1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 78/2016
ಕಲಂ. 78(3) Karnataka Police Act.
ದಿನಾಂಕ: 06-04-2016 ರಂದು ರಾತ್ರಿ 7-45 ಗಂಟೆಗೆ ಶ್ರೀ ಪಿ. ಮೋಹನಪ್ರಸಾದ ಸಿಪಿಐ
ಕೊಪ್ಪಳ ಗ್ರಾಮೀಣ ವೃತ್ತರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು
ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ
ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:06-04-2016 ರಂದು ಸಾಯಂಕಾಲ 5-50
ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಶ್ರೀ ಹನುಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಸಿಪಿಐ ಸಾಹೇಬರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ
ಆರೋಪಿ ಸುರೇಶ ಜುಂಜಾ ಸಾ: ಕಿನ್ನಾಳ ಇತನಿಂದ ನಗದು ಹಣ ರೂ 1225=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ ಹಾಗೂ ಒಂದು ಮೊಬೈಲ್ ಅಂಕಿ 300=00
ರೂ. ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಸದರಿ ಆರೋಪಿತನು ತಾನು ಬರೆದ ಪಟ್ಟಿಯನ್ನು ನರೇಗಲ್ ಗ್ರಾಮದ ಬಸವರಾಜ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ
ಮುಂತಾಗಿ ನೀಡಿದ ದೂರಿನ ಮೇಲಿಂದ ರಾತ್ರಿ 8-45 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡು
ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ: 109/2016 ಕಲಂ. 78(3) Karnataka Police Act.
ದಿನಾಂಕ: 06-04-2016 ರಂದು
ರಾತ್ರಿ 7-45 ಗಂಟೆಗೆ
ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ
ಸಾರಾಂಶವೆನೆಂದರೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಸಂಜೆ 5-15 ಗಂಟೆಗೆ ಕುಷ್ಟಗಿ ಠಾಣಾ ವ್ಯಾಪ್ತಿಯ
ಕೇಸೂರ ಗ್ರಾಮದ ಒಂದು ರೋಮಿನ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸಪ್ಪ ತಂದೆ ಶಂಕ್ರಪ್ಪ
ಯಲಬುರ್ತಿ ವಯಾ 45 ವರ್ಷ ಜಾ:ಕುರುಬರ ಉ:ಕೂಲಿಕೆಲಸ ಸಾ:ಬಿಜಕಲ್ 2) ಬಸವರಾಜ ತಂದೆ ಕಳಕಪ್ಪ ಅಂಗಡಿ
ವಯಾ 44 ವರ್ಷ ಜಾ:ಲಿಂಗಾಯತ :ಕೂಲಿಕೆಲಸ ಸಾ:ಕೇಸೂರ ರವರನ್ನು
ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108, ಹೆಚ್.ಸಿ-63, ಪಿ.ಸಿ-117,109 ಮತ್ತು
ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ
ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 05-30
ಪಿ.ಎಂ ಗೆ ಕೇಸೂರ ಬಸ್
ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ಒಂದು ರೋಮಿನ ಸಾರ್ವಜನಿಕ ಸ್ಥಳದಲ್ಲಿ
ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ
ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ
ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ
ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಮೇಲಿನಂತೆ ತಿಳಿಸಿದ್ದು ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುತ್ತಿದ್ದವನ
ಹೆಸರಿ ವಿಚಾರಿಸಿದಾಗ ದೊಡ್ಡಯ್ಯಸ್ವಾಮಿ ಸಾ:ಕನಕಗಿರಿ ಅಂತಾ ತಿಳಿಸಿದ್ದು ಹಾಗೂ
ಸದರಿಯವರು ಜನರಿಂದ ಹಣ ಪಡೆದು 1
ರೂಪಾಯಿಗೆ 80
ರೂಪಾಯಿ ಕೊಡುವುದಾಗಿ ಹೇಳಿದನು.
ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ
ಮಾಡಿದಾಗ ಮಟಕಾ ಜೂಜಾಟದ ಹಣ 1630-00 ರೂಪಾಯಿ
ನಗದು ಹಣ, ಒಂದು
ಶ್ಯಾಮಸಂಗ್ ಕಂಪನಿಯ ಮೊಬೈಲ್ ಅಂ ಕಿ.
600-00 ರೂ,
ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ ಇವುಗಳನ್ನು
ಜಪ್ತ ಪಡಿಸಿದ್ದು. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ತಾವರಗೇರಾ
ಪೊಲೀಸ್ ಠಾಣೆ ಗುನ್ನೆ ನಂ: 28/2016 ಕಲಂ. 279,
337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 06-04-2016 ರಂದು ಸಂಜೆ 6-00 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಹೋಗಿ ಇಲಾಜು ಪಡೆಯುತ್ತಿದ್ದ ಗಾಯಾಳು ಫಿಯರ್ಾದಿದಾರರಾದ ಶ್ರೀಮತಿ ರೇಣುಕಾ ಗಂಡ ಬಸವರಾಜ ಕೌದೆರ್ ವಯ: 23 ವರ್ಷ, ಜಾತಿ: ಲಿಂಗಾಯತ, ಉ: ಹೊಲಮನಿಕೆಲಸ, ಸಾ: ಎಂ.ಗುಡದೂರು ತಾ: ಕುಷ್ಟಗಿ. ರವರ ಹೇಳಿಕೆ ಫಿಯರ್ಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿಯರ್ಾದಿದಾರರಿಗೆ 2 ದಿನಗಳ ಹಿಂದೆ ಅಡವಿಭಾವಿ ಗ್ರಾಮದ ಬಸವರಾಜ ರವರೊಂದಿಗೆ ವಿವಾಹವಾಗಿದ್ದು, ಅವರನ್ನು ವಾಪಾಸು ತವರು ಮನೆಗೆ ಬಿಟ್ಟು ಬರಲು ಅವರ ಸಂಬಂಧಿಕರೊಂದಿಗೆ ಅವರು ಎಂ. ಗುಡದೂರು ಗ್ರಾಮಕ್ಕೆ ಒಂದು ಮೂರು ಗಾಲಿ ಟಾಂ. ಟಾಂ ವಾಹನ ನಂ: ಕೆ.ಎ-37/ಎ-592 ನೇದ್ದರಲ್ಲಿ ಹೋಗುತ್ತಿರುವಾಗ ಇಂದು ಸಂಜೆ 05-00 ಗಂಟೆ ಸುಮಾರಿಗೆ ಜೆ.ರಾಂಪುರ ಗ್ರಾಮ ದಾಟಿ ಮಾದಾಪುರ ರಸ್ತೆಯಲ್ಲಿ ಯಲ್ಲಪ್ಪ ಕುಲಕಣರ್ಿರವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಎದುರುಗಡೆಯಿಂದ ಒಂದು ಮಾರುತಿ ಕಾರ ಬಂದಿದ್ದು, ಎರಡು ವಾಹನಗಳು ಎದುರುಗಡೆಯಿಂದ ಒಂದಕ್ಕೊಂಡು ಟಕ್ಕರು ಆಗಿದ್ದು, ಇದರಿಂದ ಫಿಯರ್ಾದಿದಾರರಿಗೆ ಬಲಗಾಲ ಪಾದದ ಹತ್ತಿರ ಭಾರಿ ಒಳಪೆಟ್ಟು, ಮತ್ತು ಟಾಂ. ಟಾಂ ನಲ್ಲಿದ್ದ ಸಾವಿತ್ರಿ, ಮಲ್ಲಿಕಾಜರ್ುನ, ಅಂಬ್ರಮ್ಮ, ಮತ್ತು ದೇಮಮ್ಮ ಕೌದೆರ್ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ ಮಾರುತಿ ಕಾರ್ ಕೆ.ಎ-02/ಎಂ-1898 ನೇದ್ದರಲ್ಲಿದ್ದ ಮೈಬುಸಾಬ, ಮತ್ತು ಮಹಬೂಬಿ ರವರಿಗೂ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ನಂತರ ಎಲ್ಲರೂ ಇಲಾಜು ಕುರಿತು 108 ಅಂಬ್ಯಲೆನ್ಸ್ ವಾಹನದಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇರುತ್ತದೆ. ಕಾರಣ ಟಾಂ ಟಾಂ ವಾಹನ ಚಾಲಕನಾದ ದೊಡ್ಡಪ್ಪ ತಂದೆ ಮಲ್ಲಪ್ಪ ಕೌದೆರ್ ಸಾ: ಎಂ. ಗುಡದೂರು ಮತ್ತು ಮಾರುತಿ ಕಾರ್ ಚಾಲಕನಾದ ಯಮನೂರಸಾಬ ತಂದೆ ಶ್ಯಾಮೀದಸಾಬ ಟೆಂಗುಂಟಿ ಸಾ: ಕೆ.ಹೋಸುರು ಇವರುಗಳು ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಎದುರುಗಡೆಯಿಂದ ಎರಡು ವಾಹನಗಳನ್ನು ಟಕ್ಕರು ಮಾಡಿ ವಾಹನದಲ್ಲಿದ್ದವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಪಡಿಸಿದ್ದು ಅಲ್ಲದೇ ಇಬ್ಬರು ವಾಹನದ ಚಾಲಕರು ಅಪಘಾತವಾದ ನಂತರ ವಾಹನ ಬಿಟ್ಟು ಓಡಿ ಹೋಗಿದ್ದು ಇವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿಯರ್ಾದಿಯನ್ನು ಪಡೆದುಕೊಂಡು ವಾಪಾಸು ಠಾಣೆಗೆ ರಾತ್ರಿ 08-00 ಗಂಟೆಗೆ ಬಂದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ತಾವರಗೇರಾ ಠಾಣೆ ಗುನ್ನೆ ನಂ: 28/2016 ಕಲಂ: 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕನಕಗಿರಿ ಪೊಲೀಸ್
ಠಾಣೆ ಗುನ್ನೆ ನಂ. 109/2016 ಕಲಂ.
279, 337, 338 ಐ.ಪಿ.ಸಿ:.
ದಿನಾಂಕ 06-04-2016 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಕನಕಗಿರಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ರಸ್ತೆ ಅಪಘಾತವಾದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಗಾಯಾಳು ಶ್ರೀ ಎಂ.ಆರ್.ವಿರೇಶ ತಂದೆ ಎಂ.ಆರ್.ಹೂವಣ್ಣ ವಯ.23 ವರ್ಷ ಜಾ.ವಾಲ್ಮೀಕಿ ಉ.ಕೂಲಿ ಕೆಲಸ ಸಾ.ಹಳೆಕೋಟೆ 64 ತಾ.ಶಿರಗುಪ್ಪ ಜಿ.ಬಳ್ಳಾರಿ 9743349829 ಇವರದೊಂದು ಹೇಳಿಕೆ ಫಿಯರ್ಾದಿಯನ್ನು ಪಡೆದುಕೊಂಡಿದ್ದು ಅದರಲ್ಲಿನ ಸಾರಾಂಶವೆನೆಂದರೇ, ದಿನಾಂಕ 06-04-2016 ರಂದು ಫಿಯರ್ಾದಿಯು ತಮ್ಮ ಹತ್ತಿರದ ಸಂಭಂಧಿಯಾದ ಶ್ರೀ ಕೆ.ಮೌಲಪ್ಪ ಈತನು ನಡೆಸುತ್ತಿದ್ದ ಮೋಟಾರ ಸೈಕಲ್ ಸಂ. K.A-26
J-4674 Hero Honda Splender ನೇದ್ದರಲ್ಲಿ ತಾನು ಹಿಂದೆ ಕುಳಿತುಕೊಂಡು ಬೆಳಿಗ್ಗೆ 9-00 ಗಂಟೆಗೆ ತಮ್ಮ ಊರು ಹಳೆಕೋಟೆ 64 ದಲ್ಲಿಂದ ಹೊರಟು ದಾರಿಯ ಮಧ್ಯದಲ್ಲಿ ಊಟ ಇತ್ಯಾದಿಗಳನ್ನು ಮುಗಿಸಿಕೊಂಡು ಕನಕಗಿರಿ ದೇವರಿಗೆ ತಲೆಮಂಡಿ ಕೊಡುವ ಸಲುವಾಗಿ ಬರುತ್ತಿರುವಾಗ ಬೈಕನ್ನು ಫಿಯರ್ಾದಿಯ ಹತ್ತಿರದ ಸಂಭಂಧಿಯಾದ ಕೆ. ಮೌಲಪ್ಪ ಈತನು ಅಲಕ್ಷ್ಯತನದಿಂದ ಮತ್ತು ಅತಿವೇಗದಿಂದ ನಡೆಸುತ್ತಾ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಆಕಳಕುಂಪಿ ಕ್ರಾಸ್ ದಾಟಿದ ನಂತರ ಬೈಕ್ ನ ಸ್ಪೀಡನ್ನು ನಿಯಂತ್ರಿಸಲಾಗದೇ ರಸ್ತೆಯ ಎಡಗಡೆಯ ಪಕ್ಕದಲ್ಲಿನ ತೆಗ್ಗಿನಲ್ಲಿ ಬೈಕನ್ನು ಪಲ್ಟಿ ಮಾಡಿ ಕೆಡವಿದ್ದರಿಂದ ತನಗೆ ಅಲ್ಲಲ್ಲಿ ತರಚಿದ ಗಾಯ ಮತ್ತು ಒಳಪೆಟ್ಟುಗಳುಂಟಾಗಿದ್ದು ಮತ್ತು ಮೋ/ಸೈ ನ್ನು ನಡೆಸುತ್ತಿದ್ದ ಕೆ.ಮೌಲಪ್ಪ ಈತನಿಗೆ ಬಲಗಡೆ ಕಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯ, ಸೊಂಟದ ಮೇಲೆ ತರಚಿದ ಗಾಯಗಳುಂಟಾಗಿರುವುದಾಗಿ ಕಾರಣ ಮೋ/ಸೈ ಸಂ. K.A-26
J-4674 Hero Honda Splender ಚಲಾಯಿಸುತ್ತಿದ್ದ ಕೆ ಮೌಲಪ್ಪ ತಂದೆ ಈರಯ್ಯ ಕಟಂಬಲಿ ವಯ.25 ವರ್ಷ ಜಾ.ವಾಲ್ಮೀಕಿ ಉ.ಕೂಲಿ ಕೆಲಸ ಸಾ.ಹಳೆಕೋಟೆ 64 ತಾ.ಶಿರಗುಪ್ಪ ಜಿ.ಬಳ್ಳಾರಿ. ಈತನ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಲು ವಿನಂತಿಯಿರುತ್ತದೆ ನೀಡಿದ ಹೇಳಿಕೆ ಫಿಯರ್ಾದಿಯ ಸಾರಾಂಶದ ಮೇಲಿನಿಂದ ವಾಪಸ್ ಠಾಣೆಗೆ ಸಂಜೆ 5-30 ಗಂಟೆಗೆ ಬಂದು ಠಾಣಾ ಗುನ್ನೆ ನಂ.
109/2016 ಕಲಂ 279 337 338 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment