Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 6, 2016

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 93/2016 ಕಲಂ: 20(ಬಿ) NDPS Act.
 ದಿನಾಂಕ:- 05-03-2016 ರಂದು ಸಂಜೆ 7:00 ಗಂಟೆಗೆ ಶ್ರೀ ಎಸ್.ಎಂ. ಸಂದಿಗವಾಡ, ಪೊಲೀಸ್ ಉಪಾಧೀಕ್ಷಕರು, ಗಂಗಾವತಿ ಪೊಲೀಸ್ ಉಪವಿಭಾಗ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 05-03-2016 ರಂದು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ನಾನು ಕಾರ್ಯಾಲಯದಲ್ಲಿರುವಾಗ ಹುಲಿಗಿ ಕಡೆಯಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವಿರುಪಾಪೂರು ಗಡ್ಡಿ ಕಡೆಗೆ ಸಾಣಾಪೂರು ಗ್ರಾಮದ ಮೂಲಕ ಒಂದು ಮೋಟಾರ ಸೈಕಲ್ ಮೇಲೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು, ಈ ಬಗ್ಗೆ ದಾಳಿ ಮಾಡಿ ಪಂಚನಾಮೆ ಮಾಡುವ ಕಾಲಕ್ಕೆ ತಹಶೀಲ್ದಾರರು ಹಾಜರಾಗಲು ಒಂದು ಯಾದಿ ಮುಖಾಂತರ ವಿನಂತಿಸಿಕೊಂಡ ಮೇರೆಗೆ ತಹಶೀಲ್ದಾರ ಗಂಗಾವತಿ ಶ್ರೀ ಎಲ್.ಡಿ. ಚಂದ್ರಕಾಂತ ಇವರು ಬಂದಿದ್ದು, ನಂತರ ಇಬ್ಬರು ಪಂಚರಾದ (1) ಶ್ರೀ ಅಮರೇಶ ತಂದೆ ಚನ್ನಮಲ್ಲಪ್ಪ ಗುಡದಿನ್ನಿ ವಯಸ್ಸು 45 ವರ್ಷ, ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ದೇವಾಂಗ ಮಠದ ಹತ್ತಿರ, ಗಂಗಾವತಿ. (2) ಅಬ್ದುಲ್ ತಂದೆ ಮಹಿಬೂಬ ಸಾಬ, ವಯಸ್ಸು 30 ವರ್ಷ, ಜಾತಿ: ಮುಸ್ಲೀಂ ಉ: ಮೆಕಾನಿಕ ಸಾ: ಕಿಲ್ಲಾ ಏರಿಯಾ-ಗಂಗಾವತಿ ಇವರುಗಳನ್ನು   ಬರಮಾಡಿಕೊಂಡು ಅವರೊಂದಿಗೆ ನಾನು ಮತ್ತು ಶ್ರೀ ಪ್ರಭಾಕರ. ಎಸ್. ಧರ್ಮಟ್ಟಿ, ಸಿ.ಪಿ.ಐ. ಗಂಗಾವತಿ ಗ್ರಾಮೀಣ ವೃತ್ತ, ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರಾದ ಪಿ.ಸಿ. 358, 429 ರವರೊಂದಿಗೆ ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಜೀಪ್ ಚಾಲಕ ಶರಣಪ್ಪ ಎ.ಪಿ.ಸಿ. 25 ಹಾಗೂ ಜೀಪ್ ನಂಬರ್: ಕೆ.ಎ-37/ ಜಿ-445 ನೇದ್ದರಲ್ಲಿ ಚಾಲಕ ಬಸವರಾಜ ಎ.ಪಿ.ಸಿ. ನಂ: 98 ಇವರೊಂದಿಗೆ ಕೂಡಿಕೊಂಡು ಸಂಜೆ 4:00 ಗಂಟೆಗೆ ಗಂಗಾವತಿಯಿಂದ ಹೊರಟು ಸಾಣಾಪೂರ ಗ್ರಾಮದ ಐ.ಬಿ. ಕ್ರಾಸ್ ಹತ್ತಿರ ಜೀಪುಗಳನ್ನು ನಿಲ್ಲಿಸಿ ಬರುವ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಸಂಜೆ 4:45 ಗಂಟೆಯ ಸುಮಾರಿಗೆ ಒಂದು  ಟಿ.ವಿ.ಎಸ್. ಎಕ್ಸೆಲ್ ಹೆವಿಡ್ಯೂಟಿ ಮೊಪೈಡ್ ಮೇಲೆ ಇಬ್ಬರು ವ್ಯಕ್ತಿಗಳು ಹುಲಿಗಿ ಕಡೆಯಿಂದ ಬರುತ್ತಿದ್ದು, ಅವರಲ್ಲಿ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯು ಬೆನ್ನಿಗೆ ಬ್ಯಾಗನ್ನು ಹಾಕಿಕೊಂಡಿದ್ದು,   ಸಂಶಯ ಬಂದು ನಾವು ಮುಂದೆ ಹೋಗಿ ಅವರಿಗೆ ಕೈ ಸನ್ನೆ ಮಾಡಿ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದಾಗ ಅವರು ಗಾಡಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದ್ದು, ಆಗ ಸಿಬ್ಬಂದಿಯವರು ಅವರನ್ನು ಬೆನ್ನತ್ತಿ ಹಿಡಿದು ತಂದಿದ್ದು, ಅವರನ್ನು ವಿಚಾರಣೆ ಮಾಡಲಾಗಿ ಮೊಪೈಡ್    ನಡೆಯಿಸುತ್ತಿದ್ದವನು ತನ್ನ ಹೆಸರು (1) ಶ್ರೀನಿವಾಸ ತಂದೆ ಛತ್ರಪ್ಪ, ವಯಸ್ಸು 36 ವರ್ಷ, ಜಾತಿ: ಲಮಾಣಿ ಉ: ಕೂಲಿ ಕೆಲಸ ಸಾ: ಸೇತುವೆ ಹತ್ತಿರ, ವಿರುಪಾಪೂರು ಗಡ್ಡಿ ಅಂತಾ ತಿಳಿಸಿದ್ದು, ಹಿಂಭಾಗದಲ್ಲಿ ಕುಳಿತಿದ್ದವನು ತನ್ನ ಹೆಸರು (2) ಶೇಖರ ನಾಯ್ಕ ತಂದೆ ಫಕೀರ ನಾಯ್ಕ, ವಯಸ್ಸು 33 ವರ್ಷ, ಜಾತಿ: ಲಮಾಣಿ ಉ: ಕೂಲಿ ಕೆಲಸ ಸಾ: ಶಾಲೆಯ ಹತ್ತಿರ, ವಿರುಪಾಪೂರು ಗಡ್ಡಿ ಅಂತಾ ತಿಳಿಸಿದನು. ಅವನು ತನ್ನ ಹೆಗಲಿಗೆ ಒಂದು ನೀಲಿ ಬಣ್ಣದ ಜೀನ್ಸ್ ಬಟ್ಟೆಯ ಬ್ಯಾಗನ್ನು ಹಾಕಿಕೊಂಡಿದ್ದು, ಅದರಲ್ಲಿ ಏನು ಇದೆ ಅಂತಾ ವಿಚಾರಿಸಲು ಅವನು ಅದರಲ್ಲಿ ಏನೂ ಇರುವುದಿಲ್ಲಾ ಅಂತಾ ಮರೆಮಾಚಿದ್ದು, ಅದನ್ನು ಪರಿಶೀಲನೆ ಮಾಡಲಾಗಿ  ಅದರ ಒಳಗಡೆ ಎರಡು ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಒಣಗಿದ ಎಲೆಯ ಪುಡಿ ಪುಡಿಯಾದ ವಸ್ತು ಇದ್ದು, ಅದು ಗಾಂಜಾ ತರಹ ಘಾಟು ವಾಸನೆ ಬರುತ್ತಿತ್ತು ಅವರಿಬ್ಬರಿಗೆ ಇದು ಏನು ಎಂದು ವಿಚಾರಿಸಲಾಗಿ ಅವರು ಇದು ಗಾಂಜಾ ಇರುತ್ತದೆ ಅಂತಾ ತಿಳಿಸಿದರು. ಅದನ್ನು ಎಲ್ಲಿಂದ ತಂದಿದ್ದೀರಾ ಅಂತಾ ವಿಚಾರಿಸಲು ಅದನ್ನು ದಾರಿಯಲ್ಲಿ ಹೋಗುತ್ತಿದ್ದ ಯಾರೋ ಸಾಧು ಕಡೆಯಿಂದ ತೆಗೆದುಕೊಂಡಿರುವುದಾಗಿ ತಿಳಿಸಿದ್ದು, ಅದನ್ನು ನಾವು ವಿದೇಶಿಯರಿಗೆ ಮಾರಾಟ ಮಾಡಲು ವಿರುಪಾಪೂರು ಗಡ್ಡಿಗೆ ತೆಗೆದುಕೊಂಡು ಹೊರಟಿರುತ್ತೇವೆ ಅಂತಾ ತಿಳಿಸಿದರು. ಇದಕ್ಕೆ ಯಾವುದೇ ಲೈಸೆನ್ಸ್ ಪಡೆದುಕೊಂಡಿರುವುದಿಲ್ಲಾ ಅಂತಾ ತಿಳಿಸಿದರು. ನಂತರ ಇಬ್ಬರನ್ನು ಪರಿಶೀಲಿಸಲಾಗಿ ಶ್ರೀನಿವಾಸನ ಹತ್ತಿರ ರೂ. 350-00 ಗಳು ದೊರೆತಿದ್ದು, ಸದರಿ ಹಣ ಗಾಂಜಾ ಮಾರಾಟದಿಂದ ಬಂದಿದ್ದು ಅಂತಾ ತಿಳಿಸಿದರು. ಕೂಡಲೇ ಪಿ.ಸಿ. 358 ರವರ ಮುಖಾಂತರ ರಾಮಾಂಜನೇಯ ತಂದೆ ಚಿನ್ನ ನರಸಿಂಹಲು, ವಯಸ್ಸು 28 ವರ್ಷ, ಜಾತಿ: ಮಾದಿಗ ಉ: ಹಣ್ಣು ಮತ್ತು ತರಕಾರಿ ವ್ಯಾಪಾರ ಸಾ: ಸಾಣಾಪೂರು ತಾ: ಗಂಗಾವತಿ ಎಂಬುವವನನ್ನು ತಕ್ಕಡಿ ಮತ್ತು ತೂಕದ ಕಲ್ಲುಗಳ ಸಮೇತ ಸ್ಥಳಕ್ಕೆ ಕರೆಯಿಸಿ ಗಾಂಜಾವನ್ನು ತೂಕ ಮಾಡಿಸಲಾಗಿ ಪ್ರತಿಯೊಂದು ಪ್ಲಾಸ್ಟಿಕ್ ಚೀಲಗಳಲ್ಲಿ ತಲಾ 400 ಗ್ರಾಂ. ಒಣ ಗಾಂಜಾ ಒಟ್ಟು 800 ಗ್ರಾಂ. ಗಾಂಜಾ ಅಂದಾಜು ಕಿಮ್ಮತ್ತು ರೂ. 4,000-00 ಇದ್ದು, ಸದರಿ ಗಾಂಜಾ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಎಫ್.ಎಸ್.ಎಲ್.ಗೆ ಕಳುಹಿಸಲು ಎರಡೂ ಚೀಲಗಳಲ್ಲಿದ್ದ ಗಾಂಜಾದಲ್ಲಿ ತಲಾ 100 ಗ್ರಾಂ. ನಷ್ಟು ಗಾಂಜಾವನ್ನು ಪ್ರತ್ಯೇಕವಾಗಿ  ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ನಂತರ ಅದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲಿದು VB. ಅಕ್ಷರದಿಂದ ಸೀಲ್ ಮಾಡಲಾಯಿತು. ಉಳಿದ ಗಾಂಜಾವನ್ನು ಪ್ರತ್ಯೇಕವಾಗಿ ಕಪ್ಪು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅವುಗಳನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲಗಳಲ್ಲಿ ಹಾಕಿ VB ಅಕ್ಷರದಿಂದ ಸೀಲ್ ಮಾಡಿ ನಂತರ ಅವುಗಳಿಗೆ ಪಂಚರ ಸಹಿತ ಚೀಟಿಗಳನ್ನು ಅಂಟಿಸಿ ತಾಬಾಕ್ಕೆ ತೆಗೆದುಕೊಳ್ಳಲಾಯಿತು. ಅಲ್ಲದೇ ಅವರು ಚಲಾಯಿಸಿಕೊಂಡು ಬಂದಿದ್ದ ಮೊಪೈಡ್ ನೋಡಲು ಟಿ.ವಿ.ಎಸ್. ಎಕ್ಸೆಲ್ ಹೆವಿ ಡ್ಯೂಟಿ ಇದ್ದು, ಅದರ ನಂಬರ್: ಕೆ.ಎ-37/ ಎಸ್-2019 ಅಂತಾ ಇತ್ತು. ಅದನ್ನು ಸಹ ನಮ್ಮ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಸಂಜೆ 5:00 ರಿಂದ 6:00 ಗಂಟೆಯವರೆಗೆ ಪಂಚನಾಮೆಯನ್ನು ನಿರ್ವಹಿಸಿ ನಂತರ ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಮುಂದಿನ ತನಿಖೆ ಕುರಿತು ಸಂಬಂಧಪಟ್ಟವರಿಗೆ ಕಡತವನ್ನು ವಹಿಸಲು ಸೂಚಿಸಲಾಗಿದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.    
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 52/2016 ಕಲಂ: 143, 147, 148, 324, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:.
ದಿನಾಂಕ 05-03-2016 ರಂದು 21-30 ಶ್ರೀ ಮಾರೇಶ ತಂದೆ ರಾಮಣ್ಣ ಪೂಜಾರ, ವಯಸ್ಸು 23 ವರ್ಷ ಜಾ: ನಾಯಕ ಉ: ಎಸ್ ಬಿ.ಹೆಚ್. ಬ್ಯಾಂಕ್ ನಲ್ಲಿ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 05-03-2016 ರಂದು ರಾತ್ರಿ 8-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಸ್ನೇಹಿತನ ಸಂಗಡ ಮೋಟಾರ್ ಸೈಕಲ್ ತೆಗೆದುಕೊಂಡು ಬನ್ನಿಗಿ ಕ್ಯಾಂಪಿನಲ್ಲಿರುವ ತಮ್ಮ ಮನೆಯಿಂದ ರಾಯಚೂರು ರಸ್ತೆಯಲ್ಲಿರುವ ಚರ್ಚ ಕಡೆಗೆ ಹೋಗುತ್ತಿರುವಾಗ ಬನ್ನಿಗಿಡ ಕ್ಯಾಂಪಿನಲ್ಲಿರುವ ಗಟಾರದ ಮೇಲೆ ಇರುವ ಪೂಲಿನ ಮೇಲೆ ಕುಳಿತುಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಿರ್ಯಾದಿ ಮತ್ತು ಆರೋಫಿತರ ಮದ್ಯೆ ಹಲವಾರು ಬಾರಿ ಅದೇ ಪೂಲಿನ ಮೇಲೆ ಕೂಡುವುದರ ವಿಷಯಕ್ಕೆ ಸಂಬಂದಿಸಿದಂತೆ ಬಾಯಿ ಮಾತಿನ ಜಗಳವಾಗಿದ್ದು ಅದೇ ವಿಷಯಕ್ಕೆ ಸಂಬಂದಿಸಿದಂತೆ ಇಂದು ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮತ್ತು ಸಾಕ್ಷಿದಾರರು ತಮ್ಮ ಕೆಲಸದ ನಿಮಿತ್ಯ ಹೋಗುತ್ತಿದ್ದಾಗ ಅವರನ್ನು ಕೂಗಿ ಕರೆದು ಅವರಿಗೆ ನಾಯಕ ಸೂಳೆ ಮಕ್ಕಳೇ ಅಂತಾ ಜಾತಿ ಎತ್ತಿ ಬೈದಾಡಿ ಜಾತಿ ನಿಂದನೇ ಮಾಡಿ, ನೀವು ಇನ್ನೊಂದು ಸಾರೆ ಮನೆಯ ಹತ್ತಿರ ಇರುವ ಪೂಲಿನ ಮೇಲೆ ಕುಳಿತುಕೊಂಡರೆ ನಿಮ್ಮನ್ನು ನಾವು ಜೀವ ಸಹಿತ ಉಳಿಸುವುದಿಲ್ಲ ಮುಗಿಸಿಬಿಡುತ್ತೇವೆ ಅಂತಾ ಅಂದವರೇ ತಮ್ಮ ಹತ್ತಿರ ಇದ್ದ ಕಬ್ಬಿಣದ ರಾಡಿನಿಂದ ಮೈ-ಕೈಗಳಿಗೆ ಮತ್ತು ತಲೆಗೆ ಹೊಡೆ ಬಡಿ ಮಾಡಿ ರಕ್ತಗಾಯಗೊಳಿಸಿದ್ದಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 53/2016 ಕಲಂ: : 143, 147, 148, 341, 323, 324, 504, 506 ಸಹಿತ 149 ಐ.ಪಿ.ಸಿ.
ದಿನಾಂಕ 05-03-2016 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ರಿಯಾಜ್ ತಂದೆ ಅಬ್ದುಲ್ ನಜೀರ್, ವಯಸ್ಸು 20 ವರ್ಷ, ಜಾ: ಮುಸ್ಲಿಂ, ಬಿ.ಕಾಂ. ವಿದ್ಯಾರ್ಥಿ, ಸಾ: ಮೆಹಬೂಬ ನಗರ, ಗಂಗಾವತಿ ಇವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು  ಅದರ ಸಾರಂಶವೇನೆಂದರೆ ನಾನು, ಇಂದು ದಿನಾಂಕ 05-03-2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಮೇಲೆ ನನ್ನ ಸ್ನೇಹಿತನಾದ ಇಸಾಕ್ ಸಾ: ಇಸ್ಲಾಂಪುರ-ಗಂಗಾವತಿ ಇವನೊಂದಿಗೆ ಬಸ್-ನಿಲ್ದಾಣದಿಂದ ವಾಪಸ್ ಮನೆಗೆ ಹೊರಟಿದ್ದಾಗ ಅಂಬೇಡ್ಕರ್ ಸರ್ಕಲ್ ಹತ್ತಿರ  (1) ಪ್ರಶಾಂತ ಗುಂಡಮ್ಮ ಕ್ಯಾಂಪ್-ಗಂಗಾವತಿ (2) ರಮೇಶ ಚಲವಾದಿ (3) ನವೀನ ಲಿಂಗರಾಜ ಕ್ಯಾಂಪ್-ಗಂಗಾವತಿ (4) ಆಕಾಶ ಪ್ರಶಾಂತನಗರ-ಗಂಗಾವತಿ   (5) ಮಾರೆಪ್ಪ ತಂದೆ ರಾಮಣ್ಣ   (6) ಶರಣ ಅಟೋ ಚಾಲಕ      (7) ಪರಸು ತಂದೆ ಬ್ಯಾಂಕ್ ಹನುಮಂತ (8) ಲಕ್ಷ್ಮಣ @ ಲಚ್ಚ ತಾಯಿ ಪಾರ್ವತಮ್ಮ (9) ಫ್ರೂಟ್ ಅನೀಲ (10) ಗುಂಡಪಂಗ್ಲ ರವಿ (11) ರವಿ ಲಿಂಗರಾಜ್ ಕ್ಯಾಂಪ್-ಗಂಗಾವತಿ ಇನ್ನಿತರ 5 ರಿಂದ 10 ಜನ ನನ್ನ ಹೆಸರು ಕೇಳಿದ್ದು, ನಾನು, ನನ್ನ ಹೆಸರು ಹೇಳಿದಾಗ ಎಲ್ಲರೂ ಸೇರಿ ಸಮಾನ ಉದ್ದೇಶದಿಂದ ಒಮ್ಮಿಂದೊಮ್ಮೇಲೇ  ಈ ಸೂಳೇಮಗಾ ಸಾಬ ಅದಾನ, ಹೊಡಿರಿ ಈ ಸೂಳೇಮಗ್ಗ ಬಿಡಬ್ಯಾಡ್ರಿ ಅಂತಾ ಅನ್ನುತ್ತಾ ಎಲ್ಲರೂ ಸೇರಿ ಕೈಯಿಂದ ಹೊಡೆಬಡೆ ಮಾಡಲು ಪ್ರಾರಂಭಿಸಿದರು.  ಆಗ ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ನನ್ನ ಸ್ನೇಹಿತ ಇಸಾಕ್ ಇವನಿಗೂ ಹೆಸರು ಕೇಳಿದ್ದು, ಅವನು ಹೆಸರು ಹೇಳದೇ ಹಿಂದಿನಿಂದ ಇಳಿದು ಓಡಿ ಹೋದನು.  ಅದೇ ಸಮಯದಲ್ಲಿ ಪ್ರಶಾಂತ ಇವನು ಅಲ್ಲಿಯೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ನನಗೆ ತಲೆಯ ಮೇಲ್ಭಾಗದಲ್ಲಿ ಜೋರಾಗಿ ಹೊಡೆದನು.  ಆಗ ನಾನು ಕೆಳಗೆ ಬಿದ್ದಿದ್ದು, ನನ್ನ ತಲೆಯಿಂದ ರಕ್ತ ಬರುತ್ತಿದ್ದುದನ್ನು ನೋಡಿ ಸೂಳೇಮಗನೇ ನಮ್ಮ ತಂಟೆಗೆ ಬಂದ್ರ ಯಾರ್ನೂ ಉಳಸಂಗಿಲ್ಲ, ಹುಷಾರ್ ಅನ್ನುತ್ತಾ ಅವರೆಲ್ಲರೂ ಅಲ್ಲಿಂದ ಹೋದರು.  ನಂತರ ನಾನು ಸರ್ಕಾರಿ ಆಸ್ಪತ್ರೆ, ಗಂಗಾವತಿಗೆ ಹೋಗಿ ಚಿಕಿತ್ಸೆ ಪಡೆಕೊಂಡು ಠಾಣೆಗೆ ಬಂದಿದ್ದು ಇರುತ್ತದೆ.  ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 54/2016 ಕಲಂ: 143, 147, 148, 323, 324 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:. 
ದಿನಾಂಕ 05-03-2016 ರಂದು ರಾತ್ರಿ 10-30 ಗಂಟೆಗೆ ಶ್ರೀ ರಮೇಶ ತಂದೆ ದುರುಗಪ್ಪ  ಚಲುವಾದಿ ವಯ 24 ವರ್ಷ ಜಾ: ಚಲುವಾದಿ : ಗುಮಾಸ್ತ ಕೆಲಸ ಸಾ: ವಾರ್ಡ ನಂ. 20 ಚಲುವಾದಿ ಓಣಿ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ, 05-03-2016 ರಂದು ರಾತ್ರಿ 8-50 ಗಂಟೆ ಸುಮಾರಿಗೆ ಫಿರ್ಯಾದಿದಾರನು ಪಂಪಾನಗರ ಸರ್ಕಲ್ ಹತ್ತಿರ ಸಿಗರೇಟ್ ಸೇದಲು ಬಂದಿದ್ದು ಅಲ್ಲಿ ಬನ್ನಿಗಿಡ ಕ್ಯಾಂಪಿನ ಜನರು ಗುಂಪು ಸೇರಿದ್ದು, ಅಲ್ಲಿ ಇದ್ದ ಜನರು ಅಲ್ಲಿಂದ ಹೋಗುವಂತೆ ಹೇಳುತ್ತಿದ್ದರಿಂದ ಫಿರ್ಯಾದಿಯು ಅಲ್ಲಿಂದ ಪೀರಜಾದ ಓಣಿಯ ಮುಖಾಂತರ ಮನೆಗೆ ಹೋಗುತ್ತಿರುವಾಗ ಪೀರಜಾದ ಓಣಿಯಲ್ಲಿರುವ ಮಸೀದಿ ಹತ್ತಿರದ ನೀರಿನ ಟ್ಯಾಂಕ್ ಹತ್ತಿರ ಬನ್ನಿಗಿಡ ಕ್ಯಾಂಪಿನ ನಿವಾಸಿಗಳಾದ ಆರೋಪಿತರಾದ ಮೆಹಬೂಬ, ಜಾಫರ, ಆಟೋ ಚಾಲಕ ಮದರಸಿ ಇವರು ಫಿರ್ಯಾದಿಯನ್ನು ನೋಡಿ ಇವನು ಚಲುವಾದಿಯವನು ಇರುತ್ತಾನೆ ಅಂತಾ ಜಾತಿ ನಿಂದನೆ ಮಾಡಿ ಸದರಿ ಮೂರು ಜನ ಹಾಗೂ ಇತರೆ 15 ರಿಂದ 20 ಜನರು ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿಯನ್ನು ಹಿಡಿದುಕೊಂಡು ಅಲ್ಲಿಯೇ ಇದ್ದ ಇಟ್ಟಂಗಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿದ್ದು ಹಾಗೂ ಕೈಯಿಂದ ಹೊಡಿ-ಬಡಿ ಮಾಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 58/2016 ಕಲಂ: 143, 147, 148, 323, 355, 504, 506 ಸಹಿತ 149 ಐ.ಪಿ.ಸಿ:.

ದಿ:05.03.2016 ರಂದು ರಾತ್ರಿ 09.15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಖಾಜಾಬನಿ ಸಾ: ಬಹದ್ದೂರಬಂಡಿ ಇವರು ಠಾಣೆಗೆ ಹಾಜರಾಗಿ ಏಳಿಕೆ ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನಂದರೆ, ದಿ-04.03.16 ರಂದು ಸಂಜೆ 07.00 ಗಂಟೆಗೆ ನಾನು ಮತ್ತು ನನ್ನ ಮಗ ಮನೆಯಲ್ಲಿದ್ದಾಗ ದಿ-03.03.16 ರಂದು ಮಧ್ಯಾನ್ನ 2 ಗಂಟೆಗೆ ನನಗೆ ಜಿಲಾನಸಾಬ ಈತನು ಬೈಕ್ ಹಾಯಿಸಿದ ಬಗ್ಗೆ ನಡೆದ ಜಗಳದ ವಿಷಯವಾಗಿ 1] ಜಿಲಾನಸಾಬ ತಂದೆ ಸೈಯದಸಾಬ ಸಾ:ಮುದ್ದಾಬಳ್ಳಿ 2] ಜಂದೀಪೀರ ಸಾ: ಬಹದ್ದೂರಬಂಡಿ 3] ಮಮತಾಜ ಬೀ ಗಂಡ ಮಹ್ಮದಸಾಬ ಸಾ: ಬಹದ್ದೂರಬಂಡಿ 4] ಮರ್ದಾನ ತಂದೆ ಮೆಹಮೂದಸಾಬ ಬೇಲ್ದಾರ ಸಾ: ಬಹದ್ದೂರಬಂಡಿ 5] ರೇಷ್ಮಾ ಗಂಡ ಜೀಲಾನಸಾಬ ಸಾ: ಮುದ್ದಾಬಳ್ಳಿ 6] ಬುಡ್ಡಿಮಾ ಸಾ: ಬಹದ್ದೂರಬಂಡಿ 7] ದಾದಿಮಾ ಗಂಡ ಮಾಬುಸಾಬ ಸಾ: ಬಹದ್ದೂರಬಂಡಿ 8] ಮುನ್ನಾಬೀ ಗಂಡ ಬುಡ್ಡಾಸಾಬ ಸಾ: ಮುದ್ದಾಬಳ್ಳಿ ಹಾ.ವ: ಬಹದ್ದೂರಬಂಡಿ 9] ಚಾಂದು ತಂದೆ ಮಾಬುಸಾಬ ಕಂಬಾರ ಸಾ: ಬಹದ್ದೂರಬಂಡಿ ಎಲ್ಲರೂ ಗುಂಪುಕಟ್ಟಿಕೊಂಡು ಬಂದು ಜಿಲಾನಸಾಬ ಸಾ:ಮುದ್ದಾಬಳ್ಳಿ ,ಜಂದೀಪೀರ ಸಾ: ಬಹದ್ದೂರಬಂಡಿ, ಮಮತಾಜ ಬೀ ಇವರು ಫಿರ್ಯಾದಿದಾರರ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಬೈಕ್ ಹಾಯಿಸಿದ್ದಕ್ಕೆ ನನ್ನೊಂದಿಗೆ ಜಗಳ ಮಾಡುತ್ತಿಯಾ ಬೋಸುಡಿ ಅಂತಾ ಪಿರ್ಯಾದಿಗೆ ಬೈದು ಕೈಯಿಂದ ಕಪಾಳಕ್ಕೆ, ಬೆನ್ನಿಗೆ, ತಲೆಗೆ ಹೋಡೆದು ನಂತರ ಮನೆಯ ಹೊರಗೆ ಮತ್ತು ಗ್ರಾಮದ ಪಂಚಾಯತಿಯ ಹತ್ತಿರ ಎಲ್ಲರೂ ಈ ಸೂಳೆ ಮಕ್ಕಳದು ಜಾಸ್ತಿ ಆಗಿದೆ ಅಂತಾ ಪಿರ್ಯಾದಿ ಮತ್ತು ಪಿರ್ಯಾದಿ ಮಗ ಗುಲಾಮ ಮುಸ್ತಫಾ ಈತನಿಗೆ ಬೈದು ಕೈಯಿಂದ, ಚಪ್ಪಲಿಯಿಂದ ಹೊಡೆದು ನಂತರ ಜಗಳ ಬಿಡಿಸಿಕೊಂಡಿದ್ದಕ್ಕೆ ಉಳಿದಿರಿ ಇಲ್ಲವಾದರೆ ನಿಮ್ಮನ್ನು ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008