಿ ತಡೆದು ನಿಲ್ಲಿಸಿ “ ಲೇ ದರಿದ್ರ ಸೂಳೇ ಮಗನೇ, ನಾವು ಹೇಗೆ ಬೇಕಾದರೂ ಪೈಪ್ ಜೋಡಿಸಿಕೊಳ್ಳುತ್ತೇವೆ, ಅದನ್ನೆಲ್ಲಾ ನೀನೇನು ಕೇಳುತ್ತೀಯಲೇ ಮಗನೇ ” ಅಂತಾ ಅವಾಚ್ಯ ಶಬ್ದಗಳಿಂದ ಬೈದು ಇಬ್ಬರೂ ಸೇರಿ ಕೈಗಳಿಂದ ಬಡಿದರು.  ಆಗ ಅಲ್ಲಿದ್ದ ನನ್ನ ತಾಯಿ ಚಿನ್ನಮ್ಮ-40 ವರ್ಷ, ಮತ್ತು ನಮ್ಮೂರ ಆನಂದ ತಂದೆ ಪುಲ್ಲಾರೆಡ್ಡಿ, ರೆಡ್ಡಿ, 39 ವರ್ಷ, ಉ: ಕೂಲಿ ಕೆಲಸ, ದುರಗಪ್ಪ ತಂದೆ ಬರಲಿಂಗಪ್ಪ, 40 ವರ್ಷ, ನಾಯಕ, ಕೂಲಿ ಕೆಲಸ ಇವರುಗಳು ಬಂದು ಬಡಿಯುವುದನ್ನು ಬಿಡಿಸಿಕೊಂಡರು. ಹೊಲಕ್ಕೆ ಹೋಗಿದ್ದ ನನ್ನ ತಂದೆಯವರು ಬಂದ ನಂತರ ಅವರಿಗೆ ವಿಷಯ ತಿಳಿಸಿ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ. ನನಗೆ ಯಾವುದೇ ಗಾಯಗಳಾಗಿರುವುದಿಲ್ಲಾ.  ಕಾರಣ ಆಸ್ಪತ್ರೆಗೆ ಹೋಗಲು ಇಚ್ಛಿಸುವುದಿಲ್ಲಾ.  ಕಾರಣ  ಮರ್ದಾನ್ ಸಾಬ ಮತ್ತು ರಾಜಾಸಾಬ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 37/2016 ಕಲಂ: 96(ಬಿ) & (ಸಿ) Karnataka Police Act.
ದಿನಾಂಕ 01-03-2016 ರಂದು ಬೆಳಿಗ್ಗೆ 6-00 ಗಂಟೆಗೆ ಯಲ್ಲಪ್ಪ ಪಿಸಿ 98 ಕೊಪ್ಪಳ ನಗರ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯೊಂದಿಗೆ ಒಬ್ಬ ಆರೋಪಿತನೊಂದಿಗೆ ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಂಶವೇನೆಂದರೆ, ಇಂದು ದಿನಾಂಕ 01-03-2016 ಬೆಳಿಗ್ಗೆ 4-00 ಗಂಟೆಯಿಂದ ನಗರದಲ್ಲಿ ಗುಡ್ ಮಾರ್ನಿಂಗ್ ಬೀಟ್ ಕರ್ತವ್ಯದಲ್ಲಿ ಪಿಸಿ 172 ರವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಗರದ ಹಸನ್ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ಸಿಕ್ಕ ಆರೋಪಿತನಾದ ಫಕೀರಪ್ಪ ತಾಯಿ ಹುಲಿಗೇಮ್ಮ ಚಾಕ್ರಿ ಸಾ- ಸಜ್ಜಹೋಲ ಕೊಪ್ಪಳ ಈತನನ್ನು ಬೆಳಗಿನ ಜಾವ 4-30 ಗಂಟೆಗೆ ಹಿಡಿದುಕೊಂಡು ರಾತ್ರಿ ವೇಳೆಯಲ್ಲಿ ಸದರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲಾಗಿ ಸಮರ್ಪಕವಾದ ಉತ್ತರ ಕೊಡದೆ ಇರುವುದರಿಂದ ಅವನ ಮೇಲೆ ಸಂಶಯ ಬಂದು ಮುಂಜಾಗೃತೆ ಕುರಿತು ಬೆಳಿಗ್ಗೆ 5-30 ಗಂಟೆಗೆ ಠಾಣೆಗೆ ಕರೆತಂದು ನಂತರ ಬೆಳಗಿನ ಜಾವ 6-00 ಗಂಟೆಗೆ ಫಿರ್ಯಾದಿಯನ್ನ ತಯಾರಿಸಿ ಮುಂದಿನ ಕ್ರಮ ಜರುಗಿಸುವಂತೆ ಫಿರ್ಯಾದಿಯೊಂದಿಗೆ ಆರೋಪಿತನನ್ನು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿ ಮೆಲಿಂದ  ಪ್ರಕರ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 38/2016 ಕಲಂ: 151, 110(ಇ) & (ಜಿ) CrPC:.
ದಿನಾಂಕ: 01-03-2016 ರಂದು ಮದ್ಯಾಹ್ನ 01-00 ಗಂಟೆಗೆ ಠಾಣಾ ಹದ್ದಿಯಲ್ಲಿ ಪೆಟ್ರೊಲಿಂಗ್ ಕುರಿತು ಪಿಸಿ-98 ಯಲ್ಲಪ್ಪ ರವರನ್ನು ಸಂಗಡ ಕರೆದುಕೊಂಡು ನಗರದಲ್ಲಿ ಪ್ಯಾಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ನಗರದ ಗವಿ ಮಠದ ರಸ್ತೆಯ ಮೂಲಕ ಗಂಜ್ ಸರ್ಕಲ್ ಹತ್ತಿರ ಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈದಾಡುತ್ತಾ ಗದ್ದಲ ಮಾಡುತ್ತಾ ಅನುಚಿತವಾಗಿ ವರ್ತನೆ ಮಾಡುತ್ತಾ ಬೈದಾಡುತ್ತಿದ್ದರು ಆಗ ಸದರಿಯವರಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲು ತಮ್ಮ ಹೆಸರು 1 ಖಾಜಾಹುಸೇನ ತಂದೆ ಇಕ್ಬಾಲಸಾಬ ಕಾರ್ ಪೇಂಟರ್ 2 ಮಹೆಬೂಬ ಜೀಲಾನ್ ತಂದೆ ಇಕ್ಬಾಲಸಾಬ ಕಾರ್ ಪೇಂಟರ್ ಇಬ್ಬರೂ ಸಾ ಹಟಗಾರ್ ಪೇಟ್ ಕೊಪ್ಪಳ ಅಂತಾ ತಿಳಿಸಿದರು. ಸದರಿಯವರ ವರ್ತನೆಯಿಂದ ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ತೊಂದರೆಯಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗೃತ ಕ್ರಮವಾಗಿ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು, ಸದರಿಯವರಿಗೆ ಹೀಗೆಯೇ ಬಿಟ್ಟಲ್ಲಿ ಯಾವುದಾದರು ಕೆಟ್ಟ ಪರಿಣಾಮ ಬೀರಬಹುದೆಂದು ಮುಂಜಾಗೃತ ಕ್ರಮವಾಗಿ ಸದರಿಯವನ ವಿರುದ್ದ ಪ್ರಕರಣ ಜರುಗಿಸಿದ್ದು ಇರುತ್ತದೆ.


0 comments:

 
Will Smith Visitors
Since 01/02/2008