1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 80/2016 ಕಲಂ. 279,
337 ಐ.ಪಿ.ಸಿ:.
ದಿನಾಂಕ. 03-04-2016
ರಂದು 02-00 ಪಿ.ಎಂ.ಕ್ಕೆ ಫಿರ್ಯಾದಿದಾರರು ಅಗಳಕರಾದಿಂದ ಮುನಿರಾಬಾದಕ್ಕೆ ಬರಲು ಅಗಳಕೇರಾದಿಂದ
ಎನ್.ಹೆಚ್. 13 ರಸ್ತೆಗೆ ಬರುವ ರಸ್ತೆ ಮೇಲೆ ಬರುತ್ತಿರುವಾಗ ಫಿರ್ಯಾದಿದಾರರ ಮುಂದೆ ಹೊರಟಿದ್ದ ಕಾರ ನಂ.
ಕೆ.ಎ.37/ಎಂ. 8717 ನೇದ್ದರ ಚಾಲಕನು ಕಾರನ್ನು ಯಾವುದೆ ಮುನ್ಸೂಚನೆ ನೀಡದೆ ಕಾರನ್ನು ನಿರ್ಲಕ್ಷತನದಿಂದ ಒಮ್ಮೇಲೆ
ಬ್ರೇಕ್ ಹಾಕಿ ನಿಲ್ಲಿಸಿದ್ದರಿಂದ ಹಿಂದೆ ಹೊರಟಿದ್ದ ಫಿರ್ಯಾದಿದಾರರು ಕಾರಿನ ಹಿಂದೆ ಡಿಕ್ಕಿ
ಪಡಿಸಿ ಮೋಟಾರ ಸೈಕಲ್ ಸಮೇತ ಬಿದ್ದು ಹಣೆಗೆ. ಮೇಲ್ತುಟಿಗೆ, ಮೊಣಕಾಲಿಗೆ ಗಾಯಗಳಾಗಿರುತ್ತವೆ ಅಂತಾ
ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು
ಇರುತ್ತದೆ.
2)
ಕುಕನೂರ ಪೊಲೀಸ್
ಠಾಣೆ ಗುನ್ನೆ ನಂ: 34/2016 ಕಲಂ. ಮನುಷ್ಯಕಾಣೆ:.
ದಿನಾಂಕ:04-04-2016 ರಂದು
8.00 ಪಿ.ಎಂ.ಕ್ಕೆ ಪಿರ್ಯಾದಿದಾರ, ಭರಮಪ್ಪ ತಂ.ಫಕೀರಪ್ಪ ಗುಡಗೇರಿ, ವಯಾ 55, ಜಾ:ವಾಲ್ಮಿಕಿ, ಉ:
ಕೂಲಿಕೆಲಸ ಸಾ: ತಿಪ್ಪರಸನಾಳ, ತಾ: ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ದೂರನ್ನು
ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನ್ನ ಮಗನಾದ ಈರಣ್ಣ ತಂ. ಭರಮಪ್ಪ ಗುಡಗೇರಿ, ವಯಾ 27 ವರ್ಷ ಜಾ: ವಾಲ್ಮಿಕಿ, ಉ:ಡ್ರೈವರ್, ಸಾ: ತಿಪ್ಪರಸನಾಳ,
ತಾ:ಯಲಬುರ್ಗಾ ಈತನು
ತಮಗೆ ಹೇಳಿ ಆಗಾಗ ಹುಬ್ಬಳ್ಳಿ, ಗೋವಾ, ಹೊಸಪೇಟೆ ಕಡೆಗೆ ಡ್ರೈವಿಂಗ್ ಕೆಲಸಕ್ಕೆ ಹೋದವನು ತಿಂಗಳು ಅಥವಾ
ಎರಡು ತಿಂಗಳಿಗೆ ವಾಪಾಸ್ಸು ಮನೆಗೆ ಬರುತ್ತಿದ್ದನು. ಅಲ್ಲದೇ ತನ್ನ ಇರುವಿಕೆಯ ಬಗ್ಗೆ ಆಗಾಗ ಪೋನ್
ಮಾಡುತ್ತಿದ್ದನು. ಒಂದು ವಾರದ ಹಿಂದೆ ಮನೆಗೆ ಬಂದವನು ಮನೆಯಲ್ಲಿ ಹೇಳದೇ ದಿನಾಂಕ: 13-06-2015 ರಂದು
11-00 ಎ.ಎಂ.ಕ್ಕೆ ಮನೆಯಿಂದ ಹೋಗಿದ್ದು ವಾಪಾಸ ಇಲ್ಲಿಯವರೆಗೆ ಬಂದಿರುವದಿಲ್ಲಾ. ಕಾಣೆಯಾದ ತನ್ನ ಮಗನನ್ನು
ತಾನು ಹಾಗೂ ತನ್ನ ಪರಿಚಯಿಸ್ಥನಾದ ಯಲ್ಲಪ್ಪ ಹಿರೇಮನಿರವರು ಸೇರಿ ತಮ್ಮ ಸಂಬಂಧಿಕರಿರುವ ಊರುಗಳಾದ ಬುಡಶೆಟ್ ನಾಳ, ಮುತುಗೂರ, ಕೊಪ್ಪಳ ಮತ್ತು ಗಂಗಾವತಿ, ಹೊಸಪೇಟೆ,
ಗದಗ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರುಗಳಲ್ಲಿ ಹುಡುಕಾಡಿದ್ದು, ಇಲ್ಲಿಯವರೆಗೆ
ಸಿಗದೇ ಇದ್ದುದರಿಂದ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
0 comments:
Post a Comment