ದಿನಾಂಕ
10-04-2016 ರಂದು ರಾತ್ರಿ 7-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು
ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ನಿಡಶೇಸಿ
ಸೀಮಾದ ಹಳ್ಳದಲ್ಲಿ ಅಂದರಬಾಹರ
ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಶ್ರೀ
ಬಸವರಾಜ ಎ.ಎಸ್.ಐ. ಹೆಚ್.ಸಿ-108
ಪಿ.ಸಿ-117,
116, 112,430,426,24, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರ
ಚಾಲಕ ಎಪಿಸಿ-38 ಹಾಗೂ ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4
ಜನ
ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 3445=00
ರೂ,
ಹಾಗೂ 52
ಇಸ್ಪೆಟ್
ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಠಾಣೆ ಗುನ್ನೆ ನಂ. 110/2016
ಕಲಂ. 87
ಕೆ.ಪಿ.
ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)
ತಾವರಗೇರಾ
ಪೊಲೀಸ್ ಠಾಣೆ ಗುನ್ನೆ ನಂ: 33/2016 ಕಲಂ. 279, 337, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ.
ಕಾಯ್ದೆ:.
ನಿನ್ನೆ ದಿನಾಂಕ: 09-04-2016 ರಂದು ರಾತ್ರಿ ಅಕ್ಕಿ ಆಸ್ಪತ್ರೆ ಇಲಕಲ್ನಿಂದ ಬಂದ ಎಂ.ಎಲ್.ಸಿ ಕುರಿತು ಹೋಗಿದ್ದ ಶ್ರೀ ಶಿವಪುತ್ರಪ್ಪ ಹೆಚ್.ಸಿ-87 ಹೆಚ್ಚಿನ ಇಲಾಜು ಕುರಿತು ಕೆರೋಡಿ ಆಸ್ಪತ್ರೆ ಬಾಗಲಕೋಟೆಗೆ ಹೋಗಿದ್ದ ಗಾಯಾಳುವಿನ ತಾಯಿಯಾದ ಯಲ್ಲಮ್ಮ ಗಂಡ ನಿಂಗಪ್ಪ ಬಂಡಿವಡ್ಡರ್.ವಯ: 55 ವರ್ಷ, ಜಾತಿ: ಭೊವಿವಡ್ಡರ. ಉ: ಆಯುವೆದರ್ಿಕ್ ಆಸ್ಪತ್ರೆಯಲ್ಲಿ ಆಯಾ ಕೆಲಸ. ಸಾ: ಜೋಷಿ ಗಲ್ಲಿ ಇಲಕಲ್. ರವರ ಹೇಳಿಕೆಯನ್ನು ಬಾಗಲಕೋಟೆಯ ಕೆರೋಡಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ: 09-04-2016 ರಂದು ಫಿಯರ್ಾದಿದಾರರ ಮಗ ದುರುಗೇಶ್ ಮತ್ತು ಆತನ ಸ್ನೇಹಿತನಾದ ಶಶಿಕುಮಾರ ಗೂಳಿಗೌಡರ ಇಬ್ಬರೂ ಕೂಡಿ ದುರುಗೇಶ್ನ ಹಿರೋ ಗ್ಲಾಮರ್ ಮೋ.ಸೈಕಲ್ ನಂ: ಕೆ.ಎ-29/ಯು.-9286 ನೇದ್ದರ ಮೇಲೆ ಅವರ ಮದುವೆ ಕಾರ್ಡ ಕೊಡಲು ಕುಷ್ಟಗಿ ತಾವರಗೇರಾಕ್ಕೆ ಹೋಗಿ ವಾಪಾಸು ಮುದೇನೂರು ಮಾರ್ಗವಾಗಿ ಇಲಕಲ್ಗೆ ಮದ್ಯಾಹ್ನ 3-00 ಗಂಟೆ ಸುಮಾರಿಗೆ ಬರುತ್ತಿರುವಾಗ ಇದ್ಲಾಪುರ ಕ್ರಾಸ್ ಹತ್ತಿರ ಮೋ.ಸೈಕಲ್ನ್ನು ನಡೆಸುತ್ತಿದ್ದ ಶಶಿಕುಮಾರ ತಂದೆ ಅಮರಪ್ಪ ಗೂಳಿಗೌಡರ ಈತನು ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ರಸ್ತೆಯ ಎಡಭಾಗದಲ್ಲಿ ಇದ್ದ ಒಂದು ಕಲ್ಲಿಗೆ ಟಕ್ಕರ್ ಮಾಡಿದ್ದರಿಂದ ಮೋ.ಸೈಕಲ್ನ ಹಿಂದೆ ಕುಳಿತಿದ್ದ ದುರುಗೇಶ್ನಿಗೆ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಅಲ್ಲಿಲ್ಲಿ ತೆರಚಿದ ಗಾಯಗಳಾಗಿದ್ದು. ಶಿಶಿಕುಮಾರನಿಗೆ ಯಾವುದೇ ಗಾಯಗಳು ಆಗಿರಲ್ಲಿಲ್ಲ. ಅಲ್ಲದೇ ಶಶಿಕುಮಾರನು ಅಪಘಾತಪಡಿಸಿದ ನಂತರ ವಾಹನವನ್ನು ಬಿಟ್ಟು ಓಡಿ ಹೋಗಿದ್ದು, ಕಾರಣ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ. ಅಂತಾ ಮುಂತಾಗಿ ಇದ್ದ ಫಿಯರ್ಾದಿಯನ್ನು ಪಡೆದುಕೊಂಡು, ಇಂದು ದಿನಾಂಕ: 10-04-2016 ರಂದು ಪಡೆದುಕೊಂಡು ವಾಪಾಸು ಠಾಣೆಗೆ ರಾತ್ರಿ 9-15 ಗಂಟೆಗೆ ತಂದು ಹಾಜರುಪಡಿಸಿದ್ದು, ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ತಾವರಗೇರಾ ಠಾಣೆ ಗುನ್ನೆ ನಂ: 33/2016 ಕಲಂ: 279, 337, 338 ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ: 79/2016 ಕಲಂ: 279, 337, 338 ಐ.ಪಿ.ಸಿ.
ದಿ:10-04-2016
ರಂದು 9-45 ಪಿ.ಎಂ ಗೆ ಫಿರ್ಯಾದಿದಾರರಾದ ಮಹಾದೇವಪ್ಪ ಕುರಿ. ಸಾ: ಭೀಮನೂರ. ಇವರು
ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೇ, ದಿ:10.04.16 ರಂದು
ರಾತ್ರಿ 8-10 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಮೋಟಾರ ಚಾಲು
ಮಾಡಿ ವಾಪಾಸ್ ಭೀಮನೂರ-ಗಿಣಿಗೇರಿ ರೋಡಿಗೆ ಬಂದಾಗ, ಅದೇವೇಳೆಗೆ ಭೀಮನೂರ
ಕಡೆಯಿಂದ ಪ್ರಮೋದ ಬಡಿಗೇರ ಇತನು ತನ್ನ ಮೋಟಾರ ಸೈಕಲ್ ನಂ: ಕೆಎ-37/ಯು-2934 ನೇದ್ದನ್ನು
ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬರುತ್ತಾ
ತನ್ನ ವಾಹನದ ಮೇಲೆ ನಿಯಂತ್ರಣ ಸಾಧೀಸದೇ ಬಿದ್ದು ಅಪಘಾತ ಮಾಡಿಕೊಂಡಿದ್ದು ಈ ಅಪಘಾತದಲ್ಲಿ ಮೋಟಾರ
ಸೈಕಲ್ ಸವಾರನಿಗೆ ಸಾದಾ ಸ್ವರೂಪದ ಗಾಯವಾಗಿದ್ದು, ಮತ್ತು ಮೋಟಾರ ಸೈಕಲ್
ಹಿಂದೆ ಕುಳಿತಿದ್ದ ಸಿದ್ದನಗೌಡ ಸಾ: ಗುಡ್ಲಾನೂರ ಇತನಿಗೆ ಭಾರಿ ಪೆಟ್ಟಾಗಿರುತ್ತದೆ. ಕಾರಣ
ಅಪಘಾತಪಡಿಸಿದ ಮೋಟಾರ ಸೈಕಲ್ ನಂ: ಕೆಎ-37/ಯು-2934 ನೇದ್ದರ ಚಾಲಕ ಪ್ರಮೋದ ಬಡಿಗೇರ ಸಾ: ಗುಡ್ಲಾನೂರ, ಇತನ ಮೇಲೆ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್
ಠಾಣೆಗೆ ರಾತ್ರಿ 11-45 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment