Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 14, 2016

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 117/2016 ಕಲಂ. 279,337,338,304 (ಎ) ಐ.ಪಿ.ಸಿ & 187 IMV ACT
ದಿನಾಂಕ:14-04-2016 ರಂದು ಬೆಳಗಿನ ಜಾವ 01-15 ಗಂಟೆಯ ಸುಮಾರಿಗೆ ಪಿರ್ಯಾದಿದಾರನಾದ ರಮೇಶ ತಂದೆ ರಾಜಪ್ಪ ಕಮ್ಮಾರ ಸಾ: ಮರಟಗೇರಿ ಈತನು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಸಾರಾಂಶವೆನೆಂದರೆ ನಿನ್ನೆ ದಿನಾಂಕ:13-04-2016 ರಂದು ನನ್ನ ಖಾಸ ಅಣ್ಣನಾದ ಶೇಖರಪ್ಪ ಕಮ್ಮಾರ ಇವರು ಕಮ್ಮಾರಿಕೆ ಕೆಲಸದ ಮೇಲೆ ನಾಗರಾಳ ಗ್ರಾಮಕ್ಕೆ ಹೋಗಿ ಅಲ್ಲಿಯೇ ಉಪಜೀವಿಸುತ್ತಿದ್ದು ಶೇಖರಪ್ಪನಿಗೆ ಆರಾಮ ಇಲ್ಲದ ಸುದ್ದಿ ಕೇಳಿ ನನ್ನ ಮಗನಾದ ಪ್ರಭಾಕರ ಈತನು ನನ್ನ ಖಾಸ ಅಣ್ಣನಾದ ಶೇಖರಪ್ಪನಿಗೆ ಮತನಾಡಿಸಿ ಬರಲು ನಿನ್ನೆ ದಿನಾಂಕ: 13-04-2016 ರಂದು ಬಸ್ಸಿಗೆ ಹೋಗಿದ್ದನು. ನಂತರ ನಿನ್ನೆ ರಾತ್ರಿ ನನಗೆ ಮೊಬೈಲ್ ಮೂಲಕ ಸುದ್ದಿ ಗೊತ್ತಾಗಿದ್ದೆನೆಂದರೆ ನನ್ನ ಮಗನಾದ ಪ್ರಭಾಕರ ಈತನು ನನ್ನ ಅಣ್ಣನಾದ ಶೇಖರಪ್ಪನನ್ನು ಮಾತನಾಡಿಸಿಕೊಂಡು ವಾಪಸ ಬರುವಾಗ ರಾತ್ರಿಯಾಗಿದ್ದರಿಂದ ಮತ್ತು ಬಸ್ಸಿನ ಸೌಕರ್ಯ ಇಲ್ಲದ್ದರಿಂದ ಶೇಖರಪ್ಪನ  TVS VICTOR ಮೋಟಾರ ಸೈಕಲ ನಂ: TN-02-R-0540 ನೇದ್ದನ್ನು ತೆಗೆದುಕೊಂಡು ಶೇಖರಪ್ಪನ ಮಗನಾದ ಶ್ರೀನಿವಾಸನನ್ನು ಕರೆದುಕೊಂಡು ನಾಗರಾಳ ಗ್ರಾಮದಿಂದ ವಾಪಸ ನಮ್ಮೂರಿಗೆ  ಕುಷ್ಟಗಿ ಟಕ್ಕಳಗಿ . ದೋಟಿಹಾಳ ಮಾರ್ಗವಾಗಿ ಬರುತ್ತಿದ್ದಾಗ ರಾತ್ರಿ 09-00 ಗಂಟೆಯ ಸುಮಾರಿಗೆ ಜಾಲಿಹಾಳ-ಶಿರಗುಂಪಿ ರಸ್ತೆಯ ಮದ್ಯದಲ್ಲಿ ಒಂದು ಟ್ರ್ಯಾಕ್ಟರ ಚಾಲಕನು ಸದರಿಯವರಿಗೆ ಅಪಘಾತ ಪಡಿಸಿದ್ದರಿಂದ ನನ್ನ ಮಗನು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆಂದು ಸುದ್ದಿ ಗೊತ್ತಾಗಿ  ನಾನು ನನ್ನ ಇನ್ನೊಬ್ಬ ಮಗನಾದ ಶಶಿಧರ ಕೂಡಿ ಮೋಟಾರ ಸೈಕಲ ತೆಗೆದುಕೊಂಡು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿದ್ದು ನಂತರ ವಿಚಾರಿಸಿದಾಗ ಸದರಿ ನನ್ನ ಮಗನಾದ ಮತ್ತು  ಶ್ರೀನಿವಾಸರವರು ಮೋಟಾರ ಸೈಕಲ ನಂ: TN-02-R-0540 ನೇದ್ದರಲ್ಲಿ ಜಾಲಿಹಾಳ ಕಡೆಯಿಂದ ಶಿರಗುಂಪಿ ಕಡೆಗೆ ಬರುತ್ತಿದ್ದಾಗ ಮೋಟಾರ ಸೈಕಲನ್ನು ನನ್ನ ಮಗನಾದ ಪ್ರಭಾಕರ ಈತನು ನಡೆಸುತ್ತಿದ್ದು ಆಗ ಎದುರುಗಡೆಯಿಂದ  ಟ್ರ್ಯಾಕ್ಟರ ನಂ: KA-37-TA-5252 ಟ್ರ್ಯಾಲಿ ನಂ: KA-29-T-3022 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಸದರಿ ಮೊಟಾರ ಸೈಕಲಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಇದರಿಂದ ಪ್ರಭಾಕರ ಈತನಿಗೆ ಬಲಗಡೆಯ ಮುಖಕ್ಕೆ ಭಾರಿ ಗಾಯವಾಗಿ ಮುಖ ಅಪ್ಪಚ್ಚಿಯಾಗಿ ರಕ್ತ ಸೋರಿದ್ದು ಮತ್ತು ಬಲಗೈ ಮೊಣಕೈ ಹತ್ತಿರ ಮುರಿದಂತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹಾಗೂ ಸದರ ಮೋಟಾರ ಸೈಕಲ್ ಹಿಂದೆ ಕುಳಿತ ಶ್ರೀನಿವಾಸ ವಯಾ 30 ವರ್ಷ ಈತನಿಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಹಾಗೂ ಮೂಗಿಗೆ ಪೆಟ್ಟಾಗಿದ್ದು  ಬಲಕಣ್ಣಿನ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ನಂತರ ಟ್ರ್ಯಾಕ್ಟರ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಅಷ್ಟರಲ್ಲಿ ಸ್ಥಳಕ್ಕೆ  108 ಅಂಬುಲೆನ್ಸನಲ್ಲಿ ಸದರಿ ಗಾಯಾಳು ಶ್ರೀನಿವಾಸನನ್ನು ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು  ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
 2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 64/2016 ಕಲಂ. 457, 380 IPC
ದಿನಾಂಕ: 13-04-2016 ರಂದು ಮದ್ಯಾಹ್ನ 4-00 ಗಂಟೆಗೆ ಫಿರ್ಯಾದಿದಾರರಾದ ಹುಸೇನಪಾಷಾ ತಂದೆ ರಾಜೇಸಾಬ ಇಟಗಿ ಉ: ಶಿಕ್ಷಕರು ಸಾ: ಶಾಸ್ತ್ರಿ ಕಾಲೋನಿ ಭಾಗ್ಯನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಫಿರ್ಯಾದಿದಾರರು ದಿನಾಂಕ: 12-04-2016 ರಂದು ರಂದು ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 4-30 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರು ಮತ್ತು ಅವರ ಹೆಂಡತಿ ಹಾಗೂ ಅವರ ಮಗ ಮೂವರು ಸೇರಿ ತಮ್ಮ ಮಾಳಿಗೆಯ ಮಲಗಲು ಹೋಗಿದ್ದಾಗ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಬಾಗಿಲು ಬೀಗವನ್ನು ಮುರಿದು ಒಳ ಪ್ರವೇಶ ಮಡಿ ಮನೆಯ ಬೆಡ್ ರೂಮ್ನಲ್ಲಿದ್ದ ಅಲಮಾರವನ್ನು ತೆರೆದು ಅದರ ಸೇಫ್ ಲಾಕರ್ನ್ನು ಮೀಟಿ ತೆರೆದು ಅದರಲ್ಲಿದ್ದ ಅಂ.ತೂ 20 ಗ್ರಾಂ ಬಂಗಾರದ ಆಬರಣಗಳು ಮತ್ತು 15 ತೋಲೆ ಬೆಳ್ಳಿಯ ಕಾಲು ಚೈನ್ ಎಲ್ಲಾ ಸೇರಿ ಅಂ.ಕಿ.ರೂ 24,000=00 ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು. ಮತ್ತು ಅಲಮಾರದ ಮೇಲಿದ್ದ ಎರಡು ಬಟ್ಟೆಬರೆಗಳು ಇದ್ದ ಸೂಟಕೇಸ್ನ್ನು ಕಳ್ಳತನ ಮಾಢಿಕೊಂಡು ಮುಳ್ಳುಕಂಟಿಯಲ್ಲಿ ಬೀಸಾಕಿದ್ದು ಇರುತ್ತದೆ. ಕಾರಣ ಮಾನ್ಯರವರು ಕಳ್ಳತನ ಮಡಿದ ಯಾರೋ ಕಳ್ಳರನ್ನ ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008