1) ಕಾರಟಗಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 72/2016
ಕಲಂ. 498(ಎ), 323, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:-04-04-2016 ರಂದು ಮದ್ಯಾಹ್ನ 13-05 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಿವಮ್ಮ ಗಂಡ ದುರಗೇಶ ವಯಾ- 20 ವರ್ಷ ಜಾ. ಕೊರವರ ಸಾ. ಹುಳ್ಕಿಹಾಳ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಆರೋಪಿ 1 ದುರಗೇಶ ತಂದಿ ಯಮನಪ್ಪ ಭೋವಿ ಇಬ್ಬರು ಈಗ್ಗೆ 9 ತಿಂಗಳ ಹಿಂದೆ ಪರಸ್ಪರ ಪ್ರೀತಿಸಿದ್ದ ವಿಷಯ ಅವರವರ ಮನೆಯವರಿಗೆ ಗೊತ್ತಾಗಿ ರಾಜೀ ಪಂಚಾಯಿತಿ ಮಾಡಿ ಊರಿನ ಹಿರಿಯವರು ಇಬ್ಬರಿಗೂ ಸೇರಿಸಿ ದಿನಾಂಕ:-09-08-2015 ರಂದು ಮದುವೆ ಮಾಡಿರುತ್ತಾರೆ. ಮದುವೆಯಾಗಿ ಪಿರ್ಯಾದಿದಾರರ ಗಂಡನ ಮನೆಯವರು ಮೂರ್ನಾಲ್ಕು ದಿವಸ ಚನ್ನಾಗಿ ನೋಡಿಕೊಂಡು ನಂತರ ದಿನಗಳಲ್ಲಿ ಪಿರ್ಯಾದಿದಾರರ ಗಂಡ ದುರಗೇಶ ತಂದಿ ಯಮನಪ್ಪ ಭೋವಿ, ಈತನ ತಂದೆ ಯಮನಪ್ಪ ತಂದಿ ಹನುಮಂತಪ್ಪ ಭೋವಿ, ಯಂಕಮ್ಮ ಗಂಡ ಯಮನಪ್ಪ ಭೋವಿ, ರೇಣುಕಮ್ಮ ಗಂಡ ಕಿಷ್ಟಪ್ಪ, ದುರಗಮ್ಮ ತಂದೆ ಯಮನಪ್ಪ , ಕಿಷ್ಟಪ್ಪ ವಡ್ಡರ ಎಲ್ಲರೂ ಮನೆಯಲ್ಲಿ ಪಿರ್ಯಾದಿದಾರರಿಗೆ ಕೈಯಿಂದ ಹೊಡೆ ಬಡೆ ಮಾಡಿ, ಅವಚ್ಯವಾಗಿ ಬೈದಾಡಿ, ಊಟ ನೀರು ಕೊಡದೇ ಮನೆಯಲ್ಲಿ ಮತ್ತು ಹೊಲದಲ್ಲಿ ಕೆಲಸ ಮಾಡಿಸಿಕೊಳ್ಳುವುದು ಮಾಡಿ, ಗಂಡನ ತಂದೆ ಪಿರ್ಯಾದಿಗೆ ಮನೆಯಲ್ಲಿ ಯಾರು ಹೆಣ್ಣು ಮಕ್ಕಳು ಇಲ್ಲದ ಸಮಯದಲ್ಲಿ ಕೈ ಮೈ ಮುಟ್ಟುವುದು, ಚಿವುಟುವುದು ಸೀರೆ ಹಿಡಿದು ಎಳೆದಾಡುವುದು ಮಾಡಿದ್ದು ಅಲ್ಲದೇ ಆರೋಪಿತರು ಪಿರ್ಯಾದಿದಾರರ ಗಂಡ ದುರಗೇಶನಿಗೆ ಇನ್ನೊಂದು ಮದುವೆ ಮಾಡಲು ನೊಡಿದ್ದ ವಿಷಯ ಗೊತ್ತಾಗಿ ಪಿರ್ಯಾದಿದಾರರು ತನ್ನ ಗಂಡನಿಗೆ ಕೇಳಿದ್ದರಿಂದ ಮನೆಯಲ್ಲಿ ಹಾಕಿ ಆರೋಪಿತರೆಲ್ಲರು ಹೊಡೆ ಬಡಿ ಮಾಡಿ ಮನೆಯಲ್ಲಿ ದಿನಾಂಕ:-27-03-2016 ರಿಂದ 30-03-2016 ರವರೆಗೆ ಮನೆಯಲ್ಲಿ ಕೂಡಿ ಹಾಕಿ ನಂತರ ಪಿರ್ಯಾದಿದಾರರು ಯಾರಿಗೂ ಹೇಳದೆ ಹೊಲದಲ್ಲಿ ಇರುತ್ತೇನೆ ಅಂತಾ ಹೇಳಿದ್ದಕ್ಕೆ ಹೊಲಕ್ಕೆ ಕರೆದುಕೊಂಡು ಹೋಗಿ ಹೊಲದಲ್ಲಿ ಊಟಕ್ಕೆ ಕೊಡದೆ ದುಡಿಸಿಕೊಂಡು ದಿನಾಂಕ:-03-04-2016 ರಂದು ಹೊಲದಲ್ಲಿ ಹೊಡೆ ಬಡೆ ಮಾಡಿ ಜೀವ ಬೇದರಕೆ ಹಾಕಿದ್ದರಿಂದ ಪಿರ್ಯಾದಿದಾರರು ತಮಗೆ ಮದುವೆ ಮಾಡಿಸಿದ ಊರ ಹಿರಿಯರ ಹತ್ತಿರ ಹೋಗಿ ನಂತರ ತಮ್ಮ ತಂದೆಯ ಹತ್ತಿರ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ಇಂದು ಠಾಣೆಗೆ ಬಂದು ಪಿರ್ಯಾದಿ ನೀಡಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ..
2)
ಹನುಮಸಾಗರ
ಪೊಲೀಸ್ ಠಾಣೆ ಗುನ್ನೆ ನಂ: 28/2016 ಕಲಂ. 363 ಐ.ಪಿ.ಸಿ:.
ಫಿರ್ಯಾದಿಯ ಮಗಳು ವಯಾ: 16 ವರ್ಷ, ಈಕೆಯು ಎಸ್.ಎಸ್.ಎಲ್.ಸಿ ಕನ್ನಡ,
ವಿಜ್ಞಾನ ಪರೀಕ್ಷೆ ಬರೆದಿದ್ದು, ದಿನಾಂಕ: 03-04-2016 ರಂದು ಮನೆಯಲ್ಲಿದ್ದು, ಫಿರ್ಯಾದಿದಾರರು
ಹಾಗೂ ಅವರ ಹೆಂಡತಿ, ಮತ್ತು ಮಗ ಎಲ್ಲರೂ ಸೇರಿ ನೇಯುವ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಊಟಕ್ಕೆ
ಮನೆಗೆ ಬಂದು ವಾಪಸ್ ಮತ್ತೆ ಕೆಲಸಕ್ಕೆ ಹೋಗಿ ವಾಪಸ್ ಸಾಯಾಂಕಾಲ 06-00 ಗಂಟೆಗೆ ಮನೆಗೆ ಬಂದು
ನೋಡಲು ಮನೆ ಬೀಗ ಹಾಕಿದ್ದು, ತಮ್ಮ ಮಗಳನ್ನು ಹುಡುಕಾಡಲು ಸಿಗಲಿಲ್ಲ, ಮನೆಯ ಚಾವಿಯನ್ನು ಅಲ್ಲೆ
ಹೂವಿನ ಕುಂಡದಲ್ಲಿ ಇಟ್ಟಿದ್ದು, ಬೀಗ ತೆಗೆದು ನೋಡಲು ಅಂಜಲಿ ಇರಲಿಲ್ಲ, ನಂತರ ತಾವು ಬಾಡಿಗೆ
ಇದ್ದ ಮನೆಯ ಮಾಲೀಕರನ್ನು ವಿಚಾರಿಸಲು ಗೊತ್ತಿಲ್ಲ ಅಂತಾ ತಿಳಿಸಿದ್ದು, ನಂತರ ತಮ್ಮ ಸಂಬಂಧಿಕರಿಗೆ
ಫೋನ್ ಮಾಡಿ ವಿಚಾರಿಸಲು ಅಲ್ಲಿಯೂ ಬಂದಿರುವುದಿಲ್ಲ ಅಂತಾ ತಿಳಿಸಿದ್ದು, ಅಲ್ಲಿ ಇಲ್ಲಿ ಹುಡುಕಾಡಿ
ಸಿಗದೇ ಇದ್ದುದರಿಂದ ಇಂದು ತಡವಾಗಿ ಠಾಣೆಗೆ ಬಂದು ಕಾಣೆಯಾದ ತನ್ನ ಮಗಳನ್ನು ಪತ್ತೆ ಹಚ್ಚಿ ಕೊಡಲು
ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅರ್ಜಿ ನೀಡಿದ್ದು ಇರುತ್ತದೆ.
0 comments:
Post a Comment