Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, April 12, 2016

1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 33/2016 ಕಲಂ. 78(3) Karnataka Police Act.
ದಿನಾಂಕ: 11-04-2016 ರಂದು ಸಾಯಂಕಾಲ 07:00 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಮುದೇನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 1810-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 62/2016 ಕಲಂ. 78(3) Karnataka Police Act.
ದಿನಾಂಕ: 04-04-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ .ಎಸ್. ಪಾಟೀಲ್ ಪಿ.ಐ ಕೊಪ್ಪಳ ನಗರ ಪೊಲೀಸ ಠಾಣೆ ರವರು ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 11-04-2016 ರಂದು ಸಾಯಂಕಾಲ 7-30 ಗಂಟೆಗೆ  ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂ 01 ಇತನು  ಸಾರ್ವಜನಿಕರಿಗೆ  1=00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇನೆ ಇದು ನಸೀಬದ ಆಟ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ  ದಾಳಿ ಮಾಡಿ ಹಿಡಿದುಕೊಂಡಿದ್ದು, ಸದರಿ ಆರೋಪಿತನಿದ 1] 780=00 ಮಟಕಾ ಜೂಜಾಟದ ನಗದು ಹಣ, 2] ಒಂದು  ಮಟಕಾ ನಂಬರ ಬರೇದ ಚೀಟಿ  3] ಒಂದು ಬಾಲ್ ಪೆನ್ನು 4] ಒಂದು ಲಾವಾ ಕಂಪನಿಯ ಮೊಬೈಲ್ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು,ಇರುತ್ತದೆ. ಮತ್ತು ಆರೋಪಿ ನಂ 02 ನೇದ್ದವನು ಮಟಕಾ ಜೂಜಾಟದ ಪಟ್ಟಿಯನ್ನು ತೆಗೆದುಕೊಳ್ಳುವ ಮಟಕಾ ಬುಕ್ಕಿ ಇದ್ದು  ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ: 279, 337, 338 ಐ.ಪಿ.ಸಿ.
ದಿನಾಂಕ:11-04-2016 ರಂದು ಮುಂಜಾನೆ 08-00 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಬೇಟಿ ನೀಡಿ ಗಾಯಾಳು ಬಸಪ್ಪ ತಂದೆ ಸಂಗಪ್ಪ ಕಟ್ಟಿಮನಿ  ಸಾ: ಹೂಲಗೇರಿ ಹಾ:ವ: ಅನ್ನದಾನೇಶ್ವರ ನಗರ ಕುಷ್ಟಗಿ  ರವರ ಹೇಳಿಕೆ ಪಿರ್ಯಾದಿಯನ್ನು ಪಡೆಎದುಕೊಂಡು ವಾಪಸ ಠಾಣೆಗೆ 09-30 ಗಂಟೆಗೆ ಬಂದು ಸದರಿ ಸಾರಾಂಶ ವೆನೆಂದರೆ. ಪ್ರತಿ ದಿನದಂತೆ ಇಂದು ದಿನಾಂಕ:11-04-2016 ರಂದು  ಬೆಳಿಗ್ಗೆ 05-45 ಗಂಟೆಯ ಸುಮಾರಿಗೆ ಕೊಪ್ಪಳ ರೋಡಿಗೆ ವಾಕಿಂಗ್ ಹೋಗಿ ವಾಪಸ ಮನೆಗೆ 07-30 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರೋಡ ಮೇಲೆ ಕೊಪ್ಪಳ ರೋಡ ಕಡೆಯಿಂದ ರೋಡಿನ ಎಡಗಡೆ ಕುಷ್ಟಗಿ ಕಡೆಗೆ ವಾಕಿಂಗ್ ಮಾಡುತ್ತಾ ಬರುತ್ತಿರುವಾಗ ಸಾಯಿ ರೆಸ್ಟೋರೆಂಟ ಹತ್ತಿರ  ಹಿಂದಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ನನಗೆ ಟಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ನಾನು ರೋಡಿನ ಬಲಗಡೆ ಬಿದ್ದಿದ್ದರಿಂದ ಸದರ ಅಪಘಾತದಲ್ಲಿ ನನಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನನಗೆ ಅಪಘಾತಪಡಿಸಿದ ಮೋಟಾರ ಸೈಕಲ್ ಸವಾರನು ತನ್ನ ಹೆಂಡತಿ ಮಕ್ಕಳು ಸಹ ರೋಡಿನ ಮೇಲೆ ಬಿದ್ದಿದ್ದು ಅವರನ್ನು ನೋಡಿ ಹೆಸರು ವಿಚಾರಿಸಲಾಗಿ ಮೋಟಾರ ಸೈಕಲ್ ಸವಾರನು ತನ್ನ ಹೆಸರು ಮಹಾಂತೇಶ ತಂದೆ ಹನುಮಪ್ಪ ಮಾದಾಪೂರ ವಯಾ 28 ವರ್ಷ ಜಾ: ಕುರುಬರ ಉ:ಒಕ್ಕಲುತನ ಸಾ: ನೆರೆಬೆಂಚಿ ಅಂತಾ ಹೇಳಿದ್ದು ಆತನಿಗೆ ಬಲಗಡೆ ಕಣ್ಣಿನ ಕೆಳಗೆ ತೆರೆಚಿದ ಗಾಯ, ಬಲಗಾಲು ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಆತನ ಹೆಂಡತಿ ನೋಡಿ ಹೆಸರು ವಿಚಾರಿಸಲಾಗಿ ಸರಸ್ವತಿ ಗಂಡ ಮಹಾಂತೇಶ ಮಾದಾಪೂರ ವಯಾ 22 ವರ್ಷ ಜಾ: ಕುರುಬರ ಉ:ಹೊಲಮನೆಕೆಲಸ  ಸಾ: ನೆರೆಬೆಂಚಿ ಇವರಿಗೆ, ಎಡಗೈ ಮುಂಗೈ ಹತ್ತಿರ ತೆರೆಚಿದಗಾಯ, ಬಲಗಡೆ ಬುಜಕ್ಕೆ ತೆರೆಚಿದ ಗಾಯವಾಗಿದ್ದು. ಮಕ್ಕಳು ಹುಲಿಗೆಮ್ಮ ವಯಾ 3 ವರ್ಷ ಈಕೆಗೆ ಬಲಗಡೆ ತಲೆಗೆ ತೆರಚಿದ ಗಾಯ, ಎಡಗೈ ಕಿರುಬೆರಳಿಗೆ ತೆರಚಿದ ಗಾಯ ಮತ್ತು ಇನ್ನೊಂದು ಮಗು ನಿಂಗಮ್ಮ ವಯಾ ಒಂದುವರೆ ವರ್ಷ ಕೆಗೆ ಎಡತಲೆಗೆ ತೆರಚಿದಗಾಯ, ಎಡಮೊಣಕಾಲಿಗೆ, ಎಡಗಡೆ ಹಿಂಬಡಕ್ಕೆ ತೆರಚಿದಗಾಯಗಳಾಗಿದ್ದು ಇರುತ್ತದೆ. ನಂತರ ಮೋಟಾರ ಸೈಕಲ್ ನೋಡಲು ಅದು ಹೊಸ ಹೀರೊ ಕಂಪನಿಯ ಸ್ಲ್ಪೆಂಡರ್ ಪ್ರೋ ವಾಹನವಾಗಿದ್ದು ಅದರ ಚೆಸ್ಸಿ ನಂ: MBLHA10BFF4G04428 ಇಂಜನ್ ನಂ: HA10ERF4G04316 ಅಂತಾ ಇರುತ್ತದೆ.  ಅಂತಾ  ಪಿರ್ಯಾದಿಯ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:11-04-2016 ರಂದು ಸಂಜೆ 6-45 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಬೇಟಿ ನೀಡಿ ಗಾಯಾಳು ಶರಣಪ್ಪ ತಂದೆ ಹೊನ್ನಪ್ಪ ಬೊಮ್ಮನಾಳ ಸಾ: ಚಿಕ್ಕನಂದಿಹಾಳ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ ರಾತ್ರಿ 8-15 ಗಂಟೆಗೆ ಬಂದು ಸದರಿ ಸಾರಾಂಶವೆನೆಂದರೆ ಇಂದು ದಿನಾಂಕ: 11-04-2016 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಗ್ರಾಮದ ಮುದುಕಪ್ಪ ತಂದೆ ಕನಕಪ್ಪ ಕುರುಬರು ವಯಾ: 25 ವರ್ಷ ಜಾತಿ: ಕುರುಬರು  ಇಬ್ಬರೂ ಕೂಡಿ ಮುದುಕಪ್ಪನ ಬಜಾಜ ಪ್ಲಾಟೀನಾ ಮೋ.ಸೈ. ನಂ: ಕೆ.ಎ-37/ಯು-5388 ನೇದ್ದನ್ನು ತೆಗೆದುಕೊಂಡು ಕುಷ್ಟಗಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಲು ಬಂದಿದ್ದು, ನಾವಿಬ್ಬರೂ ಕೆಲಸ ಮುಗಿಸಿಕೊಂಡು ಸಾಯಂಕಾಲ 5-30 ಗಂಟೆ ಸುಮಾರಿಗೆ ಕುಷ್ಟಗಿಯನ್ನು ಬಿಟ್ಟು ವಾಪಾಸ್ ನಮ್ಮ ಊರಿಗೆ ಹೋಗುತ್ತಿರುವಾಗ ಸದರಿ ಮೋ.ಸೈ. ನ್ನು ಮುದುಕಪ್ಪ ಇತನು ನಡೆಯಿಸುತ್ತಿದ್ದು ನಾನು ಹಿಂದುಗಡೆ ಕುಳಿತಿದ್ದೇನು. ನಾವು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಬ್ಯಾಲಿಹಾಳ ದಾಟಿ ತಿರುವಿನಲ್ಲಿ ಚಿಕ್ಕನಂದಿಹಾಳ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಕ್ರಷರ್ ನೇದ್ದರ ಚಾಲಕನು ತನ್ನ ಕ್ರಷರ್ ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ಹೋಗುತ್ತಿದ್ದ ನಮ್ಮ ಮೋ.ಸೈ. ಗೆ  ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೋ.ಸೈ.  ಸಮೇತ  ಕೆಳಗಡೆ ಬಿದ್ದೆವು. ನಂತರ ನೋಡಲಾಗಿ ನನಗೆ ಬಲಗಡೆ ಭುಜಕ್ಕೆ ತೆರಚಿದ ಗಾಯ, ಬಲಗಾಲ ಮೊಣಕಾಲಿಗೆ ತೆರಚಿದ ಗಾಯ ಮತ್ತು ಎಡಗೈ ಮೊಣಕೈಗೆ ತೆರಚಿದ ಗಾಯವಾಗಿದ್ದು, ನಂತರ ಮೋ.ಸೈ. ನಡೆಯಿಸುತ್ತಿದ್ದ ಮುದುಕಪ್ಪ ಇತನಿಗೆ ಬಲಗಾಲ ಮೊಣಕಾಲಿಗೆ ತೆರಚಿದ ಗಾಯ, ತಲೆಯ ಮೇಲೆ ಬಲಗಡೆ ಭಾರಿ ರಕ್ತ ಗಾಯ ಕೆಳ ತುಟಿ, ಮೂಗು, ಹಣೆಯ ಮೇಲೆ ತೆರಚಿದ ಗಾಯ, ಬಲಗಡೆ ಭುಜಕ್ಕೆ ತೆರಚಿದ ಗಾಯ ಎಡಗೈ ಮುಂಗೈ ಮೇಲೆ ತೆರಚಿದ ಗಾಯವಾಗಿದ್ದು ಇರುತ್ತದೆ. ನಂತರ ಕ್ರಷರ್ ನಂಬರ ನೋಡಲಾಗಿ ಕೆ.ಎ-37/4925 ಅಂತಾ ಇದ್ದು ಅದರ ಚಾಲಕನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ನಾನು ಮುದುಕಪ್ಪನ ಅಣ್ಣನಾದ ಹನಮಂತಪ್ಪ ತಂದೆ ಕನಕಪ್ಪ ಕುರುಬರು ವಯಾ: 35 ವರ್ಷ ಮತ್ತು ಆತನ ತಮ್ಮನಾದ ಮಂಜುನಾಥ ತಂದೆ ಕನಕಪ್ಪ ಕುರುಬರ ಇವರನ್ನು ಪೋನ್ ಮಾಡಿ ಕರೆಯಿಸಿದ್ದು ಇವರು ಬಂದ ನಂತರ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ  ಕುರಿತು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ ಅಂತಾ  ಪಿರ್ಯಾದಿಯ ಸಾರಾಂಶ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 85/2016 ಕಲಂ: 323, 324, 504 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.

ದಿನಾಂಕ. 11-04-2016 ರಂದು 05-00 ಪಿ.ಎಂ.ಕ್ಕೆ ಪಿರ್ಯಾದಿದಾರನು ಬೂದಗುಂಪಾ ಕ್ರಾಸದಲ್ಲಿ ಕಟಿಂಗ್ ಮಾಡಿಸಲು ಹೋದಾಗ ನಾಗರಾಜ ಮತ್ತು ಆತನ ತಮ್ಮ ರಾಘು ಇವರು ಹಳೆ ದ್ವೇಷದಿಂದ ಫಿರ್ಯಾದಿಗೆ ಲೇ ವಡ್ಡ ಸೂಳೆ ಮಗನೆ ಎಂದು ಜಾತಿ ನಿಂಧನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಡಗದಿಂದ ಫಿರ್ಯಾದಿ ಬಾಯಿಗೆ, ಗದ್ದಕ್ಕೆ ಮೈ ಕೈಗೆ ಹೊಡೆದಿರುತ್ತಾರೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008