Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, April 6, 2016

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 108/2016 ಕಲಂ. 78(3) Karnataka Police Act.
ದಿನಾಂಕ 05-04-2016 ರಂದು ಸಂಜೆ 7-00 ಗಂಟೆಗೆ ಶ್ರೀ ಉದಯರವಿ ಪಿ.ಎಸ್. ಕನಕಗಿರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿ ಮತ್ತು ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ,   ದಿನಾಂಕ 05-04-2016 ರಂದು ಸಂಜೆ 5-30 ಗಂಟೆಗೆ ತಿಪ್ಪನಾಳ ಗ್ರಾಮದ ಶ್ರೀ ನವಲಿಹಳ್ಳಿ ಶ್ರೀ ದುರಗಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಾಲಂ ನಂ. 9 ರಲ್ಲಿ ನಮೂದಿಸಿದ ಆರೋಪಿ ನಂ.1 ಈತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ .ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 480=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 59/2016 ಕಲಂ. 304(ಎ) ಐ.ಪಿ.ಸಿ:.
ದಿನಾಂಕ: 05.04.2016 ಮದ್ಯಾನ 3:30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ ಈರಮ್ಮ ಗಂಡ ಅಪ್ಪಯ್ಯ ಮಂಗಳಾಪೂರಮಠ ವಯಾ: 35 ವರ್ಷ ಜಾ: ಜಂಗಮ : ಮನೆಗೆಲಸ ಸಾ: ವಾರಕಾರ ಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 05.04.2016 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಮೃತ ಅಪ್ಪಯ್ಯ ಇತನಿಗೆ ವಿಕಾಸ ನಗರದಲ್ಲಿ ಆರೋಪಿ ವೀರನಗೌಡ ಇವರ ಮನೆಯ ಮಹಡಿಯಲ್ಲಿ ಪೈಪ್ ಲೈನ್ ಕೆಲಸ ಇದೆ ಅಂತಾ ಆರೋಪಿ ಅಂದಾನಯ್ಯ ಇತನು ಕರೆದುಕೊಂಡು ಹೋಗಿ ಕೆಲಸ ಮಾಡು ಅಂತಾ ಹೇಳಿ ಮೃತ ಅಪ್ಪಯ್ಯನಿಗೆ ಯಾವುದೇ ಸುರಕ್ಷಿತ ಸಲಕರಣೆಗಳನ್ನು ಒದಗಿಸದೇ ನಿರ್ಲಕ್ಷತನ ವಹಿಸಿದ್ದರಿಂದ ಅಪ್ಪಯ್ಯನು ಮಹಡಿ ಮೇಲಿಂದ ಕೆಳಗೆ ಬಿದ್ದು ಭಾರಿ ಗಾಯಹೊಂದಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 107/2016 ಕಲಂ.  279, 337, 338, 304(ಎ) ಐ.ಪಿ.ಸಿ:.
ದಿನಾಂಕ: 05-04-2016 ರಂದು ರಾತ್ರಿ 7-30  ಗಂಟೆಗೆ ಇಲಕಲ್ ಅಕ್ಕಿ ಆಸ್ಪತ್ರೆಯಿಂದ .ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶರಣಪ್ಪ ಚವ್ಹಾಣ ರವರ ಹೇಳಿಕೆ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 9-30 ಗಂಟೆಗೆ ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೇಂದರೆ ದಿನಾಂಕ: 05-04-2016 ರಂದು ಮಂಗಳವಾರ ದಿವಸ ಮದ್ಯಾಹ್ನ ಚಿಕ್ಕ ಕೊಡಗಲಿ ತಾಂಡಾ ಗ್ರಾಮಕ್ಕೆ ನಮ್ಮ ಸಂಬಂಧಿಕರ ಮದುವೆ ನಿಶ್ಚಿತಾರ್ಥ ಕುರಿತು ನಾನು ಮತ್ತು ನನ್ನ ತಮ್ಮನಾದ ಶೇಖಪ್ಪ ವಯಾ: 28 ವರ್ಷ ಕೂಡಿಕೊಂಡು ನಮ್ಮ ಪಲ್ಸರ್ ಮೋ.ಸೈ. ನಂ: ಕೆ.ಎ-37/ಎಸ್-7144 ನೇದ್ದರಲ್ಲಿ ನಮ್ಮ ಗ್ರಾಮದಿಂದ ಹೋಗಿ ಸದರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್ ನಮ್ಮ ಗ್ರಾಮವಾದ ಕೆ.ಬೋದೂರು ತಾಂಡಾಕ್ಕೆ ಬರುವಾಗ ನಾವು ನಮ್ಮ ಕೆಲಸದ ನಿಮಿತ್ಯ ಮಿಯ್ಯಾಪೂರ- ಕಡೇಕೊಪ್ಪ ರಸ್ತೆಯ ಮುಖಾಂತರ ಬರುತ್ತಿದ್ದಾಗ ಸಂಜೆ 7-00 ಗಂಟೆ ಸುಮಾರಿಗೆ ನಾವು ಕಡೇಕೊಪ್ಪ ಕ್ರಾಸ್ ದಿಂದ ಇನ್ನೂ ಸುಮಾರು 2 ಕಿ.ಮೀ. ನಷ್ಟು ದೂರ ಇರುವಾಗ್ಗೆ ನಮ್ಮ ಎದುರುಗಡೆಯಿಂದ  ಒಂದು ಟಂಟಂ ಅಪೇ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದು ಆಗ ನಮ್ಮ ಮೋ.ಸೈ. ನಡೆಸುತ್ತಿದ್ದ ನನ್ನ ತಮ್ಮನಾದ ಶೇಖಪ್ಪನು ರಸ್ತೆಯ ಎಡಗಡೆ ಸೈಡ್ ತೆಗೆದುಕೊಂಡಾಗ್ಯೂ ಸದರಿ ಅಪೇ ವಾಹನದ ಚಾಲಕನು ತನ್ನ ವಾಹನವನ್ನು ಯರ್ರಾ ಬಿರ್ರಿಯಾಗಿ ನಡೆಸಿಕೊಂಡು ಬಂದವನೇ ನಾನು ನೋಡು ನೋಡುತ್ತಿದ್ದಂತೆಯೇ ನಮ್ಮ ಮೋ.ಸೈ ಗೆ ಟಕ್ಕರ ಮಾಡಿ ಅಪಘಾತಪಡಿಸಿದನು. ಇದರಿಂದ ನಾವು ಮೋ.ಸೈ. ಸಮೇತ ಕೆಳಗೆ ಬಿದ್ದಿದ್ದು ನಂತರ ನಾನು ಎದ್ದು ನೋಡಲಾಗಿ ನನಗೆ ಬಲಗಾಲು ಮೊಣಕಾಲಿಗೆ ಬಾರಿ ಪೆಟ್ಟಾಗಿ ಮುರಿದಂತಾಗಿದ್ದು, ಹಣೆಯ ಮೇಲೆ ಭಾರಿ ರಕ್ತ ಗಾಯವಾಗಿದ್ದು, ಬಲ ಭುಜಕ್ಕೆ ಮತ್ತು ಬಲಗಡೆ ಮುಖಕ್ಕೆ ತೆರಚಿದ ಗಾಯವಾಗಿದ್ದು ಹಾಗೂ ಕೆಳ ತುಟಿಗೆ ರಕ್ತಗಾಯ ಬಲಗಡೆ ಎದೆಗೆ ಒಳಪೆಟ್ಟಾಗಿದ್ದು,  ಸದರಿ ಅಪಘಾತದಿಂದ ಮೋ.ಸೈ. ನಡೆಸುತ್ತಿದ್ದ  ನನ್ನ ತಮ್ಮನಾದ ಶೇಖಪ್ಪನಿಗೆ ಎಡ ಹಣೆಗೆ ಬಾರಿ ರಕ್ತ ಗಾಯ ಎಡ ಗಲ್ಲಕ್ಕೆ ಒಳ ಪೆಟ್ಟು ಬಲಗಾಲ ಮೊಣಕಾಲು ಮುರಿದಂತಾಗಿದ್ದು ಹಾಗೂ ಬಾಯಿ ಮೂಗು ಕಿವಿಯಿಂದ ರಕ್ತ ಬಂದಿದ್ದು ಸದರಿಯವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು.  ನಂತರ ನಮಗೆ ಅಪಘಾತಪಡಿಸಿದ ಅಪೇ ವಾಹನ ನೋಡಲಾಗಿ ಅದರ ನಂಬರ ಕೆ.ಎ-37/ಎ-3172 ಇದ್ದು ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಯಮನೂರಪ್ಪ ತಂದೆ ಅಳ್ಳಪ್ಪ ನಾಗರಾಳ ಸಾ: ಹನಮಸಾಗರ ಅಂತಾ ಗೊತ್ತಾಯಿತು. ಅಷ್ಟರಲ್ಲಿ ಯಾರೋ ದಾರಿ ಹೋಕರು 108 ಅಂಬೂಲೇನ್ಸ ಗೆ ಫೋನ ಮಾಡಿದ್ದು ನಾನು ಅಂಬೂಲೇನ್ಸ ನಲ್ಲಿ ಚಿಕಿತ್ಸೆ ಕುರಿತು ಇಲಕಲ ಅಕ್ಕಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ.  ಸದರಿ ಅಪೇ ವಾಹನ ನಂ: ಕೆ.ಎ-37/ಎ-3172 ನೇದ್ದರ ಚಾಲಕನಾದ ಯಮನೂರಪ್ಪ ನಾಗರಾಳ ಇತನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋ.ಸೈ. ಮೇಲೆ ಹೋಗುತ್ತಿದ್ದ ನಮಗೆ ಮುಖಾ ಮುಖಿ ಟಕ್ಕರ ಮಾಡಿ ಅಪಘಾತಪಡಿಸಿದ್ದು ಸದರಿ ಅಪಘಾತದಿಂದ ತಿರ್ವ ಗಾಯಗೊಂಡ ನನ್ನ ತಮ್ಮನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ತೀರ್ವ ಗಾಯಗೊಂಡಿರುವ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾರಣ ಸದರಿ ವಾಹನದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ವಗೈರೆ ಫಿರ್ಯಾದಿಯ ಹೇಳಿಕೆಯ  ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 108/2016 ಕಲಂ. 498(ಎ), 307 ಐ.ಪಿ.ಸಿ:.

ದಿನಾಂಕ: 05-04-2016 ರಂದು ರಾತ್ರಿ 10-15  ಗಂಟೆಗೆ ಸರ್ಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ .ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶೀಲಾ ಗಂಡ ಶರಣಪ್ಪ ಮಾರನಾಳ ರವರ ಹೇಳಿಕೆ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 11-30 ಗಂಟೆಗೆ ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೇಂದರೆ ನನಗೆ ದಿನಾಂಕ. 12-05-2014 ರಂದು ನಮ್ಮೂರಿನ ಅಂದರೆ ಕೊರಡಕೇರಾ ಗ್ರಾಮದ  ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ತಿಮ್ಮಣ್ಣ ಮಾರನಾಳ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿಯೇ ಇರುತ್ತೇನೆ. ನನ್ನ ಗಂಡನಾದ ಶರಣಪ್ಪ ಈತನು ಖಾಸಗಿ ಡ್ರೈವರ್ ಇರುತ್ತಾನೆ.  ನಮ್ಮ ಮದುವೆಯಾದ ಸುಮಾರು 3 ತಿಂಗಳ ನಂತರ ನನ್ನ ಗಂಡನಾದ ಶರಣಪ್ಪ ಮಾರನಾಳ ಈತನು ನನಗೆ ನನ್ನ ನಡತೆ ಬಗ್ಗೆ ಅನುಮಾನ ಮಾಡುತ್ತಾ ನಾನು ಎಲ್ಲಿ ಹೋದರೂ ಅನುಮಾನಪಡುತ್ತಾ ನನ್ನೊಂದಿಗೆ ವಿನಾ ಕಾರಣ ಜಗಳಾ ತೆಗೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದನು ನಾನು ಆತನಿಗೆ ಎಷ್ಟು ಸಮಜಾಯಿಷಿ ಹೇಳಿದರೂ ಕೇಳುತ್ತಿರಲಿಲ್ಲ. ಅಷ್ಟರಲ್ಲಿ  ನಾನು ಗರ್ಭೀಣಿಯಾಗಿದ್ದು ನಾನು ಈಗ್ಗೆ ಸುಮಾರು 10 ತಿಂಗಳ ಹಿಂದೆ ನನ್ನ ತವರು ಮನೆಗೆ ಬಂದು ನನಗೆ ಹೆರಿಗೆಯಾಗಿದ್ದು, ಈಗ ನನಗೆ 7 ತಿಂಗಳ ಹೆಣ್ಣು ಮಗು ಇರುತ್ತದೆ. ಈಗ್ಗೆ ಸುಮಾರು 15 ದಿನಗಳ ಹಿಂದೆ ಸದರಿ ನನ್ನ ಗಂಡನಾದ ಶರಣಪ್ಪ ಈತನು ನಮ್ಮ ಮನೆಗೆ ಬಂದಾಗ ನನ್ನೊಂದಿಗೆ ಜಗಳಾ ತೆಗೆದು ನೀನು ಬೇರೆ ಯಾವನೊಂದಿಗೆ ಅನೈತಿಕ ಸಂಬಂಧ ಮಾಡಿಕೊಂಡಿ ನಿನ್ನ ಜೀವಂತ ಬಿಡುವದಿಲ್ಲ ನಿಮ್ಮನ್ನು ಕೊಂದು ಹಾಕುತ್ತೇನೆ ಅಂತಾ ನನಗೆ ಬೈದಾಡಿದ್ದನು, ನಾನು ಆತನಿಗೆ ಸುಮ್ಮ ಸುಮ್ಮನೆ ಯಾಕೆ ಅನುಮಾನ ಮಾಡುತ್ತಿ ಅಂತಾ ಹೇಳಿದ್ದೆನು.  ಈ ದಿವಸ ದಿನಾಂಕ. 05-04-2016 ರಂದು ಮಂಗಳವಾರ ದಿವಸ ರಾತ್ರಿ 7-00 ಗಂಟೆ ಸುಮಾರಿಗೆ ನಾನು ನನ್ನ ಜೊತೆ ನಮ್ಮ ಮನೆ ಪಕ್ಕದ ಭೀಮವ್ವ ವಯಾ 12 ವರ್ಷ ಎಂಬಾಕೆಯನ್ನು ಕರೆದುಕೊಂಡು ಸಂಡಾಸ ಕುರಿತು ಹೋಗಿದ್ದಾಗ ಅಲ್ಲಿಗೆ ಬಂದ ನನ್ನ ಗಂಡನಾದ ಶರಣಪ್ಪ ಮಾರನಾಳ ಈತನು ನನ್ನ ಹತ್ತಿರ ಬಂದವನೇ ಲೇ ಭೋಸುಡಿ ಯಾವ ಸೂಳೇ ಮಗನ ಜೊತೆ ಮಲಗಾಕ ಬಂದಿಯಲೇ ನಿಮ್ಮೌನ್ ನಿನ್ನ ವತ್ತು ಜೀವ ಸಹಿತ ಬಿಡುವದಿಲ್ಲ ಅಂತಾ ಅಂದವನೇ ತನ್ನ ಸೊಂಟದಲ್ಲಿ ಇಟ್ಟುಕೊಂಡು ಬಂದಿದ್ದ ಒಂದು ಚಾಕು ತೆಗೆದವನೇ ನನಗೆ ನನ್ನ ಎಡ ತೆಲೆಗೆ, ನನ್ನ ಗಲ್ಲಕ್ಕೆ ಮತ್ತು ಕುತ್ತಿಗೆಗೆ ತಿವಿದನು ಅದರಿಂದ ನನಗೆ ರಕ್ತಗಾಯಗಳಾಗಿದ್ದು, ಆಗ ನಾನು ಚೀರಾಡುತ್ತಾ ಅಲ್ಲಿಯೇ ಬಿದ್ದೆನು, ನನ್ನೊಂದಿಗೆ ಇದ್ದ ಭೀಮವ್ವಳು ಭಯದಿಂದ ಅಲ್ಲಿಂದ ಓಡಿ ಹೋದಳು.  ನಂತರ ನಮ್ಮ ಅಣ್ಣನಾದ ಶಿವಪ್ಪ ಮತ್ತು ನಮ್ಮ ದೊಡ್ಡಪ್ಪನಾದ ಭರಮಪ್ಪ ರವರು ಅಲ್ಲಿಗೆ ಬಂದಿದ್ದು ಅವರು ನನ್ನನ್ನು  108 ಅಂಬುಲೆನ್ಸ್ ನಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ. ಸದರಿ ನನ್ನ ಗಂಡನಾದ ಶರಣಪ್ಪ ಮಾರನಾಳ ಈತನು ನನ್ನ ಮೇಲೆ ಸಂಶಯ ಪಡುತ್ತಾ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ನನಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದು ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ವಗೈರೆ ಫಿರ್ಯಾದಿಯ ಹೇಳಿಕೆಯ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008