Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, March 10, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 62/2016 ಕಲಂ: 279, 337, 338 ಐ.ಪಿ.ಸಿ:
ದಿ:09-03-16 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದು ಗಾಯಾಳುಗಳು ನಂತರ ದೂರು ನೀಡುವುದಾಗಿ ತಿಳಿಸಿದ್ದರಿಂದ ತಜವಿಜ್ ಇಟ್ಟು ನಂತರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗೌರಮ್ಮ ಆಗೋಲಿ. ಸಾ: ಬಸಾಪಟ್ಟಣ, ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ:9-03-16 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ತಮ್ಮ ಸಹ ಕೂಲಿಕಾರರೊಂದಿಗೆ ಬಸಾಪಟ್ಟಣದಿಂದಾ ಗಿಣಿಗೇರಿ ಸಮೀಪದ ಶಿವಯ್ಯ ಕೋಳಿ ಫಾರ್ಮದಲ್ಲಿ ಕೆಲಸಕ್ಕೆ ಅಂತಾ ಬಸಾಪಟ್ಟಣ ಗ್ರಾಮದ ಟಾಟಾ ಎಸಿ ನಂ: ಕೆಎ-37/ಎ-5173 ನೇದ್ದರಲ್ಲಿ ಕುಳಿತು ಬರುವಾಗ ಗಂಗಾವತಿ-ಕೊಪ್ಪಳ ರಸ್ತೆಯ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿಯ ಸಮೀಪ ಸಪ್ತಗಿರಿ ಪೆಟ್ರೋಲಬಂಕ್ ಮುಂದೆ ನಮ್ಮ ಟಾಟಾ ಎಸಿ ವಾಹನದ ಚಾಲಕ ಬಸವರಾಜ ಇತನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಹೊರಟು ತನ್ನ ಮುಂದೆ ಹೊರಟಿದ್ದ ಮೋಟಾರ ಸೈಕಲ್ ನಂ: ಕೆಎ-37/ಎಸ್-8040 ನೇದ್ದರ ವಾಹನದ ನಿಗದಿತ ಅಂತರ ಕಾಪಾಡದೇ ಹೋಗಿ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನಮ್ಮ ವಾಹನವು ರಸ್ತೆಯ ಬಾಜು ತಗ್ಗಿನಲ್ಲಿ ನಿಂತಿತು. ಈ ಅಪಘಾತದಲ್ಲಿ ನನಗೆ ಮತ್ತು ಇತರೆ ಕೆಲಸಗಾರರಾದ ಸಮೀರಭಾನು, ಈರಮ್ಮ, ದಾವಲಬೀ, ಮೂಕಮ್ಮ, ಅನು ಮತ್ತು ಕನಕಮ್ಮ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ ಮೋಟಾರ ಸೈಕಲ್ ಸವಾರ ಕನಕಪ್ಪ ಸಾ: ಬಿಳೇಭಾವಿ ಎಂಬುವವರಿಗೆ ಸಾದಾ ಗಾಯ ಮತ್ತು ಭಾರಿ ಪೆಟ್ಟುಗಳಾಗಿವೆ, ಮತ್ತು ಸದರಿ ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡು ಬಂದಿದ್ದ ಹನ್ಮಂತ ಗಾಣಧಾಳ ಸಾ: ಬಿಳೇಭಾವಿ ಎಂಬುವವರಿಗೆ ಸಣ್ಣಪುಟ್ಟ ಪೆಟ್ಟುಗಳಾಗಿವೆ. ನಂತರ ಗಾಯಗೊಂಡ ನಾವೆಲ್ಲರೂ 108 ಅಂಬುಲೆನ್ಸ ದಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದು ಇರುತ್ತದೆ. ಕಾರಣ ಟಾಟಾ ಎಸಿ  ನಂ: ಕೆಎ-37/ಎ-5173 ನೇದ್ದರ ಚಾಲಕ ಬಸವರಾಜ ತಂದೆ ಬಾಳಪ್ಪ ಮೇಸ್ತ್ರಿ ಸಾ: ಬಸಾಪಟ್ಟಣ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ತಡವಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2016 ಕಲಂ: 379, 511 ಐ.ಪಿ.ಸಿ:
ದಿನಾಂಕ 09-03-2016 ರಂದು ಮದ್ಯಾಹ್ನ 2-00 ಗಂಟೆಗೆ ಶ್ರೀ  ನಾಗಪ್ಪ ತಂದೆ ಈರಪ್ಪ ವಡ್ಡರ, ವಯಾ: 37 ವರ್ಷ, ಜಾ: ಭೋವಿ, : ಖಾಸಗಿ ಗಮಾಸ್ತ, ಸಾ: ವಡ್ಡರಹಟ್ಟಿ ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆದಿನಾಂಕ: 09-03-2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಗಂಗಾವತಿ ನಗರದ ಎಕ್ಸಿಸ್ ಬ್ಯಾಂಕಿನಲ್ಲಿ 2 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಅಂಗಡಿ ಕಡೆಗೆ ಹೋಗುತ್ತಿದ್ದಾಗ ಆರೋಫಿತನಾದ ಹರೀಶ ಈತನು ಫಿರ್ಯಾದಿದಾರರ ಹತ್ತಿರ ಇರುವ ಹಣವನ್ನು ಕಳ್ಳತನ ಮಾಡುವ ಉದ್ದೇಶದಿಂದ ಪಿರ್ಯಾದಿದಾರರು ತೊಟ್ಟಿದ್ದ ಶರ್ಟ್ ಹಿಂಭಾಗಕ್ಕೆ ಹೇಸಿಗೆ ಎರಚಿ ಹಲೋ ಹಲೋ ಎಂದು ಕೂಗಿ ಕರೆದು, ಅವರ ಚಿತ್ತವನ್ನು ಬೇರೆಡೆ ಸೆಳೆದು ಅವರು ತೆಗೆದುಕೊಂಡು ಹೋಗುತ್ತಿದ್ದ 2 ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 61/2016 ಕಲಂ: 379, 511 ಐ.ಪಿ.ಸಿ:

ದಿನಾಂಕ 09-03-2016 ರಂದು ಗಂಗಾವತಿ ಗ್ರಾಮೀಣ ಠಾಣೆಯ ಗುನ್ನೆ ನಂ 333/2015 ಕಲಂ 379, 511 ಐಪಿಸಿ ಮತ್ತು ಕಲಂ 42 ಕೆ.ಎಂ.ಎಂ.ಸಿ ರೂಲ್ -1994 ಮತ್ತು ಕಲ 4   (1-ಎ) ಎಂ.ಎಂ ಆರ್.ಡಿ ಯ್ಯಾಕ್ಟ್ -1957 ನೇದ್ದರ  ಪ್ರಕರಣವು ವರ್ಗಾವಣೆಯಾಗಿ ಮಾನ್ಯ ಡಿ.ಎಸ್.ಪಿ. ಸಾಹೇಬರು ಗಂಗಾವತಿ ರವರ  ಆದೇಶ ಸಂಕ್ಯೆ ಗುನ್ನೆ/ವರ್ಗಾವಣೆ/ಜಿ.ಎಸ್.ಡಿ/2015/4983 ನೇದ್ದರ ಮುಖಾಂತರ ವರ್ಗಾವನೆಯಾಗಿ ಬಂದ ಪ್ರಕರಣದ ಸಾರಾಂಶವೆನಂದರೆದಿನಾಂಕ:- 08-11-2015 ರಂದು ರಾತ್ರಿ 9:15 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ  ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. "ಇಂದು ದಿನಾಂಕ:-08-11-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದ ಕಡೆಗೆ ಎ.ಪಿ.ಸಿ. 77 ಕನಕಪ್ಪ ಮತ್ತು ಪಿ.ಸಿ. 160 ಮಲ್ಲಪ್ಪ ಇವರನ್ನು ಕರೆದುಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಪೆಟ್ರೋಲಿಂಗ್ ಕುರಿತು ಹೋದ ಸಮಯದಲ್ಲಿ ಶ್ರೀರಾಮನಗರ ದಾಟಿ ನಮ್ಮ ಠಾಣೆ ಸರಹದ್ದಿಗೆ ಹೋದ ಸಮಯದಲ್ಲಿ ಸಂಜೆ 6:45 ಗಂಟೆಗೆ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬರಗೂರು ಕ್ರಾಸ್ ದಾಟಿದ ನಂತರ ಬರಗೂರು ಸೀಮಾದಲ್ಲಿ ಒಂದು ಟಿಪ್ಪರ್ ನಿಂತಿದ್ದು, ಅಲ್ಲಿ ಜನ ಸೇರಿದ್ದರಿಂದ ಹೋಗಿ ನೋಡಲಾಗಿ ಸದರಿ ಟಪ್ಪರ್ನ್ನು ಜನರು ಅಕ್ರಮ ಮರಳು ಸಾಗಾಣಿಕೆ ಸಂಬಂಧವಾಗಿ ಹಿಡಿದು ನಿಲ್ಲಿಸಿರುವುದಾಗಿ ತಿಳಿಸಿದರು, ಪರಿಶೀಲಿಸಲು ಟಿಪ್ಪರ್ ನಂಬರ್: ಕೆ.ಎ-37/ 8804 ಅಂತಾ ಇದ್ದು, ಅದರ ಚಾಲಕನ ಹೆಸರು ಕಳಕಪ್ಪ ತಂದೆ ಶಂಕ್ರಪ್ಪ ವಯಸ್ಸು 26 ವರ್ಷ, ಜಾತಿ: ಲಿಂಗಾಯತ ಸಾ: ಕಿನ್ನಾಳ ತಾ: ಕೊಪ್ಪಳ ಅಂತಾ ತಿಳಿಸಿದ್ದು, ಟಿಪ್ಪರ್ನ್ನು ಪರಿಶೀಲಿಸಲು ಅದರಲ್ಲಿ ಮರಳು ಇದ್ದು ಚಾಲಕನಿಗೆ ವಿಚಾರಿಸಲು ಸದರಿ ಮರಳನ್ನು ಸಾಗಿಸಲು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲಾ. ಸಿದ್ದಾಪೂರ ಹಳ್ಳದಿಂದ ಉಸುಗನ್ನು ಲೋಡ್ ಮಾಡಿಕೊಂಡು ಗಂಗಾವತಿಗೆ ಹೋಗುತ್ತಿರುವಾಗ ಸಂಜೆ 6:30 ಗಂಟೆಗೆ ಸ್ಥಳಿಯ ಜನರು ಹಿಡಿದು ನಿಲ್ಲಿಸಿರುವುದಾಗಿ ತಿಳಿಸಿದನು. ಚಾಲಕನ ಹತ್ತಿರ ಮರಳು ಸಾಗಿಸಲು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸಲು ಪ್ರಯತ್ನಿಸಿದ್ದರಿಂದ ಈ ಬಗ್ಗೆ ಪಂಚರಾದ (1) ಹುಲುಗಪ್ಪ ತಂದೆ ಈರಣ್ಣ ಬಳ್ಳಾರಿ, 41 ವರ್ಷ, ಚೆಲುವಾದಿ, ಒಕ್ಕಲುತನ ಸಾ: ವಿನೋಭನಗರ (2) ನಾರಾಯಣಪ್ಪ ತಂದೆ ಕಲ್ಲಪ್ಪ, 55 ವರ್ಷ, ಉಪ್ಪಾರ, ಒಕ್ಕಲುತನ ಸಾ: ಚಿಕ್ಕಜಂತಕಲ್ ಇವರುಗಳ ಸಮಕ್ಷಮದಲ್ಲಿ ಸಂಜೆ 7:00 ರಿಂದ ರಾತ್ರಿ 8:00 ಗಂಟೆಯವರೆಗೆ ಪಂಚನಾಮೆಯನ್ನು ನಿರ್ವಹಿಸಿ ಲಾರಿಯನ್ನು ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು ಇರುತ್ತದೆ. ಕಾರಣ ಚಾಲಕ ಕಳಕಪ್ಪನ ವಿರುದ್ಧ ಕಲಂ 379, 511 ಐಪಿಸಿ ಮತ್ತು 42 ಕೆ.ಎಂ.ಎಂ.ಸಿ. ರೂಲ್ 1994 ಮತ್ತು  4(1)(ಎ) ಎಂ.ಎಂ.ಆರ್.ಡಿ. ಕಾಯ್ದೆ 1957 ಅಡಿ ಪ್ರಕರಣ ದಾಖಲು ಮಾಡಲು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008