Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 10, 2016

1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 31/2016 ಕಲಂ.  87 Karnataka Police Act.
ದಿನಾಂಕ 09-04-2016 ರಂದು ಮದ್ಯಾಹ್ನ 4-30 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 03 ಜನ ಆರೋಪಿನ್ನು ಹಾಜರಪಡಿಸಿದ್ದು, ವರದಿಯಲ್ಲಿ ಗರ್ಜನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.   1310-00, ಜಪ್ತ ಮಾಡಿಕೊಂಡಿದ್ದು ಸಿಕ್ಕಿಬಿದ್ದ 03 ಜನ ಹಾಗೂ ಓಡಿ ಹೋದ 04 ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ. ಮಾನ್ಯ ಪಿ.ಎಸ್.ಐ. ರವರು ನೀಡಿದ ಗಣಕೀಕೃತ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 31/2016 ಕಲಂ 87 ಕನರ್ಾಟಕ ಪೆೊಲೀಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 32/2016 ಕಲಂ.  87 Karnataka Police Act.
ದಿನಾಂಕ 09-04-2016 ರಂದು ಸಂಜೆ 7-00 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 08 ಜನ ಆರೋಪಿನ್ನು ಹಾಜರಪಡಿಸಿದ್ದು, ವರದಿಯಲ್ಲಿ ನವಲಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.   3420-00, ಜಪ್ತ ಮಾಡಿಕೊಂಡಿದ್ದು ಸಿಕ್ಕಿಬಿದ್ದ 08 ಜನ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ.   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 304(ಎ) ಐ.ಪಿ.ಸಿ.
ದಿನಾಂಕ: 09-04-2016 ರಂದು ಬೆಳಿಗ್ಗೆ 07:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ  ವಿಜಯಮಹಾಂತೇಶ ತಂದೆ ಷಣ್ಮುಖಪ್ಪ ವಂದಾಲಿ, ವಯಸ್ಸು: 30 ವರ್ಷ ಜಾತಿ: ಲಿಂಗಾಯತ, ಉ: ಒಕ್ಕಲತನ ಸಾ: ಹೇರೂರು  ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ, "  ನಮ್ಮ ಚಿಕ್ಕಪ್ಪನ ಮಗನಾದ ಮಹಾಂತೇಶ ತಂದೆ ಹನುಮಂತಪ್ಪ ವಂದಾಲಿ ವಯಸ್ಸು: 33 ವರ್ಷ ಈತನು ಸಹ ಒಕ್ಕಲತನ ಹಾಗೂ ಹಾಲಿನ ಡೈರಿ ಮಾಡಿಕೊಂಡಿದ್ದನು.  ಇಂದು ದಿನಾಂಕ: 09-04-2016 ರಂದು ಬೆಳಿಗ್ಗೆ 4:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮೂರ ಪ್ರಕಾಶ ತಂದೆ ಶೇಷರಾವ್ 23 ವರ್ಷ ಎಂಬುವವರು ಪೋನ್ ಮಾಡಿ ನಾನು ನಮ್ಮ ಗದ್ದೆಯಲ್ಲಿ ಬೆಳೆದ ಭತ್ತವನ್ನು ಹೇರೂರು ಸೀಮಾ ಗಂಗಾವತಿ-ಕನಕಗಿರಿ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾಕಿ ಕಾವಲು ಕುರಿತು ಗದ್ದೆಯಲ್ಲಿ ಮಲಗಿಕೊಂಡಿರುವಾಗ ನಿಮ್ಮ ಅಣ್ಣನಾದ ಮಹಾಂತೇಶ ಈತನು ಬೆಳಗಿನ ಜಾವ 03:30 ಗಂಟೆಯ ಸುಮಾರಿಗೆ ಬರ್ಹಿದೆಸೆ ಮುಗಿಸಿಕೊಂಡು ಊರ ಕಡೆಗೆ  ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿರುವಾಗ ಆತನ ಹಿಂಭಾಗದಿಂದ ಅಂದರೆ ಕನಕಗಿರಿ ಕಡೆಯಿಂದ ಒಬ್ಬ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನು ಬಸ್ ನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕದ ಭತ್ತದ ರಾಶಿಗೆ ಟಕ್ಕರ್ ಕೊಟ್ಟು ನಂತರ ಮಹಾಂತೇಶನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದನ್ನು ಕಂಡು ನಾನು ಓಡಿ ಹೋಗಿ ನೋಡಲಾಗಿ ಮಹಾಂತೇಶನು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ಆತನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ, ಮೈಮೇಲೆ ಅಲ್ಲಲ್ಲಿ ತೆರೆಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.ಅಂತಾ ತಿಳಿಸಿದನು.  ಕೂಡಲೇ ನಾನು ಮತ್ತು ಬಸನಗೌಡ ತಂದೆ ಹಿರೇ ಅಯ್ಯನಗೌಡ ಪೊಲೀಸ್ ಪಾಟೀಲ್ ಸಾ: ಹೇರೂರು ಇವರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ರಸ್ತೆಯ ಪಕ್ಕದಲ್ಲಿ ಮಹಾಂತೇಶನು ತೀವ್ರ ಗಾಯಗೊಂಡು ಮೃತಪಟ್ಟಿದ್ದನು.  ಅಪಘಾತ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಸ್ ನಿಂತಿದ್ದು, ಅದರ ನಂಬರ್: ಕೆ.ಎ-32/ ಎಫ್-1961 ಅಂತಾ ಇದ್ದು, ಕಲಬುರ್ಗಿಯಿಂದ ದಾವಣಗೇರೆಗೆ ಹೊರಟಿತ್ತು.  ಸ್ಥಳದಲ್ಲಿದ್ದ ಬಸ್ ಚಾಲಕನನ್ನು ವಿಚಾರಿಸಲು ಆತನ ಹೆಸರು ಮಲ್ಲಿಕಾರ್ಜುನ ತಂದೆ ಮಲ್ಲಯ್ಯ ಕಲಬುರ್ಗಿ 1 ಡಿಪೋ ಸಾ: ಆರ್. ಹೊಸಳ್ಳಿ ತಾ: ಯಾದಗಿರಿ ಅಂತಾ ತಿಳಿಯಿತು. ನಂತರ ಶವವನ್ನು ಯಾವುದೋ ಒಂದು ಟ್ರ್ಯಾಕ್ಟರ/ಟ್ರಾಲಿಯಲ್ಲಿ ಹಾಕಿಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ಸಲ್ಲಿಸಿರುತ್ತೇನೆ. ಕಾರಣ ಬಸ್ ಚಾಲಕ ಮಲ್ಲಿಕಾರ್ಜುನನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇದೆ.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 84/2016 ಕಲಂ. 279, 304(ಎ) ಐ.ಪಿ.ಸಿ:. L.¦.¹
ದಿನಾಂಕ 09-04-2016 ರಂದು ರಾತ್ರಿ 11-45 ಪಿಎಂ ಸುಮಾರಿಗೆ ಕುಷ್ಟಗಿ-ಹೊಸಪೇಟೆ ಎನ್ ಹೆಚ್.13 ಒನ್ ವೇ ರಸ್ತೆಯ ಮೇಲೆ ಕೂಕನಪಳ್ಳಿ ಬ್ರಿಡ್ಜ್ ಹತ್ತಿರ ಪಿರ್ಯಾದುದಾರರು ಮತ್ತು ಆರೊಪಿತನು ಕೂಡಿಕೊಂಡು ಲಾರಿ ನಂ ಎಂ.ಹೆಚ್.17/ಟಿ.7857 ನೇದ್ದರಲ್ಲಿ ಉಳ್ಳಾಗಡ್ಡಿ ಲೋಡಮಾಡಿಕೊಂಡು ಬೆಂಗಳೂರಿಗೆ ಹೋಗುತ್ತಿರುವಾಗ ರಾಜೇಂದ್ರ ಇತನು ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ಕೂಕನಪಳ್ಳಿ ಹತ್ತಿರ ಇರುವ ಸಣ್ಣ ಬ್ರಿಡ್ಜ್ ಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಲಾರಿಯನ್ನು ಚಲಾಯಿಸುತ್ತಿದ್ದ ರಾಜೇಂದ್ರನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಿರ್ಯಾದಿ ಚಾಂದಖಾನ ಇವರಿಗೆ ಎಡಬುಜಕ್ಕೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 60/2016 ಕಲಂ. 379 ಐ.ಪಿ.ಸಿ.  
ದಿನಾಂಕ 09-04-2016 ರಂದು ಮದ್ಯಾಹ್ನ 01-00 ಗಂಟೆಗೆ ಫಿರ್ಯಾಧಿದಾರರಾದ ಮೆಹಬೂಬಜಾನಿ ತಂದೆ ಮಹ್ಮದಗೌಸ್ ಸಾ ಪಧಕೀ ಲೇಔಟ್ ಕೊಪ್ಪಳರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 15-03-2016 ರಂದು ರಾತ್ರಿ 9-00 ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ ಹಿರೋಹೋಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ KA 37/L 8074 ಅಂ.ಕಿ.ರೂ 25,000-00 ಬೆಲೆಬಾಳುವುದನ್ನು ಗಿಣಿಗೇರಾದಿಂದ ಬಂದು ತಮ್ಮ ಮನೆಯ ಮುಂದೆ ನಿಲ್ಲಿಸಿ ತಾನು ತಮ್ಮ ಮನೆಯೊಳಗೆ ಹೋಗಿದ್ದು ನಂತರ ಮುಂಜಾನೆ 7-00 ಗಂಟೆಗೆ ಮನೆಯಿಂದ ಹೊರಗಡೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ತಾನು ಮತ್ತು ತಮ್ಮ ಮಗ ಕೂಡಿಕೊಂಡು ಪಧಕೀ ಲೇಔಟ್ ಸುತ್ತಾಮುತ್ತಾ ಮತ್ತ  ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಮುಂತಾದ  ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು, ಕಾರಣ ಮಾನ್ಯರವರು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಯರೋ ಕಳ್ಳರ ಮೇಲೆ ಸುಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 62/2016 ಕಲಂ. 379 ಐ.ಪಿ.ಸಿ.

ದಿನಾಂಕ 09-04-2016 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರರಾದ ನಿಂಗಪ್ಪ ತಂಧೆ ಮಲ್ಲಪ್ಪ ಓಜನಹಳ್ಳಿ ಸಾ: ಕೂಕನಪಳ್ಳಿ ತಾ: ಕೊಪ್ಪಳ ಹಾ:ವ: ರೈಲ್ವೆ ಸ್ಟೇಷನ್ ಏರಿಯಾ  ಕೊಪ್ಪಳರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 02-02-2016 ರಂದು ರಾತ್ರಿ 08-00 ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ ಬಜಾಜ್ ಪ್ಲಾಟಿನಾ ಮೋಟಾರ ಸೈಕಲ್ ನಂ KA 37/U 8329 ಅಂ.ಕಿ.ರೂ 25,000-00 ಬೆಲೆಬಾಳುವುದನ್ನು ತಮ್ಮ ಕೆಲಸ ಮುಗಿಸಿಕೊಂಡು ಬಂದು ತಮ್ಮ ಮನೆಯ ಮುಂದೆ ನಿಲ್ಲಿಸಿ ತಾನು ತಮ್ಮ ಮನೆಯೊಳಗೆ ಹೋಗಿದ್ದು ನಂತರ ಮುಂಜಾನೆ 7-00 ಗಂಟೆಗೆ ಮನೆಯಿಂದ ಹೊರಗಡೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ತಾನು ರೌಲ್ವೆ ಸ್ಟೇಷನ್ ಸುತ್ತಾಮುತ್ತಾ ಮತ್ತ  ಬಸ್ ನಿಲ್ದಾಣ, ಜವಾಹರ ರೋಡ್ ಮುಂತಾದ  ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು, ಕಾರಣ ಮಾನ್ಯರವರು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಯರೋ ಕಳ್ಳರ ಮೇಲೆ ಸುಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿಯ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008